ಮಿಥ್ಯ: ಕರ್ನಾಟಕದ ಮುಖ್ಯಮಂತ್ರಿ ಪುಲ್ವಾಮ ವಿಷಯವಾಗಿ ಮಾತನಾಡುವಾಗ ಪಾಕಿಸ್ತಾನದ ಪರ ಮಾತಾಡಿಬಿಟ್ಟರಂತೆ! ಇದು ಟೈಮ್ಸ್ ನೌ ಎಂಬ ಚಾನೆಲ್ಲಿನ ಎಕ್ಸ್‌ಕ್ಲೂಸಿವ್ ವರದಿ. ಈ ಚಾನೆಲ್ ಪ್ರಕಾರ, ಪಾಕಿಸ್ತಾನವನ್ನು ಒಂದು ಭಯೋತ್ಪಾದಕ ದೇಶ ಅಂತ ಘೋಷಿಸಬೇಕಲ್ಲ ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಲು ನಿರಾಕರಿಸಿದರಂತೆ! ’ಮೊದಲು ನಮ್ಮ ದೇಶದಲ್ಲಿನ ಭಯೋತ್ಪಾದಕ ಸಮಸ್ಯೆಯನ್ನು ಸಾಲ್ವ್ ಮಾಡಿಕೊಳ್ಳೋಣ’ ಅಂದರಂತೆ.

ಇದನ್ನೇ ಇಟ್ಟುಕೊಂಡು ಮೊನ್ನೆ ಟೈಮ್ಸ್ ನೌ ಅರ್ಧ ಘಂಟೆ ಬ್ರೇಕಿಂಗ್ ಹೊಡೆಯಿತು. ಅದರಲ್ಲಿ ಅದು ಪದೇಪದೇ ’ಕಾಂಗ್ರೆಸ್‌ನ ಮೈತ್ರಿ ಪಕ್ಷದ ಕುಮಾರಸ್ವಾಮಿ’ ಎಂದು ಒತ್ತಿ ಒತ್ತಿ ಹೇಳುತ್ತಲೇ ಇತ್ತು! ಇಷ್ಟಕ್ಕೇ ಕಾಯುತ್ತಿದ್ದ ಭಕ್ತರು ಈ ಕ್ಲಿಪ್ ಇಟ್ಟುಕೊಂಡು ಜಾಲತಾಣಗಳಲ್ಲಿ ತಮ್ಮ ನಿತ್ಯದ ’ದಂಧೆ’ ಶುರು ಹಚ್ಚಿಕೊಂಡಿದ್ದಾರೆ.
ಸತ್ಯ: ಕುಮಾರಸ್ವಾಮಿ ಹಾಗೆಲ್ಲ ಹೇಳುವುದು ಸಾಧ್ಯವೇ ಇಲ್ಲ ಎಂಬುದು ಕನ್ನಡಿಗರಿಗೆ ಗೊತ್ತು. ಕುಮಾರಸ್ವಾಮಿ ಕನ್ನಡದಲ್ಲಿ ಹೇಳಿದ್ದನ್ನು ಆ ಚಾನೆಲ್‌ನ ವರದಿಗಾರ/ರ್ತಿ ತಪ್ಪಾಗಿ ಅನುವಾದ ಮಾಡಿದರಾ? ಪ್ರಶ್ನೆ ಅಷ್ಟು ಸರಳವಾಗಿಲ್ಲ. ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿಗಳಿಗೆ ಹೀಗೆಲ್ಲ ತಿರುಚಿ ಒದರುವುದೇ ಒಂದು ದಂಧೆ. ಅವೆಲ್ಲ ಬಿಜೆಪಿಯ ಪೇಯ್ಡ್ ಚಾನೆಲ್‌ಗಳು.
ಕುಮಾರಸ್ವಾಮಿ ಹೇಳಿದ್ದಿಷ್ಟೇ:
’ಪುಲ್ವಾಮಾದ ಮಾಸ್ಟರ್‌ಮೈಂಡ್‌ನನ್ನು ಹೊಡೆದು ಹಾಕಿದ್ದು ಒಳ್ಳೆಯದೇ, ಆದರೆ ಆ ಸೈನಿಕರ ಸಾವಿನ ನೋವು ಹಾಗೇ ಇದೆ. ಇಂಥದ್ದು ಸಂಭವಿಸದಂತೆ ನಾವೆಲ್ಲ ಎಚ್ಚರ ವಹಿಸಬೇಕು. ಅದು ಸರ್ಕಾರದ ಜವಾಬ್ದಾರಿ…. ’

’ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಿವುದು ಒಂದು ಭಾಗವಷ್ಟೇ. ಅದಕ್ಕಿಂತ ಮುಖ್ಯವಾಗಿ ಈ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ನಾಶ ಮಾಡಬೇಕು. ಅದನ್ನು ಗನ್ ಬಳಸಿಯೋ ಅಥವಾ ಅವರನ್ನು ವಿಶ್ವಾಸಕ್ಕೆ ತಂದುಕೊಂಡೋ ಮಾಡಬೇಕು. ಅದು ಕೇಂದ್ರದ ಜವಾಬ್ದಾರಿ…’ ಎಲ್ಲೂ ಕುಮಾರಸ್ವಾಮಿ ಪಾಕ್ ಪರ ಮಾತನಾಡಿಯೇ ಇಲ್ಲ.
ಇದೆಲ್ಲವನ್ನೂ ಕುಮಾರಸ್ವಾಮಿ ಕನ್ನಡದಲ್ಲೇ ಹೇಳಿದ್ದಾರೆ. ಆದರೆ ’ಅನುವಾದ’ದ ದ ಸಮಸ್ಯೆಯಿಂದ ಟೈಮ್ಸ್ ನೌ ತಪ್ಪು ಮಾಡಿತೇ? ಇಲ್ಲ, ಖಂಡಿತ ಇಲ್ಲ. ಅದು ಬಿಜೆಪಿ ಪರ ಅಲೆ ಸೃಷ್ಟಿಸಲು ಎಂತಹ ಹೀನ ಕೆಲಸಕ್ಕೂ ರೆಡಿ. ಅದು ಬೇಕೆಂತಲೇ ಇದನ್ನು ಮಾಡಿದೆ-ಅದರ ಪೇಮೇಂಟ್ ಹೆಚ್ಚಿಸಿಕೊಳ್ಳಲು! ಹಲವಾರು ಕನ್ನಡಿಗರು, ’ನಿಮಗೆ ಅನುವಾದವೇ ಗೊತ್ತಿಲ್ಲವಾ?’ ಎಂದು ಉಗಿದ ಮೇಲಷ್ಟೇ ಟೈಮ್ಸ್ ನೌ ಎಲ್ಲ ಮುಚ್ಚಿಕೊಂಡು ಆ ಸುದ್ದಿಯನ್ನು ಡ್ರಾಪ್ ಮಾಡಿತು.


