Homeರಾಜಕೀಯಫೋಟೊ ಶೂಟ್ ಪಾಲಿಸಿ

ಫೋಟೊ ಶೂಟ್ ಪಾಲಿಸಿ

- Advertisement -
- Advertisement -

ಇದು ವಿಲಕ್ಷಣವಾದುದು, ಆದರೆ ವಾಸ್ತವ. ನರೇಂದ್ರ ಮೋದಿಯವರ ಬೆಂಬಲಿಗರು ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಗೇ ಓಟು ಹಾಕುತ್ತೇವೆನ್ನುತ್ತಿರುವ ಜನರಿಗೆಮೋದಿಯವರ ಸಾಧನೆ ಏನು ಹೇಳಿ ಎನ್ನುವ ಸರಳ ಪ್ರಶ್ನೆಗೆ ಉತ್ತರ ಕೊಡಲಾರದವರಾಗಿದ್ದಾರೆ.
ಉದ್ಯೋಗ ಸೃಷ್ಟಿ? ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ಸು ತರುವುದು? ನೋಟು ರದ್ದತಿ? ಜಿ.ಎಸ್.ಟಿ? ಸಾಲ ಮರುಪಾವತಿ ಮಾಡದಿರುವವರನ್ನು ಜೈಲಿಗೆ ತಳ್ಳುವುದು? ರಾಮ ಮಂದಿರ ನಿರ್ಮಾಣ? ಕೋಮು ಸಾಮರಸ್ಯದ ಖಾತ್ರಿ? ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರುವುದು? ತೈಲ ಬೆಲೆಯನ್ನು ನಿಯಂತ್ರಣದಲ್ಲಿ ಇಡುವುದು? ಭಾರತದ ರೂಪಾಯಿಯನ್ನು ಶಕ್ತಗೊಳಿಸುವುದು? ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು? ಕೃಷಿ ಆದಾಯವನ್ನು ದುಪ್ಪಟ್ಟು ಗೊಳಿಸುವುದು? ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು? ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸೌಲಭ್ಯವನ್ನು ಹಳ್ಳಿಗಳಿಗೂ ವಿಸ್ತರಿಸುವುದು? ಭಾರತವನ್ನು ಬಯಲು ಶೌಚದಿಂದ ಮುಕ್ತಗೊಳಿಸುವುದು?
ಇಲ್ಲ ಯಾವುದೊಂದೂ ಆಗಿಲ್ಲ. ಇಲ್ಲಿಯವರೆಗೂ ಅವರು ಹೇಳುತ್ತಿದ್ದದ್ದು ‘ಮೋದಿ ಉನ್ನತ ಮಟ್ಟದಲ್ಲಿದ್ದ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಿದ್ದಾರೆ ಎಂದು. ಆದರೆ ಈ ರಫೇಲ್ ಹಗರಣದ ನಂತರ ಬಿಜೆಪಿಯ ಈ ‘ಸಾಧನೆ’ಯನ್ನೂ ಹೇಳಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿಯ ‘ಸಂವಹನ ಪಟು’ಗಳೇ ಹೇಳುತ್ತಿದ್ದಾರೆ.
ಮೋದಿಯನ್ನು ಬಿಟ್ಟರೆ ಪ್ರಧಾನಿ ಪಟ್ಟಕ್ಕೆ ಬೇರೆ ಆಯ್ಕೆಗಳೇ ಇಲ್ಲ ಎಂಬುದು ಮೋದಿ ಬೆಂಬಲಿಗರ ಹೇಳಿಕೆ.ಸರಿ ಕಣಪ್ಪಾ, ಆದರೆ ಮೋದಿ ಸಾಧಿಸಿದ್ದಾದರೂ ಏನು? ಹೇಳಿಕೊಳ್ಳುವಂಥಾದ್ದು ಒಂದಾದರೂ ಇದೆಯೇ? ಮತ್ತೆ ಮತ್ತೆ ಪ್ರಶ್ನಿಸಿದರೆ ಬರುವ ಉತ್ತರ: ಮೋದಿಯವರು ಜಗತ್ತಿನ ಎದುರು ಭಾರತದ ಗೌರವವನ್ನು ಎತ್ತಿ ನಿಲ್ಲಿಸಿದ್ದಾರೆ- ದೇಶ್ ಕಾ ಸಮ್ಮಾನ್ ಬಡಾಯ ಹೈ. ಹಾಗಾಗಿಯೇ ಯಾವುದೇ ಇಶ್ಯೂಗಳಿಲ್ಲದ ಚುನಾವಣೆಯಲ್ಲಿ ವಿದೇಶಾಂಗ ನೀತಿಯೇಒಂದು ಇಶ್ಯೂವಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.

