Homeರಾಜಕೀಯಬಿಜೆಪಿಯನ್ನು ಇಳಿಜಾರಿಗೆ ಕೊಂಡೊಯ್ಯುತ್ತಿರುವ ಮೋದಿಯವರ ಉದ್ದೇಶಪೂರ್ವಕ ಮೌನದ ಸರಣಿ

ಬಿಜೆಪಿಯನ್ನು ಇಳಿಜಾರಿಗೆ ಕೊಂಡೊಯ್ಯುತ್ತಿರುವ ಮೋದಿಯವರ ಉದ್ದೇಶಪೂರ್ವಕ ಮೌನದ ಸರಣಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಭಾಷಣಗಳನ್ನು ನೋಡಿದರೆ, ಒಂದಾನೊಂದು ಕಾಲದಲ್ಲಿ ಅವರಿಗೆ ಅತ್ಯಾಪ್ತವಾಗಿದ್ದ ಕೆಲವು ಸಂಗತಿಗಳ ಕುರಿತ ಮೌನ ಎದ್ದು ಕಾಣುತ್ತಿದೆ!
ಸಾಲುಗಟ್ಟಿ ಬರುತ್ತಿರುವ ಕೆಲವು ಪ್ರಮುಖ ರಾಜ್ಯಗಳ ಚುಣಾವಣೆಗಳು ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ತಮ್ಮ ನೆಚ್ಚಿನ ಕೆಲವು ವಿಷಯಗಳಿಂದ ಅಲಂಕೃತವಾದ ಭಾಷಣವನ್ನು ಅವರು ಹೆಚ್ಚೆಚ್ಚು ಮಾಡುತ್ತಿರುವಾಗಲೇ, ಈ ಹಿಂದೆ ಅವರಿಗೆ ಬಹಳ ಇಷ್ಟವಾಗಿದ್ದ ಇನ್ನೊಂದಷ್ಟು ವಿಷಯಗಳು ಮತ್ತು ಆಶ್ವಾಸನೆಗಳು ಅಲ್ಲೆಲ್ಲೂ ಪ್ರಸ್ತಾಪವೇ ಆಗದೆ, ಎದ್ದುಕಾಣುವ ಮೌನ ಯಾಕಿದೆ ಎಂಬ ಬಗ್ಗೆ ‘ದ ಪ್ರಿಂಟ್’ ಒಂದು ವಿಸ್ತಾರವಾದ ವಿಶ್ಲೇಷಣೆ ನಡೆಸಿದೆ.

ನೋಟು ರದ್ದತಿ
ನರೇಂದ್ರ ಮೋದಿಯವರ ಭಾಷಣಗಳಲ್ಲೆಲ್ಲ ದೊಡ್ಡಮಟ್ಟದಲ್ಲಿ ಕಾಣೆಯಾಗಿರುವುದು, ಒಂದು ಹಂತದಲ್ಲಿ ಅವರು ತಮ್ಮ ರಾಜಕೀಯದ ಮಾಸ್ಟರ್ ಸ್ಟ್ರೋಕ್ ಎಂದೇ ಭಾವಿಸಿದ್ದ ‘ನೋಟು ರದ್ದತಿ’ಯ ವಿಚಾರ.
ನವೆಂಬರ್ 8, 2016ರಂದು ಮೋದಿ ಘೋಷಿಸಿದ ಈ ಕ್ರಮದ ಮೂಲಕ ಕಪ್ಪುಹಣದ ಜಾಲವನ್ನು ಆಮೂಲಾಗ್ರವಾಗಿ ಕಿತ್ತೆಸೆಯುವುದಾಗಿ

500 and 1000 rupee old notes.

ಘೋಷಿಸಲಾಗಿತ್ತು. ಈ ನಡೆಯನ್ನು ಪ್ರಧಾನಿಯವರು ತನ್ನ ಶಕ್ತಿಶಾಲಿ ನಾಯಕತ್ವ ಕೌಶಲ್ಯ ಹಾಗೂ ವ್ಯವಸ್ಥೆಯನ್ನು ಶುದ್ಧಗೊಳಿಸುವ ತನ್ನ ದೃಢನಿರ್ಧಾರದ ಬಗ್ಗೆ ಮತದಾರರನ್ನು ಒಪ್ಪಿಸಬಹುದಾದ ತಂತ್ರವೆಂದು ಭಾವಿಸಿದ್ದರು. ಹಾಗೆಯೇ, 2017ರಲ್ಲಿ ಉತ್ತರ ಪ್ರದೇಶ ಚುನಾವಣಾ ಪ್ರಚಾರದುದ್ದಕ್ಕೂ ಅವರ ಭಾಷಣದಲ್ಲಿ ನೋಟು ರದ್ಧತಿಯ ನಿರ್ಧಾರ ಪ್ರಧಾನವಾಗಿ ಕಾಣಿಸಿಕೊಂಡಿತ್ತು. ಆ ಚುಣಾವಣೆಯಲ್ಲಿ ದೊರೆತ ಭಾರೀ ಜನಾದೇಶ ಈ ವಿಚಾರದಲ್ಲಿ ಅವರ ಪಕ್ಷಕ್ಕೆ ಹೊಸ ವಿಶ್ವಾಸವನ್ನೂ ಕೊಟ್ಟಿತ್ತು.
