Homeಅಂಕಣಗಳುಚುನಾವಣೆಗಳು ಮತ್ತು ಸರ್ವೋದಯ: ದೊರೆಸ್ವಾಮಿಯವರ ನೂರರ ನೋಟ ಅಂಕಣ

ಚುನಾವಣೆಗಳು ಮತ್ತು ಸರ್ವೋದಯ: ದೊರೆಸ್ವಾಮಿಯವರ ನೂರರ ನೋಟ ಅಂಕಣ

ಚುನಾವಣೆಗೆ ಪ್ರತಿನಿಧಿಗಳನ್ನು ನಿಲ್ಲಿಸಬೇಕಾದರೆ ಅಭ್ಯರ್ಥಿಯ ಅರ್ಹತೆಗಳನ್ನೂ ಮಾನದಂಡವಾಗಿ ಬಳಸಲಾಗುತ್ತದೆ. ಅಭ್ಯರ್ಥಿ ವಿಚಾರವಂತನಾಗಿರಬೇಕು. ಜನಪರ ಸೇವೆಯನ್ನು ಮಾಡಿದವನಾಗಿರಬೇಕು.

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಸರ್ವೋದಯ ಸಮಾಜ ಚುನಾವಣೆಗಳಲ್ಲಿ ರೂಢಮೂಲ ಬದಲಾವಣೆಯನ್ನು ಬಯಸುತ್ತದೆ. ರಾಜಕೀಯ ಪಕ್ಷಗಳ ವಿಚಾರ ರಾಜ್ಯಾಂಗದಲ್ಲಿ ಎಲ್ಲೋ ಒಂದು ಕಡೆ ಪ್ರಸ್ತಾಪಿಸಲಾಗಿದೆ. ಆದರೆ ಇಂದು ರಾಜಕೀಯ ಪಕ್ಷಗಳು ರಾಜಕೀಯವನ್ನು ಕಬ್ಜಾ ಮಾಡಿವೆ. ಈಗ ಇರುವುದು ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಅದು ಇಂದಿರಾ ಕಾಂಗ್ರೆಸ್. ಭಾರತೀಯ ಜನತಾಪಕ್ಷ ಜಾತೀಯ ಸಂಸ್ಥೆ. ಹಾಗೆಯೇ ಅಕಾಲಿದಳ ಸಿಖ್ಖರ ಸಂಸ್ಥೆ. ಅದೇ ರೀತಿ ಮುಸ್ಲಿಮರದೂ ಒಂದೆರಡು ರಾಜಕೀಯ ಪಕ್ಷಗಳಿವೆ. ಜಾತ್ಯತೀತ ಭಾರತದಲ್ಲಿ ಜಾತೀಯ ಸಂಸ್ಥೆಗಳಿಗೆ ಮತೀಯ ಸಂಸ್ಥೆಗಳಿಗೆ ಸ್ಥಾನ ಇರಬಾರದು. ದೇವೇಗೌಡರ ಜಾತ್ಯತೀತ ಜನತಾದಳ ಒಕ್ಕಲಿಗ ಸಂಸ್ಥೆ. ಜಾತ್ಯತೀತ ಎಂದು ಘೋಷಿಸಿಕೊಂಡು ಜಾತಿ ಸಂಸ್ಥೆ ನಡೆಸುವುದು ನ್ಯಾಯಬಾಹಿರ. ಕಮ್ಯುನಿಸ್ಟ್ ಪಕ್ಷ ನೆಲಕಚ್ಚಿದೆ. ಕೇರಳದಲ್ಲಿ ಬಿಟ್ಟು ಉಳಿದ ಕಡೆ ಕಮ್ಯುನಿಸ್ಟ್ ಪಕ್ಷವು ಇತರೇ ಪಕ್ಷಗಳನ್ನು ನಮಗೆ ಒಂದೆರಡು ಸೀಟು ಬಿಟ್ಟು ಕೊಡಿ ಎಂದು ಕೇಳುವ ದುರವಸ್ಥೆಯಲ್ಲಿದೆ.

ಸರ್ವೋದಯ ಸಮಾಜದ ರಚನೆಯಾದಾಗ ಜಾತಿ, ಮತ ಸಂಸ್ಥೆಗಳಿಗೆ ಭಾರತದಲ್ಲಿ ಎಲ್ಲೂ ಮಾನ್ಯತೆ ಇರುವುದಿಲ್ಲ. ಎರಡನೆಯದಾಗಿ ಈಗಿರುವ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ, ಜನರ ಮತ ಕೇಳುತ್ತವೆ. ಮತೀಯ ರಾಜಕೀಯ ಪಕ್ಷಗಳಿಗೆ ಮತ ನೀಡಬೇಕಾದ ದುಸ್ಥಿತಿ ಭಾರತದ ಪ್ರಜೆಗಳದು.

