Homeಸಾಮಾಜಿಕಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

ಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

- Advertisement -
- Advertisement -

 ಡಾ. ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ ಅಕ್ಕಿ |

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಅದರೊಂದಿಗೆ ನಿಮ್ಮ ಕೈಗಳನ್ನು ಮೇಲೆತ್ತಿ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಕಾಣಿಸದಿದ್ದರೂ ನೀವು ನಿಮ್ ಕೈಗಳನ್ನು ಮೇಲಕ್ಕೆತ್ತಿದ್ದು ನಿಮಗೆ ಖಂಡಿತವಾಗಿಯೂ ಅನುಭವವಾಗುತ್ತದೆ. ನಿಮ್ಮ ಕೈಗಳು ಎಲ್ಲಿವೆ ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೇಕೆ ಎಂದರೆ, ನಮ್ಮ ಮಿದುಳು ದೇಹದ ಅಂಗಗಳ ಆಂತರಿಕ ಸ್ಪರ್ಶವನ್ನು ಗ್ರಹಿಸಿ, ಯಾವ ಅಂಗ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ಸಶಕ್ತವಾಗಿದೆ.
ಯಾವುದಾದರೊಂದು ಅಪಘಾತಕ್ಕೀಡಾಗಿ ತಮ್ಮ ಕೈಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಈಗ ಇಲ್ಲದಿರುವ ಆ ಕೈ ಇನ್ನೂ ಅಲ್ಲಿಯೇ ಇದೆ ಎನ್ನುವ ಅನುಭವ ಆಗುತ್ತಿರುತ್ತದೆ. ಆ ಕೈ ಅಲ್ಲಿ ಇಲ್ಲದಿರುವುದನ್ನು ಅವರು ಕಾಣಬಹುದು; ಆದರೆ ದೇಹದ ನರಗಳಿಂದ ಬರುವ ಮಾಹಿತಿಯಿಂದ ಆ ಕೈ ಇನ್ನೂ ಅಲ್ಲೇ ಇದೆ ಎಂದು ಮಿದುಳಿನ ಭಾಗ ಅರ್ಥೈಸುತ್ತದೆ. ಇದು ಆ ಕೈ ಜೊತೆಗೆ ಅಲ್ಲಿಯ ನರಗಳನ್ನೂ ತೆಗೆದುಹಾಕಿದ್ದರೂ ಈ ಅನುಭವ ಆಗುತ್ತಲೇ ಇರುತ್ತದೆ. ದೇಹದಲ್ಲಿ ಒಂದು ಅಂಗ ಇರದೇ ಇದ್ದರೂ, ಒಬ್ಬ ವ್ಯಕ್ತಿಯ ದೇಹದಿಂದ ಇಲ್ಲದೇ ಇರುವ ಅಂಗವನ್ನು ಹೇಗೆ ಅನುಭವಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೈಗಳು, ಕಾಲುಗಳು ಹೀಗೆ ಗಂಡು ಮತ್ತು ಹೆಣ್ಣಿನ ದೇಹಗಳು ಬಹುತೇಕವಾಗಿ ಒಂದೇ ಬಗೆಯವಾಗಿರುತ್ತವೆ. ಜನನಾಂಗದ ಮತ್ತು ಎದೆಯ ಭಾಗಗಳು ಬೇರೆಯಾಗಿರುತ್ತವೆ. ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಅನುಭವವನ್ನು ತಿಳಿಯುವ ಒಂದು ವಿಧಾನವೇನೆಂದರೆ, ನಮ್ಮ ದೇಹದಲ್ಲಿ ಇರದಿರುವ ಅಥವಾ ನಮ್ಮ ದೇಹದಲ್ಲಿದ್ದ ಅಂಗಕ್ಕಿಂತ ಬೇರೆಯದೇ ಆದ ಒಂದು ಅಂಗದ ಸಂವೇದನೆಯನ್ನು ನಮ್ಮ ಮಿದುಳು ಅಪೇಕ್ಷಿಸುವುದು. ಹಾಗಾಗಿ ಒಬ್ಬ ಟ್ರಾನ್ಸ್‍ಜೆಂಡರ್ ಮಹಿಳೆ ತನಗೆ ಇಲ್ಲದಿರುವ ಸ್ತನಗಳು ಇದ್ದಂತೆ ಭಾವಿಸಬಹುದು. ಹಾಗೂ ತಮ್ಮ ದೇಹದಲ್ಲಿರುವ ಒಂದು ಅಂಗದ ಗ್ರಹಿಕೆ ಮಿದುಳಿಗೆ ಇಲ್ಲದೇ ಇದ್ದಾಗ ತಮ್ಮ ಜನನಾಂಗವನ್ನು ನೋಡಿ ಆ ವ್ಯಕ್ತಿಗಳು ಗೊಂದಲಕ್ಕೊಳಗಾಗಬಹುದು. ಅದರಂತೆ ಟ್ರಾನ್ಸ್‍ಜೆಂಡರ್ ಪುರುಷರು ಎದೆಯ ಭಾಗದಲ್ಲಿ ಒಂದು ರೀತಿಯ ಭಾರವನ್ನು ಅನುಭವಿಸಿ ಗೊಂದಲಕ್ಕೊಳಗಾಗಬಹುದು, ಏಕೆಂದರೆ ಅವರ ಮಿದುಳು ಅದನ್ನು ಅಪೇಕ್ಷಿಸುವುದಿಲ್ಲ. ಅನೇಕ ಟ್ರಾನ್ಸ್‍ಜೆಂಡರ್ ಪುರುಷರು ಪುರುಷರಿಗಿರುವ ಜನನಾಂಗಗಳು ಇರುವಂತೇ ಅನುಭವವಕ್ಕೀಡಾಗಬಹುದು. ವ್ಯಕ್ತಿಗಳ ಅನುವಂಶಿಕ ವ್ಯತ್ಯಾಸದ (genetic variation) ಆಧಾರದ ಮೇಲೆ ದೇಹ ಮತ್ತು ಮಿದುಳುಗಳೆರಡೂ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಬೆಳವಣಿಗೆಯಾಗಿ, ತಮ್ಮ ದೇಹದಿಂದ ಅವರ ಮಿದುಳು ಮತ್ತು ದೇಹದ ಅಪೇಕ್ಷೆಗಳು ಬೇರೆಬೇರೆಯಾಗುವುದನ್ನು ಡಿಸ್‍ಫೋರಿಯಾ ಎಂದು ಕರೆಯುತ್ತಾರೆ.
ಇದನ್ನು ತಿಳಿದುಕೊಳ್ಳಲು ಇದನ್ನು ಊಹಿಸಿ; ನಾಳೆ ಬೆಳಗ್ಗೆ ನೀವು ನಿದ್ರೆಯಿಂದ ಎದ್ದಾಗ, ನಿಮ್ಮ ಮಿದುಳು ಮತ್ತು ಮನೋಭಾವಗಳಲ್ಲಿ ಯಾವುದೇ ಬದಲಾವಣೆ ಆಗದೆ, ನಿಮ್ಮ ಭುಜದಿಂದ ಒಂದು ಹೆಚ್ಚಿನ ಕೈ ಉದ್ಭವಿಸಿದೆ ಎಂದುಕೊಳ್ಳಿ. ಈ ಹೊಸ ಕೈ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿಲ್ಲ ಎಂದು ಅಂದುಕೊಳ್ಳೊಣ. ಆದರೂ ಏನೋ ಕಿರಿಕಿರಿ ಅನುಭವಿಸುತ್ತೀರಿ, ಇರಬಾರದ್ದೇಕಿದೇ ಎನ್ನುವ ತೊಂದರೆ ಇರುತ್ತದೆ. ಈ ಅಂಗದಿಂದ ನಿಮಗೆ ಉಂಟಾಗುವ ಅಸೌಖ್ಯದ ಅನುಭವವು, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಹೊಸ ಅಂಗ ಎಷ್ಟು ಅಡ್ಡಿಪಡಿಸುತ್ತೆ ಎನ್ನುವುದರ ಜೊತೆಗೆ ನೀವು ಮುಂಚೆ ಮಾಡುತ್ತಿದ್ದ ದೈನಂದಿನ ಚಟುವಟಿಕೆಗಳನ್ನು ಹಾಗೆಯೇ ಮುಂದುವರೆಸಲು ಈ ಅಂಗದಿಂದ ಎಷ್ಟು ಅಡೆತಡೆ ಎದುರಾಗುತ್ತದೆ ಎಂಬುದನ್ನೂ ಸೇರಿ ಅವಲಂಬಿಸಿದೆ.
