Homeಅಂಕಣಗಳುಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

ಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

- Advertisement -
- Advertisement -

ಬೆಂಗಳೂರು ಸಮೀಪದ ಜಿಲ್ಲೆಯ ತಾಲೂಕು. ಆರೆಸ್ಸೆಸ್ ಮತ್ತು ಅದರ ಪರಿವಾರ ಅಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ಎಂದೂ ಗೆದ್ದಿಲ್ಲ. ಮುಸ್ಲಿಮರು ಹೆಚ್ಚಲ್ಲದಿದ್ದರೂ ದೇಶದ ಸರಾಸರಿಯ ಪ್ರಮಾಣದಲ್ಲಿ ಅಲ್ಲೂ ಇದ್ದಾರೆ. ಟಿಪ್ಪು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ತಹಸೀಲ್ದಾರರು ಸಭೆ ಕರೆದಿದ್ದಾರೆ. ನಿಯಮಗಳ ಪ್ರಕಾರ ಅವರು ರಾಷ್ಟಿçÃಯ ಹಬ್ಬಗಳ ಸಮಿತಿಯ ಅಧ್ಯಕ್ಷರು. ಇಂತಹ ಎಲ್ಲಾ ಜಯಂತಿಗಳಲ್ಲೂ ಮಾಡುವಂತೆ, ಯಾರ ಜಯಂತಿಯನ್ನು ಆಚರಿಸಲಾಗುತ್ತದೋ, ಆ ವ್ಯಕ್ತಿಯು ಯಾವ ಜಾತಿ ಅಥವಾ ಧರ್ಮಕ್ಕೆ ಸೇರಿದವರೆಂದು ಹೇಳಲಾಗುತ್ತದೋ ಅವರನ್ನು ಹೆಚ್ಚಾಗಿ ಕರೆಯಲಾಯಿತು. ಹಾಗಾಗಿ ಮುಸ್ಲಿಮರೂ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ತಹಸೀಲ್ದಾರರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಹೇಳಿದ್ದಿಷ್ಟು. ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡೋಣ; ಮೆರವಣಿಗೆ ಮಾಡಲು ಅಥವಾ ಮೈದಾನದಲ್ಲಿ ಮಾಡಲು ಈ ಸಾರಿ ಅನುಮತಿ ನೀಡಬಾರದೆಂದು ಮೇಲಿನಿಂದ ಆದೇಶ ಬಂದಿದೆ. ಇದನ್ನು ಸಭೆಯಲ್ಲಿದ್ದ ಮುಸ್ಲಿಮರು ಒಪ್ಪಲಿಲ್ಲ. ‘ಬೇರೆ ಎಲ್ಲಾ ಜಯಂತಿಗಳಿಗಾದರೆ ಈ ರೀತಿ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿÃರಿ, ಟಿಪ್ಪು ಜಯಂತಿಗೆ ಏಕೆ ಕೊಡುವುದಿಲ್ಲ?’ವೆಂದು ಕೇಳಿದರು. ಕೇಳಿದ್ದರಲ್ಲಿ ತಪ್ಪೆÃನಿರಲಿಲ್ಲ. ಆದರೆ, ಈ ಸಾರಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ತಹಸೀಲ್ದಾರರು ಇರಲಿಲ್ಲ. ಇದು ಮೇಲಿನಿಂದ ಬಂದ ಆದೇಶವಾಗಿತ್ತು. ಅಲ್ಲಿಗೂ ಇನ್ನೊಂದು ಮಾತನ್ನು ಹೇಳಿದರು, ‘ಒಂದು ವೇಳೆ ಈ ಆದೇಶದಲ್ಲಿ ಬದಲಾವಣೆ ಬಂದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮೆರವಣಿಗೆ ಇತ್ಯಾದಿಗಳ ವಿಚಾರದಲ್ಲಿ ಸ್ಥಳೀಯವಾಗಿಯೇ ತೀರ್ಮಾನ ತೆಗೆದುಕೊಳ್ಳಬಹುದು ಎಂದಾದರೆ, ನಾವು ಖಂಡಿತವಾಗಿ ಅವಕಾಶ ಮಾಡಿಕೊಡುತ್ತೆÃವೆ’. ಸರ್ಕಲ್ ಇನ್ಸ್ಪೆಕ್ಟರ್ ಸಹಾ ದನಿಗೂಡಿಸಿದರು.