ಇದು ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಾದರೂ ಹೇಗೆ? ಪ್ರಜೆಯಿಂದ ಪ್ರಜೆಗಾಗಿ, ಪ್ರಜೆಗೋಸ್ಕರ ರಚಿಸಿಕೊಂಡಿರುವ ರಾಜ್ಯಾಂಗ ನಮ್ಮದು. ಅಂದರೆ ಪ್ರಜಾರಾಜ್ಯದಲ್ಲಿ ಪ್ರಜೆಯ ಪರ ಸೇವೆ ಸಲ್ಲಿಸುವ ಪ್ರತಿನಿಧಿ ಇರಬೇಕೇ ಹೊರತು ರಾಜಕೀಯ ಪಕ್ಷದ ಪ್ರತಿನಿಧಿಯಲ್ಲ. ಈಗ ಪ್ರಜೆ ತನ್ನ ಮತವನ್ನು ರಾಜಕೀಯ ಪಕ್ಷ ನಿಲ್ಲಿಸುವ ಉಮೇದುದಾರನಿಗೆ ನೀಡುತ್ತಿದ್ದಾನೆಯೇ ಹೊರತು ಪ್ರಜೆಗಲ್ಲ. ಹಾಗಾಗಿ ಈಗ ಆಯ್ಕೆಯಾಗಿ ಬರುವವರು ಪ್ರಜಾಪ್ರತಿನಿಧಿಗಳಲ್ಲ. ಪಕ್ಷಗಳ ಪ್ರತಿನಿಧಿಗಳು.

ಆದ್ದರಿಂದ ಸರ್ವೋದಯ ಸಮಾಜದಲ್ಲಿ ರಾಜಕೀಯ ಪಕ್ಷಗಳನ್ನು ರದ್ದು ಮಾಡಲಾಗುತ್ತದೆ. ನಿಜವಾದ ಪ್ರಜಾಪ್ರತಿನಿಧಿಯನ್ನು ಪ್ರಜೆಯೇ ಆಯ್ಕೆ ಮಾಡಿಕೊಳ್ಳುತ್ತಾನೆ. ಗ್ರಾಮದಿಂದ ಹಿಡಿದು ದೆಹಲಿಯವರೆಗೆ ಆಯ್ಕೆಯಾಗುವ ಎಲ್ಲರೂ ನಿಜವಾದ ಪ್ರಜಾಪ್ರತಿನಿಧಿಗಳಾಗುತ್ತಾರೆ. ಪಂಚಾಯ್ತಿಯಿಂದ ಹಿಡಿದು ಪಾರ್ಲಿಮೆಂಟ್‍ವರೆಗೆ ಎಲ್ಲಾ ಹಂತದಲ್ಲೂ ಮತದಾರರ ಸಂಘಗಳನ್ನು ರಚಿಸಲಾಗುವುದು. ಈ ಮತದಾರರ ಸಂಘ, ತನ್ನ ಪ್ರತಿನಿಧಿ ಯಾರು ಎಂಬುದನ್ನು ನಿರ್ಧರಿಸುತ್ತದೆ. ದೆಹಲಿಯಲ್ಲಿ ಕೂತು, ಬೆಂಗಳೂರಿನಲ್ಲಿ ಕೂತು ಈ ಮತದಾರರ ಸಂಘಗಳು ತಮ್ಮ ನಿಜ ಪ್ರತಿನಿಧಿಗಳನ್ನು ಗೊತ್ತು ಮಾಡುವುದಿಲ್ಲ. ಮತದಾರರನ್ನು ಕೇಳಿಯೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮತದಾರರ ಸಂಘ ಒಂದಕ್ಕಿಂತ ಹೆಚ್ಚು ಜನರ ಹೆಸರುಗಳನ್ನು ಸೂಚಿಸುವುದಾದರೆ, ಅವರೆಲ್ಲ ಚುನಾವಣೆಯ ಕಣದಲ್ಲಿರುತ್ತಾರೆ.