ವಿದೇಶಾಂಗ ನೀತಿಯ ವೈಫಲ್ಯ.
ನಿಜವಾಗಿಯೂ ಮೋದಿ ಸರ್ಕಾರವು ಜಗತ್ತಿನ ಮುಂದೆ ಭಾರತದ ಗೌರವವನ್ನು ಎತಿ ಹಿಡಿದಿದೆಯೇ?. ಸತ್ಯವೇನೆಂದರೆ, ಭಾರತದ ವಿದೇಶಾಂಗ ನೀತಿಯ ವಿಚಾರಗಳಲ್ಲಿ ಮಹತ್ವದ ಯಾವುದೇ ಬದಲಾವಣೆಗಳಾಗಿಲ್ಲ. ಏನಾದರೂ ಆಗಿದ್ದರೆ ಅದು ಭಾರತದ ವಿದೇಶಾಂಗ ನೀತಿಯು ಮನಮೋಹನ್ ಸಿಂಗ್‍ರ ಕಾಲದಲ್ಲಿದ್ದುದಕ್ಕಿಂತಲೂ ದುರ್ಬಲವೂ, ಗೊಂದಲಕಾರಿಯೂ ಆಗಿರುತ್ತದೆ.
ತಾನು ವಿದೇಶಾಂಗ ನೀತಿಯಲ್ಲಿ ಎಷ್ಟು ಆಳವಾಗಿ ಆಸಕ್ತಿ ಹೊಂದಿದ್ದೇನೆಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಸ್ಪಷ್ಟಪಡಿಸಿದ್ದರು. ತನ್ನ ಪ್ರಮಾಣವಚನ ಸಮಾರಂಭಕ್ಕೆ ದಕ್ಷಿಣ ಏಷ್ಯಾ ರಾಷ್ಠಗಳ ಪ್ರಮುಖರನ್ನು ಆಹ್ವಾನಿಸಿದ್ದರು. ಆದಾಗ್ಯೂ ಇವತ್ತಿಗೆ ಬಹುತೇಕ ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸಂಬಂಧ ಕುಂಠಿತಗೊಂಡಿದೆ. ಬಾಂಗ್ಲಾದೇಶ ಒಂದನ್ನು ಬಿಟ್ಟು. ಆದರೆ ಈಗ ಬಾಂಗ್ಲಾದೇಶದ ವಲಸಿಗರ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪಗಳು ಈ ಸಂಬಂಧವನ್ನೂ ಹಾಳುಗೆಡುವುತ್ತಿದೆ.
ಮೋದಿ ಸರ್ಕಾರದ ಆವೇಶಭರಿತ ವರ್ತನೆಯ ಹೊರತಾಗಿ ಅಥವಾ ಅದರಿಂದಾಗಿಯೇ ಚೀನಾವು ಭಾರತವನ್ನು ‘ಸುತ್ತುವರೆದಿದೆ’. ದೊಕ್ಲಾಮ್ ಬಿಕ್ಕಟ್ಟಿನೊಂದಿಗೆ ಬೀಜಿಂಗ್ ನವದೆಹಲಿಯ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸಿತು ಮತ್ತು ಮೋದಿ ತಮ್ಮ 56 ಇಂಚಿನ ಎದೆಯನ್ನು ಕಡಿಮೆಗೊಳಿಸಿಕೊಂಡು ಚೀನಾದೊಂದಿಗಿನ ಸಂಬಂಧದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು.
