ಹಂಪಿ ಕನ್ನಡ ವಿಶ್ವವಿದ್ಯಾಲಯ ಆಗಸ್ಟ್ 15 ರಂದು ಹಿರಿಯ ದಲಿತ ಹೋರಾಟಗಾರರಾದ ಕರಿಯಪ್ಪ ಗುಡಿಮನೆ, ದೇಸಾಯಿ ಗುಂಡೂರಾವ್, ಹೆಚ್. ಪಿ. ಶಿಕಾರಿ ಮತ್ತು ಶೇಖಪ್ಪರನ್ನು ಸಾಮಾಜಿಕ ಹೋರಾಟಕ್ಕೆ ತಮ್ಮ ಜೀವನವನ್ನು ಸವೆಸಿದ ಹಿನ್ನೆಲೆಯಲ್ಲಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದೆ.
ಕರಿಯಪ್ಪ ಗುಡಿಮನೆ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲೇ ದಲಿತರ ಮೇಲೆ ದೌರ್ಜನ್ಯ ನಡೆದಾಗ ಅವರ ನೆರವಿಗೆ ಧಾವಿಸುವ ಗಿಡಿಮನೆಯವರು ಅಧಿಕಾರಿಗಳನ್ನು ಹಾಗೂ ಸರ್ಕಾರವನ್ನು ನಿರ್ಭೀತಿಯಿಂದ ಪ್ರಶ್ನೆಸುತ್ತಿದ್ದಾರೆ. ಇತ್ತೀಚೆಗೆ ಮಸ್ಕಿ ತಾಲೂಕಿನ ದಲಿತ ಯುವಕ ಭೂಮಾನಂದ ಕೊಲೆ ಪ್ರಕರಣದಲ್ಲೂ ಮುಂಚೂಣಿಯಲ್ಲಿದ್ದಾರೆ. ಹಲವು ದಲಿತ ಕುಡುಂಬಗಳಿಗೆ ಭೂಮಿಯ ಹಕ್ಕನ್ನು ಒದಗಿಸಿಕೊಡುವಲ್ಲಿ ಕರಿಯಪ್ಪ ಗುಡಿಮನೆಯವರು ಶ್ರಮಿಸಿದ್ದಾರೆ. ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಯಾಗಬೇಕು, ಸಾಮಾಜಿಕ ನ್ಯಾಯ ಎಲ್ಲ ಸಮುದಾಯಗಳಿಗೂ ಸಿಗಬೇಕೆಂದು ಹೋರಾಡುತ್ತಿದ್ದಾರೆ. ಅಲ್ಲದೇ ಕರ್ನಾಟಕ ಜನಶಕ್ತಿ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಸೇರಿದಂತೆ ಹಲವು ಜನಪರ ಹೋರಾಟಗಳ ಜೊತೆಗೂ ತೊಡಗಿಸಿಕೊಂಡಿರುವ ಕರಿಯಪ್ಪ ಗುಡಿಮನಿಯವರು ನೊಂದವರ ಪರವಾಗಿ ನಿರಂತರವಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ, ಇವರ ಈ ಹೋರಾಟವನ್ನು ಗುರುತಿಸಿ ಹಂಪಿ ವಿವಿಯು ಸ್ವಾತಂತ್ರ್ಯ ದಿನದಂದು ಸನ್ಮಾನಿಸಿದೆ.
ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಕಾರ್ಯಕ್ರಮದ ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿಗಳು, ಕುಲಸಚಿವರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


