Homeಮುಖಪುಟಸಿದ್ದಾರ್ಥ್ ವರದರಾಜನ್ - `ದಾಳಿಗಿದ್ದ ಟಾರ್ಗೆಟ್ ಮೂರು; ಗುರಿಗೆ ಸಿಕ್ಕಿದ್ದು ಒಂದು!'

ಸಿದ್ದಾರ್ಥ್ ವರದರಾಜನ್ – `ದಾಳಿಗಿದ್ದ ಟಾರ್ಗೆಟ್ ಮೂರು; ಗುರಿಗೆ ಸಿಕ್ಕಿದ್ದು ಒಂದು!’

- Advertisement -
- Advertisement -

ಸಿದ್ದಾರ್ಥ್ ವರದರಾಜನ್ (Thewire.in  ಸಂಸ್ಥಾಪಕ) |

ಭಾರತದ ವಿದೇಶಾಂಗ ಕಾರ್ಯದರ್ಶಿ, ಇದು ಮಿಲಿಟರಿ ದಾಳಿಯಲ್ಲ, ಸಂಭಾವ್ಯ ದಾಳಿ ತಡೆಗಟ್ಟಲು ನಡೆಸಿದ ದಾಳಿ’ ಎಂದು ಒತ್ತಿ ಹೇಳಿದಾಗ ಅವರ ಮನದಲ್ಲಿ ಅಂತರಾಷ್ಟ್ರೀಯ ಕಾನೂನು ಇತ್ತೇನೋ? ಆದರೆ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಇತ್ತೆನ್ನಲಾದ ಉಗ್ರರ ತರಬೇತಿ ಶಿಬಿರದ ಮೇಲಿನ ವಾಯುದಾಳಿಯನ್ನು ಪ್ರಾಮಾಣಿಕವಾಗಿ ಹೀಗೆ ವಿಶ್ಲೇಷಿಸಬಹುದು: ಮೂರು ವಿಭಿನ್ನ ’ಪ್ರೇಕ್ಷಕರಿಗೆ’ ಸಂದೇಶವೊಂದನ್ನು ನೀಡಲು ಉದ್ದೇಶಿಸಿದ ಪ್ರತೀಕಾರದ ಕ್ರಮ…

  • ಅದರ ಮಿಲಿಟರಿ ಉದ್ದೇಶ: ಪಾಕಿಸ್ತಾನ ನಿಮಗೆ ಒದಗಿಸಿರುವ ಸುರಕ್ಷಿತ ತಾಣಗಳು ಅಷ್ಟು ಸುರಕ್ಷಿತವಲ್ಲ ಎಂದು ಜೈಶ್ ಮತ್ತು ಪಾಕಿಸ್ತಾನದ ಇತರ ಭಯೋತ್ಪಾದನಾ ಗುಂಪುಗಳಿಗೆ ಸಂದೇಶ ನೀಡುವುದು.
  • ಅದರ ರಾಜತಾಂತ್ರಿಕ ಉದ್ದೇಶ: ಭಯೋತ್ಪಾದನೆ ಬೆಂಬಲಿಸುವ ಪಾಕಿಸ್ತಾನಕ್ಕೆ ನೀವು ಎಂದಿನಂತೆ ಸಹಜವಾಗಿ ನೀಡುತ್ತಿರುವ ಬೆಂಬಲ ನೀಡಲಾಗದು ಎಂದು ಬಹುಪಾಲು ರಾಷ್ಟ್ರಗಳಿಗೆ ಸಂದೇಶ ನೀಡುವುದು.
  • ರಾಜಕೀಯ ಉದ್ದೇಶ: ಸಾರ್ವತ್ರಿಕ ಚುನಾವಣೆಯನ್ನು ತಲೆಯಲ್ಲಿ ಇಟ್ಟಕೊಂಡು, ’ದೇಶವನ್ನು ಕಾಪಾಡುವ ರಾಜಕೀಯ ಇಚ್ಛಾಶಕ್ತಿ ಇರುವ ನಾಯಕ ನರೇಂದ್ರ ಮೋದಿ’ ಎಂಬ ಸಂದೇಶವನ್ನು ದೇಶದ ಪ್ರೇಕ್ಷಕರಿಗೆ (ಪ್ರಜೆಗಳಿಗೆ) ನೀಡುವುದು.