ಇದನ್ನು ಒಪ್ಪದ ಮುಸ್ಲಿಂ ಮುಖಂಡರು ಸಭಾತ್ಯಾಗ ಮಾಡಿದರಲ್ಲದೇ, ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿಯೇ ಹೋದರು. ಅಷ್ಟು ಹೊತ್ತಿಗೆ ಮಧ್ಯಮ ಪ್ರಮಾಣದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಗಿತ್ತು ಮತ್ತು ಭಾಷಣ ಮಾಡಲು ಭಾಷಣಕಾರರನ್ನೂ ನಿಗದಿ ಮಾಡಲಾಗಿತ್ತು. ಈ ಸದ್ಯ ಎಲ್ಲಾ ಮಹಾಪುರುಷರೂ, ಮಹಿಳೆಯರೂ ಆಯಾ ಜಾತಿ ಅಥವಾ ಧರ್ಮಕ್ಕೆ ಸೀಮಿತರು. ಹಾಗಾಗಿ ಜಾತ್ಯಸ್ಥರೇ ಕೈಬಿಟ್ಟ ಮೇಲೆ ಟಿಪ್ಪು ಅನಾಥ.
ಆ ತಾಲೂಕಿನ ಶಾಸಕರು ಸಚಿವರಾಗಿದ್ದರಿಂದ, ಅವರು ಜಿಲ್ಲಾ ಕೇಂದ್ರಕ್ಕೆ ಹೋದರು. ಹೀಗಾಗಿ ಅವರನ್ನು ನೋಡಲು ಅಥವಾ ಮೆಚ್ಚಿಸಲು ಬರಬಹುದಾದವರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲಿನ ಸಂಘಪರಿವಾರದ ಗುಂಪೂ ದುರ್ಬಲವಾದ್ದರಿಂದ, ಗಲಭೆಯೆಬ್ಬಿಸಲು ಬರಬಹುದಾದವರೂ ಬರಲಿಲ್ಲ. ಕಾರ್ಯಕ್ರಮ ಆರಂಭದ ಸಮಯಕ್ಕೆ ಸಭಾಂಗಣದಲ್ಲಿ 30 ಜನರಿದ್ದರು. ತಹಸೀಲ್ದಾರರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಅವರು ಕ್ಷೆÃತ್ರ ಶಿಕ್ಷಣಾಧಿಕಾರಿಗಳನ್ನು ಕರೆದು, ಹತ್ತಿರದ ಯಾವುದಾದರೂ ಶಾಲೆಯಿಂದ ಮಕ್ಕಳನ್ನು ಕರೆಸಿರಿ ಎಂದರು. ಆದರೆ, ಅವರಿಗೆ ಹಿಂಜರಿಕೆ. ‘ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದಿದ್ದಾರೆ ಎಂದು ವಿವಾದವಾದರೆ?’ ಎಂಬುದು ಅವರ ಕಾರಣ. ಅಂದರೆ, ಟಿಪ್ಪು ಸುಲ್ತಾನ್ ನಾಡು ಕಂಡ ಹೆಮ್ಮೆಯ ದೊರೆ ಎಂದು ಪಠ್ಯಪುಸ್ತಕದಲ್ಲಿ ಇನ್ನೂ ಉಳಿದಿರಬಹುದಾದರೂ, ಸರ್ಕಾರವೇ ಟಿಪ್ಪು ಜಯಂತಿಯನ್ನು ಮಾಡುತ್ತಿದ್ದರೂ, ಮಕ್ಕಳನ್ನು ಕರೆದರೆ ‘ಇದು ಟಿಪ್ಪು ಜಯಂತಿ’ ಎನ್ನುವ ಕಾರಣಕ್ಕೆÃ ವಿವಾದವಾಗುತ್ತದೆಂಬುದು ಅವರ ಭಯ.
