Homeಕರ್ನಾಟಕಈ ದೇಶದ ಬಡ ಎಳೆಮಕ್ಕಳನ್ನು ಪೊರೆಯುವ ಅಂಗನವಾಡಿ ಕಾರ್ಯಕರ್ತರನ್ನು ಶೋಷಿಸುವುದು ಸಲ್ಲ

ಈ ದೇಶದ ಬಡ ಎಳೆಮಕ್ಕಳನ್ನು ಪೊರೆಯುವ ಅಂಗನವಾಡಿ ಕಾರ್ಯಕರ್ತರನ್ನು ಶೋಷಿಸುವುದು ಸಲ್ಲ

- Advertisement -
- Advertisement -

ಒರ್ವ ಮಹಿಳೆ ಮೊದಲ ತಿಂಗಳ ಗರ್ಭಿಣಿಯಾಗಿ, ಅವರ ಪ್ರಸವವಾಗಿ, ಬಾಣಂತಿಯಾಗಿ, ಅವರ ಮಗು ಶಾಲೆಗೆ ಹೋಗುವ 6 ವರ್ಷಗಳವರೆಗೆ ಅವರ ಆರೈಕೆ ಮಾಡಿ ಅವರನ್ನು ನಿಗಾದಲ್ಲಿಟ್ಟು ಕಾಯುವ ಒಂದು ಕೆಲಸಕ್ಕಾಗಿ ಈ ದೇಶ ಒಂದು ’ವ್ಯವಸ್ಥೆ’ಯನ್ನು ಹುಟ್ಟು ಹಾಕಿದೆ. ಆ ವ್ಯವಸ್ಥೆಯೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS). ಈ ದೇಶದಲ್ಲಿ ಹುಟ್ಟುವ ಬಹುಸಂಖ್ಯಾತ ಮಕ್ಕಳು ಈ ಯೋಜನೆಯ ಫಲಾನುಭವಿಗಳು. ಅಕ್ಟೋಬರ್ 2, 1975 ರಂದು ಪ್ರಾರಂಭಿಸಲಾದ ಈ ಯೋಜನೆಗೆ ಬರೋಬ್ಬರಿ 50 ವರ್ಷಗಳು ತುಂಬುತ್ತಿವೆ.

ಈ ಯೋಜನೆ ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶ, ಆರೋಗ್ಯ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಐಸಿಡಿಎಸ್‌ನ ಈ ಕಾರ್ಯಕ್ರಮವನ್ನು ಪ್ರಾಥಮಿಕವಾಗಿ ಕಾರ್ಯಗತಗೊಳಿಸುವುದು ಅಂಗನವಾಡಿ ಕೇಂದ್ರಗಳ ಮೂಲಕವಾಗಿದೆ. ದೇಶದ ಪ್ರಮುಖ ಯೋಜನೆಯೊಂದಕ್ಕೆ ತಳಮಟ್ಟದಲ್ಲಿ ಕೆಲಸ ಮಾಡುವುದು ಅಂಗನವಾಡಿ ಕಾರ್ಯಕರ್ತರಾಗಿದ್ದಾರೆ.

ಈ ಕಾರ್ಯಕ್ರಮದ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತರು, ತಾಯಿ ಮತ್ತು ಮಗುವಿನ ಪೌಷ್ಟಿಕಾಂಶದ ಸುಧಾರಣೆಗಾಗಿ, ಆರೋಗ್ಯ ಸೇವೆಗಳು ವಿಚಾರವಾಗಿ, ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ, ತಾಯಂದಿರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಾರೆ. ಇಷ್ಟೆ ಅಲ್ಲದೆ, ಇಲಾಖೆಗಳ ನಡುವೆ ಸಮನ್ವಯ, ಸರ್ಕಾರದ ಬೇರೆ ಇಲಾಖೆಗಳ ಮನೆ ಮನೆ ಸರ್ವೆ, ಅಂಗಲವಿಕಲ ಸರ್ವೆ, ಬಿಎಲ್‌ಒ ಸೇವೆ, ಆಧಾರ್ ಸರ್ವೆ ಸೇರಿದಂತೆ ಸರ್ಕಾರಕ್ಕೆ ಅಗತ್ಯವಿರುವ ಒಟ್ಟು 45 ದಾಖಲೆಗಳ ದಾಖಲೀಕರಣವನ್ನು ಈ ಅಂಗನವಾಡಿ ಕಾರ್ಯಕತೆಯರು ಸರ್ಕಾರಕ್ಕಾಗಿ ಮಾಡುತ್ತಾರೆ.