ಚುನಾವಣೆಗೆ ಪ್ರತಿನಿಧಿಗಳನ್ನು ನಿಲ್ಲಿಸಬೇಕಾದರೆ ಅಭ್ಯರ್ಥಿಯ ಅರ್ಹತೆಗಳನ್ನೂ ಮಾನದಂಡವಾಗಿ ಬಳಸಲಾಗುತ್ತದೆ. ಅಭ್ಯರ್ಥಿ ವಿಚಾರವಂತನಾಗಿರಬೇಕು. ಜನಪರ ಸೇವೆಯನ್ನು ಮಾಡಿದವನಾಗಿರಬೇಕು. ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಅಪರಾಧಗಳನ್ನು ಮಾಡಿರಬಾರದು. ಅವನ ಮೇಲೆ ಚಾರ್ಜ್ ಶೀಟ್ ಹಾಕಿರಬಾರದು. ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ, ಹಣ ಅವನಲ್ಲಿರಬಾರದು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅಭ್ಯರ್ಥಿ ಗಳಿಸಿರುವ ಆದಾಯದ ವಿವರ ನೀಡಬೇಕು. ಅದು ಕಳೆದ ಚುನಾವಣೆಯಲ್ಲಿ ಸಲ್ಲಿಸಿರುವ ಆದಾಯಕ್ಕಿಂತ ಹೆಚ್ಚಾಗಿದ್ದರೇ, ಕಡ್ಡಾಯವಾಗಿ ಅದನ್ನು ಚುನಾವಣಾಧಿಕಾರಿ ಪರಿಶೀಲಿಸಬೇಕು. ಅಕ್ರಮವಾಗಿ ಸಂಪಾದಿಸಿದ ಆಸ್ತಿ ಇದ್ದರೆ ಅವರ ಚುನಾವಣಾ ಅರ್ಜಿಯನ್ನು ಅಂಗೀಕರಿಸಬಾರದು.

ಚುನಾವಣಾ ಸಂದರ್ಭದಲ್ಲಿ ಕಳ್ಳತನದಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ನಾಶ ಮಾಡಲಾಗುತ್ತದೆ. ಹಿಡಿದ ಹಣವನ್ನು ಟ್ರೆಷರಿಗೆ ಕಳಿಸಲಾಗುತ್ತದೆ. ಆದರೆ ಹಿಡಿದು ಉಳಿದ ವಸ್ತುಗಳ ಬಗೆಗೆ ತನಿಖೆಯೂ ಆಗುತ್ತಿಲ್ಲ. ಶಿಕ್ಷೆಯೂ ಆಗುತ್ತಿಲ್ಲ. ಕಟ್ಟುನಿಟ್ಟಾಗಿ ತನಿಖೆ ನಡೆಸಿ ಮಾಲು ಸಾಗಿಸುವವನಿಗೆ, ದಾಸ್ತಾನು ಮಾಡಿದವನಿಗೆ ಆ ಮಾಲು ಯಾವ ಅಭ್ಯರ್ಥಿಯ ಪರವಾಗಿ ಸಾಗಿಸಲಾಗುತ್ತವೆ, ಹಂಚಿಕೆಯಾಗುತ್ತಿದೆ, ದಾಸ್ತಾನು ಮಾಡಲಾಗಿದೆ ಎಂಬುದನ್ನು ತನಿಖೆಮಾಡಿ ತಪ್ಪಿತಸ್ಥರ ಮೇಲೆ ಖಟ್ಳೆ ಹೂಡಬೇಕು. ಈಗ ಈ ಪ್ರಕ್ರಿಯೆ ನಡೆಯುತ್ತಿಲ್ಲ. ಅದರಿಂದಾಗಿ ವರ್ಷದಿಂದ ವರ್ಷಕ್ಕೆ ಚುನಾವಣೆಗಳಲ್ಲಿ ಅಕ್ರಮಗಳು ಹೆಚ್ಚುತ್ತಲೇ ಹೋಗುತ್ತವೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಪ್ರಧಾನಿಯವರ ಅಥವಾ ಸರ್ಕಾರದ ಅಧೀನ ನೌಕರರಲ್ಲ. ಅವರು ನೇರವಾಗಿ ರಾಷ್ಟ್ರಪತಿಗಳ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ. ಶೇಷನ್ ಅವಧಿಯಲ್ಲಿ ಅವರನ್ನು ಕಟ್ಟಿಹಾಕಲು ಇನ್ನಿಬ್ಬರು ಆಯುಕ್ತರನ್ನು ಸರ್ಕಾರ ನೇಮಿಸಿತು. ಈ ಪದ್ಧತಿ ಈಗಲೂ ಮುಂದುವರೆಯುತ್ತಿದೆ. ಈ ಇಬ್ಬರೂ ಸರ್ಕಾರದಿಂದ ನೇಮಿಸಲ್ಪಟ್ಟವರಾಗಿದ್ದು ಇವರಿಗೆ ಮುಖ್ಯ ಆಯುಕ್ತರಿಗಿರುವ ಸ್ವಾತಂತ್ರ್ಯ ಇಲ್ಲ. ಯಾವುದೋ ಅಕ್ರಮವಾದಾಗ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳಲು ನಿರ್ಧರಿಸಿದರೆ ಉಳಿದಿಬ್ಬರು ಅದಕ್ಕೆ ನಮ್ಮ ಸಮ್ಮತಿ ಇಲ್ಲ ಎನ್ನುತ್ತಾರೆ. ಓಟಿಗೆ ಹಾಕಿ ಅನ್ನುತ್ತಾರೆ. ಮತ ಹಾಕಿದಾಗ ಮುಖ್ಯ ಆಯುಕ್ತರ ತೀರ್ಮಾನ ಬಹುಮತದಿಂದ ನೆಲಕಚ್ಚುತ್ತದೆ.