ಮೋದಿಯವರ ‘ಫ್ರೆಂಡ್ ಬರಾಕ್’ ವೈಟ್‍ಹೌಸಿನಲ್ಲಿದ್ದಾಗ ನರೇಂದ್ರ ಮೋದಿ ತಮ್ಮೆಲ್ಲಾ ವಿಶೇಷಣಗಳಿಗೂ ಅಮೇರಿಕಾದ ಮೊರೆ ಹೋಗುತ್ತಿದ್ದರು. ಆದರೆ ಡೊನಾಲ್ಡ ಟ್ರಂಪ್ ಎಂಬ ವಿಚಿತ್ರ ಪ್ರಾಣಿಯ ಜೊತೆ ಹೇಗೆ ವ್ಯವಹರಿಸಬೇಕೆಂದು ಮೋದಿ ಸರ್ಕಾರಕ್ಕೆ ಗೊತ್ತಾಗಿಲ್ಲ. ಎಲ್ಲರಿಗೂ ತಿಳಿದಿರುವಂತೆ ಭಾರತ ಮತ್ತು ಅಮೇರಿಕಾದ ಸಂಬಂಧ ಕ್ರಮೇಣ ಕಡಿಮೆಯಾಗುತ್ತಿದ್ದು, ಭಾರತವನ್ನು ಎಲ್ಲಿಯೂ ಸಲ್ಲದಂತೆ ಮಾಡಲಾಗುತ್ತಿದೆ.
ಪಾಕಿಸ್ತಾನ ಕುರಿತಾದ ಮೋದಿ ಸರ್ಕಾರದ ನೀತಿಗಳು ಈ ಹಿಂದಿನ ಸರ್ಕಾರಗಳಿಗಿಂತ ಹೆಚ್ಚು ತಲೆಕೆಳಗಾಗಿವೆ. ಸ್ವಲ್ಪ ದಿನ ಹೀಗೆ, ಸ್ವಲ್ಪ ದಿನ ಹಾಗೆ ಅನ್ನುವ ರೀತಿ ನವದೆಹಲಿ ಇಸ್ಲಾಮಾಬಾದ್‍ಅನ್ನು ನಡೆಸಿಕೊಳ್ಳುತ್ತಿದೆ.ಯಾವ ಕಾರ್ಯತಂತ್ರಗಳೂ ಇಲ್ಲ; ಒಂದು ವೇಳೆ ಇದೆ ಎಂದಾದರೆ ಅವು ಯಾವುದೇ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿವೆ.

ಅಪ್ಪುಗೆ ನೀತಿಯ ಜಯ
ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಿರುವಾಗವಿಶ್ವದ ಕಣ್ಣಿನಲ್ಲಿ ಮೋದಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆಂದು ಅವರ ಬೆಂಗಲಿಗರು ಹೇಗೆ ಹೇಳುತ್ತಿದ್ದಾರೆ?
ಇದಕ್ಕೆ ಉತ್ತರ ನರೇಂದ್ರ ಮೋದಿಯವರ ‘ಇಮೇಜ್ ಫ್ಯಾಕ್ಟರಿ’ಯಲ್ಲಿದೆ. ಮೋದಿ ವಿದೇಶದ ಗಣ್ಯರನ್ನು ಭೇಟಿಯಾದಾಗ, ತನ್ನನ್ನು ಯಾವ ರೀತಿ ಬಿಂಬಿಸಬೇಕೆಂದು ಮೊದಲೇ ನಿರ್ಧರಿಸಿರುತ್ತಾರೆ. ಫೋಟೋಗಳು ಯಾವ ರೀತಿ ಬರಬೇಕೆಂಬುದನ್ನು ಇಮೇಜ್ ಫ್ಯಾಕ್ಟರಿಯೇ

India’s Prime Minister Narendra Modi hugs President Trump

ನಿರ್ಧರಿಸುತ್ತದೆ. ಅವರ ಟ್ವಿಟರ್ ಮೂಲಕ, ಅವರ ವೆಬ್‍ಸೈಟ್ ಮೂಲಕ ಮತ್ತು ವೈಯಕ್ತಿಕ ಆಪ್ ಹಾಗೂ ಅಧಿಕೃತ ಸರ್ಕಾರಿ ಚಾನೆಲ್‍ಗಳ ಮೂಲಕ ಮಾತ್ರ ಫೋಟೋಗಳು ಬಿಡುಗಡೆಯಾಗುತ್ತವೆ. ಅವರ ಫೋಟೋ ಶೂಟ್‍ಗಳು ಮೊದಲೇ ಯೋಜಿತವಾಗಿರುತ್ತವೆ. ತಾವು ವಿದೇಶಿಗಣ್ಯರೊಂದಿಗೆ ಹೊರವಲಯದಲ್ಲಿ, ಉದ್ಯಾನಗಳಲ್ಲಿ, ಹೆದ್ದಾರಿಗಳಲ್ಲಿ, ಸಮುದ್ರ ತೀರಗಳಲ್ಲಿ, ಪ್ರವಾಸೀ ತಾಣಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಅವು ಒಳ್ಳೆಯ ಇಮೇಜನ್ನು ತಂದುಕೊಡುತ್ತವೆ. ಅನೌಪಚಾರಿಕ ಶೃಂಗಸಭೆಯೆಂದು ಅವರದನ್ನು ಕರೆಯುತ್ತಾರೆ.
