Homeಕರ್ನಾಟಕಆಪರೇಷನ್ ಕಮಲಕ್ಕೆ ಬ್ರೇಕ್: ಯಡಿಯೂರಪ್ಪನವರ ಈ ಮಾತಿನ ಹಿಂದಿರುವ ಮರ್ಮವೇನು?

ಆಪರೇಷನ್ ಕಮಲಕ್ಕೆ ಬ್ರೇಕ್: ಯಡಿಯೂರಪ್ಪನವರ ಈ ಮಾತಿನ ಹಿಂದಿರುವ ಮರ್ಮವೇನು?

ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿದ ಅಪಖ್ಯಾತಿ ಬಿಜೆಪಿ ಮೇಲೆ ಬಾರದಂತೆ, ಅದನ್ನು ಸಿದ್ದರಾಮಯ್ಯ ಮೇಲೆ ಆರೋಪಿಸಿ, ಒಳಗೊಳಗೇ ಆಪರೇಷನ್ ನಡೆಸುವ ತಂತ್ರಗಾರಿಕೆ ಭಾಗವಾಗಿ ಯಡಿಯೂರಪ್ಪನವರಿಂದ ಇಂಥಾ ಹೇಳಿಕೆ ಹೇಳಿಸಲಾಗಿದೆ ಎನ್ನಲಾಗುತ್ತಿದೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ದೆಹಲಿಯಿಂದ ಮರಳಿದ ಯಡಿಯೂರಪ್ಪ ತುಂಬಾ ನಿರಾಶೆಯಲ್ಲಿದ್ದಾರೆ. ಪ್ರಚಂಡ ಜಯದಿಂದ ಯಾರ ಮಾತನ್ನೂ ಕೇಳಿಸಿಕೊಳ್ಳದ ಸ್ಥಿತಿಯಲ್ಲಿರುವ `ಮೋದಿ-ಶಾ’ ಹೈಕಮಾಂಡ್ ಸದ್ಯಕ್ಕೆ ಯಾವ ಆಪರೇಷನ್ನೂ ಮಾಡಬೇಡಿ, ಸುಮ್ಮನೇ ವಿರೋಧ ಪಕ್ಷದಲ್ಲಿ ಕೂಡಿ ಎಂದು ಖಡಕ್ ಆದೇಶವನ್ನು ಯಡಿಯೂರಪ್ಪರಿಗೆ ನೀಡಿ ಕಳಿಸಿದೆ. ಇನ್ನೊಂದು ಕಡೆ ಯಡಿಯೂರಪ್ಪ ಸೂಚಿಸಿದ ಬೆಜೆಪಿ ಸಂಸದರಿಗೆ ಒಂದೂ ಸಚಿವ ಸ್ಥಾನ ನೀಡದೇ ಯಡಿಯೂರಪ್ಪರನ್ನು ಹೈಕಮಾಂಡ್ ಮೂಲೆಗೆ ತಳ್ಳಿದೆ. ಬಿಜೆಪಿಯಲ್ಲಿ ಯುಡಿಯೂರಪ್ಪ ಕತೆ ಮುಗಿದೇ ಹೋಯ್ತಾ?

ಮೋದಿಯವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬಂದಿಳಿದ ಯಡಿಯೂರಪ್ಪನವರ ಮುಖದಲ್ಲಿ ಈ ಮೊದಲಿದ್ದ ಯಾವ ಲವಲವಿಕೆಯೂ ಉಳಿದಿಲ್ಲ. ಮೇ 23ಕ್ಕೆ ರಾಜ್ಯ ಮೈತ್ರಿ ಸರ್ಕಾರ ಮುರಿದುಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ತುಂಬು ಹುಮ್ಮಸ್ಸಿನಲ್ಲಿ ಮಾತಾಡುತ್ತಿದ್ದ ಯಡಿಯೂರಪ್ಪನವರು ದಿಲ್ಲಿಯಿಂದ ಬರುತ್ತಿದ್ದಂತೆಯೇ “ಸದ್ಯಕ್ಕೆ ಸರ್ಕಾರದ ಪತನಕ್ಕೆ ಕೈಯಾಕಬೇಡಿ ಎಂದು ವರಿಷ್ಠರು ಸೂಚಿಸಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡದೇ ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ” ಎಂಬ ಅಚ್ಚರಿ ಹೇಳಿಕೆ ನೀಡಿ ಅವರ ಹಿಂಬಾಲಕರೇ ತಬ್ಬಿಬ್ಬಾಗುವಂತೆ ಮಾಡಿದ್ದಾರೆ.

