Homeಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

- Advertisement -
- Advertisement -

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಭೌತಶಾಸ್ತ್ರ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲ ವಿದ್ಯಾರ್ಥಿಗಳಿಗೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯುವಂತೆ ಸೂಚಿಸಿದರೆಂದು ಆರೋಪಿಸಲಾಗಿದೆ. ಈ ಘಟನೆ ವಿವಾದಕ್ಕೀಡಾದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿಯು ಇದಕ್ಕೆ ಕಾರಣರೆನ್ನಲಾದ ಮೂವರು ಸಿಬ್ಬಂದಿಯನ್ನು (ಒಬ್ಬ ಉಪನ್ಯಾಸಕ ಮತ್ತು ಇಬ್ಬರು ಸಿಬ್ಬಂದಿ) ಸರ್ಕಾರ ಅಮಾನತು ಮಾಡಿದೆ.

ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆಯನ್ನು BJP ರಾಜಕೀಯ ಅಸ್ತವಾಗಿ  ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಈ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ‘ಹಿಂದೂ ವಿರೋಧಿ’ ಎಂದು ಬಿಜೆಪಿ ಟೀಕಿಸಿದ್ದು, ಕಳೆದ ವರ್ಷದ ಘಟನೆಗಳ ನಂತರವೂ ಇದು ಪುನರಾವರ್ತನೆ ಆಗಿರುವುದನ್ನು ಖಂಡಿಸಿದೆ.

ಸರ್ಕಾರದ ಸ್ಪಷ್ಟನೆ :

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಈ ಘಟನೆಯನ್ನು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. “ಕಳೆದ ವರ್ಷವೂ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಇಂತಹ ಘಟನೆಗಳು ನಡೆದಿದ್ದವು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಸ್ಥೆಯ ವಿರುದ್ಧ ದೂರು ದಾಖಲಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದಿನ ವರ್ಷದಿಂದ ಇಂತಹ ಕೃತ್ಯ ಎಸಗುವವರಿಗೆ ಕಾನೂನಿನಡಿಯಲ್ಲಿ ಯಾವ ಮಟ್ಟದ ಶಿಕ್ಷೆ ನೀಡಬಹುದು ಎಂಬ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುವುದು,” ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್‌ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದು, ಸಿಇಟಿ ಪರೀಕ್ಷೆಯ ವೇಳೆ ಕೃಪಾನಿಧಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ಅಮಾನವೀಯ ನಡೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.

http://<iframe src="https://www.facebook.com/plugins/post.php?href=https%3A%2F%2Fwww.facebook.com%2Fdineshgunduraoofficial%2Fposts%2Fpfbid0Vtc1ZgBhvdQQrqowZL3cPPfi4eH3HFmeg9PEqoEcifwZ57JPvw6wMjZL7xKRgrPnl&show_text=true&width=500" width="500" height="756" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share"></iframe>

‘ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಕಿವಿ ಓಲೆ, ಬಳೆ, ಹಿಜಾಬ್ ಅಥವಾ ಜನಿವಾರ ತೆಗೆಸುವುದು, ಉದ್ದನೆಯ ತೋಳಿಗೆ ಕತ್ತರಿ ಹಾಕುವುದು ಮನೋಸ್ಥೈರ್ಯ ಕುಗ್ಗಿಸುವ ಯತ್ನ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ತಾಣಗಳಾಗಬೇಕೇ ಹೊರತು, ಅವರ ಆತ್ಮಗೌರವಕ್ಕೆ ಧಕ್ಕೆ ತರುವ ಸ್ಥಳಗಳಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಲಿದೆ’ ಎಂದೂ ಅವರು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. “ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು ಮಿತಿಮೀರಿವೆ. ಮಂಗಳಸೂತ್ರ ಮತ್ತು ಜನಿವಾರವನ್ನು ತೆಗೆಸುವ ಮೂಲಕ ಹಿಂದೂಗಳ ನಂಬಿಕೆಯ ಮೇಲೆ ಈ ಸರ್ಕಾರ ದಾಳಿ ಮಾಡುತ್ತಿದೆ. ಪ್ರವೇಶ ಪತ್ರದಲ್ಲಾಗಲಿ ಅಥವಾ ಯಾವುದೇ ಮಾರ್ಗಸೂಚಿಯಲ್ಲಾಗಲಿ ಜನಿವಾರ ಧರಿಸಬಾರದು ಎಂದು ಹೇಳಿಲ್ಲ. ಹೀಗಿದ್ದರೂ ಇದನ್ನು ಏಕೆ ಮಾಡಲಾಗುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

