Homeಮುಖಪುಟನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ವ್ಯಕ್ತಿತ್ವ ವಿಕಸನ 1- ಮೈಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್

ನಾನು ನನ್ನ ಹಿಂದಿನ ಲೇಖನದಲ್ಲಿ “ಜೀವನಾವಶ್ಯಕ ಕಲೆ” ಬಗ್ಗೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿರುವ  10 ಕಲೆಗಳ ಪೈಕಿ ಮೊದಲನೆಯದಾದ “ಸ್ವ-ಅರಿವು” (ಸೆಲ್ಫ್ ಅವೇರ್ನೆಸ್) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೆ. ಈ ಜೀವನಾವಶ್ಯಕ ಕಲೆಗಳು ನಮಗೆ ಜೀವನದ ಉದ್ದಕ್ಕೂ ಬೇಕಾಗುತ್ತದೆ. ಆದ್ದರಿಂದ ಇದನ್ನು ಚಿಕ್ಕಂದಿನಲ್ಲಿಯೇ ಕಲಿತರೂ ಸಹ, ಸಾಯುವವರೆಗೂ ಬಳಸುತ್ತಿರಬೇಕು. ಇದರಿಂದ ನಾವು ನಿರಂತರ ಲಾಭ ಪಡೆಯಬಹುದು. ಸ್ವ-ಅರಿವನ್ನು ಸ್ವಲ್ಪ ಆಳಕ್ಕಿಳಿಸಿದಾಗ ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದನ್ನು ಪರ್ಸನಾಲಿಟಿ ಟ್ರೇಟ್ (Personality Trait) ಎಂದು ಕರೆಯುತ್ತಾರೆ. ಇದರ ಬಗ್ಗೆ ಸುದೀರ್ಘವಾಗಿ ಅಧ್ಯಯನ/ಅನುಸಂಧಾನ ನಡೆಸಿರುವ ಮನೋವೈಜ್ಞಾನಿಕರು ಮತ್ತು ಸಾಮಾಜಿಕ ಶಾಸ್ತ್ರಜ್ಞರು ವ್ಯಕ್ತಿಗಳಲ್ಲಿ ಮುಖ್ಯವಾಗಿ ಎಂಟು ಗುಣಲಕ್ಷಣವನ್ನು ಗುರುತಿಸಿದ್ದಾರೆ. ಇವುಗಳು ಒಂದು ರೀತಿಯಲ್ಲಿ ವಿರೋಧಾಭಾಸ ಅಥವಾ ಜೋಡಿಗಳು ಎಂಬಂತೆಯೂ ಕಾಣುತ್ತವೆ: ಈ ಎಂಟಕ್ಕೆ ಸೂಚಕವಾಗಿ ಒಂದು ಇಂಗ್ಲೀಷ್ ಅಕ್ಷರವನ್ನೂ ಸೇರಿಸಿದ್ದಾರೆ.

1. ಅಂತರ್ಮುಖಿ (ಇನ್ಟ್ರೊವರ್ಟ್)    -I                   2. ಬಹಿರ್ಮುಖಿ (ಎಕ್ಸ್ಟ್ರೊವರ್ಟ್)     – E

3. ಸೂಕ್ಷ್ಮವೇದಿ (ಸೆನ್ಸಿಟಿವ್)         – S                 4. ಸಹಜ ಜ್ಞಾನಿ (ಇನ್ಟ್ಯೂಟಿವ್)      – N

5. ಯೋಚನಾಶೀಲ (ಥಿಂಕಿಂಗ್)     – T                 6. ಸಂವೇದನಾಶೀಲ (ಫೀಲಿಂಗ್)   – F

7. ತೀರ್ಪುಗಾರ (ಜಡ್ಜಿಂಗ್)           – J                 8. ಗ್ರಹಿಕಾಶಕ್ತಿಯ (ಪರ್ಸೆಪ್ಟಿವ್)      – P