ಅಂತಿಮವಾಗಿ ಸಭಾಂಗಣದೊಳಗೆ ಒಂದಷ್ಟು ಜನ ಮುಸ್ಲಿಮರು ಬಂದರು. ಪುರಸಭೆಯ ಅಧ್ಯಕ್ಷ ಮುಸ್ಲಿಮರಾಗಿದ್ದುದರಿಂದ ಅವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡು ಕೆಲವರಾದರೂ ಬರಬೇಕೆಂದು ಶತಪ್ರಯತ್ನ ಹಾಕಿದ್ದರು! ಅಸಲು ಸಮಸ್ಯೆ ಏನಾಗಿತ್ತೆಂದರೆ, ಈ ಅಧ್ಯಕ್ಷರಿಗಿಂತ ಮುಂಚೆ ಅಧ್ಯಕ್ಷರಾಗಿದ್ದವರೂ ಮುಸ್ಲಿಮರೇ. ತನ್ನ ನಂತರ ಇನ್ನೊಬ್ಬ ನಾಯಕ ತನ್ನದೇ ಸಮುದಾಯದಲ್ಲಿ ಮೇಲೆ ಬಂದು, ಆತನ ವೇದಿಕೆಯ ಮೇಲೆ ವಿರಾಜಮಾನನಾಗಿರುವಾಗ ಆ ಕಾರ್ಯಕ್ರಮ ಯಶಸ್ವಿಯಾಗಬಾರದೆಂಬುದು ವಿರೋಧಕ್ಕೆ ಅಸಲೀ ಕಾರಣವಾಗಿತ್ತು. ಮೆರವಣಿಗೆ ಕೇವಲ ನೆಪವಾಗಿತ್ತು. ಹೊಸದಾಗಿ ಅಧ್ಯಕ್ಷರಾಗಿದ್ದ ವ್ಯಕ್ತಿಗಿಂತ ಪ್ರಭಾವಿಯಾಗಿದ್ದ ಹಿಂದಿನ ಅಧ್ಯಕ್ಷ ಮಿಕ್ಕವರನ್ನು ತಡೆದಿದ್ದರು!
ಇಂದು ಟಿಪ್ಪು ಸುಲ್ತಾನರ ಜಯಂತಿ ಹೀಗೂ ನಡೆಯುತ್ತಿದೆ. ನಾಡಿಗೆ ನಾಡೇ ಹೆಮ್ಮೆ ಪಡಬೇಕಿದ್ದ ಧೀಮಂತ ಆಡಳಿತಗಾರನೊಬ್ಬನನ್ನು, ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು. ಆ ಕಾರಣಕ್ಕೆÃ ಜಯಂತಿಯನ್ನು ಆಚರಿಸುವುದು ಅಥವಾ ವಿರೋಧಿಸುವುದು. ತಮ್ಮದೇ ಸ್ವಂತ ಹಿತಾಸಕ್ತಿಯು ಮುಂದೆ ಬರುವುದಾದಲ್ಲಿ, ಆ ಜಾತಿಯವರೂ ಕಾರ್ಯಕ್ರಮಕ್ಕೆ ತಿರಸ್ಕಾರ ತೋರುವುದು ಇದು ವಿದ್ಯಮಾನ.
ಇದಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮೊದಲು ಯಾವುದೇ ಕಾರಣ ನೀಡದೇ, ರಾಜ್ಯ ಮಟ್ಟದ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ತಮ್ಮ ಹೆಸರಿಲ್ಲದಂತೆ ಗೈರುಹಾಜರಿಯ ತೀರ್ಮಾನ ಘೋಷಿಸಿದ್ದರು. ನಂತರ ಇದೊಂದು ಸುದ್ದಿಯಾದಾಗ ಅನಾರೋಗ್ಯದ ಸ್ಪಷ್ಟಿÃಕರಣ ಕೊಟ್ಟರು. ಇದಲ್ಲದೇ ವಾಲ್ಮಿÃಕಿ ಜಯಂತಿ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ, ಈಗ ಹೋದರೆ ಬೇರೆ ಅರ್ಥ ಬರುತ್ತದೆಂಬ ಸುದ್ದಿಯನ್ನೂ ತೇಲಿಬಿಡಲಾಯಿತು. ಇದೇ ಮುಖ್ಯಮಂತ್ರಿಯವರು ಕೆಂಪೇಗೌಡ ಜಯಂತಿ ಸರ್ಕಾರದ ವತಿಯಿಂದ ಆದಾಗ ಬೆಂಗಳೂರಿನಲ್ಲೂ (ಜೂನ್ 27) ಭಾಗವಹಿಸಿದ್ದರು, (ಆಗಸ್ಟ್ 11ರಂದು) ಒಕ್ಕಲಿಗರ ಸಂಘದಿಂದ ಚಿಕ್ಕಬಳ್ಳಾಪುರದಲ್ಲಿ ನಡೆದಾಗಲೂ ಭಾಗವಹಿಸಿದ್ದರು.
