Homeಸಾಮಾಜಿಕಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

ಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

- Advertisement -
- Advertisement -

ನಕಲಿ ಜೋಯಿಸರ ಬುರುಡೆ ಶಾಸ್ತ್ರಗಳು ಹೇಗೆ, ಜನ್ಮದಿಂದ ಸುತ್ತಿಕೊಂಡು, ಹೆಸರಿನಿಂದ ಗಟ್ಟಿಗೊಂಡು, ಪಂಚಾಂಗಗಳೆಂಬ ಬಾಹುಗಳಿಂದ ಕಟ್ಟಿಹಾಕುತ್ತವೆಂಬುದನ್ನು ನೋಡಿದೆವು. ಕಳೆದ ಬಾರಿ ವಿವರಿಸಿದ ಹಲ್ಲಿ ಶಕುನ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸೂಚಿಸಲು ಓದುಗರಾದ ಪುಷ್ಪಾ ಸುರೇಂದ್ರ ಅವರು ಕಾಂಚಿಪುರಂ ದೇವಾಲಯದ ಉದಾಹರಣೆ ಕೊಟ್ಟಿದ್ದಾರೆ. ಅಲ್ಲೊಂದು ಕಲ್ಲಿನ ಹಲ್ಲಿಯಿದೆಯಂತೆ. ಈ ಹಲ್ಲಿಪತನ ಫಲದಿಂದ ಭಯಗೊಂಡವರು ಬೇರೆಬೇರೆ ರಾಜ್ಯಗಳಿಂದ ಪರಿಹಾರಾರ್ಥ ಇಲ್ಲಿ ಬಂದು ಅದರ ಮೇಲೆ ಎಣ್ಣೆ ಸುರಿಯುತ್ತಾರಂತೆ! ಅಂದರೆ ಈ ಹಲ್ಲಿಯನ್ನೇ ಜನರ ಮೇಲೆಸೆದು ಬೆದರಿಸಿ ದೋಚುವ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದೆ ಎಂದಾಯಿತು! ಅದಿರಲಿ, ನಾವೀಗ ಹುಟ್ಟಿನಿಂದ ನೇರವಾಗಿ ಸಾವಿಗೆ ಹೋಗಿ ಅಲ್ಲಾಗಿರುವ ಮಹಾನ್ ಆವಿಷ್ಕಾರಗಳನ್ನು ನೋಡೋಣ. ನಂತರ ವಿಸ್ತಾರವಾದ ಜೀವನಕ್ಕೆ ಬರೋಣ.
ಕೆಲ ವರ್ಷಗಳ ಹಿಂದೆ ನನ್ನ ದೊಡ್ಡಪ್ಪ ಮುಂಬಯಿಯಲ್ಲಿ ತೀರಿಕೊಂಡಾಗ ಅವರ ಮತ್ತು ಅದಕ್ಕೆ ಕೇವಲ ಒಂದು ವಾರ ಮೊದಲು ತೀರಿಕೊಂಡಿದ್ದ ಅವರ ಪತ್ನಿ- ದೊಡ್ಡಮ್ಮನ ಶವಸಂಸ್ಕಾರವನ್ನು ಅವರ ಗೆಳೆಯರು ವಿದ್ಯುತ್ ಚಿತೆಯಲ್ಲಿ ಯಾವುದೇ ಧಾರ್ಮಿಕ ಕ್ರಿಯಾಕರ್ಮ ಇಲ್ಲದೇ ಮಾಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.
ನಾಸ್ತಿಕರಾಗಿದ್ದ ಅವರ ಪಿಂಡ ಪ್ರಧಾನವನ್ನೂ ಯಾರೂ ಮಾಡಿಲ್ಲ ಎಂದು ಬಹುವಾಗಿ ನೊಂದ ಮುಂಬಯಿಯಲ್ಲೇ ಇದ್ದ ಅವರ ತಂಗಿ, ಅಂದರೆ ನನ್ನ ಅತ್ತೆ ಪಿಂಡ ಬಿಡಲು ನನ್ನನ್ನು ಕರೆಸಿದರು. ಹಿಂದೂ ಆಚರಣೆಗಳ ಬಗ್ಗೆ ಅತೀವ ಶ್ರದ್ಧೆ ಇದ್ದ ಅತ್ತೆ ಮದುವೆಯಾದದ್ದು ಕ್ರೈಸ್ತರನ್ನು ಎಂದರೆ ನಿಮಗೆ ಆಶ್ಚರ್ಯ ಆಗಬಹುದು!
