Homeಅಂತರಾಷ್ಟ್ರೀಯಫೇಸ್ ಬುಕ್‍ಗೆ ಬೀಳಲಿದೆ 35 ಸಾವಿರ ಕೋಟಿಯಷ್ಟು ದಂಡ. ಯಾಕೆ ಗೊತ್ತೆ?

ಫೇಸ್ ಬುಕ್‍ಗೆ ಬೀಳಲಿದೆ 35 ಸಾವಿರ ಕೋಟಿಯಷ್ಟು ದಂಡ. ಯಾಕೆ ಗೊತ್ತೆ?

- Advertisement -
- Advertisement -

ಸಾಮಾಜಿಕ ಜಾಲತಾಣಗಳ ಕ್ಷೇತ್ರದಲ್ಲಿ ಅತಿ ದೊಡ್ಡ ಮಾಧ್ಯಮವಾಗಿರುವ ಪೇಸ್‍ಬುಕ್ ಕೋಟ್ಯಾಂತರ ಜನ ಖಾತೆದಾರರನ್ನು ಹೊಂದಿರುವ ಆಪ್ ಆಗಿದೆ. ಈ ಸಂಸ್ಥೆ ಶೀಘ್ರದಲ್ಲಿ 500ಕೋಟಿ ಡಾಲರ್ (ಅಂದಾಜು 35,000 ಕೋಟಿ) ಭಾರಿ ದಂಡವನ್ನು ಕಟ್ಟಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಇತಿಹಾಸದಲ್ಲಿಯೇ ಯಾವ ಟೆಕ್ನಾಲಜಿ ಕಂಪನಿಗೂ ಈ ಮಟ್ಟದ ಭಾರಿ ಮೊತ್ತದ ದಂಡವನ್ನು ವಿಧಿಸಿರಲಿಲ್ಲ. 2012ರಲ್ಲಿ ಸರ್ಚ್ ಇಂಜಿನ್ ದಿಗ್ಗಜ ಸಂಸ್ಥೆ ಗೂಗಲ್ 22 ಕೋಟಿ ಡಾಲರ್‍ಗಳಷ್ಟು ದಂಡ ಕಟ್ಟಿತ್ತು.

ಬಳಕೆದಾರರ ಮಾಹಿತಿ ರಕ್ಷಣೆ, ಗೌಪ್ಯತೆಯ ಕಾನೂನು ಉಲ್ಲಂಘನೆಯ ಆರೋಪಗಳ ಮೇಲಿನ ತನಿಖೆಗೆ ಸಂಬಂಧಿಸಿ ಅಮೆರಿಕಾ ನಿಯಂತ್ರಣ ಮಂಡಳಿ ‘ಫೆಡರಲ್ ಟ್ರೇಡ್ ಕಮಿಷನ್’ (ಎಫ್.ಟಿ.ಸಿ) ಜೊತೆ ಫೇಸ್ ಬುಕ್‍ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಮೇರೆಗೆ ಎಪ್.ಟಿ.ಸಿಯಲ್ಲಿ ನಡೆದ ದಂಡ ಹಾಕಬೇಕೆ ಬೇಡವೇ ಎಂಬ ಮತ ಪ್ರಕ್ರಿಯೆಯಲ್ಲಿ 3-2 ಮತಗಳ ಅಂತರದಲ್ಲಿ ಅನುಮೋದನೆ ಲಭಿಸಿದೆ ಎಂದು ವಾಲ್‍ಸ್ಟ್ರೀಟ್ ಜರ್ನಲ್ ಈ ಕುರಿತು ಒಂದು ಲೇಖನ ಪ್ರಕಟಿಸಿದೆ.