50 ವರ್ಷಗಳು ತುಂಬಿರುವ ಈ ಯೋಜನೆಯ ಪರಿಣಾಮದಿಂದ ಭಾರತದ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಐಸಿಡಿಎಸ್ ಕಾರ್ಯಕ್ರಮ ಇಲ್ಲದ ಪ್ರದೇಶಗಳಿಗೆ ಹೋಲಿಸಿದರೆ, ಐಸಿಡಿಎಸ್ ಇರುವ ಪ್ರದೇಶಗಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಕಡಿಮೆ ಇದ್ದಾರೆ ಎಂದು ಅಧ್ಯಯನ ತೋರಿಸುತ್ತದೆ. ವ್ಯಾಕ್ಸಿನೇಷನ್ ಕವರೇಜ್ ಮತ್ತು ಶಿಶು ಮರಣ ದರಗಳು ಕಡಿಮೆಯಾಗಿದೆ. ಕಾರ್ಯಕ್ರಮದ ಕಾರಣಕ್ಕೆ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ, ಜೊತೆಗೆ ಮಕ್ಕಳಲ್ಲಿ ಅರಿವಿನ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಹೆಚ್ಚಳ ಕಂಡಿದೆ.

ಮಹಿಳೆಯರೇ ಇರುವ ಈ ಕಾರ್ಯಕರ್ತರು ಮಾಡುವ ಇಷ್ಟೆಲ್ಲಾ ಕೆಲಸಗಳಿಗೆ ಸರ್ಕಾರ ನೀಡುವುದು ಗೌರವಧನ ಮಾತ್ರ. ಆದರೆ ಈ ಗೌರವ ಧನವನ್ನು ಸರ್ಕಾರ ಕಳೆದ ನಾಲ್ಕು ತಿಂಗಳಿನಿಂದ ಕಾರ್ಯಕತೆಯರಿಗೆ ಇನ್ನೂ ನೀಡಿಲ್ಲ. (ಸರ್ಕಾರ ಅನುದಾನ ಬಿಡುಗಡೆ ಮಾಡಿದೆ ಎಂದು ವರದಿಯಿದೆಯಾದರೂ, ಕಾರ್ಯಕರ್ತರ ಖಾತೆಗೆ ಇನ್ನೂ ಹಣ ಬಿದ್ದಿಲ್ಲ). ಸರ್ಕಾರದ ಇಷ್ಟೆಲ್ಲಾ ಕೆಲಸಗಳನ್ನು ಮಾಡುವ ಅಂಗನವಾಡಿ ಕಾರ್ಯಕತೆರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ನೀಡುತ್ತಿರುವ ಹಣ 11,500 ರೂ. ಮಾತ್ರ; ಮತ್ತು ಸಹಾಯಕಿಯರಿಗೆ 6,525 ರೂ.!.