ದೊಡ್ಡಪ್ಪನ ಶಿಷ್ಯನೂ, ದೇವ-ಧರ್ಮ ನಿರ್ಲಿಪ್ತನೂ ಅದ ನಾನು, ಅವರ ಮನ ನೋಯಿಸಲು ಇಚ್ಛಿಸದೇ ಒಪ್ಪಿಕೊಂಡಿದ್ದೆ. ಮುಂಬಯಿಯಲ್ಲೇ ಕೆಲ ವರ್ಷ ಇದ್ದ ನನಗೆ ಜನ ನಿಭಿಡ ಮೆರೀನ್ ಲೈನ್ಸ್ನಲ್ಲಿ ಎತ್ತರವಾದ ಗೋಡೆಗಳ ಹಿಂದೆ ಅಷ್ಟೊಂದು ದೊಡ್ಡ ಸ್ಮಶಾನವಿದೆ ಎಂದು ಗೊತ್ತೇ ಇರಲಿಲ್ಲ. ಅದೊಂದು ಹಳ್ಳಿಯೇ ಅಗಿದ್ದು, ಬೇರೆ ಬೇರೆ ಜಾತಿಗಳವರು ನೂರಾರು ವರ್ಷಗಳ ಹಿಂದೆಯೇ ಕ್ರಿಯಾಕರ್ಮಗಳಿಗೆಂದು ಕಟ್ಟಿಸಿದ್ದ ದೊಡ್ಡ ದೊಡ್ಡ ಪುರಾತನ ಮನೆಗಳಿದ್ದವು. ಅಲ್ಲಿ ಅದಕ್ಕಾಗಿಯೇ ಹಲವಾರು ಅರ್ಚಕ ಕುಟುಂಬಗಳೂ ವಾಸಿಸುತ್ತಿದ್ದವು! ಅದೊಂದು ಬ್ರಾಹ್ಮಣ ಗ್ರಾಮವಾಗಿದ್ದು, ಇವೆಲ್ಲಾ ಬೇಕಾಬಿಟ್ಟಿ ಹಣ ಮಾಡುವ ಅಧಿಕೃತ ಏಜೆನ್ಸಿಗಳು!
ನನ್ನ ಸಂಬಂಧಿಯೊಬ್ಬರು ಕ್ರಿಯೆಗೆ ಕೂತುದರಿಂದ ನನಗೆ ಸಂಕಷ್ಟ ತಪ್ಪಿತು. ನಮಗೆ ಸಿಕ್ಕಿದ ಭಟ್ರು ಮಂತ್ರದ ಅರ್ಥ ಮಾತ್ರವಲ್ಲದೆ, ಆ ಪದ್ಧತಿ ಬಂದುದರ ಹಿನ್ನೆಲೆ, ಆಚರಣೆಯ ವೈದಿಕ ಅರ್ಥ, ಕಾಲಾನುಕ್ರಮದಲ್ಲಿ ಆದ ಬದಲಾವಣೆಗಳು ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. “ನಿಮಗೆ ಅರ್ಧವಾಗದೆ ನೀವಿದನ್ನು ಮಾಡಿ ಏನು ಪ್ರಯೋಜನ?” ಎಂಬ ಅವರ ಮಾತನ್ನು ಈಗಿನ ಸುಲಿಗೆಕೋರರಿಗೂ, ಅವರ ಬಕ್ರಾಗಳಿಗೂ ಕೇಳಬೇಕು!
