Homeಅಂಕಣಗಳುಪುಲ್ವಾಮಾ ಹತ್ಯಾಕಾಂಡಕ್ಕೆ ಮೋದಿಯ 'ಪಾಲಿಸಿ'ಯೇ ಕಾರಣ....

ಪುಲ್ವಾಮಾ ಹತ್ಯಾಕಾಂಡಕ್ಕೆ ಮೋದಿಯ ‘ಪಾಲಿಸಿ’ಯೇ ಕಾರಣ….

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ಪುಲ್ವಾಮಾ ಹತ್ಯಾಕಾಂಡ ಸಂಭವಿಸಲು ಮೂಲ ಕಾರಣ ಕಾಶ್ಮೀರದಲ್ಲಿ ಈ 5 ವರ್ಷಗಳಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉಲ್ಬಣವಾಗಿರುವುದು. ಇದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ. ಕಾಶ್ಮೀರ ಸಮಸ್ಯೆಗೆ ಮಿಲಿಟರಿ ಪರಿಹಾರವೊಂದೇ ಮಾರ್ಗ ಎಂಬ ಅದರ ಧೋರಣೆಯಿಂದಾಗಿ ಕಾಶೀರದಲ್ಲಿ ಇಂದು ಜನಜೀವನವೂ ಕಷ್ಟವಾಗಿದೆ.
ಫೆಬ್ರುವರಿ 5ರಂದು ಲೋಕಸಭೆಯಲ್ಲಿ ಮತ್ತು ಫೆಬ್ರುವರಿ 7ರಂದು ರಾಜ್ಯಸಭೆಯಲ್ಲಿ ಗೃಹ ಸಚಿವಾಲ ನೀಡಿದ ಅಂಕಿಅಂಶಗಳ ಪ್ರಕಾರ, 2014-18ರ ಅವಧಿಯಲ್ಲಿ ಸೈನಿಕರ ಹತ್ಯೆ, ನಾಗರಿಕರ ಹತ್ಯೆ ಪ್ರಮಾಣ ಏರಿಕೆಯಾಗಿದೆ. ಹಾಗೆಯೇ ಉಗ್ರ ನುಸುಳುವಿಕೆ ಪ್ರಮಾಣವೂ ಗೆಚ್ಚಿದೆ.

ಸೈನಿಕರ ಹತ್ಯೆ: ಶೇ. 93ರಷ್ಟು ಹೆಚ್ಚಳ!

ಮೋದಿ ಅವಧಿಯಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿಗಳು

ಕಳೆದ ಐದು ವರ್ಷಗಳ (2014-18) ಮೋದಿ ಅವಧಿಯಲ್ಲಿ ಕಾಶ್ಮೀರದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮೋದಿಯ ‘ಬಲಿಷ್ಠ ಸರ್ಕಾರ’ದ ಅವಧಿಯಲ್ಲಿ ಅಲ್ಲಿ ಸೈನಿಕರ ಹತ್ಯೆಯ ಪ್ರಮಾಣ ಶೇ. 93ರಷ್ಟು ಹೆಚ್ಚಿದೆ. ಉಗ್ರ ದಾಳಿಯ ಪ್ರಕರಣಗಳು ಶೇ. 173ರಷ್ಟು ಹೆಚ್ಚಿವೆ. ಆದರೆ ಇವತ್ತು ಪುಲ್ವಾಮಾದ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿಗರು ಮತ್ತು ಸೋಷಿಯಲ್ ಮೀಡಿಯಾದ ‘ಭಕ್ತರ’ ಕಣ್ಣಿಗೆ ದಿನವೂ ಕಾಶ್ಮೀರದಲ್ಲಿ ಹುತಾತ್ಮರಾಗುತ್ತಲೇ ಇರುವ ಒಬ್ಬಿಬ್ಬರು ಸೈನಿಕರ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿಲ್ಲ. ಈಗ ಚುನಾವಣೆ ಹತ್ತಿರ ಬಂದಿರುವುದರಿಂದ, ಪುಲ್ವಾಮಾ ಘಟನೆಯನ್ನು ಮುಂದು ಮಾಡಿ, ಕಾಶ್ಮೀರ ಸಮಸ್ಯೆಗೆ ಬಿಜೆಪಿ ಮಾತ್ರ, ಅದರಲ್ಲೂ ಮೋದಿ ಮಾತ್ರ ಉತ್ತರ ನೀಡಬಲ್ಲರು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇದೇ ಮೋದಿಯ ಅವಧಿಯಲ್ಲಿ ಕಾಶ್ಮೀರದಲ್ಲಿ ಸೈನಿಕರು ಮತ್ತು ನಾಗರಿಕರ ಹತ್ಯೆ ಸಂಖ್ಯೆ ಏರುತ್ತಲೇ ಬಂದಿದೆ.