2017ರ ಸ್ವಾತಂತ್ರ್ಯ ದಿನದಂದು ಮೋದಿಯವರು “ನೋಟು ರದ್ಧತಿಯ ನಿರ್ಧಾರ ಘೋಷಿಸಿದಾಗ ಜಗತ್ತು ಇದು ಮೋದಿಯ ಅಂತ್ಯ ಎಂದು ಭಾವಿಸಿತ್ತು. ಆದರೆ, ನನ್ನ 125 ಕೋಟಿ ದೇಶವಾಸಿಗಳು ಹೇಗೆ ಇದರ ಬೆನ್ನಿಗೆ ನಿಂತರೆಂದರೆ, ಒಂದೊಂದೇ ಹೆಜ್ಜೆಯಿಡುತ್ತಾ ನಾವು ಗುರಿಯ ಕಡೆಗೆ ನಡೆಯಲು ಸಾಧ್ಯವಾಗುತ್ತಿದೆ” ಎಂದು ಹೇಳಿದರು. ಕಳೆದ ನವೆಂಬರ್‍ನಲ್ಲಿ ಅವರ ಒಂದು ಟ್ವೀಟ್‍ನಲ್ಲಿ “125 ಕೋಟಿ ಭಾರತೀಯರು ಒಂದು ನಿರ್ಣಾಯಕ ಯುದ್ಧವನ್ನು ನಡೆಸಿದರು ಹಾಗೂ ಗೆದ್ದರು. #ಕಪ್ಪುಹಣ ವಿರೋಧಿ ದಿನ” ಎಂದು ಹೇಳಲಾಯಿತು.
ಗುಜರಾತಿನ ಚುನಾವಣೆಯ ಸಂದರ್ಭದಲ್ಲಿ ಆಗೀಗೊಮ್ಮೆ ನೋಟು ರದ್ಧತಿಯನ್ನು ಪ್ರಸ್ತಾಪಿಸಿದರೂ, “ಯಾರು ಕಪ್ಪು ಹಣ ಹೊಂದಿದ್ದು ಕಳೆದುಕೊಂಡಿದ್ದಾರೋ ಅವರು ಮಾತ್ರ ದೂರುತ್ತಿದ್ದಾರೆ” ಎಂಬಂತಹ ಮಾತುಗಳಲ್ಲಿ ತೆಳುವಾಗಿತ್ತು
ನಿಧಾನವಾಗಿ ಯಾವಾಗ ಜಿಎಸ್‍ಟಿಯ ಪರಿಣಾಮಗಳೂ ಸೇರಿದಂತೆ ಒಟ್ಟಾರೆ ದೇಶದ ಆರ್ಥಿಕತೆಗೆ ಬಿದ್ದಿರುವ ಭಾರೀ ಏಟಿನ ಅಂದಾಜಾಗತೊಡಗಿತೋ, ನೋಟು ರದ್ದತಿ ಮತ್ತು ಜಿಎಸ್‍ಟಿಯ ಚರ್ಚೆ ಹೆಚ್ಚು ಕಡಿಮೆ ನಿಂತೇ ಹೋಯಿತು. ಈ ನಡೆಗಳ ಮೂಲಕ ಘೋಷಿಸಲಾಗಿದ್ದ ಕಪ್ಪು ಹಣದ ನಿವಾರಣೆ, ಶುದ್ಧೀಕರಣದಂತಹ ಒಳ್ಳೆಯ ಪರಿಣಾಮಗಳ್ಯಾವುವೂ ಆಗಲಿಲ್ಲ, ಬದಲಿಗೆ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಷ್ಟೇ ಹೆಚ್ಚಾದವು ಎಂಬುದು ಸ್ಪಷ್ಟವಾದಂತೆ ಈ ಬಗ್ಗೆ ಮೌನ ಕಾಣತೊಡಗಿತು.