ಹಿಂದೂ ಧರ್ಮ ಪ್ರಕಾರ ನನ್ನ ದಿವಂಗತ ದೊಡ್ಡಪ್ಪ ಮತ್ತು ದೊಡ್ಡಮ್ಮನಿಗೆ ಸ್ಥಾನಮಾನ ಬೇರೆ ಬೇರೆಯಾಗಿದ್ದುದರಿಂದ ಪಿತೃ ಪ್ರಧಾನ ಸಂಸ್ಕೃತಿಯಂತೆ ಗಂಡು-ಹೆಣ್ಣು ತಾರತಮ್ಯದ ಕ್ರಿಯೆಗಳು ನಡೆದವು. ಅದು ಯಾಕೆ ಇತ್ಯಾದಿಗಳನ್ನೂ ಅವರು ‘ವೇದಾಧಾರದಲ್ಲಿ’ ವಿವರಿಸಿದರು.
ಇದನ್ನು ಯಾಕೆ ಹೇಳಿದೆನೆಂದರೆ ಈಗ ನಿಮ್ಮನ್ನು ಹುಸಿಮಂತ್ರಗಳ ಭಯದ ಕತ್ತಲಲ್ಲಿಟ್ಟು ನೀವು ಬೆರಳು ತೋರಿಸದೆಯೇ ಹಸ್ತ ಮಾತ್ರವಲ್ಲ, ಇಡೀ ದೇಹವನ್ನೇ ನುಂಗುವ ಜೋಯಿಸರುಗಳು ಟಿವಿಗಳಲ್ಲೇ ವಕ್ಕರಿಸುತ್ತಿರುವಾಗ ಇಂತವರು ‘ನವಗ್ರಹ’ ಯೋಗದಂತೆ ತಾತಾ ಅಪರೂಪ!
ವಿಶೇಷವೆಂದರೆ ಸರಳವಾಗಿದ್ದ ಈ ವ್ಯಕ್ತಿ ‘ಶಾಸ್ತ್ರ’ದಲ್ಲಿ ಎಷ್ಟು ಹೇಳಿದೆಯೋ ಅಷ್ಟೇ- ಅಂದರೆ, ಪೈಸೆ, ಅಣೆ ಲೆಕ್ಕದಲ್ಲಿ ಚಿಲ್ಲರೆ ಹಣ ಮಾತ್ರ ಪಡೆಯುತ್ತಿದ್ದರು!
“ನಿಮ್ಮಲ್ಲಿ ಚಿಲ್ಲರೆ ಇರಲಿಕ್ಕಿಲ್ಲವಾದುದರಿಂದ ಅದನ್ನೂ ನಾನೇ ತಂದಿದ್ದೇನೆ” ಎಂದು ಜೋಳಿಗೆಯಿಂದ ಹಳೆಯ ನಾಣ್ಯಗಳನ್ನು ತೆಗೆದರು. “ನಿಮಗೆ ನಾನು ಸಾಲ ಕೊಡುತ್ತೇನೆ. ಅದನ್ನು ನೀವು ಶಾಸ್ತ್ರದಂತೆ ನನಗೆ ದಾನ ಮಾಡಬೇಕು. ನಂತರ ನನ್ನ ಸಾಲವನ್ನು ಒಟ್ಟಿಗೆ ತೀರಿಸಿ. ಶಾಸ್ತ್ರದ ಪ್ರಕಾರ ನೀವು ನನಗೆ ಗೋದಾನ ಮಾಡಬೇಕು. ಈಗ ಈ ನಗರದಲ್ಲಿ ಗೋವನ್ನು ಎಲ್ಲಿಂದ ತರುತ್ತೀರಿ? ನಾನೆಲ್ಲಿ ಸಾಕಲಿ? ಗೋವು ಇಲ್ಲದಿದ್ದಲ್ಲಿ ಶಾಸ್ತ್ರದಲ್ಲಿ ಚಿನ್ನದ ಪ್ರತಿಮೆ ದಾನ ಮಾಡಬಹುದೆಂದಿದೆ. ನಾನು ಅದನ್ನೂ ತಂದಿದ್ದೇನೆ” ಎಂದು ಜೋಳಿಗೆಯಿಂದ ಚಿನ್ನದ ಚಿಕ್ಕ ದನದ ಪ್ರತಿಮೆ ತೆಗೆದರು.