ಅದರ ಮೇಲೆ, ನೀವು ಎದುರಿಸುವ ಎಲ್ಲಾ ಜನರೂ ಆಶ್ಚರ್ಯ ಹಾಗೂ ಕೌತುಕದಿಂದ ಪ್ರತಿಕ್ರಿಯಿಸಿದಾಗ, ನಿಮ್ಮನ್ನು ಭೇಟಿಯಾಗುವ ಎಲ್ಲರೂ ನಿಮ್ಮ ಭುಜದಿಂದ ಈ ಕೈ ಏಕೆ ಉದ್ಭವಿಸಿದೆ ಎಂದು ಕೇಳಿದಾಗ, ನೀವು ಸಾರ್ವಜನಿಕ ಸಾರಿಗೆಯನ್ನು ಬಳಸಿದಲ್ಲಿ ನೂರಾರು ಜನರು ನಿಮ್ಮನ್ನು ನೋಡಿ ಆಶ್ಚರ್ಯ ಮತ್ತು ಕೌತುಕ ವ್ಯಕ್ತಪಡಿಸಿ, ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಮ್ಮನ್ನು ಗೇಲಿ ಮಾಡಿದಾಗ, ಇದೇನು ಎಂದು ಕೇಳಿದಾಗ, ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿ ಯಾವ ಅನುಭವಗಳಿಂದ ಹಾದು ಹೋಗಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೈಹಿಕ ಅಂಗವೈಕಲ್ಯತೆಯುಳ್ಳವರೂ ಇಂತಹ ಅನುಭವ ಹೊಂದಿರುತ್ತಾರೆ.
ಈಗ ಇನ್ನೊಂದು ಪ್ರಸಂಗವನ್ನು ಊಹಿಸಿ, ನೀವು ಬೆಳಗ್ಗೆ ಎದ್ದಾಗ, ನೀವು ಗಂಡಾಗಿದ್ದರೆ ನಿಮ್ಮ ದೇಹ ಹೆಣ್ಣಿನಂತೆ, ಹೆಣ್ಣಾಗಿದ್ದರೆ ಗಂಡಿನಂತೆ ಬದಲಾಗಿದೆ. ಜನರೊಂದಿಗೆ ವ್ಯವಹರಿಸುವಾಗ ಎಷ್ಟು ಬಾರಿ ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ನೋಡಲಾಗುತ್ತದೆ ಹಾಗೂ ಎಷ್ಟು ಬಾರಿ ನಿಮ್ಮನ್ನು ನೋಡಿ ನಗಲಾಗುತ್ತದೆ, ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಹಾಗೂ ನಿಮ್ಮ ಗುರುತು ಮುಂಚಿನಂತೆಯೇ ಇದ್ದು, ನಿಮ್ಮ ಉಡುಪೂ ಮುಂಚಿನಂತಿದ್ದು ಹಾಗೂ ನೀವು ಮುಂಚಿನಂತೇ ವರ್ತಿಸುತ್ತಿದ್ದೀರಿ, ಆದರೆ ನಿಮ್ಮ ದೇಹ ಬದಲಾಗಿದ್ದರೆ?
