ಸ್ಪರ್ಧಿಸಿದ್ದ 14 ಕ್ಷೇತ್ರಗಳಲ್ಲಿ ಕೆ.ಆರ್ ಪೇಟೆಯಲ್ಲಿ ಸೋತ ಜೆಡಿಎಸ್ 13 ಕ್ಷೇತ್ರಗಳಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಿದೆ. ಯಶವಂತಪುರದಲ್ಲಿ ಮಾತ್ರ ಮಾಡು ಇಲ್ಲವೇ ಮಡಿ ಹೋರಾಟ ನಡೆಸುತ್ತಿದೆ.
ಜೆಡಿಎಸ್‌ನ ಭದ್ರಕೋಟೆಯಲ್ಲಿ ಛಿದ್ರ ಮಾಡಿರುವ ಬಿಜೆಪಿ ಅನರ್ಹ ಶಾಸಕ ನಾರಾಯಣಗೌಡರನ್ನು ಗೆಲ್ಲಿಸಿದೆ. ಆ ಮೂಲಕ ಜೆಡಿಎಸ್ ತೀವ್ರ ಮುಖಭಂಗ ಕಂಡಿದೆ.
ಯಶವಂತಪುರದಲ್ಲಿ ಆರಂಭದಿಂದ ಮುನ್ನಡೆ ಕಂಡಿದ್ದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ 8 ಮತ್ತು 9 ಸುತ್ತಿನಲ್ಲಿ ಸ್ವಲ್ಪ ಹಿನ್ನಡೆ ಕಂಡಿದ್ದರು. ಆದರೆ ಮತ್ತೆ 10ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸುವ ಮೂಲಕ ಹಾವು ಏಣಿ ಆಟಕ್ಕೆ ಸಾಕ್ಷಿಯಾಗಿದೆ.
ಬಿಜೆಪಿಯ ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಕೂಡ ಪ್ರಬಲ ಪೈಪೋಟಿ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಹಳಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಅವರು ಈ ಬಾರಿ ತಿಣುಕಾಡುತ್ತಿದ್ದಾರೆ,
ಇನ್ನು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೆಪ ಮಾತ್ರಕ್ಕೆ ಅಭ್ಯರ್ಥಿಯಂತಾಗಿದೆ. ಇಲ್ಲಿ ಕಾಂಗ್ರೆಸ್ ಪರೋಕ್ಷವಾಗಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದೆ.