“ನಾನು ನಿಮಗೆ ಹಣ ಸಾಲಕೊಟ್ಟು ಇದನ್ನು ಮಾರುತ್ತೇನೆ. ಆ ಕಾಲದ ರೇಟು ಒಂದೂ ಕಾಲು ರೂಪಾಯಿ. ಹಣ ನಂತರ ಕೊಡಿ” ಎಂದು ಚಿನ್ನದ ದನವನ್ನು ಅತ್ತೆಗೆ ಮಾರಿದರು. ನಂತರ ಅದನ್ನೇ ದಾನವಾಗಿ ಪಡೆದರು ಎನ್ನಿ! ಮಾರಿದ ಹಣ ಬೇರೆ, ದಾನ ಲಾಭ ಪ್ರತ್ಯೇಕ! ಅದರೂ ಅವರು ದನದ ಪ್ರಸ್ತುತ ರೇಟು ಪಡೆಯಲಿಲ್ಲ! ಅದೇ ರೀತಿ ಜೋಳಿಗೆಯಿಂದ ಮಣ್ಣನ್ನು ತೆಗೆದು ತಾವೇ ಮಾರಿ, ಭೂದಾನವನ್ನೂ ಪಡೆದರು. ಎಲ್ಲವನ್ನೂ ಅಣೆ ಪೈ ಲೆಕ್ಕದಲ್ಲಿ ದಕ್ಷಿಣೆ ಪಡೆದರು. ನಾನು ಈ ವರ್ಚುವಲ್ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ ನೋಡಿ ಅಚ್ಚರಿಪಟ್ಟೆ.
ನನ್ನ ಅತ್ತೆಯವರಿಗಂತೂ ಖುಷಿಯಾಗಿ ಕೊನೆಗೆ ಉದಾರ ದಕ್ಷಿಣೆ ಕೊಟ್ಟ ರೂ, ಅವರು ಅದರಲ್ಲಿ ಈಗಿನ ಲೆಕ್ಕಾಚಾರ ಹಾಕಿ ಸ್ವಲ್ಪವನ್ನೇ ತೆಗೆದುಕೊಂಡರು! “ನಿಮಗಿದು ಈಗ ಕಡಿಮೆ ಕಾಣಬಹುದು. ಹಿಂದಿನ ಕಾಲದಲ್ಲಿ ಇದು ಭಾರೀ ದೊಡ್ಡ ಹಣ!” ಎಂದು ನೆನಪಿಸಿದರು ಬೇರೆ!!
ಇವೆಲ್ಲಾ ನಮಗೆ ಜೀವನದ ಅರ್ಥ ಮಾಡಿಸುವ ಸಾಂಕೇತಿಕ ಕ್ರಿಯೆಗಳು ಮಾತ್ರ ಅವುಗಳಿಗೆ ಪ್ರಸ್ತುತತೆ ಅರ್ಥ ಇಲ್ಲ. ಹಿಂದಿನವರ ಜೀವನಕ್ರಮ, ಅವರು ಕಂಡುಕೊಂಡ ಅರ್ಥವನ್ನು ನೆನಪಿಸುವುದು ಇವುಗಳ ಉದ್ದೇಶ ಎಂದೂ ವಿವರಿಸಿದರು.
ನಾನು ಒಂದು ಕಡೆ ಬೆರಗಾಗುತ್ತಾ, ಇನ್ನೊಂದು ಕಡೆ ಮನಸ್ಸಿನಲ್ಲೇ ನಗುತ್ತಾ ಇದ್ದೆ! ಯಾಕೆಂದರೆ, ಕ್ರಿಯೆ ನಡೆಯುತ್ತಿದ್ದಾಗ ನಾನು ಈ ರೀತಿಯ ಪಿಂಡ ಪ್ರಧಾನ ನಡೆಯುವ ಕೆಲವು ಕಡೆಗೆಲ್ಲ ಹೋಗಿ ಇಣುಕ್ಕಿದ್ದೆ! ಕಾಟಾಚಾರಕ್ಕೆ ಕ್ರಿಯೆಗಳು ಅವಸರವಸರದಲ್ಲಿ ನಡೆದು, ಕಂತೆ ಕಂತೆ ನೋಟುಗಳು ಕೈಬದಲಿಸುತ್ತಿದ್ದವು! ದಂಧೆ ಜೋರಾಗಿ ನಡೆಯುತ್ತಿತ್ತು.