ಇವುಗಳಲ್ಲಿ, ಕೇವಲ ರಾಜಕೀಯ ಉದ್ದೇಶ ಈಡೇರಿದೆ ಎಂದು ಮೋದಿ ಆತ್ಮವಿಶ್ವಾಸದಿಂದ ಹೇಳಬಹುದು.

ಭಾರತೀಯ ವಾಯುಸೇನೆಗೆ ಒಂದು ಕಠಿಣ ಮತ್ತು ಅಪಾಯಕಾರಿ ಕಾರ್ಯವನ್ನು ನೀಡಿದ ಸರ್ಕಾರ, ಈಗ ಆಪರೇಷನ್ ಸಕ್ಸಸ್ ಎಂದು ಘೋಷಿಸಿದೆ. ಆದರೆ ಪರಿಶೀಲನೆಗೆ ಅರ್ಹವಾದ ಯಾವುದೇ ಮಾಹಿತಿ ನೀಡದೇ ಇದನ್ನು ಮಾಡಲಾಗುತ್ತಿದೆ. ಭಾರತೀಯ ಮಾಧ್ಯಮಗಳಿಗೆ ತಲುಪಿದ ಅತಿರಂಜಿತ ಮಾಹಿತಿಗಳಿಂದಾಗಿ, ಪಾಕಿಸ್ತಾನ ಸುಮ್ಮನೇ ಕೂಡುವುದಂತೂ ಕಷ್ಟ.

2016ರ ಸರ್ಜಿಕಲ್ ದಾಳಿ ಮತ್ತು ಈಗಿನ ವಾಯುದಾಳಿ-ಈ ಎರಡರಿಂದಲೂ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನಿ ಸೇನೆ ಹೇಳಿದೆ. ಆದರೆ ಈ ಸಲ ರಾಜಕೀಯ ಮತ್ತು ಮಿಲಿಟರಿ ಎರಡೂ ವ್ಯವಸ್ಥೆಗಳು ಇದಕ್ಕೆ ಸೇನಾತ್ಮಕ ಪ್ರತಿಕ್ರಿಯೆ ಖಂಡಿತ ಎಂದು ಘೋಷಿಸಿವೆ. ಈ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲು ಯಾವ ಕಾರಣವೂ ಇಲ್ಲ.

ನಮ್ಮ ವಾಯುಸೇನೆಯ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಎಂದಿಗೂ ಸಕಾರಾತ್ಮಕ ನಿಲುವೇ ಇದೆ. ಆದರೆ 1971ರ ನಂತರ ಮೊದಲ ಬಾರಿಗೆ ವಾಯುಸೇನೆಯನ್ನು ಗಡಿಯಾಚೆ ನುಗ್ಗಿಸುವ ಕೆಲಸ ಮಾಡಿದ್ದಾರೆ ಮೋದಿ.

ಹಿಂದಿನ ಸರ್ಕಾರಗಳು ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಮತ್ತು ಪಾಕಿಸ್ತಾನದೊಳಗೆ ಇರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿಯ ಪ್ರಯೋಗದಿಂದ ದೂರ ಉಳಿದಿದ್ದವು. ಇದಕ್ಕೆ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರ ಎಂಬ ಭಯವಾಗಲೀ  ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯಾಗಲೀ ಕಾರಣವಲ್ಲ. ಆದರೆ, ಗಡಿಯಾಚೆಯಿಂದ ಬರುವ ಭಯೋತ್ಪಾದನಾ ಬೆದರಿಕೆಯನ್ನು ಇಂತಹ ಕ್ರಮಗಳಿಂದ ತಟಸ್ಥಗೊಳಿಸಿವುದು ಅಸಾಧ್ಯ ಎಂಬ ಅರಿವು ಆ ಸರ್ಕಾರಗಳಿಗಿತ್ತು.

