Homeಕರ್ನಾಟಕಪಾಕ್‌ಗೆ ಆಹಾರವಾದ ಯಡಿಯೂರಪ್ಪ : ಆ ಮಾತು ಬಿಜೆಪಿಯ ಒಳ ಆಶಯವೇ?

ಪಾಕ್‌ಗೆ ಆಹಾರವಾದ ಯಡಿಯೂರಪ್ಪ : ಆ ಮಾತು ಬಿಜೆಪಿಯ ಒಳ ಆಶಯವೇ?

- Advertisement -
ಭಾರತೀಯ ವಾಯುಸೇನೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಿಂದಾಗಿ ಬಿಜೆಪಿ ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲೋದು ಗ್ಯಾರಂಟಿ ಅನ್ನೋ ಸ್ಟೇಟ್‌ಮೆಂಟ್ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಇಡೀ ದೇಶದ ಮಾನವನ್ನೇ ಹರಾಜು ಹಾಕಿದ್ದಾರೆ. ಸೇನೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಬಿಜೆಪಿ ಯೋಜಿಸಿದೆಯಾ? ಅನ್ನೋ ಪ್ರಶ್ನೆ ಇದೀಗ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿರುವ ದೇಶದ ನಾಗರೀಕರನ್ನು ಕಾಡಲು ಶುರು ಮಾಡಿರುವ ಹೊತ್ತಿನಲ್ಲೇ, ಅತ್ತ ಪಾಕಿಸ್ತಾನವು ಕೂಡಾ ಯಡಿಯೂರಪ್ಪನವರ ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಏಕಾಂಗಿಯಾಗಿಸುವ ಯತ್ನದಲ್ಲಿದೆ!
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಪ್ (ಪಿಟಿಐ) ಪಕ್ಷದ ನಾಯಕರುಗಳು ಯಡಿಯೂರಪ್ಪನವರ ಹೇಳಿಕೆ ಇರುವ ವೀಡಿಯೋವನ್ನು ಟ್ಯಾಗ್ ಮಾಡಿ “ಎಲೆಕ್ಷನ್‌ನಲ್ಲಿ ಗೆಲ್ಲಲು ಹತಾಶೆಗೊಂಡಿರುವ ಜನರ ಹುನ್ನಾರದಿಂದಾಗಿ ಭಾರತೀಯರು ಯುದ್ಧೋನ್ಮಾದಕ್ಕೆ ಬಲಿಯಾಗಿದ್ದಾರೆ” ಎಂದು ಹೀಗಳೆದಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರು ಯಡಿಯೂರಪ್ಪನವರ ಹೇಳಿಕೆಯನ್ನು ಖಂಡಿಸಿದ್ದ ಟ್ವೀಟ್ ಅನ್ನು ಉಲ್ಲೇಖಿಸುತ್ತಾ ಪಾರ್ಟಿಯ ಅಧಿಕೃತ ಅಕೌಂಟ್‌ನಲ್ಲಿ ಇವತ್ತು (ಫೆಬ್ರವರಿ 28, ಗುರುವಾರ) ಹೀಗೆ ಟ್ವೀಟ್ ಮಾಡಲಾಗಿದೆ.
- Advertisement -

ಇದು ಹೊರಬಿದ್ದ ಅರ್ಧಗಂಟೆಯಲ್ಲೇ, ಪಿಟಿಐ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಯುದ್ಧವನ್ನು ಎಲೆಕ್ಷನ್ ತಂತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಪಿಟಿಐನ ಟ್ವೀಟ್‌ಗಳಿಗೆ ಎರಡು ಉದ್ದೇಶಗಳಿರುವಂತಿದೆ:
  • ಎಲೆಕ್ಷನ್ ಗೆಲ್ಲಲು ಹತಾಶೆಗೊಂಡಿರುವ ಒಬ್ಬ ವ್ಯಕ್ತಿಯ (ಪ್ರಧಾನಿ ನರೇಂದ್ರ ಮೋದಿ ಎಂದು ಪರೋಕ್ಷವಾಗಿ ಸೂಚಿಸುತ್ತದೆ) ಅನರ್ಥ ಯತ್ನದಿಂದಾಗಿ ‘ಪಾಕಿಸ್ತಾನದ ವಿರುದ್ಧ ಸಿಡಿದು ನಿಲ್ಲುವಿಕೆಯು’ ಭಾರತ ಸರ್ಕಾರವನ್ನು ಜನರೊಂದಿಗೆ ಬೆಸೆಯುವ ಯತ್ನವೆಂದು ತೋರಿಸುವುದು.
  • ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹ್ಮದ್‌ನಿಂದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಬಾಲಕೋಟ್ ವಾಯುದಾಳಿ ನಡೆದಿದೆ ಎಂಬ ವಾಸ್ತವವನ್ನು ಮರೆಮಾಚುವುದು.
ಪುಲ್ವಾಮಾ ಮತ್ತು ಬಾಲಕೋಟ್ ಎರಡೂ ದಾಳಿಗಳ ಕುರಿತಂತೆ ಉಭಯ ರಾಷ್ಟ್ರಗಳ ವಿರೋಧ ಪಕ್ಷಗಳು ಯಾವ ವಿವಾದಕ್ಕೂ ಆಸ್ಪದಕೊಡದಂತೆ ಆಯಾ ಸರ್ಕಾರಗಳ ಪರವಾಗಿ ನಿಂತಿವೆ. ಆದರೆ ನಿಜಕ್ಕೂ ಇರುವ ಸಮಸ್ಯೆ ಏನೆಂದರೆ, ಯಡಿಯೂರಪ್ಪನವರ ಈ ಹೇಳಿಕೆಯಿಂದಾಗಿ ’ಬಿಜೆಪಿಯ ಚುನಾವಣೆಯ ಹುನ್ನಾರದ ಭಾಗವಾಗಿ ಇಂಡಿಯಾ-ಪಾಕಿಸ್ತಾನಗಳು ಯುದ್ಧ ಸನ್ನದ್ಧವಾಗಬೇಕಾಗಿ ಬಂದಿದೆಯೇ ವಿನಾಃ ಪುಲ್ವಾಮಾ ದಾಳಿಯಿಂದಾಗಿ ಅಲ್ಲ’ ಎಂದು ಜಗತ್ತಿನ ಇತರೆ ರಾಷ್ಟ್ರಗಳ ಮುಂದೆ ವಾದ ಮಂಡಿಸಲು ಪಾಕಿಸ್ತಾನಕ್ಕೆ ಒಂದು ಅವಕಾಶ ಸಿಕ್ಕಂತಾಗಿದೆ.
ಯಡಿಯೂರಪ್ಪ ಇದೀಗ ಎಚ್ಚೆತ್ತುಕೊಂಡು ತನ್ನ ಹೇಳಿಕೆಯನ್ನು ತಪ್ಪಾಗಿ ತಿರುಚಲಾಗಿದೆ ಅಂತ ಹೇಳುತ್ತಿರಬಹುದು. ಆದರೆ ಇದರಿಂದ ದೇಶಕ್ಕೆ ಆಗಬೇಕಾದ ಲುಕ್ಸಾನು ಆಗಿಹೋಗಿದೆ. ಅವರದೇ ಪಕ್ಷದ ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಹಾಗೂ ಸೇನೆಯ ಮಾಜಿ ಜನರಲ್ ಕೂಡಾ ಆದ ವಿ.ಕೆ.ಸಿಂಗ್ ಅವರು “ಬಿಎಸ್‌ವೈಜೀ, ನಾನು ನಿಮ್ಮ ಮಾತನ್ನು ಒಪ್ಪುವುದಿಲ್ಲ. ನಾವು ಒಂದು ರಾಷ್ಟ್ರವಾಗಿ ನಿಲ್ಲುತ್ತೇವೆ. ನಮ್ಮ ದೇಶದ ರಕ್ಷಣೆ ಮತ್ತು ನಾಗರೀಕರ ಸುರಕ್ಷತೆಗಾಗಿ ಸರ್ಕಾರ ಈ ಕಾರ್ಯಾಚರಣೆ ನಡೆಸಿದೆಯೇ ವಿನಾಃ ಕೆಲ ಹೆಚ್ಚುವರಿ ಸೀಟುಗಳನ್ನು ಗೆಲ್ಲುವುದಕ್ಕಲ್ಲ” ಎಂದು ಟ್ವೀಟಿಸಿದ್ದಾರೆ.

