- Advertisement -
- Advertisement -
ಮಧ್ಯಪ್ರದೇಶದ ರಾಯ್ ಸಲ್ಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಷ್ಟ್ರೀಯ ಮಟ್ಟದ 4 ಹಾಕಿ ಆಟಗಾರರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಕಿ ಆಟಗಾರರು ಇತಾರಸಿಯಿಂದ ಹೋಶಂಗಾಬಾದ್ ಗೆ ತೆರಳುತ್ತಿದ್ದರು. ಧ್ಯಾನ್ ಚಂದ್ ಟ್ರೋಫಿಗಾಗಿ ಆಯೋಜಿಸಲಾಗಿದ್ದ ಹಾಕಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕಾರ್ ನಲ್ಲಿ ತೆರಳುತ್ತಿದ್ದರು. ಮೃತರನ್ನು ಶೆಹನ್ ವಾಜ್ ಖಾನ್, ಆದರ್ಶ ಹರ್ದ್ವಾ, ಅಶೀಷ್ ಲಾಲ್, ಅಂಕಿತ್ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ, ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.