ಸರ್ವೋದಯ ಸಮಾಜದಲ್ಲಿ ಈ ಮೂವರು ಸದಸ್ಯರೂ ಸ್ವಾತಂತ್ರರು. ಸರ್ಕಾರದ ಮರ್ಜಿ ಅನುಸರಿಸಿ ನಡೆಯುವವರಲ್ಲ ಎಂದು ಘೋಷಿಸಲಾಗುತ್ತದೆ.

ಚುನಾವಣೆ ಸಂಬಂಧದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸರಳಗೊಳಿಸಲು, ಭ್ರಷ್ಟಾಚಾರವನ್ನು ತೊಡೆದುಹಾಕಲು ಚುನಾವಣೆಯ ವೆಚ್ಚವನ್ನು ಕಡಿತಗೊಳಿಸಲು ಅಥವಾ ಚುನಾವಣೆಯ ವೆಚ್ಚವನ್ನು ಸರ್ಕಾರವೇ ವಹಿಸಲು ತಿಳಿದುಕೊಳ್ಳಬೇಕಾದ ಕ್ರಮಗಳನ್ನು ತಜ್ಞರÀ ಸಮಿತಿ ತೀರ್ಮಾನಿಸುತ್ತದೆ. ಈ ತಜ್ಞರ ಸಮಿತಿಯ ಸದಸ್ಯರು ಸರ್ವೋದಯ ತತ್ವಗಳನ್ನು ಅರಿತವರಾಗಿರಬೇಕು. ಮತ, ಜಾತಿ, ಪಂಥದಿಂದ ಮುಕ್ತರಾದವರಾಗಿರಬೇಕು. ಸಮಾನತೆ, ಭ್ರಾತೃತ್ವದ ತತ್ವಗಳನ್ನು ಮೈಗೂಡಿಸಿಕೊಂಡವರಾಗಿರಬೇಕು. ನಮ್ಮ ರಾಜ್ಯಾಂಗದ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸುವ ಸೃಜನಶೀಲತೆಯ ವ್ಯಕ್ತಿಗಳಾಗಿರಬೇಕು. ಎಲ್ಲಾ ಇಸಂಗಳನ್ನು ತೊರೆದು ಆ ಇಸಂಗಳಲ್ಲೆಲ್ಲ ಇರುವ Humanism ಅನ್ನು ಮಾತ್ರ ಸರ್ವೋದಯ ಅಂಗೀಕರಿಸುತ್ತದೆ.

ಗಣರಾಜ್ಯದಲ್ಲಿ ಪ್ರಜೆಯದೇ ಪರಮಾಧಿಕಾರ ಎಂದು ರಾಜ್ಯಾಂಗ ಹೇಳುತ್ತದೆ. ಆದರೆ ಪ್ರಜೆ ಜಡವಾಗಿದ್ದಾನೆ, ಗಾಢ ನಿದ್ರೆಯಲ್ಲಿದ್ದಾನೆ. ‘ಇಣeಡಿಟಿಚಿಟ ‘Eternal vigilance is the price of liberty’ ಎಂಬುದನ್ನು ಅರಿಯುವಂತಾಗಬೇಕು. ಅದಕ್ಕಾಗಿ ಪ್ರಜೆಗಳೆಲ್ಲರನ್ನೂ ಗಾಢನಿದ್ರೆಯಿಂದ ಎಬ್ಬಿಸುವ ಅವರಿಗೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪಾಠ ಮಾಡಬೇಕು. ಚುನಾವಣಾ ಪದ್ಧತಿಯನ್ನು ಶುದ್ಧೀಕರಿಸುವ ಪಾಠವನ್ನು ಎಲ್ಲ ಮತದಾರರಿಗೂ ಮಾಡಬೇಕು. ಬೌದ್ಧಿಕವಾಗಿ, ನೈತಿಕವಾಗಿ ಅವರಿಗೆ ಶಿಕ್ಷಣ ಸಿಗುವ ವ್ಯವಸ್ಥೆ ಆಗಬೇಕು.

ಈ ಮೂಲಭೂತ ಬದಲಾವಣೆಗಳನ್ನು ಸಮಾಜದಲ್ಲಿ ತರುವ ಮೂಲಕ ಹೊಸ ಅಹಿಂಸಕ ಸಮಾಜವನ್ನು ಕಟ್ಟುವ ಸಂಕಲ್ಪ ಮಾಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...