ಪಾಕಿಸ್ತಾನದಲ್ಲಿ ಯಡಿಯೂರಪ್ಪನವರ ಹೇಳಿಕೆ ವೈರಲ್ ಆಗುವ ಒಂದು ದಿನದ ಹಿಂದಷ್ಟೇ, ಅಂದರೆ ಫೆಬ್ರವರಿ 27ರಂದು ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು “ವಿರೋಧ ಪಕ್ಷಗಳು ಪಾಕಿಸ್ತಾನದ ಕೈಗೊಂಬೆಯಂತೆ ವರ್ತಿಸಿ ಸೇನಾ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ” ಎಂದು ಹರಿಹಾಯ್ದಿದ್ದರು. ಆದರೆ ಈಗ ವಿರೋಧ ಪಕ್ಷಗಳ ಅವರದೇ ಪಾರ್ಟಿಯ ಯಡಿಯೂರಪ್ಪನವರ ಹೇಳಿಕೆಯೇ ಪಾಕಿಸ್ತಾನಕ್ಕೆ ಆಯುಧವಾಗಿ ಬಳಕೆಗೊಳ್ಳುತ್ತಿದೆ.
ದುರಂತವೆಂದರೆ, ಗೋ.ಮಧುಸೂದನ್ ಥರದ ಸ್ಥಳೀಯ ಬಿಜೆಪಿ ನಾಯಕರು ದೇಶಕ್ಕೆ ಮುಜುಗರ ಉಂಟು ಮಾಡುತ್ತಿರುವ ಈ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸುವುದರ ಬದಲು ತಮ್ಮ ಪಕ್ಷದ ನಾಯಕನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ‘ದೇಶಭಕ್ತಿ’ಯಲ್ಲೂ ರಾಜಕಾರಣ ಬೆರೆಸುತ್ತಿದ್ದಾರೆ. ಟೀವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೌದು, ಯಡಿಯೂರಪ್ಪನವರು ಹೇಳಿದ್ದು ಸರಿ, ನಾವು ಇಪ್ಪತ್ತೆರಡಲ್ಲ, ಈಗ ಇಪ್ಪತ್ತೆಂಟು ಸೀಟು ಗೆಲ್ತೀವಿ ನೋಡ್ಕಳಿ. ದೇಶದ್ರೋಹಿ ’ಕಾಂಗ್ರೆಸ್’ ಜನ ತಕ್ಕ ಪಾಠ ಕಲಿಸ್ತಾರೆ ನೋಡ್ತಾ ಇರಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪುಲ್ವಾಮಾದಲ್ಲಿ ಸೈನಿಕರು ಸತ್ತಾಗ ದೇಶದೆಲ್ಲೆಡೆ ಜನರು ಮರುಗಿದರೆ, ಅದರಿಂದ ರಾಜಕೀಯ ಲಾಭ ಪಡೆದುಕೊಳ್ಳುವವರು ಹಿಗ್ಗುತ್ತಾರೆನ್ನುವುದು ವಿಪರ್ಯಾಸ. ದೇಶಕ್ಕಿಂತ, ಸೈನಿಕರ ಜೀವಕ್ಕಿಂತ ತಮ್ಮ ಸೀಟು ಗಳಿಕೆಯೇ ಹೆಚ್ಚಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಕವಿಯೊಬ್ಬರು ಹೇಳಿದಂತೆ ’ಬೀದಿಯಲ್ಲಿಂದು ಶವಗಳ ಮಳೆ, ಮುಂದಿನ ಚುನಾವಣೆಯಲ್ಲಿ ಅವರಿಗೆ ಹುಲುಸಾದ ಬೆಳೆ’ ಎಂಬಂತೆ ಆದರೆ, ದೇಶದ ನೈತಿಕ ಪ್ರಜ್ಞೆಯು ನಾಶದ ಹಾದಿ ಹಿಡಿದಂತೆ. ಇದನ್ನು ಈ ರಾಜಕಾರಣಿಗಳಿಗೆ ತಿಳಿಸಿ ಹೇಳುವ ಕೆಲಸ ತುರ್ತಾಗಿ ಆಗಬೇಕಿದೆ.
ಆಧಾರ: ದಿ ಕ್ವಿಂಟ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...