“ರಾಜ್ಯದಲ್ಲಿ ‘ಆಧುನಿಕ ಮುಸ್ಲಿಂ ಲೀಗ್’ ರೀತಿ ವರ್ತಿಸುತ್ತಿರುವ ಕಾಂಗ್ರೆಸ್ ಸರ್ಕಾರ ಅಘೋಷಿತವಾಗಿ ಷರಿಯಾ ಕಾನೂನು ಜಾರಿಗೊಳಿಸಿದೆ. ರಂಜಾನ್ ವೇಳೆ ಉರ್ದು ಶಾಲೆಗಳ ಸಮಯ ಬದಲಿಸುವ ಸರ್ಕಾರ, ಪರೀಕ್ಷೆಯ ಹೆಸರಿನಲ್ಲಿ ಹಿಂದೂಗಳ ಪವಿತ್ರ ಸಂಕೇತಗಳನ್ನು ಅವಮಾನಿಸುತ್ತಿದೆ,” ಎಂದು ಅಶೋಕ ಗಂಭೀರ ಆರೋಪ ಮಾಡಿದ್ದಾರೆ.

ಹಿಜಾಬ್‌ನಿಂದ ಜನಿವಾರದವರೆಗೆ

ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಇತ್ತೀಚಿನ ವರ್ಷಗಳು ಧಾರ್ಮಿಕ ಹಕ್ಕುಗಳು ಮತ್ತು ಶೈಕ್ಷಣಿಕ ಶಿಸ್ತಿನ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿವೆ. ಇತ್ತೀಚೆಗೆ KCET ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯು ಈ ಹಳೆಯ ವಿವಾದಕ್ಕೆ ಹೊಸ ರೂಪ ನೀಡಿದೆ. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿಗೆ ತಂದಿದೆಯಾದರೂ, ಅದರಲ್ಲಿ ಜನಿವಾರದಂತಹ ಧಾರ್ಮಿಕ ಪವಿತ್ರ ದಾರಗಳನ್ನು ತೆಗೆಯುವಂತೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ಕೇವಲ ತಾಂತ್ರಿಕ ತಪ್ಪಲ್ಲ, ಬದಲಿಗೆ ವಿದ್ಯಾರ್ಥಿಗಳ ಧಾರ್ಮಿಕ ಭಾವನೆ ಮತ್ತು ಪರೀಕ್ಷೆಯ ಸಮಯದಲ್ಲಿ ಅವರ ಮಾನಸಿಕ ಸ್ಥಿತಿಯ ಮೇಲೆ ಆದ ಪ್ರಹಾರ ಎಂದು ವ್ಯಾಪಕವಾಗಿ ಟೀಕಿಸಲಾಯಿತು.

ಹಿಜಾಬ್ ವಿವಾದ: ಸಮವಸ್ತ್ರ ಮತ್ತು ಸಾಂವಿಧಾನಿಕ ಹಕ್ಕು (2022)

ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ (Hijab) ಧರಿಸುವ ಕುರಿತಾದ ಮಾರ್ಗಸೂಚಿಗಳು ಜನಿವಾರಕ್ಕಿಂತ ಭಿನ್ನವಾಗಿವೆ ಮತ್ತು ಇದು ಸುದೀರ್ಘ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಜಾರಿಯಲ್ಲಿರುವ ನಿಯಮಗಳ ಸಾರಾಂಶ ಇಲ್ಲಿದೆ.

ರಾಜ್ಯದಲ್ಲಿ ಧಾರ್ಮಿಕ ಗುರುತುಗಳ ಕುರಿತಾದ ಅತಿದೊಡ್ಡ ಚರ್ಚೆ ಆರಂಭವಾದದ್ದು ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದನ್ನು ನಿರ್ಬಂಧಿಸಿದಾಗ. ಶಾಲಾ-ಕಾಲೇಜುಗಳಲ್ಲಿ ಸಮಾನತೆ ಕಾಪಾಡಲು ನಿಗದಿಪಡಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು.

ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಸುದೀರ್ಘ ಚರ್ಚೆಗೆ ಒಳಗಾಯಿತು. “ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ” ಎಂಬ ನೆಲೆಯಲ್ಲಿ ಸಮವಸ್ತ್ರದ ಕಟ್ಟುನಿಟ್ಟನ್ನು ಕೋರ್ಟ್ ಎತ್ತಿಹಿಡಿಯಿತು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬಂದಿತ್ತು.

