ಕೊರೊನಾ ವೈರಸನ್ನು ಮುಸ್ಲಿಮರು ಹರಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿನ್ನೆ ಎಚ್ಚರಿಕೆ ಕೊಟ್ಟಿರುವುದು ಭಾರಿ ವಾದ ಪ್ರತಿವಾದಗಳಿಗೆ ಎಡೆಮಾಡಿಕೊಟ್ಟಿದೆ.
ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತಿದ್ದು, ಈಗ ಟ್ವಿಟ್ಟರಿನಲ್ಲಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಬೆಂಬಲಿಸಿ ಹಾಗೂ ವಿರೋಧಿಸುವ ಪೋಸ್ಟುಗಳು ಟ್ರೆಂಡ್ ಆಗುತ್ತಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೊಂದು ಚಾನಲ್ ಜತೆ ಮಾತಾಡಿದಾಗಲೂ ಅದದೇ ಶಬ್ದಗಳನ್ನೂ, ಖಡಕ್ಕಾಗಿ, ಸ್ಪಷ್ಟವಾಗಿ ಹೇಳಿದ್ದಾರೆ. ಇದರಲ್ಲೂ…
Posted by Dinesh Kumar Dinoo on Monday, April 6, 2020
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹಲವರು ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಗಳು ಮಾಡಿದ್ದು ಸರಿಯಾಗಿಯೆ ಇದೆ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ರಾಜಧರ್ಮ ಪಾಲಿಸಿದ್ದಾರೆ ಎಂದು #WeStandWithBSY ಎಂಬ ಹ್ಯಾಶ್ ಟ್ಯಾಗ್ ಬಳಸಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸರೇಶ್ ಕುಮಾರ್. ಜಿ. ಆರ್ ಎನ್ನುವ ಟ್ವಿಟ್ಟರ್ ಹ್ಯಾಂಡೆಲ್ ನಿಂದ “ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶವನ್ನ ಅರ್ಥ ಆಗುವ ರೀತಿಯಲ್ಲಿ ಮಾಧ್ಯಮಗಳಿಗೆ ಬೆವರಿಳಿಸಿದ, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ತೋರಿಸಿರುವ ಯಡಿಯೂರಪ್ಪ ಜೊತೆ ಜೊತೆ ನಾವಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಆಧುನಿಕ ಶಿವಯೋಗಿ ಬಸವಣ್ಣ ನಮ್ಮ BSY…
ನಮ್ಮ ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶವನ್ನ ದೇಶಕ್ಕೆ ಅರ್ಥ ಆಗೋ ರೀತಿಯಲ್ಲಿ ಮಾಧ್ಯಮಗಳಿಗೆ ಬೆವರಿಳಿಸಿ ನಮ್ಮ ಕರುನಾಡನ್ನ ಸರ್ವ ಜನಾಂಗದ ಶಾಂತಿಯ ತೋಟ ಅಂತ ತೋರಿಸಿರುವ ಮಾನ್ಯ CMBSY ಜೊತೆ ನಾವಿದ್ದೇವೆ…#WeStandWithBSY ✊ https://t.co/6kcr9oSADE— ಸುರೇಶ್ ಕುಮಾರ್.ಜಿ.ಆರ್ ◆?⚖️GRS⚖️?◆ (@sureshkumargr26) April 7, 2020
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು “ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು, ಸುಳ್ಳು ಸುದ್ದಿ,ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಯಡಿಯೂರಪ್ಪನವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು ಸ್ವಾಗತಿಸಿ ಬೆಂಬಲಿಸುತ್ತೇನೆ. ಅವರು ನುಡಿದಂತೆ ನಡೆಯ ಬೇಕೆಂದು ಆಗ್ರಹಿಸುತ್ತೇನೆ” ಎಂದು ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದರು.
ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು,
ಸುಳ್ಳು ಸುದ್ದಿ,ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ.
ಇಂತಹವರ ಬಗ್ಗೆ @BSYBJP ಅವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು ಸ್ವಾಗತಿಸಿ ಬೆಂಬಲಿಸುತ್ತೇನೆ.
ಅವರು ನುಡಿದಂತೆ ನಡೆಯ ಬೇಕೆಂದು ಆಗ್ರಹಿಸುತ್ತೇನೆ.— Siddaramaiah (@siddaramaiah) April 7, 2020
ನಮ್ಮ ರಾಹುಲ್ ಎನ್ನುವ ಟ್ವಿಟ್ಟರ್ ಹ್ಯಾಂಡಲ್ “ಕೊರೋನಾ ಸೋಂಕಿನ ಜೊತೆ ಕೋಮುವಾದದ ಸೋಂಕನ್ನು ಅಂಟಿಸಬೇಡಿ ಎಂಬ ಹೇಳಿಕೆ ನೀಡಿದ ಯಡಿಯೂರಪ್ಪನವರಿಗೆ ಅಭಿನಂದನೆಗಳು. ಅನ್ಯ ಕೆಲವು ಭಾಜಪ ಮುಖಂಡರಗಳು ಇದನ್ನು ನೋಡಿ ಕಲಿಯಲಿ. ಬನ್ನಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ” ಎನ್ನುವ ಟ್ವಿಟ್ಟರ್ ಹಾಕಿ ದಿನೇಶ್ ಗುಂಡುರಾವ್ ಮಾತು ಎಂದು ಹೇಳಿ ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೋನಾ ಸೋಂಕಿನ ಜೊತೆ ಕೋಮುವಾದದ ಸೋಂಕನ್ನು ಅಂಟಿಸಬೇಡಿ ಎಂಬ ಹೇಳಿಕೆ ನೀಡಿದ ಯಡಿಯೂರಪ್ಪನವರಿಗೆ ಅಭಿನಂದನೆಗಳು.
