Homeಮುಖಪುಟ2020 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ: ಉತ್ತರಪ್ರದೇಶದಲ್ಲಿ ಅತಿ ಹೆಚ್ಚು

2020 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ: ಉತ್ತರಪ್ರದೇಶದಲ್ಲಿ ಅತಿ ಹೆಚ್ಚು

- Advertisement -
- Advertisement -

2020 ರಲ್ಲಿ ಅತೀ ಹೆಚ್ಚು ಮಹಿಳೆಯರ ಮೇಲಿನ ದೌರ್ಜನ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಂಕಿಅಂಶಗಳು ತಿಳಿಸಿದೆ. ಕಳೆದ ವರ್ಷದಲ್ಲಿ ಮಹಿಳಾ ಆಯೋಗವು 23,722 ದೂರುಗಳನ್ನು ಸ್ವೀಕರಿಸಿದೆ. ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕವಾಗಿದ್ದು, ಈ ದೂರುಗಳಲ್ಲಿ ಹೆಚ್ಚಿನವು ಕೌಟುಂಬಿಕ ದೌರ್ಜನ್ಯ ಹಾಗೂ ಘನತೆಯ ಬದುಕಿನ ಹಕ್ಕಿನ ಕಲಂ ಅಡಿಯಲ್ಲಿ ಸ್ವೀಕರಿಸಿದ ದೂರುಗಳಾಗಿದೆ.

ಉತ್ತರಪ್ರದೇಶವೊಂದರಲ್ಲೇ 11,872 ದೂರುಗಳನ್ನು ಆಯೋಗ ಸ್ವೀಕರಿಸಿದೆ. ದೆಹಲಿಯಿಂದ 2,635, ಹರ್ಯಾಣದಿಂದ 1,266 ಮತ್ತು ಮಹಾರಾಷ್ಟ್ರದಿಂದ 1,188 ದೂರುಗಳನ್ನು ಆಯೋಗವು ಸ್ವೀಕರಿಸಿದೆ. 23,722 ದೂರುಗಳಲ್ಲಿ 7708 ದೂರುಗಳು ಘನತೆಯ ಬದುಕಿನ ಹಕ್ಕಿನ ಕಲಂ ಅಡಿಯಲ್ಲಿ ಸ್ವೀಕರಿಸಿದ್ದು, ಈ ಕಲಂ ಮಹಿಳೆಯರ ಮೇಲಿನ ಭಾವನಾತ್ಮಕ ಕಿರುಕುಳವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಕೌಟುಂಬಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ 5,294 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಆಯೋಗದ ಅಂಕಿಅಂಶಗಳು ಹೇಳಿದೆ.

ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!

ಆಯೋಗದಲ್ಲಿ ದಾಖಲಾಗಿರುವ ದೂರುಗಳಲ್ಲಿ ಮೂರನೇ ಅತ್ಯಧಿಕ ದೂರು ವರದಕ್ಷಿಣೆ ಕುರಿತ ಕಿರುಕುಳದ್ದಾಗಿದೆ. 3,784 ವರದಕ್ಷಿಣೆ ಕುರಿತಾದ ದೂರುಗಳನ್ನು ಆಯೋಗ ಸ್ವೀಕರಿಸಿದೆ. ಕಿರುಕುಳಕ್ಕೆ ಸಂಬಂಧಿಸಿದ 1,679 ದೂರುಗಳು, ಅತ್ಯಾಚಾರ ಅಥವಾ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದ 1,234 ದೂರುಗಳು ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ 376 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಂಕಿ ಅಂಶಗಳು ತಿಳಿಸಿದೆ.

2020 ಯಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಭದ್ರತೆ, ಆತಂಕ, ಒತ್ತಡದ ಪ್ರಮಾಣ, ಆರ್ಥಿಕ ಚಿಂತೆ ಹಾಗೂ ಕುಟುಂಬ ಮತ್ತು ಹೆತ್ತವರ ಕಡೆಯಿಂದ ಭಾವನೆಗಳಿಗೆ ಸಿಗುತ್ತಿರುವ ಬೆಂಬಲದ ಕೊರತೆಯಿಂದ ಈ ಕೌಟುಂಬಿಕ ದೌರ್ಜನ್ಯಕ್ಕೆ ಕಾರಣವಾಗಿರಬಹುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

2014 ರಲ್ಲಿ ಒಟ್ಟು 33,906 ದೂರುಗಳನ್ನು ಸ್ವೀಕರಿಸಲಾಗಿತ್ತು. ಅದರ ನಂತರ 2020 ರಲ್ಲೇ ಆಗಿದೆ ಅತೀ ಹೆಚ್ಚು ದೂರುಗಳು ದಾಖಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಂಕಿಅಂಶಗಳು ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿಯಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೌಟುಂಬಿಕ ದೌರ್ಜನ್ಯದ ಆರೋಪದ ಅತ್ಯಧಿಕ ದೂರುಗಳು ಬಂದಿದೆ.

ಇದನ್ನೂ ಓದಿ: ಲವ್ ಜಿಹಾದ್ ಪದ ಬಳಕೆ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ರಾಜೀನಾಮೆಗೆ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...