ಮಾದರಿ ಗ್ರಾಮ ಯೋಜನೆ
ಮೋದಿಯವರು ಪ್ರಚಾರಕ್ಕೆ ತರಲು ಪ್ರಯತ್ನಿಸಿದ ಮತ್ತೊಂದು ಯೋಜನೆ ‘ಸಂಸದ್ ಆದರ್ಶ ಗ್ರಾಮ ಯೋಜನೆ’. 2014ರ ಮೊದಲ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲೇ ಘೋಷಿಸಲ್ಪಟ್ಟು ನಂತರ ಭಾರೀ ಪ್ರಚಾರದ ನಡುವೆ ಉದ್ಘಾಟಿಸಲ್ಪಟ್ಟ ಯೋಜನೆ ಇದು. ಇದರ ಪ್ರಕಾರ ಎಲ್ಲಾ ಸಂಸದರೂ (ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು) 2014ರಲ್ಲಿ ತಮ್ಮ ಕ್ಷೇತ್ರದ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಸಾಧಿಸಬೇಕು. ಹಾಗೆಯೇ ನಂತರ 2019ರೊಳಗೆ ಇನ್ನೂ ಎರಡು ಗ್ರಾಮಗಳನ್ನು ಅಭಿವೃದ್ಧಿ ಮಾಡಬೇಕು. ಇದಕ್ಕಾಗಿ ಅವರು ತಮ್ಮ ಸಂಸದರ ನಿಧಿಯನ್ನು ವಿನಿಯೋಗಿಸಬೇಕು-ಇದು ಯೋಜನೆಯ ಸ್ವರೂಪ.
ಆದರೆ, ಬಿಜೆಪಿ ಪಕ್ಷದವರೇ ಆದ ಅನೇಕ ಹಿರಿಯ ಸಂಸದರಿಂದ ಮೊದಲ್ಗೊಂಡು ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ಯೋಜನೆಗೆಂದು ಸಂಸದರಿಗೆ ಹೆಚ್ಚಿನ ನಿಧಿಯ ನೆರವಿಲ್ಲದೆ ಹಾಗೂ ಈ ಹೆಚ್ಚುವರಿ ಹೊರೆ ತೆಗೆದುಕೊಳ್ಳಲು ಬಯಸದೆ, ಅನೇಕ ಸಂಸದರು ಇದನ್ನು ಜಾರಿ ಮಾಡುವ ಗೋಜಿಗೇ ಹೋಗಲಿಲ್ಲ. ಈವರೆಗೆ ಮೂರು ಹಂತಗಳನ್ನು ಈ ಯೋಜನೆ ಪೂರೈಸಿದ್ದರೂ ಕೂಡಾ, ಆದರ್ಶ ಗ್ರಾಮಗಳಾಗಿಸಲು ಹಳ್ಳಿಗಳನ್ನು ದತ್ತು ಪಡೆದ ಸಂಸದರ ಸಂಖ್ಯೆ 543 ಲೋಕಸಭಾ ಸದಸ್ಯರಲ್ಲಿ ಕೇವಲ 163 ಹಾಗೂ 245 ರಾಜ್ಯ ಸಭಾ ಸದಸ್ಯರಲ್ಲಿ ಕೇವಲ 40 ಮಂದಿ ಮಾತ್ರ! ಅದರಲ್ಲೂ ವರ್ಷದಿಂದ ವರ್ಷಕ್ಕೆ ಇಳಿಕೆಯೇ ಕಂಡುಬರುತ್ತಿದೆ!!
ಯಾವಾಗ ಈ ಯೋಜನೆಯ ಕತೆ ಅರಿವಾಗತೊಡಗಿತೋ, ಮೋದಿಯವರ ಭಾಷಣಗಳಲ್ಲಿ ಇದರ ಪ್ರಸ್ತಾಪ ಇಲ್ಲವಾಯಿತು.

ಶುದ್ಧ ಗಂಗಾ ಯೋಜನೆ
ಈ ಸರ್ಕಾರದ ಮತ್ತೊಂದು ಅಚ್ಚುಮೆಚ್ಚಿನ ಯೋಜನೆ ‘ಕ್ಲೀನ್ ಗಂಗಾ ಮಿಷನ್’ (ಶುದ್ಧ ಗಂಗಾ ಯೋಜನೆ). ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ಈ ಮಿಷನ್‍ಗೆಂದೇ ‘ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನಾ ಘಟಕ’ ಎಂಬ ಪ್ರತ್ಯೇಕ ವಿಭಾಗವನ್ನೇ ತೆಗೆಯಲಾಯಿತು.