ಇದೇ ಫೆಬ್ರುವರಿ 5ರಂದು ಲೋಕಸಭೆಯಲ್ಲಿ ಸರ್ಕಾರವೇ ನೀಡಿದ ಮಾಹಿತಿ-ಅಂಕಿಸಂಖ್ಯೆಯ ಪ್ರಕಾರ, 2014-18ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು 1,708 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಅಂದರೆ ತಿಂಗಳಿಗೆ ಸರಾಸರಿ 28 ಕೃತ್ಯಗಳು! ಆಗ ಮೋದಿಗೆ ಮತ್ತು ಅವರ ಭಕ್ತರಿಗೆ ಕಾಶ್ಮೀರ ನೆನಪೇ ಆಗಲಿಲ್ಲ! ಅಲ್ಲಿ ಮಿಲಿಟರಿಯನ್ನು ಇನ್ನಷ್ಟು ಹೆಚ್ಚಿಸಿ ಪರಿಸ್ಥಿತಿಯನ್ನು ಕೇಂದ್ರ ಇನ್ನಷ್ಟು ಹದಗೆಡಿಸಿತು.

ಮೋದಿ ಅವಧಿಯಲ್ಲಿ ಕಾಶ್ಮೀರದಲ್ಲಿ ಹತರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ

2018ರಲ್ಲಂತೂ ಅಲ್ಲಿ ಪ್ರತಿ ತಿಂಗಳು ಸರಾಸರಿ 15 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಸೈನಿಕರು ಹುತಾತ್ಮರಾಗುತ್ತಲೇ ಇದ್ದಾರೆ. ನಾಗರಿಕರೂ ಬಲಿಯಾಗುತ್ತಿದ್ದಾರೆ. ಭಯೋತ್ಪಾದಕರ ದಾಳಿ ಮತ್ತು ಸೇನೆಯ ಅಟ್ಟಹಾಸ ಎರಡರ ನಡುವೆ ಸಿಕ್ಕಿರುವ ಅಲ್ಲಿಯ ಸಾಮಾನ್ಯ ನಾಗರಿಕರ ಬಗ್ಗೆ ವೇಷಭಕ್ತರು ಎಂದೂ ಯೋಚಿಸಲೇ ಇಲ್ಲವಲ್ಲ? ಮೋದಿ ಅವಧಿಯಲ್ಲಿ ಭಯೋತ್ಪಾದನಾ ಕೃತ್ಯ ಮತ್ತು ಸೇನೆಯ ಕ್ರಮಗಳಿಂದ ಪ್ರತಿವರ್ಷವೂ ನೂರಾರು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಅಮಾಯಕರ ಸಾವುಗಳ ಬಗ್ಗೆ ಸಂತಾಪ ಇರದವನಿಗೆ ಮೊನ್ನೆ ಹುತಾತ್ಮರಾದ ಸೈನಿಕರ ಬಗ್ಗೆ ಸಂತಾಪ ಮಿಡಿಯುವ ಯಾವ ಹಕ್ಕೂ ಇಲ್ಲ. ಅಷ್ಟಕ್ಕೂ ಈಗ ಸೈನಿಕರ ಹೆಸರಲ್ಲಿ ಇವರೆಲ್ಲ ಮೊಸಳೆ ಕಣ್ಣೀರು ಹಾಕುತ್ತಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟವರು. ಮೋದಿ ಅವಧಿಯಲ್ಲಿ (2014-18) ಕಾಶ್ಮೀರದಲ್ಲಿ ಒಟ್ಟು 339 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ಸೈನಿಕರ ಹತ್ಯೆಯ ಪ್ರಮಾಣ ಶೇ. 93ರಷ್ಟು ಹೆಚ್ಚಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.
ಹಾಗಾದರೆ ಈ ಅವಧಿಯಲ್ಲಿ ಮೋದಿ ಏನೂ ಕ್ರಮ ಕೈಗೊಳ್ಳಲಿಲ್ಲವೇಕೆ? ರಾಜಕೀಯ ಸಮಸ್ಯೆಗೆ ಮಿಲಿಟರಿ ಪರಿಹಾರವೊಂದೇ ದಾರಿ ಎಂದು ಹೊರಟಾಗ ಇಂಥದ್ದೆಲ್ಲ ಸಂಭವಿಸುತ್ತದೆ ಎಂಬುದು ಜಗತ್ತಿನ ಹಲವಾರು ಕಡೆ ಪ್ರೂವ್ ಆಗಿದೆ. ಹಾಗಿದ್ದೂ ಇವತ್ತು ಮತ್ತೆ ಮಿಲಿಟರಿ ಕ್ರಮ ಮಾತ್ರದಿಂದಲೇ ಪರಿಹಾರ ಎಂಬಂತೆ ಕೆಲವು ಮೂರ್ಖ ಆ್ಯಂಕರ್‌ಗಳು, ಸಾವಿರಾರು ನೆಟ್ಟಿಗರು ಅರಚುತ್ತಿದ್ದಾರೆ. ಇವರೆಲ್ಲರಿಗೆ ದೇಶಭಕ್ತಿ ಎಂದರೇನೇ ಕೊಲ್ಲುವ ಆಟ, ಆದರೆ ತಾವು ಮಾತ್ರ ಸೇಫ್ ಆಗಿರಬೇಕು.