ಎಂ. ಜಯಮ್ಮ

ನ್ಯಾಯಪಥ ಪತ್ರಿಕೆ ಜೊತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, “ಮಹಿಳೆ-ಮಕ್ಕಳನ್ನು ಆರೈಕೆ ಮತ್ತು ರಕ್ಷಣೆ ಮಾಡುವಂತ ವ್ಯವಸ್ಥೆಯಿದು. ಇದನ್ನು ಸರ್ಕಾರ ಸರಿಯಾಗಿ ನಿಭಾಯಿಸಬೇಕಾಗಿದೆ. ಕೊಡುವ ಆಹಾರಗಳು ಕಳಪೆಯಾಗಿರುತ್ತವೆ, ಅದು ಕೂಡಾ ಸಮಯಕ್ಕೆ ಸರಿಯಾಗಿ ಬರುವುದಿಲ್ಲ; ಹಾಗಾಗಿ ಇದು ಜನರಿಗೆ ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. ಇದೆ ಕಾರಣಕ್ಕಾಗಿ ಪ್ರಾರಂಭವಾದ ಐಸಿಡಿಎಸ್‌ಗೆ 50 ವರ್ಷಗಳಾಗಿದೆ. ಆದರೆ ಈ ಕೆಲಸ ಮಾಡುವವರಿಗೆ ಇನ್ನೂ ಗೌರವಧನ ನೀಡುವುದರಲ್ಲೆ ಸರ್ಕಾರ ಕಾಲ ಕಳೆಯುತ್ತಿದೆ. ಅದನ್ನೂ ಸರಿಯಾಗಿ ನೀಡುತ್ತಿಲ್ಲ. ನಮಗೆ ಇಎಸ್‌ಐ ಸೌಲಭ್ಯವಿಲ್ಲ, ಆರೋಗ್ಯ ವಿಮೆಯಿಲ್ಲ, ಪಿಂಚಣಿಯಿಲ್ಲ, ಕೆಲಸಕ್ಕೆ ತಕ್ಕ ಕೂಲಿ ಕೂಡಾ ಇಲ್ಲ. 11 ಸಾವಿರ ರೂ.ಗಳಲ್ಲಿ ಈಗಿನ ಕಾಲದಲ್ಲಿ ಜೀವನ ನಡೆಸಲು ಸಾಧ್ಯವಿದೆಯೆ? 6,500 ರೂ.ಗಳು ಅಂಗನವಾಡಿ ಸಹಾಯಕಿಯರಿಗೆ ಸಿಗುತ್ತಿದೆ. ಅವರು ಹೇಗೆ ಜೀವನ ಮಾಡುವುದು?” ಎಂದು ಕೇಳಿದರು.

ಐಸಿಡಿಎಸ್ ಯೋಜನೆಗಾಗಿ ಕೇಂದ್ರ ಸರ್ಕಾರ 60% ಕೊಟ್ಟರೆ, ರಾಜ್ಯ ಸರ್ಕಾರ 40% ನೀಡುತ್ತದೆ. ನೀಡುವ ಕಡಿಮೆ ಗೌರವಧನವನ್ನು ಎರಡೂ ಸರ್ಕಾರಗಳು ಸೇರಿ ನೀಡುವುದಿದ್ದರೂ, ಸಮಯಕ್ಕೆ ಸರಿಯಾಗಿ ನೀಡದೆ ಕಾರ್ಯಕರ್ತರಿಗೆ ತಡವಾಗಿ ನೀಡುತ್ತದೆ. ತಮ್ಮನ್ನು ಖಾಯಂ ನೌಕರರನ್ನಾಗಿ ಮಾಡಿ ಎಂಬ ಕಾರ್ಯಕರ್ತರ ಬೇಡಿಕೆಗೆ ಕೇಂದ್ರ ಸರ್ಕಾರ ಇನ್ನೂ ಯಾವುದೆ ನಿರ್ಧಾರ ಕೈಗೊಂಡಿಲ್ಲ. ಖಾಯಂ ನೌಕರರಾಗಿ ನೇಮಕವಾದರೆ, ಕಾರ್ಯಕರ್ತೆರಿಗೆ ಗೌರವಧನದ ಬದಲು ಕನಿಷ್ಠ ಕೂಲಿ ಸಿಗುವಂತೆ ಆಗುತ್ತದೆ. ಆದರೆ ಇದಕ್ಕೆ ಸರ್ಕಾರಗಳ ಮುಂದಡಿಯಿಡುತ್ತಿಲ್ಲ. ಚುನಾವಣೆ ಕೆಲಸ, ಬಾಣಂತಿಯರ ಆರೋಗ್ಯ, ಮಗುವಿನ ಆರೋಗ್ಯ, ಮಕ್ಕಳ ಅಕ್ಷರಾಭ್ಯಾಸದ ಜೊತೆಗೆ ಪೌಷ್ಠಿಕಾಂಶದ ಆಹಾರ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿದರೂ ಸಿಗುವ ಕಡಿಮೆ ಮೊತ್ತದ ಗೌರವಧನ ಕೂಡಾ ಅವರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಹಾಕಿ ಕೈ ತೊಳೆದುಕೊಂಡರೆ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತದೆ.