ಹಿಂದೂ ಧರ್ಮದ ಪವಿತ್ರ ನದಿಯೆಂದು ಹೆಸರಾಗಿರುವ ಗಂಗೆಯನ್ನು ಶುದ್ಧೀಕರಿಸುವುದು ತಮ್ಮ ಪಕ್ಷದ ರಾಜಕೀಯ ಅಜೆಂಡಾದ ಜೊತೆಗೂ ಸರಿಯಾಗಿ ಹೊಂದುವುದರಿಂದ ಈ ಮಿಷನ್‍ನ್ನು ಸಾಕಷ್ಟು ವೈಭವೀಕರಿಸಿಯೇ ಪ್ರಚಾರಕ್ಕೆ ತರಲಾಯಿತು. ಗುರಿಗಳು ಗೊತ್ತಾದವು; ಆದರೆ ಪ್ರಗತಿ ಎಲ್ಲಿಗೆ ಬಂತೆಂಬುದು ಗೊತ್ತಾಗಲೇ ಇಲ್ಲ. ಗಂಗೆಯ ಕೊಳೆಯನ್ನು ಅಳಿಸಲಾಗಲಿಲ್ಲ, ಕೇವಲ ಈ ಯೋಜನೆಯ ಪ್ರಸ್ತಾಪ ಮಾತ್ರ ಪ್ರಧಾನಿಯವರ ಭಾಷಣದಿಂದ ಅಳಿಸ್ಪಟ್ಟಿತು!

ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ
ಇದು ಪದೇ ಪದೇ ಹೇಳಲಾದ, ಬಹಳಷ್ಟು ಪ್ರಚಾರ ಕೊಡಲಾದ ಚುನಾವಣಾ ಪೂರ್ವದ ಒಂದು ಆಶ್ವಾಸನೆ.
2014ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ವಿದೇಶೀ ಬ್ಯಾಂಕುಗಳಲ್ಲಿ ಅಡಗಿಸಿಡಲಾಗಿರುವ ಭಾರತೀಯರ ಕಪ್ಪುಹಣವನ್ನು ಹೊರತೆಗೆಸಿ ದೇಶಕ್ಕೆ ವಾಪಾಸ್ ತರುವುದರಿಂದ ಕುಳಿತಲ್ಲೇ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಣ ಬಂದು ಬೀಳುವುದಾಗಿ ದೊಡ್ಡಮಟ್ಟದ ಆಶ್ವಾಸನೆಯನ್ನು ಬಿಜೆಪಿ ನೀಡಿತ್ತು. ಮೋದಿಯವರ ಚುನಾವಣಾ ಭಾಷಣದ ಈ ಸಂಗತಿಯನ್ನು ಅಧಿಕಾರಕ್ಕೆ ಬಂದಮೇಲೆ ಹೆಚ್ಚೂಕಡಿಮೆ ಸಂಪೂರ್ಣವಾಗಿ ಮರೆತೇಬಿಟ್ಟಂತೆ ಕಾಣುತ್ತದೆ. ಆದರೆ, ವಿರೋಧಪಕ್ಷಗಳು ಮತ್ತು ಜನರು ಇದನ್ನು ಇನ್ನೂ ಮರೆತಂತಿಲ್ಲ.

2 ಕೋಟಿ ಉದ್ಯೋಗ
ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮೋದಿ ಘೋಷಣೆಯಾದ ನಂತರ ಆಗ್ರಾದಲ್ಲಿ ನಡೆದ ಶಂಖಾನಾದ್ ರ್ಯಾಲಿಯಲ್ಲಿ ಮಾಡಿದ ಘೋಷಣೆ ಇದು. ಆ ನಂತರವೂ ಯುವಜನರಿಗೆ ಉದ್ಯೋಗವಿಲ್ಲ; ಅವರ ಆಸಕ್ತಿಗೆ ತಕ್ಕ ಉದ್ಯೋಗವಿಲ್ಲ ಎಂದು ಮೋದಿ ಹೇಳಿದ್ದು ಮಾತ್ರವಲ್ಲದೇ, ಯುಪಿಎ ಯೋಜನೆಗಳ ರೀಪ್ಯಾಕೇಜಿಂಗ್ ಭಾಗವಾಗಿ ‘ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ’ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದರು. ಆದರೆ, ಅವರ ಸರ್ಕಾರವೇ ನೇಮಿಸಿದ ಶಾರದಾಪ್ರಸಾದ್ ಸಮಿತಿ ಈ ‘ಕೌಶಲ್ಯ ತರಬೇತಿ’ಯನ್ನು ಅಣಕವೆಂದು ಕರೆಯಿತು. ಯುವಜನರ ಸಾಮಥ್ರ್ಯಕ್ಕೆ ತಕ್ಕ ಉದ್ಯೋಗದ ಮಾತಾಡಿದ್ದ ಮೋದಿ, ಪಕೋಡಾ ಮಾರಿ ದಿನಕ್ಕೆ 200 ರೂ ಸಂಪಾದಿಸಬಹುದಲ್ಲವೇ ಎಂದು ಹೇಳಿ ಇಕ್ಕಟ್ಟಿಗೆ ಸಿಕ್ಕಿಕೊಂಡರು.
