- Advertisement -
- Advertisement -
ಇಂದು ಆರಂಭವಾದ ಪ್ರೋ.ಕಬ್ಬಡ್ಡಿ 7ನೇ ಆವೃತ್ತಿಯ, ಹೈದರಾಬಾದ್ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ತೆಲಗು ಟೈಟನ್ಸ್ ವಿರುದ್ಧ ಯು ಮುಂಬಾಗೆ ಅಧಿಕಾರಯುತ ಗೆಲುವು ಸಾಧಿಸಿತು.
ಪಂದ್ಯದ ಆರಂಭದಿಂದಲೂ ಬಿಗಿಹಿಡಿತ ಹೊಂದಿದ್ದ ಯು ಮುಂಬಾ ಕೊನೆಗೂ 31-25 ಅಂತರದಿಂದ (6 ಅಂಕಗಳ) ಗೆಲುವಿನ ಖಾತೆ ತೆರೆಯಿತು.

ಯು ಮುಂಬಾ ಪರವಾಗಿ ರೈಡರ್ ಅಭಿಷೇಕ್ ಸಿಂಗ್ 10 ಅಂಕ ಗಳಿಸಿದರೆ, ತೆಲಗು ಟೈಟನ್ಸ್ ನ ಸಿದ್ದಾರ್ಥ್ ದೇಸಾಯಿ ಕೇವಲ 5 ಅಂಕ ಗಳಿಸಿ ನಿರಾಸೆ ಮೂಡಿಸಿದರು. ಮುಂಬೈನ ಕ್ಯಾಪ್ಟನ್ ಕಂ ಡಿಫೆಂಡರ್ ಫಜಲ್ ಅಟ್ರಾಚಲಿ 5 ಪಾಯಿಂಟ್ ಗಳಿಸುವ ಮೂಲಕ ಗಮನಸೆಳೆದರು.