ಪಕ್ಷದ ಅಧ್ಯಕ್ಷರಾದ ಅಮಿತ್ ಷಾ ಹೇಳಿಕೆ ಎಲ್ಲರಿಗೂ ಗೊತ್ತಿದೆ – ಭಾರತವು ಅತ್ಯಂತ ಬಲಶಾಲಿ ರಾಷ್ಠವಾಗುವುದನ್ನು ಬಿಜೆಪಿಯು ಬಯಸುತ್ತದೆ,‘ವಿಶ್ವಗುರು’ವಿನಂತೆ. ಅವರು ಹೀಗೆ ಹೇಳುವುದು ಜನರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕಾಣಸಿಗುವ ಮೋದಿಯ ಈ ಇಮೇಜ್‍ಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಈ ಚಿತ್ರಣಗಳಲ್ಲಿ ಮೋದಿಯು ಯಾವಾಗಲೂ ಯಜಮಾನನಂತೆ ಕಾಣಿಸುತ್ತಾರೆ, ಚರ್ಚೆಗಳನ್ನು ನಿಯಂತ್ರಿಸುವಂತೆ, ಉಳಿದ ನಾಯಕರಿಗೆ ದಾರಿ ತೋರುವವರಂತೆ ಬಿಂಬಿಸಿಕೊಳ್ಳುತ್ತಾರೆ. ಮೋದಿಯು ವಿಶ್ವದ ಇತರ ನಾಯಕರನ್ನು ಆವರಿಸಿಕೊಳ್ಳುವಂತೆ ಅಪ್ಪಿಕೊಳ್ಳುತ್ತಾರೆ, ಭಾರತ ವಿಶ್ವವನ್ನು ಆವರಿಸಿಕೊಳ್ಳುತ್ತಿದೆ ಎಂದ ತೋರುವಂತೆ.
ಅವರು ಆಕ್ರಮಿಸಿಕೊಳ್ಳುವಂತೆ ತಮ್ಮ ಬಾಹುಗಳನ್ನು ಬಳಸಿಕೊಳ್ಳುತ್ತಾರೆ ಮತ್ತು ‘ಮೋದಿ ಒಬ್ಬ ಆಕ್ರಮಣಕಾರರಾಗಿದ್ದಾರೆ. ಮೋದಿಯ ಕೈ ಸನ್ನೆಗಳು ಅವರ ಇಮೇಜಿನಲ್ಲಿ ಖಚಿತವಾಗಿ ಸೂಚಿಸುವಂತೆ ವಿಶ್ವವು ಭಾರತದ ಮಾರ್ಗದರ್ಶನವನ್ನು ಕಾಯುತ್ತಿದೆ. ಮೋದಿ ದಾರಿ ತೋರುತ್ತಾರೆ, ಅವರು ಹಿಂಬಾಲಿಸುತ್ತಾರೆ’ ಎಂಬಂತೆ ಆ ಫೋಟೋಗಳು ತೋರುತ್ತವೆ.
