ಕೊಲ್ಕತ್ತದ ಎಂಎಎ ಪ್ಲೈಓವರ್ ಫೋಟೋವನ್ನು ಬಳಸಿ ಉತ್ತರ ಪ್ರದೇಶ ಸರ್ಕಾರ ನೀಡಿರುವ ಜಾಹೀರಾತು ಟ್ರೋಲಿಗರಿಗೆ ಆಹಾರವಾಗಿದೆ.
‘ದಿ ಸಂಡೇ ಎಕ್ಸ್‌ಪ್ರೆಸ್’ ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಫೋಟೋವನ್ನು ಹಂಚಿಕೊಂಡು “ಪುಂಡ ಯೋಗಿ” (Thuggy Yogi) ಎಂದು ಕರೆದಿರುವ ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಮಹುವ ಮೊಯಿತ್ರ, “ನಿಮ್ಮ ಆತ್ಮವನ್ನು ಬದಲಿಸಿಕೊಳ್ಳಿ ಕನಿಷ್ಠ ನಿಮ್ಮ ಜಾಹೀರಾತು ಏಜೆನ್ಸಿಯನ್ನಾದರೂ ಬದಲಿಸಿ” ಎಂದು ಕುಟುಕಿದ್ದಾರೆ. “ನನ್ನ ವಿರುದ್ಧ ನೋಯ್ಡಾದಲ್ಲಿ ಎಫ್‌ಐಆರ್ ದಾಖಲಾಗುವುದನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ ಮೊಯಿತ್ರ.
ಫ್ಯಾಕ್ಟ್ ಚೆಕ್ ಟ್ವಿಟರ್ ಖಾತೆಯು ಪ್ರತಿಕ್ರಿಯಿಸಿದ್ದು, “ಯೋಗಿ ಆದಿತ್ಯನಾಥ ಅವರೇ, ಪಶ್ಚಿಮ ಬಂಗಾಳ ಅಭಿವೃದ್ಧಿಯನ್ನು ನಿಮ್ಮ ಜಾಹೀರಾತಿನಲ್ಲಿ ಕಾಣಲು ಖುಷಿಯಾಗುತ್ತಿದೆ. ಐಟಿಸಿ ಕಡೆಗೆ ತೆರಳಲಿರುವ ಎಂಎಎ ಫ್ಲೈಓವರ್‌ನ ಸ್ಟಾಕ್ ಫೋಟೋವನ್ನು ಜಾಹೀರಾತಿನಲ್ಲಿ ಬಳಸಲಾಗಿದೆ” ಎಂದಿದೆ.
Thuggy Yogi in his UP ads with Kolkata’s MAA flyover, our JW Marriott & our iconic yellow taxis!
Change your soul or at least your ad agency Gudduji!
P.S. Looking forward to FIRs against me in Noida now 🙂 pic.twitter.com/I7TRUMvCjO
— Mahua Moitra (@MahuaMoitra) September 12, 2021
ಸುಮಿತ್ರ ಮುಜುಂದಾರ್ ಎಂಬುವರು ಟ್ವೀಟ್ ಮಾಡಿದ್ದು, ಯೂಪಿ ಮಾದರಿಯನ್ನು ತೋರಿಸಲು ಕೊಲ್ಕತ್ತ ಫೋಟೋವನ್ನು ಬಳಸಲಾಗಿದೆ. ಪಾರದಾರ್ಶಕ ಯೂಪಿ ಎಂದರೆ ಇತರ ರಾಜ್ಯಗಳ ಅಭಿವೃದ್ಧಿಯ ಫೋಟೋಗಳನ್ನು ಕದ್ದು, ಪತ್ರಿಕೆಗೆ ಜಾಹೀರಾತು ನೀಡುವುದಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಯೋಗಿ ಸರ್ಕಾರ ಟೀಕಿಸಿದ್ದ ಮಾಜಿ ರಾಜ್ಯಪಾಲರ ಮೇಲೆ ದೇಶದ್ರೋಹ ಪ್ರಕರಣ!
“ಎಂಎಎ ಫ್ಲೈಓವರ್” (MAA flyover) ಎಂದು ಗೂಗಲ್ ಮಾಡಿದರೆ, ಕೊಲ್ಕತ್ತದಲ್ಲಿರುವ ಈ ಮೇಲ್ಸೇತುವೆಯ ಕುರಿತು ವರದಿಯಾಗಿರುವ ಸುದ್ದಿಗಳನ್ನು ನೋಡಬಹುದು.
ಜಾಹೀರಾತು ಕುರಿತು ಸ್ಪಷ್ಟನೆ ನೀಡಿರುವ ಇಂಡಿಯನ್ ಎಕ್ಸಪ್ರೆಸ್ ಸಂಸ್ಥೆಯು, “ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಿಂದಾಗಿರುವ ತಪ್ಪು ಇದು. ಇದಕ್ಕಾಗಿ ತೀವ್ರ ವಿಷಾದಿಸುತ್ತೇವೆ. ಪತ್ರಿಕೆಯ ಎಲ್ಲ ಡಿಜಿಟಲ್ ಆವೃತ್ತಿಗಳಿಂದ ಈ ಫೋಟೋವನ್ನು ಅಳಿಸಿಹಾಕುತ್ತೇವೆ” ಎಂದು ಟ್ವೀಟ್ ಮಾಡಿದೆ.
A wrong image was inadvertently included in the cover collage of the advertorial on Uttar Pradesh produced by the marketing department of the newspaper. The error is deeply regretted and the image has been removed in all digital editions of the paper.
— The Indian Express (@IndianExpress) September 12, 2021
ಇದನ್ನೂ ಓದಿ: LPG ಬೆಲೆ ಮತ್ತೆ ಹೆಚ್ಚಳ: ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ



ಎಷ್ಟೋ ವರ್ಷಗಳ ಅನುಭವ ಮತ್ತು ದಕ್ಷ ಕೆಲಸಗಾರರನ್ನು ಹೊಂದಿರುವ ಇಂಡಿಯನ್ ಎಕ್ಸ್ ಪ್ರೆಸ್ ಈ ರೀತಿಯ ಬ್ಲಂಡರ್ ಮಾಡಲು ಸಾಧ್ಯವೇ? ಯಾರ ಒತ್ತಡದಲ್ಲಿ ಇದ್ದಾರೆ, ಇಂಡಿಯನ್ ಎಕ್ಸ್ ಪ್ರೆಸ್ ನವರು?