ಒಂದು ಗುಣಲಕ್ಷಣ ಪ್ರಮುಖವಾಗಿದ್ದಾಗ ಅದರ ಜೊತೆಗೆ ಮಿಕ್ಕ ಜೋಡಿಗಳ ಪೈಕಿ ಒಂದನ್ನು ಸೇರಿಸಿ ರಚಿಸಿದ ಹದಿನಾರು ಸಂಯೋಗ ಗುಂಪುಗಳನ್ನು ಮೈಯ್ಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್ (MBTI) ಎನ್ನುತ್ತಾರೆ. ಇದು ಸಂಪೂರ್ಣ ವೈಜ್ಞಾನಿಕ ತತ್ವವಾದ ಎನ್ನಲು ಬರುವುದಿಲ್ಲ, ಆದರೂ ಸಾಕಷ್ಟು ಪ್ರಚಲಿತವಿರುವ ಅರೆ-ವೈಜ್ಞಾನಿಕ ತತ್ವವಾದ ಎನ್ನಲು ಅಡ್ಡಿಯಿಲ್ಲ. ಈ ನಾಲ್ಕು ಅಕ್ಷರದ ಹಣೆಪಟ್ಟಿ ವಿಶ್ಲೇಷಣೆಯಿಂದ ಓರ್ವ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ಬಹಳಷ್ಟು ಮಟ್ಟಿಗೆ ಗ್ರಹಿಸಬಹುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ. MBTI ರಚಿಸಿದ ಶ್ರೇಯ ಕ್ಯಾಥರೀನ್ ಕುಕ್ ಬ್ರಿಗ್ಸ್ ಮತ್ತು ಅವರ ಮಗಳು ಇಸಬೆಲ್ ಬ್ರಿಗ್ಸ್ ಮೈಯ್ಯರ್ಸ್ ಅವರಿಗೆ ಸಲ್ಲುತ್ತದೆ. ಇದು ಮೂಲತಃ ಕಾರ್ಲ್ ಜಂಗ್ ಎಂಬ ಸ್ವಿಸ್ ಮನೋವಿಜ್ಞಾನಿಯ ತತ್ವವಾದದ ಮೇಲೆ ಆಧರಿಸಲ್ಪಟ್ಟಿವೆ. ಕಾರ್ಲ್ ಜಂಗ್ ಪ್ರಕಾರ ಮನುಷ್ಯರಲ್ಲಿ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬ ನಾಲ್ಕು ಗುಣ-ಲಕ್ಷಣಗಳು, ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಮೇಲೆ ಹೆಸರಿಸಿದ ಎಂಟು ಗುಣ-ಲಕ್ಷಣಗಳನ್ನು ಪ್ರತ್ಯೇಕವಾಗಿ ನೋಡಿದಾಗ:

1. ಅಂತರ್ಮುಖಿ: ಇವರು ಹೆಚ್ಚು ಸಂಘಜೀವಿಗಳಲ್ಲ. ಇವರಿಗೆ ಜನ ಸಂಪರ್ಕಕ್ಕಿಂತ ಒಂಟಿತನ ಹೆಚ್ಚು ಪ್ರಿಯ. ಇವರಿಗೆ ಬೇರೆಯವರೊಂದಿಗೆ ಮಾತುಕತೆ, ಚರ್ಚೆ ಬೇಕಿಲ್ಲ. ಇದು ಒಂದು ರೀತಿಯ ಮನೋದೌರ್ಬಲ್ಯ ಅಥವಾ ರೋಗವಲ್ಲ, ಕೇವಲ ಅವರ ಆಯ್ಕೆ. ತಮಗೆ ಬೇಕಾದ ವಿಷಯದ ಚರ್ಚೆ ನಡೆಯುತ್ತಿದ್ದಾಗ ಇವರು ಇದ್ದಕ್ಕಿದ್ದಂತೆ ಬಹಿರ್ಮುಖಿಯಾಗಿ ಭಾಗವಹಿಸಲೂಬಹುದು ಆದರೆ ಹೆಚ್ಚಾಗಿ ಮೌನವಾದಿ.

2. ಬಹಿರ್ಮುಖಿ: ಅಂತರ್ಮುಖಿಯ ತದ್ವಿರುದ್ಧ, ಇವರಿಗೆ ಯಾವಾಗಲೂ ಜನರ ಜೊತೆ ಇರಬೇಕು. ಏನೇ ಮಾತುಕತೆ ಇರಲಿ, ಚರ್ಚೆ ಇರಲಿ, ಇವರು ಸದಾ ಸಿದ್ಧ. ಇವರಿಗೆ ಒಂಟಿತನ ಇಷ್ಟವಿಲ್ಲ. ಪಕ್ಕದಲ್ಲಿ ಗುರುತಿಲ್ಲದವರಿದ್ದರೂ ಅವರನ್ನು ತಾವಾಗಿಯೇ ಮಾತನಾಡಿಸುತ್ತಾರೆ. ಇವರೂ ಸಹ ತಮಗೆ ಇಷ್ಟವಿಲ್ಲದ ವಿಷಯದ ಚರ್ಚೆ ಬಂದಾಗ ಅಂತರ್ಮುಖಿಯಾಗಿ ಸುಮ್ಮನಿರಲೂಬಹುದು ಆದರೆ ಹೆಚ್ಚಾಗಿ ಮಾತುಗಾರರು.