ಇದನ್ನು ಅರ್ಥ ಮಾಡಿಕೊಳ್ಳಲು, 2016 ಸೆಪ್ಟೆಂಬರ್‌ನ ಸರ್ಜಿಕಲ್ ದಾಳಿಯ ನಂತರದ ಬೆಳವಣಿಗೆಗಳನ್ನು ನೋಡಬಹುದು. ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳಿಂದ ಭವಿಷ್ಯದಲ್ಲಿ ದಾಳಿಗಳನ್ನು ತಡೆಯಬಹುದೆಂಬ ನಿರೀಕ್ಷೆಯನ್ನು ಆ ಸರ್ಜಿಕಲ್ ದಾಳಿ ಹುಸಿಗೊಳಿಸಿತು. ಈ ವಿಷಯದಲ್ಲಿ ಅದು ಪುಟ್ಟಾಪೂರಾ ವಿಫಲವಾಯಿತು. ಆ ಸರ್ಜಿಕಲ್ ದಾಳಿಯ ನಂತರ ಉಗ್ರರ ದಾಳಿಗಳು ಹೆಚ್ಚಾದವು ಮತ್ತು 1989ರಲ್ಲಿ ಕಣಿವೆಯಲ್ಲಿ ಭಯೋತ್ಪಾದನೆ ಭುಗಿಲೆದ್ದ ನಂತರ ಅತಿ ಭಯಾನಕ ದಾಳಿ ಎನಿಸಿದ ಪುಲ್ವಾಮಾ ದಾಳಿಯೂ ಸಂಭವಿಸಿತು.

ಪಾಕಿಸ್ತಾನದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ಮಾಡಲು ಯೋಚಿಸಿದ ಪ್ರಧಾನಿ ಮೋದಿ ಒಬ್ಬರೇ ಅಲ್ಲ. 2001ರಲ್ಲಿ ಸಂಸತ್ ಮೇಲೆ ದಾಳಿ ಆದಾಗ ವಾಜಪೇಯಿ ಮತ್ತು 2008ರಲ್ಲಿ ಮುಂಬೈ ಮೇಲೆ ದಾಳಿ ನಡೆದಾಗ ಮನಮೋಹನಸಿಂಗ್ ಕೂಡ ಯೋಚಿಸಿದ್ದರು. ಆದರೆ ಸುದೀರ್ಘ ಸಮಾಲೋಚನೆ ನಂತರ ಈ ಮಾರ್ಗದಿಂದ ಭಯೋತ್ಪಾದನೆ ತಡೆಯುವುದು ಅಸಾಧ್ಯ ಎಂಬ ಸತ್ಯವನ್ನು ಅರಿತಿದ್ದರು. ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಒಟ್ಟಿಗೆ ಸಾಧ್ಯವಿಲ್ಲ ಎಂಬುದು ಇವತ್ತಿನ ಮಂತ್ರವಾಗಿರಬಹುದು. ಆದರೆ ಭಯೋತ್ಪಾದನೆ ನಿಗ್ರಹಿಸುತ್ತಲೇ ಮಾತುಕತೆಯನ್ನು ಜಾರಿಯಲ್ಲಿಡುವ ಮೂಲಕ ವಾಜಪೇಯಿ ಮತ್ತು ಮನಮೋಹನಸಿಂಗ್ ಕಾಶ್ಮೀರವನ್ನು ಸಾಧ್ಯವಾದಷ್ಟು ಶಾಂತವಾಗಿಡಲು ಸಫಲರಾಗಿದ್ದರು.

ಮೋದಿ ಈಗ ಮಿಲಿಟರಿ ಕಾರ್ಡ್ ಆಟದ ಮೂಲಕ ಗ್ಯಾಂಬ್ಲಿಂಗ್ ಮಾಡಿದ್ದಾರೆ. ಕ್ಷುದ್ರ ಪಾಕಿಸ್ತಾನ ನಡೆಸುವ ಪ್ರತೀಕಾರವೂ ಅವರಿಗೆ ಶಕ್ತಿ ತುಂಬಬಹುದು. ಆದರೆ ಒಂದು ಕಾಲ ಊಹಿಸಿದ್ದಕ್ಕಿಂತ ಬೇಗನೆ ಬರಲಿದೆ- ಭಯೋತ್ಪಾದನೆಯ ಸಮಸ್ಯೆ ಮುಗಿದಿಲ್ಲ, ಬದಲಾಗಿ ಇನ್ನಷ್ಟು ಸಂಕೀರ್ಣಗೊಂಡಿದೆ ಮತ್ತು ನಿಯಂಯ್ರಣ ಮೀರುತ್ತಿದೆ ಎಂಬುದನ್ನು ಈ ದೇಶದ ಸಾಮಾನ್ಯ ನಾಗರಿಕರು ಅರಿಯುವ ಕಾಲ.

(ಭಾವಾನುವಾದ: ಮಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...