Homeಮುಖಪುಟಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ ನೀಡುವುದು ಅಗತ್ಯ: ಮೋಹನ್ ಭಾಗವತ್‌

ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ ನೀಡುವುದು ಅಗತ್ಯ: ಮೋಹನ್ ಭಾಗವತ್‌

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ವಾರ್ಷಿಕ ದಸರಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಮಾತನಾಡಿದ್ದಾರೆ.

- Advertisement -
- Advertisement -

“ಮಹಿಳೆಯರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳನ್ನು ನೀಡುವುದು ಅತ್ಯಗತ್ಯ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಬುಧವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ವಾರ್ಷಿಕ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ನಮ್ಮ ಸ್ವಂತ ಕುಟುಂಬಗಳಲ್ಲಿನ ಬದಲಾವಣೆಗಳಿಂದ ಪ್ರಾರಂಭಿಸಿ, ನಾವು ಅದನ್ನು ಸಂಸ್ಥೆಯ ಮೂಲಕ ಸಮಾಜಕ್ಕೆ ಕೊಂಡೊಯ್ಯಬೇಕಾಗುತ್ತದೆ. ಮಹಿಳೆಯರ ಸಮಾನ ಸಹಭಾಗಿತ್ವವನ್ನು ಖಾತ್ರಿಪಡಿಸುವವರೆಗೆ ದೇಶದ ಪ್ರಗತಿಯ ಗುರಿ ತಲುಪಲು ಸಾಧ್ಯವಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರ್ವತಾರೋಹಿ ಸಂತೋಷ್ ಯಾದವ್ ಅವರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆರ್‌ಎಸ್‌ಎಸ್ ಆಹ್ವಾನಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಡಾಕ್ಟರ್ ಸಾಬ್ (ಡಾ.ಕೆ.ಬಿ.ಹೆಡಗೇವಾರ್) ಕಾಲದಿಂದಲೂ ಸಂಘದಲ್ಲಿ ಸಾಧಕರು, ಬುದ್ಧಿಜೀವಿಗಳ ಭಾಗವಾಗಿ ಮಹಿಳೆಯರು ಇದ್ದಾರೆ. ಆರ್‌ಎಸ್‌ಎಸ್ ಕಾರ್ಯಗಳಲ್ಲಿ ಸ್ಫೂರ್ತಿಯ ಮೂಲವಾಗಿ ಮಹಿಳೆಯರ ಉಪಸ್ಥಿತಿ ರೂಢಿಯಲ್ಲಿದೆ. ಅಂದು ನಮ್ಮ ಕಾರ್ಯಕ್ರಮದಲ್ಲಿ ಅನುಸಿಯಾಬಾಯಿ ಕಾಳೆ ಉಪಸ್ಥಿತರಿದ್ದರು. ನಂತರ, ಭಾರತೀಯ ಮಹಿಳಾ ಸಮ್ಮೇಳನದ ಮುಖ್ಯಸ್ಥೆ ರಾಜಕುಮಾರಿ ಅಮೃತ್ ಕೌರ್ ಕೂಡ ನಮ್ಮ ಶಿಬಿರದ ಭಾಗವಾಗಿದ್ದರು. 1934ರ ಡಿಸೆಂಬರ್‌ನಲ್ಲಿಯೂ ಮಹಿಳೆಯೊಬ್ಬರು ಮುಖ್ಯ ಅತಿಥಿಯಾಗಿದ್ದರು. ಇದು ಇಂದಿನವರೆಗೂ ನಡೆದುಕೊಂಡು ಬಂದಿದೆ” ಎಂದು ತಿಳಿಸಿದ್ದಾರೆ.

“ತುರ್ತು ಪರಿಸ್ಥಿತಿಯ ನಂತರ ಆರ್‌ಎಸ್‌ಎಸ್‌ನ ಅಕೋಲಾ ಕಾರ್ಯಕ್ರಮಕ್ಕೂ ಮಹಿಳೆಯೊಬ್ಬರು ಮುಖ್ಯ ಅತಿಥಿಯಾಗಿದ್ದರು. ಆಗ ನಾನು ಅಲ್ಲಿ ಪ್ರಚಾರಕನಾಗಿದ್ದೆ. ಆ ವಿಜಯದಶಮಿ ಕಾರ್ಯಕ್ರಮಕ್ಕೆ ಔರಂಗಾಬಾದ್‌ನ ಕುಮುದಾತಾಯಿ ರಂಗನೇಕರ್ ಮುಖ್ಯ ಅತಿಥಿಯಾಗಿದ್ದರು” ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮಾಜವು ಪುರುಷರು ಮತ್ತು ಮಹಿಳೆಯರಿಂದ ಕೂಡಿದೆ ಎಂದು ಭಾಗವತ್ ಹೇಳಿದರು ಮತ್ತು “ಯಾರು ಶ್ರೇಷ್ಠರು ಎಂದು ನಾವು ಚರ್ಚಿಸುವುದಿಲ್ಲ”. “ಎರಡೂ ಇಲ್ಲದೆ ಸಮಾಜ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಮತ್ತು ಏನನ್ನೂ ರಚಿಸಲಾಗುವುದಿಲ್ಲ ಎಂದು ನಮಗೆ ತಿಳಿದಿದೆ ಎಂದಿದ್ದಾರೆ.

“ಆದ್ದರಿಂದ ರಾಷ್ಟ್ರ ನಿರ್ಮಾಣದ ಕೆಲಸವನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಇರುವ ವಿವಿಧ ಸಂಘಟನಾ ಘಟಕಗಳಿಂದ ಮಾಡಲಾಗುತ್ತದೆ, ಆದರೆ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ (ಸಂಘದಿಂದ ತೆಗೆದುಕೊಳ್ಳಲಾಗಿದೆ), ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಕೆಲಸ ಮಾಡುತ್ತಾರೆ” ಎಂದಿದ್ದಾರೆ.

ಸಮಾಜವನ್ನು ಸಂಘಟಿಸಬೇಕಾದರೆ ಮಹಿಳೆಯರು ಮತ್ತು ಅವರ ‘ಮಾತೃಶಕ್ತಿ’ಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿರುವ ಅವರು, “ನಾವು ಅವರನ್ನು ಬಲಪಡಿಸಬೇಕಾಗಿದೆ. ನಾವು ಅವರನ್ನು ತಾಯಿ ಎಂದು ಕರೆಯುತ್ತೇವೆ, ಜಗತ್ ಜನನಿ (ವಿಶ್ವದ ಸೃಷ್ಟಿಕರ್ತರು) ಎಂದು ಕಲ್ಪಿಸಿಕೊಳ್ಳುತ್ತೇವೆ. ಆದರೆ ಮಹಿಳೆಯರ ಕಾರ್ಯ ಚಟುವಟಿಕೆಯ ಕ್ಷೇತ್ರವನ್ನು ಸೀಮಿತಗೊಳಿಸಿದ್ದೇವೆ. ವಿದೇಶಿ ಆಕ್ರಮಣಕಾರರು ಬಂದಾಗ, ಈ ನಿರ್ಬಂಧಗಳು ನ್ಯಾಯಸಮ್ಮತತೆಯನ್ನು ಪಡೆದುಕೊಂಡವು. ದಾಳಿಕೋರರು ದೂರ ಹೋದರು, ಆದರೆ ನಾವು ನಿರ್ಬಂಧಗಳನ್ನು ಮುಂದುವರಿಸಿದೆವು. ನಾವು ಅವರನ್ನು ಎಂದಿಗೂ ಮುಕ್ತಗೊಳಿಸಲಿಲ್ಲ” ಎಂದು ಗಮನ ಸೆಳೆದಿದ್ದಾರೆ.

“ನಾವು ಅವರನ್ನು ಬ್ರಹ್ಮಾಂಡದ ಸೃಷ್ಟಿಕರ್ತರು ಎಂದು ಕಲ್ಪಿಸಿಕೊಳ್ಳುವುದು ಒಳ್ಳೆಯದು. ಆದರೆ ಅದಕ್ಕಾಗಿಯೇ ನಾವು ಅವರನ್ನು ಪ್ರಾರ್ಥನಾ ಕೋಣೆಯಲ್ಲಿ ಇರಿಸಬೇಕು ಎಂಬುದು ಒಳ್ಳೆಯದಲ್ಲ. ನಾವು ಅವರನ್ನು ಪ್ರಾರ್ಥನಾ ಕೋಣೆಯಲ್ಲಿ ಲಾಕ್ ಮಾಡುತ್ತಿದ್ದೇವೆ, ಎರಡನೇ ದರ್ಜೆ ಇಳಿಸಿ ಮನೆಯಲ್ಲಿ ಬಂಧಿಸಿದ್ದೇವೆ. ಇದನ್ನು ತೊಡೆದುಹಾಕಬೇಕು. ದೇಶೀಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಸಮಾನ ಹಕ್ಕುಗಳನ್ನು, ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯವನ್ನು ನೀಡುವ ಮೂಲಕ ನಾವು ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬೇಕು” ಎಂದು ಆಶಿಸಿದ್ದಾರೆ.