3. ಸೂಕ್ಷ್ಮವೇದಿ: ಇವರು ಬಹಳ ಸೂಕ್ಷ್ಮ ಸ್ವಭಾವದವರು ಹಾಗಾಗಿ ಯಾವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇವರು ಉದ್ವೇಗಕ್ಕೆ ಬೇಗ ಒಳಗಾಗುತ್ತಾರೆ.

4. ಸಹಜಜ್ಞಾನಿ: ಇವರು ಹೇಳದೆಯೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗುತ್ತದೆ ಎಂದು ಇವರಿಗೆ ಮೊದಲೇ ಅನುಮಾನವಿರುತ್ತದೆ.

5. ಯೋಚನಾಶೀಲ: ಇವರು ಎಲ್ಲವನ್ನೂ ಬಹಳ ಗಂಭೀರವಾಗಿ, ಮಾಹಿತಿ ಸಂಗ್ರಹಿಸಿ, ಆಳವಾಗಿ ಯೋಚಿಸುತ್ತಾರೆ.

6. ಸಂವೇದನಾಶೀಲ: ಇವರು ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

7. ತೀರ್ಪುಗಾರ: ಇವರು ಇನ್ನೊಬ್ಬರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸದಾ ಘೋಷಿಸುತ್ತಿರುತ್ತಾರೆ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರಿಗೆ ಇವರು “ನೀವು ಹೇಳಿದ್ದು ತಪ್ಪು” ಎಂದು ನೇರವಾಗಿ ಉತ್ತರಿಸುತ್ತಾರೆ.

8. ಗ್ರಹಿಕಾಶಕ್ತಿಯ ವ್ಯಕ್ತಿ: ಇವರು ತಮ್ಮ ಅನಿಸಿಕೆಯನ್ನು ಅನಿಸಿದಂತೆ ತಿಳಿಸಿದರೂ ಸಹ ಇನ್ನೊಬ್ಬರ ಬಗ್ಗೆ ಅದನ್ನು “ತೀರ್ಪು” ಎಂದು ಘೋಷಿಸುವುದಿಲ್ಲ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರು “ನೀವು ಹೇಳಿದ್ದು ತಪ್ಪು” ಎಂದು ಹೇಳದೆ, ”ನೀವು ಹೇಳಿದ್ದು ನನಗೆ ತಪ್ಪು ಎಂದು ಅನಿಸುತ್ತದೆ” ಎಂದು ಹೇಳುತ್ತಾರೆ ಹಾಗಾಗಿ, ತೀರ್ಪುಗಾರರಲ್ಲ.

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಹೀಗೆ ಜನರನ್ನು ಪ್ರತ್ಯೇಕಿಸಿ “ಗೂಡಿನೊಳಗೆ ಸೇರಿಸು”ವುದರಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು. ಉದಾ: ಅಂತರ್ಮುಖಿ ವ್ಯಕ್ತಿ ಪ್ರಯತ್ನಪಟ್ಟು ಬಹಿರ್ಮುಖಿಯಾಗಲೂ ಬಹುದು. ಇದರಿಂದ ವ್ಯಕ್ತಿಗೆ ತನ್ನ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನೋಪಾಯ/ವೃತ್ತಿ, ಅಧ್ಯಯನ ಮಾರ್ಗ ಆರಿಸಿಕೊಳ್ಳಲು ಸಹಕಾರಿಯಾಗುತ್ತದೆ.

MBTI ತರಹದ್ದೇ ಇನ್ನೊಂದು ಪ್ರಚಲನೆಯಲ್ಲಿರುವ ವ್ಯಕ್ತಿತ್ವ ವಿಶ್ಲೇಷಣೆ ಬಿಗ್-ಫೈವ್ ಅಥವಾ ಒಷನ್ (OCEAN) ಮಾಡೆಲ್. ಇವೆರಡರ ಬಗ್ಗೆ ಮುಂದೊಮ್ಮೆ ತಿಳಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...