ಕಳೆದ ನಾಲ್ಕು ತಿಂಗಳುಗಳಿಂದ ಗೌರವಧನ ಸಿಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ(ಸಿಐಟಿಯು) ನಾಯಕಿಯಾಗಿರುವ ಮತ್ತು ಅಂಗನವಾಡಿ ಕಾರ್ಯಕರ್ತೆಯೂ ಆಗಿರುವ ಎಂ.ಬಿ. ಪುಷ್ಪ ಅವರು ಮಾತನಾಡಿ, “ಇದು ಮಹಾಲಯ ಅಮಾವಸ್ಯೆ ತಿಂಗಳು.. ನಮ್ಮಲ್ಲಿ ಈಗ ಆಚರಣೆಗಳು ಹೆಚ್ಚಾಗಿರುತ್ತವೆ. ಕಳೆದ ಎರಡುಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಗೌರವಧನ ಬಿಡುಗಡೆಯಾಗಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ, ’ಅನುದಾನ ಬಂದರೆ ಮಾಡಿಕೊಡುತ್ತೇವೆ’ ಎನ್ನುತ್ತಿದ್ದಾರೆ. ಮೇಲಾಧಿಕಾರಿಗಳನ್ನು ಕೇಳಿದರೆ ಅನುದಾನ ಕಳಿಸಿದ್ದೇವೆ ಎನ್ನುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ನಾವು ಯಾರನ್ನು ನಂಬಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಅಂಗನವಾಡಿ ನೌಕರರು ಯಾರೂ ಕೂಡ ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಇದನ್ನೇ ನಂಬಿಕೊಂಡು ಜೀವನ ಮಾಡುವವರಿಗೆ ಎರಡು ಮೂರು ತಿಂಗಳು ಗೌರವಧನ ನೀಡದೇ ಇದ್ದರೆ ನಮ್ಮ ಬದುಕಿಗೆ ಕಷ್ಟವಾಗುತ್ತದೆ” ಎಂದು ಹೇಳಿದರು.

“ಈ ಪರಿಸ್ಥಿತಿಯನ್ನು ನಿರ್ವಹಿಸಲಾಗದೆ ದಾವಣಗೆರೆಯ ಅಂಗನವಾಡಿ ಸಹಾಯಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸರ್ಕಾರ ಈವರೆಗೆ ಒಂದು ಸ್ಪಷ್ಟನೆ ನೀಡಿಲ್ಲ. ಗೌರವಧನ ನೀಡದಿದ್ದರೂ ನಮ್ಮ ಕೆಲಸಗಳು ನಿಂತಿಲ್ಲ. ದಿನದಿಂದ ದಿನಕ್ಕೆ ಕೆಲಸದ ಹೊರೆ ಹೆಚ್ಚುತ್ತಿದೆ. ಸಂಬಳ ಕೊಡದೆ ಕೆಲಸ ಮಾಡಿಸುತ್ತಿರುವುದರಿಂದ ಕಾರ್ಯಕರ್ತರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬೆಲೆ ಏರಿಕೆಗೆ ಅನುಗುಣವಾಗಿ ನಮಗೆ ಕನಿಷ್ಠ ವೇತನವನ್ನೂ ಸರ್ಕಾರ ಕೊಡುತ್ತಿಲ್ಲ. ಬರಬೇಕಾದ ಕಡಿಮೆ ಗೌರವಧನವನ್ನೂ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ನಮಗೆ ಜೀವನ ಮಾಡುವುದು ಕಷ್ಟವಾಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ತಿಂಗಳು ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