ಅದನ್ನು ಸರಿ ಮಾಡಿಕೊಳ್ಳಲಿಕ್ಕಾಗಿ ಉದ್ಯೋಗಗಳ ಕೊರತೆ ಇಲ್ಲ; ಅದರ ಕುರಿತ ಅಂಕಿಅಂಶದ ಕೊರತೆ ಅಷ್ಟೇ ಇದೆ ಎಂದು ಹೇಳಿ, ಅಂಕಿ-ಅಂಶದ ಉತ್ಪಾದನೆಗೆ ಆದೇಶಿಸಿದರು. ಅಂಕಿ-ಅಂಶದ ಕುರಿತು ಅವರಿಗೇ ನಂಬಿಕೆ ಬಂದಿಲ್ಲವಾದ್ದರಿಂದ, ತಾವೇ ಅದನ್ನು ಹೇಳದೇ ಮೌನ ವಹಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಜಾಹೀರಾತುಗಳು ಮಾತ್ರ ಬರುತ್ತಿರುತ್ತವೆ.

ಬುಲೆಟ್ ರೈಲು
ಅಧಿಕಾರಕ್ಕೆ ಬಂದ ಕೂಡಲೇ ಭಾರೀ ಸುದ್ದಿ ಸದ್ದು ಮಾಡಿದ ಬುಲೆಟ್ ರೈಲು ಕೂಡಾ ಯಾಕೋ ಮೋದಿಯವರ ಪಾಲಿಗೆ ಹಳಿಯಿಲ್ಲದೆ ರೈಲು ಓಡಿಸಿದಂತಾಗುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಮುಂಬೈ ಅಹಮದಾಬಾದ್ ನಡುವೆ ಸಂಚರಿಸಬೇಕಿದ್ದ, ಭಾರತ-ಜಪಾನ್ ಸಹಭಾಗಿತ್ವದಲ್ಲಿ ಸಿದ್ಧಗೊಳ್ಳಲಿದ್ದ ಬುಲೆಟ್ ರೈಲಿನ ಪ್ರಗತಿ ಸಕಾರಣವಾಗಿಯೇ ನಿಲುಗಡೆಗೊಂಡಿದೆ. ಭಾರತದ ದೊಡ್ಡ ಸಂಖ್ಯೆಯ ಜನರಿಗೆ ಹತ್ತಿರಾಗಬೇಕೆಂಬ ಅಪಾರವಾದ ಆತುರದಲ್ಲಿ ಕಾನೂನುಬದ್ಧವಾದ ಪ್ರಕ್ರಿಯೆಗಳನ್ನೆಲ್ಲ ಗಾಳಿಗೆ ತೂರಿ ಹಿಂಬಾಗಿಲಿನಿಂದ ಜಾರಿಗೊಳಿಸಲು ಪ್ರಧಾನಿಯವರು ಬಯಸಿದ್ದ ಈ ಯೋಜನೆ ಅಷ್ಟು ಕಾರ್ಯಸಾಧುವಲ್ಲ ಎಂಬುದು ಜಗತ್ತಿಗೆ ತಿಳಿಯುತ್ತಿದೆ. ಅಷ್ಟೇ ಅಲ್ಲದೆ ಕೆಲವಾದರೂ ಮಾಧ್ಯಮಗಳು ಈ ಯೋಜನೆಯ ಅಪಾರ ವೆಚ್ಚ ಮತ್ತು ಕಡಿಮೆ ಪ್ರಯೋಜನದ ಸಂಗತಿಯನ್ನು ಹೊರಗೆಡಹಲಾರಂಭಿಸಿದಂತೆ ಪಕ್ಷದೊಳಗೂ ಹೊರಗೂ ವಿರೋಧ ಎದುರಾಗಿದೆ.