ಕ್ಸಿ ಜೊತೆ ಸಂಬಂಧ ಸುಧಾರಿಸಲು ಮೋದಿ ಚೀನಾಗೆ ಹೋಗಿದ್ದಾಗ ಕೂಡ, ವುಹಾನ್‍ನಲ್ಲಿ ಮೋದಿ ಕ್ಸಿಗೆ ಅವರದ್ದೇದೇಶದ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಕೊಡುತ್ತಿರುವಂತೆ ಕಾಣಿಸಿಕೊಂಡಿದ್ದರು ಅಥವಾ ಅವರ ಇಮೇಜ್‍ನಲ್ಲಿ ಹೀಗೆ ಕಾಣಬೇಕೆಂದು ನರೇಂದ್ರ ಮೋದಿ ಸೂಚಿಸಿದ್ದರು. ನಿಜವಾದ ಇಮೇಜ್‍ಗಳು ಹಾಗಿರುವುದಿಲ್ಲ, ಹಾಗಾಗಿ ವಾಟ್ಸಪ್ ಭೂತದ ದಾಹ ತಣಿಸಲು ಫೋಟೋಶಾಪ್‍ನಲ್ಲಿ ಅವುಗಳನ್ನು ತಯಾರಿಸಲಾಗುತ್ತದೆ. (ನರೇಂದ್ರ ಮೋದಿ.ಇನ್‍ನಲ್ಲಿ ಹಾಕಿರುವ ಚಿತ್ರ ನೋಡಿ)
ಯೋಗವು ವಿಶ್ವಕ್ಕೆ ಭಾರತದ ಕೊಡುಗೆ ಎಂದು ಪ್ರತಿಪಾದಿಸಿ ಅಂತರಾಷ್ಠೀಯ ಯೋಗ ದಿನಾಚರಣೆ ಆಚರಿಸಲು ನರೇಂದ್ರ ಮೋದಿ ಕಾರಣರಾಗಿದ್ದಾರೆ.
ಅವರು ವಿಶ್ವದ ಬಹುತೇಕ ರಾಷ್ಟ್ರಗಳ ರಾಜಧಾನಿಗಳಿಗೆ ಭೇಟಿ ಕೊಟ್ಟು ಅಲ್ಲಿ ಅಪ್ಪಟ ಹಿಂದಿಯಲ್ಲಿ ಮಾತನಾಡಿದ್ದಾರೆ.ಅವರ ಮೊದಲ ನಾಲ್ಕು ವರ್ಷದ ಆಡಳಿತದಲ್ಲಿ 165 ದಿನಗಳನ್ನು ಅವರು ವಿದೇಶದಲ್ಲೇ ಕಳೆದಿದ್ದಾರೆ.ಇದು ಅವರ ಒಟ್ಟು ಅವಧಿಯ ಶೇಕಡಾ 11ರಷ್ಟಿದೆ. ಇದು ಅವರ ವಿರುದ್ದದ ಭಾವನೆ ಮೂಡಿಸಬೇಕಿತ್ತು. ಉದ್ಯೋಗ ಸೃಷ್ಟಿ ಎಲ್ಲಿ ಮತ್ತು ತೈಲ ಬೆಲೆಗಳ ನಿಯಂತ್ರಣ ಏಕಿಲ್ಲ, ಎಂಬ ಅಸಮಾಧಾನದೊಂದಿಗೆ ಜನ ಕೇಳಬೇಕಿತ್ತು. ಪ್ರಧಾನಿ ಇಷ್ಟೊಂದು ಸಮಯ ವಿದೇಶದಲ್ಲೇಕೆ ಕಳೆಯುತ್ತಾರೆ ಎಂಬುದು ವಿವಾದವಾಗಬೇಕಿತ್ತು. ಅದಾಗಲಿಲ್ಲ. ಏಕೆಂದರೆ ಮೋದಿ ಕೂಟದ ಜನ ಅದಕ್ಕೊಂದು ತಿರುವು ಕೊಡುತ್ತಾರೆ. ಮೋದಿ ಭಾರತದ ಗೌರವವನ್ನು ಎತ್ತಿ ಹಿಡಿಯಲು ವಿದೇಶಕ್ಕೆ ಹೋಗುತ್ತಾರೆ ಎಂದು ಬಿಂಬಿಸಲಾಗಿದೆ.
ಬಹುತೇಕ ತಮ್ಮ ಎಲ್ಲಾ ವಿದೇಶಿ ಪ್ರವಾಸಗಳಲ್ಲೂ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಾರೆ. ಮೋದಿಯ ಬೆಂಬಲಿಗನೊಬ್ಬ ಹೇಳುವಂತೆ ಜನ ಈಗಲೂ ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನನ್ನು ನೆನಪಿಸಿಕೊಳ್ಳುತ್ತಾರೆ. ಸೆಪ್ಟೆಂಬರ್ 2014ರಲ್ಲಿ ಅನಿವಾಸಿ ಭಾರತೀಯರಿಂದ ತುಂಬಿದ ಈ ಸ್ಟೇಡಿಯಂನಲ್ಲಿ ಮೋದಿ ತಮ್ಮ ಭಾಷಣ ಮಾಡಿದ್ದರು.