ಉಗ್ರರ ನುಸುಳುವಿಕೆಯಲ್ಲೂ ಹೆಚ್ಚಳ

2016-18 ಅವಧಿಯಲ್ಲಿ ಹೆಚ್ಚಿರುವ ಉಗ್ರರ ನುಸುಳುವಿಕೆ ಪ್ರಮಾಣ

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇದೇ ನರೇಂದ್ರ ಮೋದಿಯವರು ಭಯೋತ್ಪಾದನಾ ಕೃತ್ಯ ಖಂಡಿಸುತ್ತ, “ದೇಶದ ಪ್ರಧಾನಿ ಏನು ಮಾಡುತ್ತಿದ್ದಾರೆ? ಅವರ ಬಳಿ ಬಿಎಸ್‌ಎಫ್ ಇದೆ, ಸಿಆರ್‌ಪಿಎಫ್ ಇದೆ….ಹೀಗಿರುವಾಗ ಉಗ್ರು ಗಡಿ ದಾಟಿ ನುಸುಳಿ ಬರಲು ಹೇಗೆ ಸಾಧ್ಯವಾಯಿತು” ಎಂದೆಲ್ಲ ಧೀರೋದ್ಧಾತ ಭಾಷಣ ಮಾಡುತ್ತಿದ್ದರು. ಈಗ ಲೋಕಸಭೆ ಮತ್ತು ರಾಜ್ಯಸಭೆಗೆ ಗೃಹ ಇಲಾಖೆಯೇ ನೀಡಿದ ಅಂಕಿಅಂಶಗಳ ಪ್ರಕಾರ ಉಗ್ರ ನುಸುಳುವಿಕೆ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಪುಲ್ವಾಮಾ ದುರಂತ ನಡೆಯುವ ವಾರ ಮೊದಲಷ್ಟೇ ಈ ಅಂಕಿಅಂಶಗಳು ಹೊರಬಿದ್ದಿವೆ. ಹಾಗಾದರೆ 5 ವರ್ಷ ಈ 56 ಇಂಚಿನ ಮೋದಿ ಏನು ಮಾಡುತ್ತಿದ್ದರು? ಗೃಹ ಇಲಾಖೆಯ ಮಾಹಿತಿ ಪ್ರಕಾರ, 2016-18ರ ಅವಧಿಯಲ್ಲಿ 400ಕ್ಕೂ ಹೆಚ್ಚು ಭಯೋತ್ಪಾದಕರು ಪಾಕಿಸ್ತಾನದಿಂದ ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಶಂಖೆಗಳಿವೆ. ಅಂದರೆ ಈ ಮೂರು ವರ್ಷದ ಅವಧಿಯಲ್ಲಿ ತಿಂಗಳಿಗೆ ಸರಾಸರಿ 11 ಉಗ್ರರು ಕಾಶ್ಮೀರದೊಳಕ್ಕೆ ನುಸುಳುತ್ತಿದ್ದಾರೆ. ರಕ್ಷಣಾ ಸಚಿವರನ್ನು ಡಮ್ಮಿ ಮಾಡಿ, ವಿದೇಶಾಂಗ ಸಚಿವಾಲಯವನ್ನು ಮೂಕಪ್ರೇಕ್ಷಕನಂತೆ ಕೂಡಿಸಿ, ಎಲ್ಲವನ್ನೂ ಪ್ರಧಾನಿ ಕಾರ್ಯಾಲಯವೇ ನಿಯಂತ್ರಿಸಲು ಹೋದದ್ದರ ಫಲವಿದು. ಇದರ ಪರಿಣಾಮವಾಗಿ ನಮ್ಮ ಸೈನಿಕರು ಜೀವ ಕಳೆದುಕೊಳ್ಳುತ್ತಲೇ ಇದ್ದಾರೆ. ದಿನವೂ ಹುತಾತ್ಮರಾಗುವ ಸೈನಿಕರ ಬಗ್ಗೆ ಎಂದೂ ಸಂತಾಪ ವ್ಯಕ್ತಪಡಿಸಿದವರು ಈಗ ಚುನಾವಣೆ ಹತ್ತಿರ ಬಂದ ಪರಿಣಾಮವಾಗಿ ಸೈನಿಕರ ಪರವಾಗಿ ಶೋಕಿಸುವ ನಾಟಕ ಆಡುತ್ತಿದ್ದಾರೆ.
ನೋಟು ಅಮಾನ್ಯೀ ನಂತರ ಉಗ್ರರ ಬೆನ್ನೆಲುಬು ಮುರಿಯಲಾಗಿದೆ ಎಂದು ಆಗಾಗ ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಸುಳ್ಳನ್ನು ಹೇಳುತ್ತಲೇ ಬಂದಿದ್ದಾರೆ. ಸರ್ಕಾರವೇ ಹೇಳಿದ ಪ್ರಕಾರ, 2018 ಜೂನ್ ತಿಂಗಳು ಒಂದರಲ್ಲೇ 38 ಉಗ್ರರು ಕಾಶ್ಮೀರದೊಳಕ್ಕೆ ನುಸುಳಿದ್ದಾರೆ ಎಂಬ ಸಂಶಯ ಇದೆ. ಇದೆಲ್ಲ ಗೊತ್ತಿದ್ದೂ ಕ್ರಮ ಕೈಗೊಳ್ಳದ ಮೋದಿ ಮತ್ತು ಅವರ ಸರ್ಕಾರವೇ ಈಗ ಪುಲ್ವಾಮಾ ಸಾವುಗಳಿಗೆ ನೇರ ಕಾರಣವಾಗಿದೆ.

Stratergical, policy ವಿಷಯವನ್ನು ಕೇವಲ ಮಿಲಿಟರಿ ನೆಲೆಯಲ್ಲಿ ಯೋಚಿಸುವ ಹುಂಬತನಕ್ಕೆ ಬಡ ಕುಟುಂಬಗಳಿಂದ ನಮ್ಮ ಸೈನಿಕರು ಪ್ರಾಣ ತೆರುತ್ತಿದ್ದಾರೆ. ಅರ್ನಾಬ್‌ಗಳು, ರಂಗ-ಇತ್ಯಾದಿಗಳು ಯುದ್ಧ ಎಂದು ಅರಚುತ್ತಿದ್ದರೆ, ಜಾಲತಾಣಗಳಲ್ಲಿ ಇತಿಹಾಸದ ಅರಿವೇ ಇಲ್ಲದವರು ಬಿಜೆಪಿಗೆ ಲಾಭ ಆಗುವಂತೆ ತಮ್ಮ ನಕಲಿ ದೇಶಪ್ರೇಮವನ್ನು ಹರಡುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...