“ಕೆಲವು ತಾಲೂಕುಗಳಲ್ಲಿ ಗೌರವಧನ ಕೊಡದಿದ್ದರೂ ತಮ್ಮದೇ ಹಣದಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಿ ಎಂದು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ನಮಗೆ ಜೀವನ ಮಾಡುವುದೇ ಕಷ್ಟವಾಗಿರುವಾಗ ಮಕ್ಕಳಿಗೆ ಮೊಟ್ಟೆ ಖರೀದಿ ಮಾಡುವುದು ಹೇಗೆ? ಇದನ್ನೂ ತಡೆಗಟ್ಟಬೇಕು. ಕಾರ್ಯಕರ್ತೆಯರ ಬದುಕು ಚಿಂತಾಜನಕವಾಗಿದೆ. ಸರ್ಕಾರ ಈ ಬಗ್ಗೆ ಗಮನಕೊಟ್ಟು ಪ್ರತಿ ತಿಂಗಳು ಗೌರವಧನ ಕೊಡಬೇಕು” ಎಂದರು.

ಎಂ.ಬಿ. ಪುಷ್ಪ

ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆರ ಗೌರವಧನ 10 ಸಾವಿರ ದಾಟಿದ್ದರೂ, ಉತ್ತರ ಭಾರತ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಗೌರವಧನ ಇನ್ನೂ 5 ಸಾವಿರ ದಾಟಿಲ್ಲ. ಹೆಚ್ಚಿನ ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನುದಾನ ನೀಡುವುದಿಲ್ಲ. ಕೇಂದ್ರ ಸರ್ಕಾರ ನೀಡುವ ಗೌರವಧನವನ್ನು ಅವರಿಗೆ ನೀಡಿ ಸುಮ್ಮನಿರುತ್ತವೆ. ಇಂತಹ ರಾಜ್ಯಗಳಲ್ಲಿ ಕಾರ್ಯಕರ್ತೆಯರಿಗೆ 4,500 ರೂ. ಇದ್ದರೆ, ಸಹಾಯಕಿಯರಿಗೆ 2500 ರೂ. ಕೊಟ್ಟು ದುಡಿಸುತ್ತಿವೆ. ಸರ್ಕಾರಗಳು ಪ್ರತಿ 3 ತಿಂಗಳಿಗೊಮ್ಮ ಅನುದಾನ ಬಿಡುಗಡೆ ಮಾಡುತ್ತದೆ ಎಂದು ಹೇಳುತ್ತವೆ. ಆದರೆ ಈ ಅನುದಾನ ಇಲಾಖೆಗಳಲ್ಲಿ ಹಂಚಿಕೆಯಾಗಿ ಅಂಗನವಾಡಿ ಕಾರ್ಯಕತೆರಿಗೆ ತಲುಪುವಾಗ ಮತ್ತಷ್ಟು ತಿಂಗಳು ವಿಳಂಬವಾಗುತ್ತದೆ.