ಎಲ್ಲಕ್ಕೂ ಮುಖ್ಯವಾಗಿ, ಈ ರೈಲು ಸಂಚರಿಸಬೇಕಿದ್ದ ಮಾರ್ಗದುದ್ದಕ್ಕೂ ಯಾವ ರೈತರಿಂದ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿತ್ತೋ ಅವರ ನ್ಯಾಯಬದ್ಧ ಪರಿಹಾರದ ವಿಚಾರವನ್ನು ಸಂಪೂರ್ಣ ಕಡೆಗಣಿಸಿದ್ದ ಸರ್ಕಾರದ ನಿಲುವನ್ನು ತಿಳಿದ ಜಪಾನ್ ಕಂಪೆನಿ ಇದನ್ನು ಸರಿಪಡಿಸಿದ ನಂತರವಷ್ಟೇ ಯೋಜನೆ ಮುಂದುವರೆಸುವುದಾಗಿ ಹೇಳಿ ತಾತ್ಕಾಲಿಕ ನಿಲುಗಡೆ ಘೋಷಿಸಿದೆ. ಇದು ತಮ್ಮ ಪ್ರತಿಷ್ಠೆಯ ಯೋಜನೆಗೆ ಬಿದ್ದ ಭಾರೀ ಹೊಡೆತವೆಂಬ ಕಾರಣಕ್ಕೆ, ಈ ಹಿಂದೆ ಆಗಾಗ್ಗೆ ಪ್ರಧಾನಿಯವರ ಮಾತುಗಳಲ್ಲಿ ಕೇಳುತ್ತಿದ್ದ ಬುಲೆಟ್ ರೈಲಿನ ಸದ್ದು ಈಗ ನಿಶ್ಶಬ್ದವಾಗಿದೆ.

ಕೈಹಿಡಿಯದ ನೀತಿ ಬದಲಾವಣೆಗಳು:
ಭೂಸ್ವಾಧೀನ ಕಾಯ್ದೆ: ಮೋದಿಯವರು ಅಧಿಕಾರಕ್ಕೆ ಬಂದಾಕ್ಷಣ ತರಲು ಪ್ರಯತ್ನಿಸಿದ ಕೆಲವು ನೀತಿ ಬದಲಾವಣೆಗಳಲ್ಲಿ 2011ರಲ್ಲಿ ಯುಪಿಎ ಸರ್ಕಾರ ತಂದಿದ್ದ ರೈತಪರ ‘ಭೂಸ್ವಾಧೀನ ಕಾಯ್ದೆ’ಯನ್ನು ಬದಲಿಸಿ ಕಾರ್ಪೊರೇಟ್ ಪರವಾದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದು ಎಲ್ಲರಿಗೂ ನೆನಪಿಸಬಹುದು. ಆದರೆ, ಈ ಬದಲಾವಣೆಗೆ ದೇಶಾದ್ಯಂತ ಅದೆಂತಹ ಭಾರೀ ಪ್ರತಿರೋಧ ಬಂತೆಂದರೆ ಸುಗ್ರೀವಾಜ್ಞೆಯನ್ನೇ ತಂದರೂ ಕೂಡಾ, ರೈತರ ವಿರೋಧ ಕಟ್ಟಿಕೊಂಡು ಕಾನೂನು ತಿದ್ದುಪಡಿ ಮಾಡಲು ಬಿಜೆಪಿಗೆ ಧೈರ್ಯ ಬರಲಿಲ್ಲ. ಅದೇ ಸಮಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದು ‘ಸೂಟು ಬೂಟಿನ ಸರ್ಕಾರ’ ಎಂದು ಟೀಕಿಸಿದ ಮಾತಿಗೆ ಬೆಂಬಲ ದೊರೆಯಲಾರಂಭಿಸಿದಂತೆ ಬೇಷರತ್ತಾಗಿ ಭೂಸ್ವಾಧೀನ ಕಾಯ್ದೆಯ ತಿದ್ದುಪಡಿಯನ್ನು ಹಿಂಪಡೆಯಲಾಗಿದೆ.

ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿಗಳು
ಇದೂ ಕೂಡಾ ದೇಶಾದ್ಯಂತ ಕಾರ್ಮಿಕ ವರ್ಗದ ವಿರೋಧಕ್ಕೆ ಕಾರಣವಾದ ಬೆಳವಣಿಗೆಯಾಯಿತು. ಎಷ್ಟರ ಮಟ್ಟಿಗೆ ಕಾರ್ಮಿಕ ಸಮುದಾಯ ತಮ್ಮ ಪರವಾಗಿದ್ದ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡುವುದನ್ನು ವಿರೋಧಿಸಿತೆಂದರೆ, ಕಳೆದ ವರ್ಷ ಎಲ್ಲ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆಕೊಟ್ಟಿದ್ದ ರಾಷ್ಟ್ರವ್ಯಾಪಿ ಬಂದ್‍ಗೆ, ಬಿಜೆಪಿಯ ಕಾರ್ಮಿಕ ಸಂಘಟನೆಯಾದ ಬಿಎಂಎಸ್ ಕೂಡಾ ಕಾರ್ಮಿಕರ ಒತ್ತಡದ ಪರಿಣಾಮವಾಗಿ ಬೆಂಬಲ ಸೂಚಿಸಬೇಕಾಗಿ ಬಂತು.