ಇನ್ನು ಕೊನೆಯ ಒಂದು ಪ್ರಯೋಗ: ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಒಬ್ಬ ವ್ಯಕ್ತಿಯನ್ನು ಊಹಿಸಿ, ಒಬ್ಬ ಡಾಕ್ಟರ್ ಅಂತಿಟ್ಟುಕೊಳ್ಳಿ, ಆ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೀರಿ ಎಂದು ಊಹಿಸಿ. ಈಗ ಕಣ್ಣು ಬಿಡಿ. ನಿಮಗೆ ಆ ಡಾಕ್ಟರ್‍ನ ಜೆಂಡರ್ ನೆನಪಿದೆಯೇ? ಗಂಡೋ, ಹೆಣ್ಣೋ, ಎರಡೂ ಅಲ್ಲವೋ? ನಾವು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ಊಹೆ ಮಾಡಿದಾಗ, ಮೊಟ್ಟಮೊದಲಿಗೆ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸುತ್ತೇವೆ. ಇದಕ್ಕೆ ನಮ್ಮ ಭಾಷೆಗಳೂ ಸಹಕರಿಸುತ್ತವೆ. ಅಧಿಕಾಂಶ ಭಾಷೆಗಳ ಸರ್ವನಾಮಗಳು ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ಸೂಚಿಸುತ್ತವೆ (ಬಂಗಾಳಿ ಭಾಷೆ ಹೊರತುಪಡಿಸಿ). ಹಾಗಾಗಿ ಒಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ನಾವು ಊಹೆ ಮಾಡಿದಾಗ, ಆ ವ್ಯಕ್ತಿಯ ವರ್ಗ, ಜಾತಿ, ಧರ್ಮ ಇತ್ಯಾದಿಗಳಿಗಿಂತ ಮುಂಚೆ ಮೂಲಭೂತವಾಗಿ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸಿಕೊಂಡಿರುತ್ತೇವೆ. ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಮೊದಲು ಅವರ ಜೆಂಡರ್ ಅನ್ನು ಗುರುತಿಸಿ ಅವರನ್ನು ಸಂಬೋಧಿಸಲು ಯಾವ ಭಾಷೆಯನ್ನು ಬಳಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯ ದೇಹರಚನೆ ಸಾಮಾಜಿಕವಾಗಿ ಗುರುತಿಸಿಕೊಂಡ ಗಂಡು ಅಥವಾ ಹೆಣ್ಣಿನಂತೆ ಇಲ್ಲದಿದ್ದಾಗ ಗಂಭೀರ ಸಮಸ್ಯೆ ಎದುರಾಗುತ್ತದೆ. ಅನೇಕ ಸಲ ಆ ವ್ಯಕ್ತಿಯನ್ನು ಇನ್ನಷ್ಟು ಸೂಕ್ಷ್ಮವಾಗಿ, ಉಡುಪಿನ ಒಳಗೆ ಎಂತಹ ದೇಹ ಇರಬಹುದು ಎಂದು ನೋಡಲಾಗುತ್ತದೆ. ಆಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ತಮ್ಮ ದೇಹದ ಜೊತೆಗೆ ಇರುವ ಮುಜುಗರ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ತಾನು ಯಾವ ಜೆಂಡರ್‍ನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೋ ಆ ಜೆಂಡರ್ ಬದಲಾಗಿ ಬೇರೆ ಜೆಂಡರ್‍ನೊಂದಿಗೆ ಜನರು ಆ ವ್ಯಕ್ತಿಯನ್ನು ಗುರುತಿಸಿದಾಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಖಿನ್ನತೆಗೆ ಒಳಗಾಗಬಹುದು. ಇದು ಡಿಸ್‍ಫೋರಿಯಾದ ಸಾಮಾಜಿಕ ಅಂಶ.
ಹಾಗಾಗಿ ಜೆಂಡರ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡುತ್ತ, ಸಾಮಾಜಿಕ ಡಿಸ್‍ಫೋರಿಯಾವನ್ನು ಕಡಿಮೆ ಮಾಡಲು ನಮ್ಮ ಸಮಾಜದಲ್ಲಿ ಅನೇಕ ಅವಕಾಶಗಳಿವೆ. ಸಮಾಜವು ಜೆಂಡರ್‍ಗಳ ಮೇಲೆ ಹೇರಿದ ನಿರೀಕ್ಷೆಗಳನ್ನು ಕೆಲವರು ಪೂರ್ಣಗೊಳಿಸುತ್ತಾರೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಗೇಲಿ ಮಾಡುವುದನ್ನು ಬಿಡಬೇಕಿದೆ. ಸಮಾಜವು ಇಂತಹ ಅಪಹಾಸ್ಯ ಮಾಡುವುದನ್ನು ಬಿಟ್ಟರೆ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಹಾಗೂ ಸಿಸ್‍ಜೆಂಡರ್ ವ್ಯಕ್ತಿಗಳೂ ಕೂಡ ಮುಕ್ತವಾಗಿ ಸಂಚರಿಸಬಹುದು ಮತ್ತು ಜಗತ್ತನ್ನು ಸಾವಧಾನವಾಗಿ ಅನುಭವಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...