ತಮ್ಮ ಪರಿಸ್ಥಿತಿಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರಿಗೆ ಪ್ರತಿ ತಿಂಗಳು ಹೇಗೆ ಸರಿಯಾದ ಸಮಯಕ್ಕೆ ವೇತನ ಬರುತ್ತದೆಯೋ ಹಾಗಾಯೇ ನಮಗೆ ಕೂಡಾ ಬರುವಂತೆ ಇರಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆ. ಈ ಹಿಂದೆ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಗೌರವಧನ ಬಿಡಿಬಿಡಿಯಾಗಿ ಬರುತ್ತಿತ್ತು. ಆದರೆ ನಿರಂತರ ಹೋರಾಟದ ನಂತರ ಈಗ ಒಟ್ಟಾಗಿ ಬರುತ್ತಿದೆ. ಗರ್ಭಿಣಿ, ಬಾಣಂತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸವಲ್ಲದೆ, ಪೋಷಣ್ ಅಭಿಯಾನ, ಪೋಷಣ್ ಪಕ್ವಾಡ ಎಂಬಂತಹ ಇತರ ಕೆಲಸವನ್ನೂ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಡಿಸಲಾಗುತ್ತದೆ.

ಇದನ್ನೂ ಓದಿ: ಮೂರು ತಿಂಗಳಿನಿಂದ ಬಿಡುಗಡೆಯಾಗದ ಗೌರವಧನ; ಸಂಕಷ್ಟದಲ್ಲಿ ಅಂಗನವಾಡಿ ನೌಕರರು

“ಕಳೆದ 2 ತಿಂಗಳಿನಿಂದ ನೆಟ್ಟಗೆ ಅಂಗನವಾಡಿಗೆ ಹೋಗಲು ಆಗುತ್ತಿಲ್ಲ. ವಾರದಲ್ಲಿ ಮೂರು ದಿನ ಬೇರೆ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದಾರೆ. ಕಳೆದ ವಾರ ಕೂಡಾ 2-3 ಕಾರ್ಯಕ್ರಮಗಳಿಗೆ ಅಂಗನವಾಡಿ ಕಾರ್ಯಕರ್ತೆಯರೆ ಹೋಗಿದ್ದಾರೆ. ಮುಂದಿನ ವಾರ ಕೂಡಾ ಕೃಷಿ ಇಲಾಖೆಯ ಯಾವುದೋ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಎಲ್ಲಿವರೆಗೆ ಎಂದರೆ, ಏನು ಕಾರ್ಯಕ್ರಮ ಏನು ಎತ್ತ ಎಂದು ಕೂಡಾ ಹೇಳಿರುವುದಿಲ್ಲ. ಅಲ್ಲಿಗೆ ಹೋದ ನಂತರವೇ ನಮಗೆ ಕಾರ್ಯಕ್ರಮ ಏನು ಎಂದು ತಿಳಿಯುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸಗಳಲ್ಲದೆ, ಬೇರೆಬೇರೆ ಇಲಾಖೆಗಳ ಕೆಲಸವನ್ನೂ ಮಾಡಬೇಕಾಗುತ್ತದೆ” ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇದೀಗ ಸರ್ಕಾರ ಶಾಲಾಪೂರ್ವ ಶಿಕ್ಷಣ ನೀಡಲು ಯೋಜಿಸುತ್ತಿದೆ. ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಿ ಅಂಗನವಾಡಿಗಳಲ್ಲೇ ಇದನ್ನು ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಎಲ್‌ಕೆಜಿ-ಯುಕೆಜಿಯನ್ನು ಅಂಗನವಾಡಿಯಲ್ಲಿ ತೆರೆದು ನಮಗೆ ಆ ಕೆಲಸವಷ್ಟೆ ನೀಡಿ ಮತ್ತು ಇತರ ಕೆಲಸದಿಂದ ನಮ್ಮನ್ನು ತೆರವು ಮಾಡಿ ಎಂದು ಅವರು ಕೇಳುತ್ತಿದ್ದಾರೆ. ಆದರೆ ಹೈದರಾಬಾದ್ ಕರ್ನಾಟಕದಲ್ಲಿ ಸರ್ಕಾರ ಈಗಾಗಲೇ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತೆರೆದಿದ್ದು ಹೊರಗಿನ ವ್ಯಕ್ತಿಗಳನ್ನು ಶಿಕ್ಷಕರಾಗಿ-ಸಂಪನ್ಮೂಲ ವ್ಯಕ್ತಿಗಳಾಗಿ ತೆಗೆದುಕೊಂಡಿದೆ. ಆದರೆ ಬೆಂಗಳೂರಿನಲ್ಲಿ 250 ಶಾಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನೇ ಶಿಕ್ಷಕಿಯರನ್ನಾಗಿ ಸರ್ಕಾರ ನೇಮಕ ಮಾಡಿಕೊಂಡಿದೆ. ರಾಜ್ಯದ ಇತರ ಅಂಗನವಾಡಿಗಳಲ್ಲಿ ಎಲ್‌ಕೆಜಿ ಯುಕೆಜಿಗೆ ಕೂಡಾ ನಮ್ಮನ್ನೇ ಪರಿಗಣಿಸಿ, ಯಾಕೆಂದರೆ ನಮ್ಮಲ್ಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿರುವ ಸಂಪನ್ಮೂಲ ವ್ಯಕ್ತಿಗಳು ಇದ್ದಾರೆ ಎನ್ನುವುದು ಅಂಗನವಾಡಿ ಕಾರ್ಯಕರ್ತರ ಸಂಘದ ಬೇಡಿಕೆಯಾಗಿದೆ. ಇವರನ್ನು ಬಳಸಿ ಅಂಗನವಾಡಿಯಲ್ಲಿ ಹಂತಹಂತವಾಗಿ ಎಲ್‌ಕೆಜಿ-ಯುಕೆಜಿ ಜಾರಿಗೆ ತನ್ನಿ ಎಂದು ಸಂಘವು ಹೇಳುತ್ತಿವೆ.