ದೇಶದ ಇಂದಿನ ಸ್ಥಿತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸದೇ ಇದ್ದರೆ ಅದು ಯಾವ ಸಂದೇಶ ಕೊಡುತ್ತದೆಂಬುದು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಅಂತಹದೊಂದು ಸಂದೇಶ ಹೋಗಲಿ ಎಂಬ ಬಯಕೆಯೂ ಅವರದ್ದಿರಬಹುದು. ಇದು ಕೇವಲ ಜೆಡಿಎಸ್‌ನ ಸಮಸ್ಯೆಯಲ್ಲ. ಕಾಂಗ್ರೆಸ್ ನಾಯಕರಲ್ಲಿ ಟಿಪ್ಪು ಸುಲ್ತಾನರ ಮಹತ್ವವನ್ನು ಅರಿತು ಅದನ್ನು ಸಮರ್ಥಿಸಿಕೊಳ್ಳಬಲ್ಲವರು ಬಹಳ ಕಡಿಮೆ. ಹೇಗೂ ಮುಸ್ಲಿಮರು ತಮಗೇ ಓಟು ಹಾಕುತ್ತಾರೆಂಬ ಭಾವನೆ ಅವರದ್ದಿದ್ದರೆ, ಬಹುಶಃ ಇನ್ನು ಮುಂದೆ ಮುಸ್ಲಿಮರು ತಮಗೆ ಓಟು ಹಾಕಲಾರರು ಎಂದು ಜೆಡಿಎಸ್ ಭಾವಿಸಿದಂತಿದೆ. ಟಿಪ್ಪು ಕುರಿತು ಸಂಘಪರಿವಾರದ ಫೇಕ್ ಸ್ಟೊÃರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಬಹುಶಃ ಟಿಪ್ಪು ಸುಲ್ತಾನ್ ಆ ರೀತಿಯೂ ಇದ್ದಿರಬಹುದು ಎಂದು ಕಾಂಗ್ರೆಸ್ ನಾಯಕರಲ್ಲಿ ಹಲವರು ಭಾವಿಸಿರಲಿಕ್ಕೂ ಸಾಕು. ಇಂತಹ ಎಡಬಿಡಂಗಿತನವನ್ನು ಕಾಂಗ್ರೆಸ್ – ಜೆಡಿಎಸ್ ನಾಯಕರು ತೊರೆಯುವವರೆಗೂ ಅವರು ಬಿಜೆಪಿಗೆ ಸರಿಯಾದ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಇಂತಹುದೇ ಇನ್ನೊಂದು ಸುದ್ದಿ ಈ ವಾರ ಬೆಳಕಿಗೆ ಬಂದಿದೆ. ಗೌರಿ ಲಂಕೇಶರ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ ಆದ ಖರ್ಚಿನ ಬಾಕಿಯನ್ನು ಸರ್ಕಾರವಿನ್ನೂ ಪಾವತಿ ಮಾಡಿಲ್ಲವೆಂದು ವರದಿಯಾಗಿದೆ. ಬಹುಶಃ ಹಣ ಪಾವತಿಯಾಗಿಲ್ಲವೆಂಬ ಕಾರಣಕ್ಕೆ ಪೊಲೀಸ್ ಇಲಾಖೆಯು ತನಿಖೆಯನ್ನೆÃನೂ ನಿಲ್ಲಿಸುವುದಿಲ್ಲ ಅಥವಾ ಬೇರೆ ದಿಕ್ಕಿಗೆ ಹೋಗುವುದಿಲ್ಲ. ಆದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಡಚಣೆಯಾಗುವುದರಲ್ಲಂತೂ ಸಂದೇಹವಿಲ್ಲ. ಈ ಕುರಿತ ಸತ್ಯಾಸತ್ಯತೆಯನ್ನು ಸರ್ಕಾರ, ಇಲಾಖೆ ಜನರ ಮುಂದಿಡಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...