ಇದಕ್ಕೆ ಅವರು ಕೊಡುತ್ತಿರುವ ಕಾರಣ, “ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ನಾಲ್ಕು ಶಾಸಕರನ್ನು ಅತೃಪ್ತರಂತೆ ಮುಂದೆ ಬಿಟ್ಟು ಬಿಜೆಪಿಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ನೀವು ಸರ್ಕಾರ ಪತನದ ಯತ್ನಕ್ಕೆ ಕೈಹಾಕಬೇಡಿ ಎಂಬ ಸಲಹೆ ನೀಡಿದ್ದಾರೆ” ಎನ್ನುತ್ತಿದ್ದಾರೆ.

ಆದರೆ ದಿಲ್ಲಿಯ ಬಲ್ಲ ಮೂಲಗಳು ಹೇಳುವಂತೆ ಯಡಿಯೂರಪ್ಪನವರು ಪ್ರಮಾಣವಚನ ಕಾರ್ಯಕ್ರಮದ ನೆಪದಲ್ಲಿ ದಿಲ್ಲಿಗೆ ಬಂದಿದ್ದೇ ಎರಡು ಅಜೆಂಡಾ ಇಟ್ಟುಕೊಂಡು. ಮೊದಲನೆಯದ್ದು, ತಮ್ಮ ಬೆಂಬಲಿಗ ಸಂಸದರಿಗೆ ಮೋದಿ ಸಂಪುಟದಲ್ಲಿ ಮಂತ್ರಿ ಮಾಡಿಸುವುದು. ಎರಡನೆಯದ್ದು, ಆಪರೇಷನ್ ಕಮಲಕ್ಕೆ ಅಧಿಕೃತ ಸಮ್ಮತಿ ಪಡೆದುಕೊಂಡು ಬರುವುದು. ಆದರೆ ಇವೆರಡೂ ಈಡೇರಿಲ್ಲ ಮಾತ್ರವಲ್ಲ, ಇನ್ನುಮುಂದೆ ಬಿಜೆಪಿಯಲ್ಲಿ ನಿಮ್ಮ ಪ್ರಾಧಾನ್ಯತೆ ಸಾಕು ಎಂಬ ಸ್ಪಷ್ಟ ಸುಳಿವನ್ನೂ ಅಮಿತ್ ಶಾ ನೀಡಿ ಕಳಿಸಿದ್ದಾರೆ ಎನ್ನುತ್ತವೆ ದಿಲ್ಲಿ ಮೂಲಗಳು.

ಯಡಿಯೂರಪ್ಪನವರು, ತಮ್ಮ ಆಪ್ತರಾದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಗದ್ದಿಗೌಡರ್, ಹಾವೇರಿ ಶಿವಕುಮಾರ್ ಉದಾಸಿ, ಕೊಪ್ಪಳದ ಕರಡಿ ಸಂಗಣ್ಣ ಮತ್ತು ತುಮಕೂರಿನ ಬಸವರಾಜು- ಇವರಲ್ಲಿ ಒಬ್ಬಿಬ್ಬರಿಗೆ ಸಚಿವ ಸ್ಥಾನ ಅಪೇಕ್ಷಿಸಿದ್ದರು! ಇದಕ್ಕೆ ತಣ್ಣೀರು ಎರಚಿದ ಹೈಕಮಾಂಡ್ ಯಡಿಯೂರಪ್ಪ ಬಣದಿಂದ ಹೊರಗಡೆ ಗುರುತಿಸಿಕೊಂಡಿರುವ ಪ್ರಹ್ಲಾದ್ ಜೋಷಿ, ಸದಾನಂದಗೌಡ, ಸುರೇಶ್ ಅಂಗಡಿಗೆ ಮಾತ್ರ ಸಚಿವಗಿರಿ ದಯಪಾಲಿಸಿದೆ. ರಾಜ್ಯದಿಂದ ಈ ಹೆಸರುಗಳನ್ನು ಆರೆಸ್ಸೆಸ್ ಪರವಾಗಿ ಶಿಫಾರಸ್ಸು ಮಾಡಿದ್ದೇ ಸಂತೋಷ್‍ಜೀ ಎಂಬ ಸತ್ಯ ಯಡಿಯೂರಪ್ಪನವರನ್ನು ಮತ್ತಷ್ಟು ದಿಗ್ಭ್ರಮೆ ಗೊಳಿಸಿರಲಿಕ್ಕೂ ಸಾಕು.

