ಇಂಡಿಯಾ ಬ್ಲಾಕ್ ನಾಯಕರನ್ನು ‘ಪಪ್ಪು’, ‘ತಪ್ಪು’ ಮತ್ತು ‘ಅಕ್ಕು’ ಮಹಾತ್ಮಾ ಗಾಂಧಿಯವರ ಮೂರು ಹೊಸ ಮಂಗಗಳು” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದರು.
2025ನೇ ಸಾಲಿನ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದ ದರ್ಭಾಂಗದಲ್ಲಿ ಸೋಮವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಕಾಂಗ್ರೆಸ್, ಆರ್‌ಜೆಡಿ ಮತ್ತು ಎಸ್‌ಪಿ ‘ಕ್ರಿಮಿನಲ್‌ಗಳನ್ನು ಅಪ್ಪಿಕೊಳ್ಳುತ್ತಿವೆ’, ಒಳನುಸುಳುವವರು ರಾಜ್ಯದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಅಪಹಾಸ್ಯ ಮಾಡಿದ ಅವರು, “‘ಪಪ್ಪು’, ‘ತಪ್ಪು’ ಮತ್ತು ‘ಅಕ್ಕು’ ಮಹಾತ್ಮ ಗಾಂಧಿಯವರ ಮೂರು ಹೊಸ ಮಂಗಗಳು” ಎಂದು ಹೇಳಿದರು.
“ಇವರು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಮತ್ತು ಗಲಭೆಗಳನ್ನು ಸೃಷ್ಟಿಸುವ ಜನರು”, ಆರ್‌ಜೆಡಿ-ಕಾಂಗ್ರೆಸ್ ಆಡಳಿತದಲ್ಲಿ ಬಡವರಿಗೆ ಸಿಗಬೇಕಾದ ಪಡಿತರವನ್ನು ರಾಜ್ಯದಲ್ಲಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.