ಹಾಗೆಯೇ ಮೋದಿಯವರು ಜಪಾನಿನ ಶಿಂಜೋ ಅಬೆಯವರನ್ನು ವಾರಣಾಸಿಯ ಗಂಗಾರತಿಗೆ ಆಹ್ವಾನಿಸಿದ್ದರು ಮತ್ತು ಗುಜರಾತಿನ ಝುಲಾದಲ್ಲಿ ಕ್ಸಿ ಜಿನ್ಪಿಂಗ್ ಜೊತೆ ಉಯ್ಯಾಲೆಯ ಮೇಲೆ ತೂಗಿಕೊಂಡಿದ್ದರು. ಅವರು ಜಗತ್ತಿನ ಮುಖ್ಯಸ್ಥರನ್ನು ಆಹ್ವಾನಿಸಲು ವಿಮಾನ ನಿಲ್ದಾಣಕ್ಕೆ ಧಾವಿಸುತ್ತಾರೆ ಮತ್ತು ತಮ್ಮನ್ನು ಪ್ರಧಾನಿ ಎನ್ನುವುದಕ್ಕಿಂತ ಸ್ನೇಹಿತ ಎಂದು ಕರೆಯಲು ಬರಾಕ್ ಒಬಾಮರವರಿಗೆ ಸೂಚಿಸುತ್ತಾರೆ. ಸಣ್ಣಪುಟ್ಟ ದೇಶಗಳ ಮುಖ್ಯಸ್ಥರನ್ನು ದೇಶದ ಗಣರಾಜ್ಯೋತ್ಸವಕ್ಕೆ ಕರೆಯಲು ಮೋದಿಯವರಿಗೆ ಇಷ್ಟವಿಲ್ಲ. ಈ ವರ್ಷ ಅವರು ಎಲ್ಲಾ 10 ಏಸಿಯಾನ್ ಮುಖಂಡರನ್ನು ಒಟ್ಟಿಗೇ ಆಹ್ವಾನಿಸಿದ್ದರು.
ಈ ಚುನಾವಣಾ ವರ್ಷದಲ್ಲಿ ಭಾರತಕ್ಕೆ ಬರುವಂತೆ ಡೊನಾಲ್ಡ ಟ್ರಂಪ್‍ರಮನವೊಲಿಸಲು ಮೋದಿ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮುಂಚೆ ಸರಿಯಾಗಿ ಯೋಜಿಸಿದ ಫೋಟೋಗ್ರಫಿ ಮೂಲಕ ಟ್ರಂಪ್ ಆಡಳಿತವನ್ನು ವಶಕ್ಕೆ ಪಡೆದುಕೊಂಡಂತೆ ಚಿತ್ರಿಸಲು ಮೋದಿ ಬಯಸಿದ್ದಾರೆ. ಆದರೆ ಟ್ರಂಪ್ ಚಾಣಾಕ್ಷ. ಅಮೇರಿಕಾ ಅಧ್ಯಕ್ಷರ ಅಧಿಕೃತ ವಿಹಾರದ ತಾಣ ಕ್ಯಾಂಪ್ ಡೇವಿಡ್‍ನಲ್ಲಿಮೋದಿ ಬಯಸಿದಂತಹಒಳ್ಳೆಯ ಫೋಟೋಗಳನ್ನು ಒದಗಿಸುವುದು ಟ್ರಂಪ್‍ಗೆ ಇಷ್ಟವಿಲ್ಲ. ಒಂದು ವೇಳೆ ಸದ್ಯಕ್ಕೆ ಅಸಾಧ್ಯವೆಂದು ತೋರುತ್ತಿರುವ ಟ್ರಂಪ್ ಭಾರತ ಭೇಟಿಯಲ್ಲಿ ಮೋದಿಗೆ ಒಳ್ಳೆಯದಾಗುವುದಕ್ಕಿಂತ ಎಡವಟ್ಟೇ ಆಗಿಬಿಡುವ ಸಾಧ್ಯತೆಯೂ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...