ಎಂಪಿ ಎಲೆಕ್ಷನ್ನಿಗೆ ಟಿಕೇಟ್ ಹಂಚಿಕೆಯಲ್ಲೂ ಯಡಿಯೂರಪ್ಪನವರ ಶಿಫಾರಸ್ಸಿಗೆ ಹೈಕಮಾಂಡ್ ಮಣೆ ಹಾಕರಲಿಲ್ಲ ಎನ್ನುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಅಲ್ಲೂ ತೇಜಸ್ವಿ ಸೂರ್ಯನಂತ ಸಂತೋಷ್‍ಜಿ ಶಿಷ್ಯರಿಗೇ ಮಣೆ ಹಾಕಲಾಗಿತ್ತು. ಶೋಭಾ ಕರಂದ್ಲಾಜೆ ಮತ್ತು ಕರಡಿ ಸಂಗಣ್ಣರಿಗೆ ಟಿಕೇಟು ತರಲು ಯಡಿಯೂರಪ್ಪ ಹರಸಾಹಸ ಪಡಬೇಕಾಗಿ ಬಂದಿತ್ತು. ಅಲ್ಲದೇ ಚಿಕ್ಕೋಡಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಶಾಸಕ ಉಮೇಶ ಕತ್ತಿಯ ಸಹೋದರ ರಮೇಶ ಕತ್ತಿಗೂ ಟಿಕೆಟ್ ತರುವಲ್ಲಿ ಯಡಿಯೂರಪ್ಪ ಮುಗ್ಗರಿಸಿದ್ದರು.

ಕುಂದಗೋಳ ಉಪ ಚುನಾವಣೆಯಲ್ಲೂ ಯಡಿಯೂರಪ್ಪ ಬೀಗ ಚಿಕ್ಕನಗೌಡರಿಗೆ ಟಿಕೆಟ್ ತಪ್ಪಿಸುವ ಯತ್ನ ಮಾಡಲಾಗಿತ್ತು. ಕೊನೆಗೂ ಯಡಿಯೂರಪ್ಪ ಟಿಕೆಟ್ ತಂದರಾದರೂ ಹುಬ್ಬಳ್ಳಿ-ಧಾರವಾಡದ ಬಿಜೆಪಿ ನಾಯಕರು ಚಿಕ್ಕನಗೌಡರ ಪರ ಮನಪೂರ್ವಕ ಪ್ರಚಾರ ಮಾಡದೇ ಯಡಿಯೂರಪ್ಪ ಬೀಗನಿಗೆ ಸೋಲು ತಂದಿಟ್ಟರು. ಚಿಂಚೋಳಿಯಲ್ಲಿ ತಮ್ಮ ಶಿಷ್ಯ, ತಮ್ಮ ಸಂಪುಟದಲ್ಲಿ ಸಚಿವ ಸ್ಥಾನವನ್ನೂ ನೀಡಿದ್ದ ಸುನೀಲ್ ವಲ್ಯಾಪುರೆಗೆ ಟಿಕೆಟ್ ಕೊಡಿಸುವ ಯಡಿಯೂರಪ್ಪರ ಯತ್ನಕ್ಕೆ ಹಿನ್ನಡೆ ಮಾಡಿದ ಸಂತೋಷ್‍ಜಿ ಬಣ ಅಲ್ಲಿ ವಲಸಿಗ ಉಮೇಶ ಜಾಧವರ ಮಗ ಅವಿನಾಶ ಜಾಧವ್‍ಗೆ ಟಿಕೆಟು ನೀಡಿತ್ತು.

ಗಾಯದ ಮೇಲೆ ಬರೆ ಎಂಬಂತೆ, ಈಗ ಆಪರೇಷನ್ ಕಮಲ ಮಾಡಬೇಡಿ, ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ತೆಪ್ಪಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿಕೊಳ್ಳುತ್ತಿದ್ದಾರೆ. ಅಂದರೆ ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಕನಸಿಗೆ ಹೈಕಮಾಂಡ್ ಅಂತಿಮ ಮೊಳೆ ಹೊಡೆಯಿತೇ? ಎಂಬ ಅನುಮಾನ ಮೂಡದಿರದು.

ಲಿಂಗಾಯತ ಪ್ರಾಬಲ್ಯವಿರುವ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ ಹಿಂದಿಕ್ಕಿ ಅದ್ಭುತ ಯಶಸ್ಸು ಗಳಿಸಿರುವುದರಿಂದ ಇನ್ಮುಂದೆ ಕರ್ನಾಟಕದ ರಾಜಕಾರಣಕ್ಕೆ ಯಡಿಯೂರಪ್ಪ ತಮಗೆ ತೀರಾ ಅನಿವಾರ್ಯ ಆಗಲಾರರು ಎಂಬ ತರ್ಕಕ್ಕೆ ಬಿಜೆಪಿ ಹೈಕಮಾಂಡನ್ನು ಸಂತೋಷ್‍ಜಿ ಪಡೆ ತಂದು ನಿಲ್ಲಿಸಿದೆ ಎನ್ನುವುದು ಲೇಟೆಸ್ಟ್ ವರ್ತಮಾನ.