ನಮಗೆ ಸಿಕ್ಕಂತಹ ಪ್ರಾಮಾಣಿಕ ಅರ್ಚಕನನ್ನು ನಾನು ಜನ್ಮದಲ್ಲಿ ನೋಡಿಲ್ಲ. ಸುಲಿಯುವವರೇ ಹೆಚ್ಚು!
ನನಗೆ ಸಂಸ್ಕೃತ ಅರೆಬರೆ ಅರ್ಥ ಅಗುವುದರಿಂದ ತಪ್ಪು ಮಂತ್ರ ಹೇಳಿದ್ದಕ್ಕೆ ಹಿಂದೆ ನಾನು ಒಂದಿಬ್ಬರು ಪರಿಚಯದ ಅರ್ಚಕರನ್ನು ಪ್ರಶ್ನಿಸಿದ್ದೆ! ನನ್ನ ವಿಷಯ ಗೊತ್ತಿದ್ದುದರಿಂದ ‘ನಮ್ಮದು ಬಾಯಿಪಾಠ ಮಾರಾಯ್ರೆ, ಎಲ್ಲರೆದುರು ಮರ್ಯಾದೆ ತೆಗೆಯಬೇಡಿ’ ಅಂದಿದ್ದರು!
ನಂಬಿಕೆ ಸಂಕೀರ್ಣವಾದ ವಿಷಯ. ನುಂಗುವಂತಿಲ್ಲ, ಉಗುಳುವಂತಿಲ್ಲ! ಅದಕ್ಕಾಗಿ ಸುಮ್ಮನಿದ್ದೆ! ಇಂತವರನ್ನು ನಾವು ದೇವರ ಕಮೀಷನ್ ಏಜೆಂಟರಾಗಿ ಒಪ್ಪಿಕೊಂಡು ಬಕ್ರಾಗಳಾಗುತ್ತಿದ್ದೇವೆ.
ಮೇಲೆ ಹೇಳಿದ ಅರ್ಚಕರಿಗೆ ವ್ಯತಿರಿಕ್ತವಾಗಿ ಈಗಿನ ವಂಚಕರು ಗೋದಾನ, ಭೂದಾನ, ಸುವರ್ಣ ದಾನ ಎಂದು ಅವರೇ ಮಾರಿ, ಅವರೇ ಪಡೆದು ಎಂತಹ ದರೋಡೆ ಮಾಡುತ್ತಿದ್ದಾರೆಂಬುದಕ್ಕೆ ಹಿನ್ನೆಲೆಯಾಗಿ ಈ ಘಟನೆಯನ್ನು ವಿವರಿಸಿದೆ. ಇವರಲ್ಲಿ ಕೆಲವರು ‘ಕನ್ಯಾದಾನ’ ಪಡೆಯಲು ಹೋಗಿ ಏಟುತಿಂದ, ಕೇಸು ಸುತ್ತಿಸಿಕೊಂಡ ಮಹಾನುಭಾವರೂ ಇದ್ದಾರೆಂಬುದನ್ನು ನೆನಪಿಸಿಕೊಳ್ಳಿ! ಸಾವಿನಂತಹ ದುಃಖದ ಘಟನೆಯಿಂದಲೂ ಹಿಂಡಲು ಎಂತಹಾ ಮಹಾ ಭಯಂಕರ ಆವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ಮುಂದೆ ನೋಡೋಣ. ಅದಕ್ಕಿದು ಪೀಠಿಕೆ ಅಷ್ಟೇ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...