ಯಾದಗಿರಿಯ ಸರಕಾರಿ ಮೆಟ್ರಿಕ್ ನಂತರದ (ವೃತಿಪರ) ಬಾಲಕಿಯರ ವಸತಿ ನಿಲಯದಲ್ಲಿ, ದಲಿತ ಬಾಲಕಿರ ಮೇಲೆ ಹಾಸ್ಟೆಲ್ ವಾರ್ಡನ್ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ನೂರಾರು ವಿದ್ಯಾರ್ಥಿನಿಯರು ಶನಿವಾರ ಪ್ರತಿಭಟನೆ ನಡೆಸಿದ್ದು, ವಾರ್ಡನ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹಾಸ್ಟೆಲ್ ವಾರ್ಡನ್ ಶಾಂತಾಬಾಯಿ ಅವರು ವಿಧ್ಯಾರ್ಥಿನಿಯರ ಮೇಲೆ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ವಸತಿ ನಿಲಯದ ವಿಧ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಹಾಸ್ಟೆಲ್‌ನಲ್ಲಿ ಬಾಲಕಿಯರಿಗೆ ಸರಿಯಾದ ಸೌಲಭ್ಯ ನೀಡದೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಸರಿಯಾದ ರೀತಿಯ ಬೆಳಗಿನ ಉಪಹಾರ, ಊಟ, ಕಂಪ್ಯೂಟರ್, ಪುಸ್ತಕ, ಶೌಚಾಲಯ, ಫ್ಯಾನು, ಹಾಸಿಗೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಇಲ್ಲದೆ ಬಾಲಕಿಯರು ಕಾಲ ಕಳೆಯುತ್ತಿದ್ದಾರೆ” ಎಂದು ಜೈ ಭೀಮ್ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿರುವ ರಾಹುಲ್ ಕೊಲ್ಲೂರ್ ನಾನುಗೌರಿ.ಕಾಂಗೆ ಹೇಳಿದ್ದಾರೆ.
ಇದನ್ನೂ ಓದಿ: ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರ ಸ್ಥಿತಿಗತಿ ತಿಳಿಯಲು ರಾಷ್ಟ್ರೀಯ ಆಯೋಗ ರಚಿಸಲು ಸಿದ್ಧತೆ!?
ವಾರ್ಡನ್ ಅನ್ನು ತಕ್ಷಣವೆ ಅಮಾನತು ಮಾಡಬೇಕು ಎಂದು ವಿದ್ಯಾರ್ಥಿನಿಯರು ಶನಿವಾರ ಬೆಳಿಗ್ಗೆ ಯಾದಗಿರಿ ಜಿಲ್ಲಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಗಾರ ವಿದ್ಯಾರ್ಥಿನಿಯರೊಂದಿಗೆ ಜಿಲ್ಲಾಧಿಕಾರಿ ಅವರು ಸಂಜೆ ಆರು ಗಂಟೆಗೆ ಹಾಸ್ಟೆಲ್‌ಗೆ ಬಂದು ಭೇಟಿಯಾಗುವುದಾಗಿ ಹೇಳಿದ್ದರು. ಅವರ ಮಾತಿನಂತೆ ವಿದ್ಯಾರ್ಥಿನಿಯರು ಪ್ರತಿಭಟನೆ ಕೈಬಿಟ್ಟು ತೆರಳಿದ್ದರು.
ಆದರೆ ಸಂಜೆ ವೇಳೆ ಜಿಲ್ಲಾಧಿಕಾರಿ ಹಾಸ್ಟೆಲ್‌ಗೆ ಬರದೆ ಇರುವುದರಿಂದ ವಿದ್ಯಾರ್ಥಿನಿರು ತಹಶೀಲ್ದಾರ್ ಕಚೇರಿ ಮುಂದೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನಂತರ ರಾತ್ರಿ 8:45ಕ್ಕೆ ವಸತಿ ನಿಲಯಕ್ಕೆ ತೆರಳಿ ಬಾಲಕಿಯರ ಬೇಡಿಕೆ ಈಡೇರಿಸುವುದಾಗಿ ಹೇಳಿ ವಾರ್ಡನ್ ಅವರನ್ನು ಅಮಾನತು ಮಾಡುವುದಾಗಿ ಭರವಸೆ ನೀಡಿದ್ದಾರೆ.
#ಯಾದಗಿರಿ ಸರಕಾರಿ ಮೆಟ್ರಿಕ್ ನಂತರದ (ವೃತಿಪರ) ಬಾಲಕಿಯರ #ವಸತಿ_ನಿಲಯ ದಲ್ಲಿ, #ದಲಿತ ಬಾಲಕಿರ ಮೇಲೆ ಹಾಸ್ಟೆಲ್ ವಾರ್ಡನ್ ನಡೆಸುತ್ತಿರುವ #ದಬ್ಬಾಳಿಕೆ ವಿರುದ್ಧ ನೂರಾರು ವಿದ್ಯಾರ್ಥಿನಿಯರು ಶನಿವಾರ #ಪ್ರತಿಭಟನೆ ನಡೆಸಿದ್ದು, #ವಾರ್ಡನ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ#NaanuGauri #Dalit #JaiBhim pic.twitter.com/rSx14mkkG1
— Naanu Gauri (@naanugauri) September 26, 2022
“ತಮ್ಮ ವಸತಿ ನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರು ಈ ಹಿಂದೆಯೆ ‘ತಾಲೂಕಿನ ಸಮಾಜ ಕಲ್ಯಾಣ ಇಲಾಖೆ’ ತೆರಳಿ ಮನವಿಯನ್ನು ನೀಡಿದ್ದರು. ಆದರೆ ಅಧಿಕಾರಿಗಳು ಅವರ ಮನವಿ ಪತ್ರವನ್ನು ವಿದ್ಯಾರ್ಥಿಗಳ ಮುಂದೆಯೇ ಹರಿದು ಹಾಕಿ ದರ್ಪ ಮರೆದಿದ್ದರು ಎಂದು ವಿಧ್ಯಾರ್ಥಿಗಳು ತಿಳಿಸಿದ್ದಾಗಿ” ರಾಹುಲ್ ಕೊಲ್ಲೂರ್ ಅವರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರ ಸ್ಥಿತಿಗತಿ ತಿಳಿಯಲು ರಾಷ್ಟ್ರೀಯ ಆಯೋಗ ರಚಿಸಲು ಸಿದ್ಧತೆ!?
ಹಾಸ್ಟೆಲ್ ವಾರ್ಡನ್ ಅಮಾನತಿನ ಬಗ್ಗೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರು ಮಾತನಾಡಿ, “ಜಿಲ್ಲಾಧಿಕಾರಿ ಅವರು ವಾರ್ಡನ್ ಅವರನ್ನು ಅಮಾನತು ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈ ವರೆಗೆ ಅಧೀಕೃತ ಆದೇಶ ಪತ್ರ ಹೊರಡಿಸಿಲ್ಲ” ಎಂದು ನಾನುಗೌರಿ.ಕಾಂಗೆ ಹೇಳಿದ್ದಾರೆ.
ನಾನುಗೌರಿ.ಕಾಂ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್. ಆರ್ ಅವರಿಗೆ ಕರೆ ಮಾಡಿತ್ತಾದರೂ ಅವರು ಕರೆಯನ್ನು ಸ್ವೀಕರಿಸಿಲ್ಲ.