ವಿದೇಶೀ ನೀತಿ
ಭಾರತದ ವಿದೇಶೀ ನೀತಿಯ ವಿಚಾರಕ್ಕೆ ಬಂದರೆ, ಬಲೂಚಿಸ್ಥಾನದ ವಿಚಾರ ಯಾಕೋ ಮೋದಿಯವರಿಗೆ ಒಗ್ಗಿದಂತೆ ಕಾಣುವುದಿಲ್ಲ. ತನ್ನ ‘ಸರ್ಕಾರದ’ ಸಾಧನೆಗಳ ಪಟ್ಟಿಯಲ್ಲಿ ಬಲೂಚಿಸ್ಥಾನದ ವಿಚಾರದಲ್ಲಿ ತಾವು ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಿದೆವು ನೋಡಿ ಎಂದು ಹೇಳಿಕೊಳ್ಳುವುದು ಅವರಿಗೆ ಬಹಳ ಇಷ್ಟದ ಸಂಗತಿಯಾಗಿತ್ತು. 2016ರ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸುತ್ತಾ, ಪಾಕ್, ಕಾಶ್ಮೀರ ಮತ್ತು ಬಲೂಚಿಸ್ಥಾನದ ಜನರು ಈ ಧೀರನಡೆಗಾಗಿ ತಮ್ಮನ್ನು ಅಭಿನಂದಿಸುತ್ತಿದ್ದಾರೆಂದು ಹೇಳಿಕೊಂಡಿದ್ದರು. ಯುಪಿಎ ಅವಧಿಯಲ್ಲಿ ಪಾಕ್-ಭಾರತ ಜಂಟಿ ಹೇಳಿಕೆಯೊಂದರಲ್ಲಿ ಬಲೂಚಿಸ್ಥಾನವನ್ನು ಹೆಸರಿಸಿದ ಸರಿಯಾಗಿ 7 ವರ್ಷಗಳ ನಂತರ ಈ ವಿಚಾರ ಮತ್ತೆ ಚರ್ಚೆಗೆ ಬಂತು. ಆದರೆ, ತಮ್ಮ ಹೆಮ್ಮೆಯೆಂದು ಅವರು ಹೇಳಿಕೊಂಡ ವಿಚಾರ ಭಾರೀ ವಿವಾದವಾಗಿ ಪರಿಣಮಿಸಿದ ನಂತರ ಮತ್ತೆಂದೂ ಆ ಬಗ್ಗೆ ಮೋದಿಯವರು ಮಾತನಾಡಿದ್ದು ಕಂಡಿಲ್ಲ!
ಈ ವಿಷಯಗಳ ಬಗ್ಗೆ ಮಾತನಾಡಲು ಪ್ರಧಾನಿಗಳಿಗೆ ಈ ಹಿಂದೆ ಇದ್ದ ಉತ್ಸಾಹ ಈಗ ಸಂಪೂರ್ಣ ಇಂಗಿದಂತೆ ಕಾಣುತ್ತದೆ.
ದಲಿತ-ಅಲ್ಪಸಂಖ್ಯಾತರು ಮತ್ತು ಪತ್ರಕರ್ತರ ಮೇಲಿನ ದಾಳಿಯ ಕುರಿತು ಸಂಪೂರ್ಣ ಮೌನ
ಇದಂತೂ ಮೋದಿಯವರ ವಿರೋಧಿಗಳು ಪದೇ ಪದೇ ಕೆದಕಿ ಕೇಳಿದ ಪ್ರಶ್ನೆಗಳು. ಅಖ್ಲಾಕ್, ರೋಹಿತ್ ವೇಮುಲ, ಪೆಹ್ಲೂಖಾನ್, ಜುನೈದ್, ಗೌರಿ ಲಂಕೇಶ್ ಹಾಗೂ ಇನ್ನೂ ಹಲವರ ಹತ್ಯೆಗಳ ಸಂದರ್ಭದಲ್ಲಿ ಮೋದಿಯವರ ಮನ್‍ಕೀ ಬಾತ್ ಹೊರಬರಲೇ ಇಲ್ಲ. 9 ರಾಜ್ಯಗಳಲ್ಲಿ ನಡೆದ 27 ಗುಂಪು ಹತ್ಯೆಯ ಕುರಿತೂ ಪ್ರಧಾನಿ ಮಾತಾಡಲೇ ಇಲ್ಲ. ಸಬ್‍ಕಾ ಸಾತ್ ಸಬ್‍ಕಾ ವಿಕಾಸ್ ಎಂಬುದು ಧೋಕಾ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಿರಲಿಲ್ಲ. ಗೌರಿ ಲಂಕೇಶರ ಹತ್ಯೆಯನ್ನು ಸಂಭ್ರಮಿಸದವನನ್ನು ಮೋದಿಯವರು ಟ್ವಿಟ್ಟರ್‍ನಲ್ಲಿ ಫಾಲೋ ಮಾಡುತ್ತಿದ್ದರು!