ಈ ನಿಯಂತ್ರಣ ಮಂಡಳಿಯಲ್ಲಿ ಡೆಮಾಕ್ರಾಟ್ ಸದಸ್ಯರು ಒಪ್ಪಂದದ ಪ್ರತಿಪಾದವನ್ನು ವಿರೋಧಿಸಿದರೆ, ರಿಪಬ್ಲಿಕನ್ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಇನ್ನು ಈ ಒಪ್ಪಂದಕ್ಕೆ ಜಸ್ಟೀಸ್ ಡಿಪಾರ್ಟ್‍ಮೆಂಟ್ ಸಿವಿಲ್ ಡಿವಿಜನ್ ಅನುಮೋದನೆ ಮಾಡಬೇಕಿದೆ. ಅಮೆರಿಕಾದ ಅಧ್ಯಕ್ಷ ಚುನಾವಣೆಯ ಪ್ರಚಾರದಲ್ಲಿ ಡೋನಾಲ್ಡ್ ಟ್ರಂಪ್‍ಗಾಗಿ ಕೆಲಸ ಮಾಡಿದ ಕೇಂಬ್ರಿಡ್ಜ್ ಅನಲಿಟಿಕಾ ಎನ್ನುವ ಕಂಪೆನಿ ಕೋಟ್ಯಾಂತರ ಜನ ಫೇಸ್ ಬುಕ್‍ ಬಳಕೆದಾರರ ವಯಕ್ತಿಕ ಡೇಟಾವನ್ನು ತೆಗೆದುಕೊಂಡಿದೆ. ಈ ವಿಷಯ ಹೊರ ಬಿದ್ದದ್ದರಿಂದ 2011ರಲ್ಲಿ ಫೇಸ್ ಬುಕ್‍ ಜೊತೆ ಮಾಡಿಕೊಂಡಿದ್ದ ಖಾಸಗಿ ಒಪ್ಪಂದದ ಕೇಸನ್ನು ಮತ್ತೆ ತೆರೆಯಲಾಗಿದೆ. ಹಳೆಯ ಕೇಸಿನಲ್ಲಿ ತನಿಖೆಯನ್ನು ಪನಃ ಪ್ರಾರಂಭಿಸಿರುವುದಾಗಿ ಕಳೆದ ವರ್ಷವೇ ಎಫ್.ಟಿ.ಸಿ ಪ್ರಕಟಿಸಿದೆ.

ಜಗತ್ತಿನಾದ್ಯಂತ 200 ಕೋಟಿಗಳಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್‍, ಬಳಕೆದಾರರ ಮಾಹಿತಿಯ ಗೌಪ್ಯತೆಗೆ ಸಂಬಂಧಿಸಿ ಅಮೆರಿಕದ ಜೊತೆಗೆ ಜಗತ್ತಿನಾದ್ಯಂತ ಕೆಲವು ದೇಶಗಳ ನಿಯಂತ್ರಣ ಮಂಡಳಿಗಳಿಂದ ವಿಚಾರಣೆಯನ್ನು ಎದುರಿಸುತ್ತಿದೆ. ಈ ಕೇಸಿನಲ್ಲಿ ಕಂಪನಿಯ ಮೇಲೆ 300 ರಿಂದ 500 ಕೋಟಿ ಡಾಲರ್ ದಂಡ ಬೀಳಬಹುದೆಂದು ಮುಂಚೆಯೇ ಅಂದಾಜು ಮಾಡಿದೆ.

ಫೇಸ್ ಬುಕ್‍ ಕಳೆದ ವರ್ಷ 5,600 ಕೋಟಿ ಡಾಲರ್ ಲಾಭ ಗಳಿಸಿಕೊಂಡಿದೆ. ಈ ವರ್ಷದಲ್ಲಿ ಇದು 6,900 ಕೋಟಿ ಡಾಲರ್ ಬೆಳೆಯಬಹುದೆಂದು ಅಂದಾಜು. ಭಾರೀ ಲಾಭ ಗಳಿಸಿರುವ ಕಂಪನಿಗೆ ಈ ದಂಡ ದೊಡ್ಡ ಮೊತ್ತವೇನು ಅಲ್ಲ .., ಸಂಸ್ಥೆಯ ಜೊತೆ ಮತ್ತಷ್ಟು ಕಠಿಣವಾಗಿ ವ್ಯವಹರಿಸಬೇಕೆಂದು ಫೇಸ್ ಬುಕ್‍ ವಿಮರ್ಶಕರು ಹೇಳುತ್ತಿದ್ದಾರೆ. ಮುಖ್ಯವಾಗಿ ಬಳಕೆದಾರರ ವ್ಯಕ್ತಿಗತ ಮಾಹಿತಿಗೆ ಸಂಬಂಧಿಸಿದಂತೆ ಕಂಪನಿ ಮೇಲೆ ಕಠಿಣವಾದ ನಿರ್ಬಂಧಗಳನ್ನು ವಿಧಿಸಬೇಕೆಂದು ಹೇಳುತ್ತಿದ್ಧಾರೆ.

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಕೃಪೆ -ಆಂದ್ರಜ್ಯೋತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...