ಈ ಕ್ಷಣದಲ್ಲೇ ಆಪರೇಷನ್ ಕಮಲ ನಡೆಸಿ ಸರ್ಕಾರ ರಚಿಸಲು ಮುಂದಾದರೆ ಅನಿವಾರ್ಯವಾಗಿ ಯಡಿಯೂರಪ್ಪನವರನ್ನೇ ಸಿಎಂ ಮಾಡಬೇಕಾಗುತ್ತೆ. ಅದರ ಬದಲು ಅದನ್ನು ಕೊಂಚ ಮುಂದೂಡಿದರೆ, ಈಗ ಶುರುವಾಗಿರುವ ಮೋದಿ ಪರ್ವವನ್ನು ಕರ್ನಾಟಕದಲ್ಲಿ ಇನ್ನಷ್ಟೂ ಬಿಗಿಗೊಳಿಸುತ್ತಲೇ ಯಡಿಯೂರಪ್ಪನವರನ್ನು ರಾಜಕಾರಣದಲ್ಲಿ ಸಂಪೂರ್ಣ ಅಪ್ರಸ್ತುತಗೊಳಿಸಿದ ನಂತರ ತಮಗಿಷ್ಟ ಬಂದ ವ್ಯಕ್ತಿಯನ್ನು, (ಸಂತೋಷ್‍ರನ್ನು) ಸಿಎಂ ಮಾಡಬಹುದೆನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೆಣೆದು ಕೂತಿದೆ ಎನ್ನಲಾಗುತ್ತಿದೆ. ಅಷ್ಟರೊಳಗೆ ಮೈತ್ರಿ ನಾಯಕರ ನಡುವಿನ ಕಿತ್ತಾಟ ತಾರಕಕ್ಕೇರಿ ಸರ್ಕಾರ ಬಿದ್ದರೆ, ಬಿಜೆಪಿಗೆ ಅಪಖ್ಯಾತಿಯೂ ತಟ್ಟುವುದಿಲ್ಲ ಎಂಬ ತರ್ಕ ಇಲ್ಲಿ ಕೆಲಸ ಮಾಡಿರುವ ಸಾಧ್ಯತೆಯೇ ಹೆಚ್ಚು.

ಮತ್ತೊಂದು ತರ್ಕದ ಪ್ರಕಾರ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿದ ಅಪಖ್ಯಾತಿ ಬಿಜೆಪಿ ಮೇಲೆ ಬಾರದಂತೆ, ಅದನ್ನು ಸಿದ್ದರಾಮಯ್ಯ ಮೇಲೆ ಆರೋಪಿಸಿ, ಒಳಗೊಳಗೇ ಆಪರೇಷನ್ ನಡೆಸುವ ತಂತ್ರಗಾರಿಕೆ ಭಾಗವಾಗಿ ಯಡಿಯೂರಪ್ಪನವರಿಂದ ಇಂಥಾ ಹೇಳಿಕೆ ಹೇಳಿಸಲಾಗಿದೆ ಎನ್ನಲಾಗುತ್ತಿದೆ. ಅದೇನೆ ಇರಲಿ, ದಿಲ್ಲಿಯಿಂದ ವಾಪಾಸು ಬಂದ ಯಡಿಯೂರಪ್ಪನವರ ಮುಖದಲ್ಲಿ ಮೊದಲಿದ್ದ ಹುಮ್ಮಸ್ಸು ನಾಪತ್ತೆಯಾಗಿರುವುದು ಮಾತ್ರ ಸತ್ಯ.

ಲೋಕಸಭಾ ಚುನಾವಣೆ ನಡೆದು ತಿಂಗಳೊಪ್ಪತ್ತಿನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ 509 ಸ್ಥಾನ ಗೆದ್ದು ಚೇತರಿಸಿಕೊಂಡಿದ್ದರೆ, 25 ಸಂಸದರನ್ನು ಗೆದ್ದುಕೊಂಡ ಖುಷಿಯಲ್ಲಿದ್ದ ಬಿಜೆಪಿ ಕೇವಲ 366 ಲೋಕಲ್ ಬಾಡಿ ಸ್ಥಾನಗಳಿಗಷ್ಟೇ ಸೀಮಿತಗೊಂಡು ಆಘಾತಕ್ಕೆ ತುತ್ತಾಗಿರೋದು ಕೂಡಾ ಯಡಿಯೂರಪ್ಪನವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ ಎನ್ನಲಾಗುತ್ತಿದೆ.

ಇದನ್ನು ಓದಿ: ಲಿಂಗಾಯಿತರಿಗೆ ಬಿಜೆಪಿ ಕೊಟ್ಟಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...