ಮೋದಿಯವರ ಇತ್ತೀಚಿನ ಇಷ್ಟಗಳು
ಈಗೆಲ್ಲ ಅವರಿಗೆ ತಮ್ಮ ಕಲ್ಯಾಣರಾಜ್ಯದ ಪರವಾದ ಯೋಜೆನಗಳ ಬಗ್ಗೆ ಹೇಳಿಕೊಳ್ಳುವುದು ಹೆಚ್ಚು ಪ್ರಿಯವಾದಂತೆ ಕಾಣುತ್ತದೆ. ಅದರಲ್ಲೂ ಹೆಚ್ಚು ನಿರೀಕ್ಷೆ ಹುಟ್ಟುವಂತೆ ಮಾಧ್ಯಮಗಳಿಂದ ಅಬ್ಬರದ ಪ್ರಚಾರ ಪಡೆದಿದ್ದ ಮುದ್ರಾ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಮೊದಲಾದವುಗಳ ಬದಲಿಗೆ, ಆಯುಷ್ಮಾನ್ ಭಾರತ, ಸೌಭಾಗ್ಯದಂತಹ ಹೆಚ್ಚು ಪ್ರಚಾರಕ್ಕೆ ಬರದಿದ್ದ ಯೋಜನೆಗಳು ತಮ್ಮ ಹೆಗ್ಗಳಿಕೆಯೆಂದು ಹೇಳಿಕೊಳ್ಳಲಾಗುತ್ತಿದೆ.
ಇದರೊಂದಿಗೆ ಇತ್ತೀಚೆಗೆ ಮೋದಿಯವರಿಗೆ ಪ್ರಿಯವಾದ ಮತ್ತೊಂದು ಸಂಗತಿ ಅಂಬೇಡ್ಕರ್‍ರವರನ್ನು ಆವಾಹಿಸಿಕೊಂಡು ಮಾತಾಡುವುದು! ದಲಿತ ದಮನಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಉದ್ದೇಶ ಬಿಟ್ಟರೆ ಬೇರೆ ಇನ್ಯಾವ ಉದ್ದೇಶ ಇದರ ಹಿಂದಿರಲು ಸಾಧ್ಯ?? ಹಾಗೆಯೇ ಟ್ರಿಪಲ್ ತಲಾಖ್ ವಿಚಾರದಲ್ಲಿ ತಮ್ಮ ‘ನ್ಯಾಯಪರತೆ’ಯನ್ನು ಮತ್ತೆ ಮತ್ತೆ ಹೇಳಿಕೊಂಡು ಓಡಾಡುವುದರಲ್ಲಿ ಪ್ರಧಾನಿಗಳು ಹಾಗೂ ಅವರ ನಿಷ್ಠ ಅನುಯಾಯಿಗಳಾದ ಸಂಬಿತ್ ಬಾತ್ರಾನಂತಹವರು ಹಿಂದೆ ಬಿದ್ದಿಲ್ಲ.
ಅದೇನೇ ಇದ್ದರೂ ಯಾವ ವಿಷಯಗಳಲ್ಲಿ ಮೌನವಾಗಿರುವುದು ಅವರ ಆಯ್ಕೆಯಾಗಿದೆ ಎಂಬುದನ್ನು ಪ್ರಜ್ಞಾವಂತ ಭಾರತ ಗಮನಿಸುತ್ತದೆ. ಹಾಗೆಯೇ ಭಾರೀ ಸಾಧನೆಯೆಂದು ಕೊಚ್ಚಿಕೊಳ್ಳಲಾಗಿದ್ದ ಯೋಜನೆಗಳೆಲ್ಲಾ ಫ್ಲಾಪ್ ಎಂಬುದು ಎಲ್ಲರ ಅರಿವಿಗೂ ಬರುತ್ತಿದೆ. ಹಾಗಾಗಿ ಇನ್ನೂ ಹೊಸ ಹೊಸ (?ಅಪಾಯಕಾರಿ) ವಿಷಯಗಳ ಕಡೆಗೆ ಹೋಗದೇ ಅವರಿಗೆ ಬೇರೆ ದಾರಿ ಇದ್ದಂತೆ ಕಾಣುವುದಿಲ್ಲ.

ಆಧಾರ: ‘ದ ಪ್ರಿಂಟ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...