ಐಸಿಡಿಎಸ್ ಯೋಜನೆಗೆ ಬರೋಬ್ಬರಿ 50 ವರ್ಷಗಳು ತುಂಬಿದೆ. ಈ ಯೋಜನೆಯ ಉದ್ದೇಶಗಳು ಕೂಡಾ ಕೈಗೂಡುತ್ತಿವೆ. ಆದರೆ, 50 ವರ್ಷಗಳಷ್ಟು ಹಳೆಯ ಯೋಜನೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಇನ್ನೆಷ್ಟು ವರ್ಷಗಳು ಬೇಕಿದೆ? ಯೋಜನೆಯನ್ನು ಸರಿಯಾಗಿ ನಿರ್ವಹಿಸಿ ಅದರಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಘನತೆಯ ಬದುಕನ್ನು ಸರ್ಕಾರ ಖಚಿತಪಡಿಸಲು ಇನ್ನೆಷ್ಟು ವರ್ಷಗಳು ಬೇಕು? ಇಚ್ಛಾಶಕ್ತಿಯಿರುವ ಸರ್ಕಾರಗಳಿಗೆ ಇವೆಲ್ಲಾ ಸಾಧ್ಯ. ಆದರೆ ಅಂತಹ ಇಚ್ಛಾಶಕ್ತಿಗಳು ಯಾವ ಸರ್ಕಾರಕ್ಕೆ, ಯಾವಾಗ ಬರುತ್ತದೆ ಎಂದು ಕಾದು ಕೂರಬೇಕಿರುವ ಸನ್ನಿವೇಶವಿದೆ. ಆದುದರಿಂದ ಅಂಗನವಾಡಿ ಕಾರ್ಯಕರ್ತರು ನಡೆಸುವ ಸ್ವಾಭಿಮಾನದ ಹೋರಾಟಗಳಿಗೆ ನಾವು ಬೇಷರತ್ ಬೆಂಬಲ ಸೂಚಿಸಿ ಅವರೊಂದಿಗೆ ನಿಲ್ಲಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...