ಅನ್ಯ ಕೆಲವು ಭಾಜಪ ಮುಖಂಡರಗಳು ಇದನ್ನು ನೋಡಿ ಕಲಿಯಲಿ. ಬನ್ನಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ.
– ದಿನೇಶ್ ಗುಂಡೂರಾವ್ #KarnatakaFightsCorona #CoronavirusPandemic #WeStandWithBSY pic.twitter.com/rqxYcpbLiN— ನಮ್ಮ ರಾಹುಲ್ (@NammaRahul) April 7, 2020
ಪ್ರತೀಕ್ ಗುಪ್ತ ಎಂಬವರು “ನಾನು ಬಿಜೆಪಿಯ ಮುಖ್ಯಮಂತ್ರಿಯೊಬ್ಬರ ಪರವಾಗಿ ನಿಲ್ಲುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ” ಎಂದು ಟ್ವೀಟ್ ಮಾಡುತ್ತಿದ್ದಾರೆ.
Never thought I would write this for a BJP CM. But #WeStandWithBSY https://t.co/zfFWQ13vDc
— Pratik Gupta (@pratik_p_gupta) April 7, 2020
ಸಂಘ ಪರಿವಾರವು ಮುಸ್ಲಿಮರ ಬಗ್ಗೆ ದ್ವಂದ್ವ ನಿಲುವು ಹೊಂದಿದೆ ಎಂದು ಇನ್ನೊಂದು ಟ್ವೀಟ್ ಹೇಳಿದೆ.
Sanghis: I support CAA-NRC. It really has nothing to do with muslims. We don't hate muslims.
Also Sanghis: Trend #WeLostHopeBSY because BSY warned them against islamophobia.
— Madwoman in the ಅಟ್ಟ ? (@beNNefingwrs) April 7, 2020
ಇದಲ್ಲದೆ ಮುಖ್ಯಮಂತ್ರಿಗಳ ಹೇಳಿಕೆಗೆ ಬಿಜಿಪಿ ಬೆಂಬಲಿಗರಿಂದಲೇ ವಿರೋಧ ಎದ್ದಿದೆ. ಮುಖ್ಯಮಂತ್ರಿಗಳನ್ನು ಬದಲಿಸಿ, ನಾವು ಮುಖ್ಯಮಂತ್ರಿಗಳನ್ನು ವಿರೋಧಿಸುತ್ತೇವೆ ಎಂದು ಹೇಳಿ #WELOSTHOPEBSY ಹ್ಯಾಶ್ ಟ್ಯಾಗ್ ಮೂಲಕ ಅವರನ್ನು ಬದಲಾಯಿಸುವಂತೆ ಅಮಿತ್ ಶಾ ಅವರಿಗೆ ಮನವಿ ಮಾಡುತ್ತಿದ್ದಾರೆ.
ಚೌಕಿದಾರ್ ಅಜಯ್ ಎಂಬ ಟ್ವಿಟ್ಟರ್ ಹ್ಯಾಂಡಲ್ “ಕರ್ನಾಟಕದ ಮುಖ್ಯಮಂತ್ರಿಯನ್ನು ಬದಲಿಸಿ” ಎಂದು ಬರೆದುಕೊಂಡಿದ್ದಾರೆ.
Please Change The CM In Karnataka @narendramodi
We Lost Hope On Yediyurappa @AmitShah BSY begging them and gave warning to us #WELOSTHOPEBSY— Chowkidar Ajay (@Ajay38601710) April 7, 2020
Please Change The CM In Karnataka @narendramodi
We Lost Hope On Yediyurappa @AmitShah
BSY warning die-hard BJP supporters #WELOSTHOPEBSY— Thiru (@cgthiru) April 7, 2020
ಒಟ್ಟಿನಲ್ಲಿ ಯಡಿಯೂರಪ್ಪ ಅವರ ಹೇಳಿಕೆಯೂ ರಾಜಕೀಯವಾಗಿ ಬಿಸಿ ಬಿಸಿ ಚರ್ಚೆಯನ್ನು ಉಂಟು ಮಾಡಿದ್ದು. ಸಾಮಾಜಿಕ ಜಾಲತಾಣದಾದ್ಯಂತ ಭಾರೀ ಚರ್ಚೆಯನ್ನು ಉಂಟುಮಾಡಿದೆ.