2017ರಲ್ಲಿ ಆರ್‌ಎಸ್‌ಎಸ್‌ ಮಹಿಳಾ ಕಾರ್ಯಕರ್ತರು ದೇಶದಲ್ಲಿ ‘ಮಾತೃಶಕ್ತಿ’ ಸಮೀಕ್ಷೆಯನ್ನು ನಡೆಸಿದರು. ಸಮಾಜದ ಎಲ್ಲಾ ವರ್ಗದ ಮಹಿಳೆಯರು ಸಮೀಕ್ಷೆಯಲ್ಲಿ ಸೇರಿದ್ದಾರೆ. ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು ಎಂದು ಭಾಗವತ್‌ ಮಾಹಿತಿ ನೀಡಿದರು.

“ಗಂಡಸರು ಏನು ಮಾಡಬಲ್ಲನೋ ಅದನ್ನು ಮಹಿಳೆಯರೂ ಮಾಡಬಹುದು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದರೆ ಮಹಿಳೆಯರು ಮಾಡಬಹುದಾದ ಎಲ್ಲವನ್ನೂ ಪುರುಷರು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳನ್ನು ನೀಡುವುದು ಅನಿವಾರ್ಯವಾಗಿದೆ” ಎಂದಿದ್ದಾರೆ.

“ನಮ್ಮ ಸ್ವಂತ ಕುಟುಂಬಗಳಲ್ಲಿನ ಬದಲಾವಣೆಗಳಿಂದ ಪ್ರಾರಂಭಿಸಿ, ನಾವು ಅದನ್ನು ಸಂಘಟನೆಯ ಮೂಲಕ ಸಮಾಜಕ್ಕೆ ಕೊಂಡೊಯ್ಯಬೇಕಾಗುತ್ತದೆ. ಮಹಿಳೆಯರ ಸಮಾನ ಸಹಭಾಗಿತ್ವವನ್ನು ಖಾತ್ರಿಪಡಿಸುವವರೆಗೆ, ದೇಶದ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ದಲಿತ ವ್ಯಕ್ತಿಯ ಕೊಲೆ; ಆರೋಪ

“ನಮ್ಮ ಮಾತೃಭಾಷೆಗಳು ನರಳುತ್ತಿವೆ ಎಂದು ನಾವು ಕೊರಗುತ್ತಲೇ ಇದ್ದೇವೆ. ಈಗ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಹೊಸ ಶಿಕ್ಷಣ ನೀತಿ ಇದೆ. ಆದರೆ ನಾವು ನಮ್ಮ ಮಕ್ಕಳನ್ನು ನಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಕಳುಹಿಸುತ್ತಿದ್ದೇವೆಯೇ? ಉತ್ತಮ ವೃತ್ತಿಜೀವನವನ್ನು ಸಾಧಿಸಲು ಇಂಗ್ಲಿಷ್ ಶಿಕ್ಷಣದ ಅಗತ್ಯವಿದೆ ಎಂಬ ಪುರಾಣವಿದೆ. ಅದು ನಿಜವಲ್ಲ” ಎಂದಿದ್ದಾರೆ.

“ನಾವು ದೇಶದ ಉನ್ನತ ವ್ಯಕ್ತಿಗಳನ್ನು ಗಮನಿಸಿದರೆ, ಅವರಲ್ಲಿ ಸುಮಾರು 80 ಪ್ರತಿಶತದಷ್ಟು ಜನರು ಮೆಟ್ರಿಕ್ಯುಲೇಷನ್ ಮುಗಿಯುವವರೆಗೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ್ದಾರೆ. ಎನ್‌ಇಪಿ ಹೊರತಾಗಿಯೂ, ನಾವು ನಮ್ಮ ಮಕ್ಕಳನ್ನು ನಮ್ಮ ಮಾತೃಭಾಷೆಯಲ್ಲಿ ಕಲಿಸುವ ಶಾಲೆಗಳಿಗೆ ಕಳುಹಿಸದಿದ್ದರೆ, ಈ ನೀತಿ ಎಂದಾದರೂ ಯಶಸ್ವಿಯಾಗುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಎಂತೆಂತಾ ಗೂಬೆಗಳಿದ್ದರಲ್ಲವೇ, womwn reservation bill ಅನ್ನು ಇವರದೇ ಪಕ್ಷ 20 ವರುಷದಿಂದ ಪಾಸು ಮಾಡಿಲ್ಲಾ, ಮಾಡೋಕೆ ಹೇಳೋದಲ್ಲವೇ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...