ಹಿಜಾಬ್ : ಸಾಮಾನ್ಯವಾಗಿ ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ತಲೆಬಟ್ಟೆ, ಸ್ಕಾರ್ಫ್ ಅಥವಾ ಮುಖ ಮುಚ್ಚುವ ಬಟ್ಟೆಗಳನ್ನು ಧರಿಸಲು ಅವಕಾಶವಿಲ್ಲ.  ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪು 2022ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ, “ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ” ಎಂಬ ಕಾರಣ ನೀಡಿ, ಶೈಕ್ಷಣಿಕ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರ ನಿಯಮಗಳನ್ನು ವಿದ್ಯಾರ್ಥಿಗಳು ಪಾಲಿಸುವುದು ಕಡ್ಡಾಯ ಎಂದು ತಿಳಿಸಲಾಯಿತು. ಈ ತೀರ್ಪು ಪರೀಕ್ಷೆಗಳಿಗೂ ಅನ್ವಯವಾಗುತ್ತದೆ.

ಕೆಲವು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ (ಉದಾಹರಣೆಗೆ NEET) ಧಾರ್ಮಿಕ ಕಾರಣಗಳಿಗಾಗಿ ವಿಶೇಷ ಉಡುಪು ಧರಿಸಲು ಇಚ್ಛಿಸುವವರಿಗೆ ಕೆಲವು ವಿನಾಯಿತಿಗಳಿವೆ, ಆದರೆ ಅವು ಕಟ್ಟುನಿಟ್ಟಿನ ಷರತ್ತುಗಳಿಗೆ ಒಳಪಟ್ಟಿವೆ:

ಪರೀಕ್ಷಾ ಅರ್ಜಿಯನ್ನು ಸಲ್ಲಿಸುವಾಗಲೇ ‘ಧಾರ್ಮಿಕ ಉಡುಪು’ ಧರಿಸುವ ಬಗ್ಗೆ ತಿಳಿಸಿರಬೇಕು. ಅಂತಹ ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಕನಿಷ್ಠ 1-2 ಗಂಟೆಗಳ ಮೊದಲು ಕೇಂದ್ರಕ್ಕೆ ಹಾಜರಾಗಬೇಕು. ಪರೀಕ್ಷಾ ಕೇಂದ್ರದ ಮಹಿಳಾ ಸಿಬ್ಬಂದಿಗಳು ಪ್ರತ್ಯೇಕ ಕೊಠಡಿಯಲ್ಲಿ ಅಭ್ಯರ್ಥಿಯ ಹಿಜಾಬ್ ಅಥವಾ ಬುರ್ಖಾವನ್ನು ತೆಗೆಸಿ ಕೂಲಂಕಷವಾಗಿ ತಪಾಸಣೆ ನಡೆಸುತ್ತಾರೆ. ತಪಾಸಣೆಯ ನಂತರವಷ್ಟೇ ಪರೀಕ್ಷಾ ಕೊಠಡಿಯೊಳಗೆ ಹೋಗಲು ಬಿಡಲಾಗುತ್ತದೆ.

ಕರ್ನಾಟಕ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ (SSLC, PUC ಮತ್ತು CET) ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಪ್ರಸ್ತುತ ಅವಕಾಶ ನೀಡುತ್ತಿಲ್ಲ. ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದ ಆವರಣದವರೆಗೆ ಹಿಜಾಬ್ ಧರಿಸಿ ಬರಬಹುದು, ಆದರೆ ಪರೀಕ್ಷಾ ಕೊಠಡಿಗೆ ಹೋಗುವ ಮೊದಲು ಅದನ್ನು ತೆಗೆಯಬೇಕಾಗುತ್ತದೆ.

ಜನಿವಾರವು ದೇಹದ ಒಳಭಾಗದಲ್ಲಿ (ಬಟ್ಟೆಯ ಒಳಗೆ) ಇರುವುದರಿಂದ ಅದು ಪರೀಕ್ಷಾ ಕೇಂದ್ರದ ಡ್ರೆಸ್ ಕೋಡ್‌ಗೆ ಬಾಧಕವಾಗುವುದಿಲ್ಲ. ಆದರೆ ಹಿಜಾಬ್ ಅಥವಾ ಸ್ಕಾರ್ಫ್ ಮುಖ ಅಥವಾ ತಲೆಯನ್ನು ಮುಚ್ಚುವುದರಿಂದ, ನಕಲು ತಡೆಯುವ ದೃಷ್ಟಿಯಿಂದ ಅದನ್ನು ನಿರ್ಬಂಧಿಸಲಾಗಿದೆ ಎಂಬುದು ಪ್ರಾಧಿಕಾರಗಳ ವಾದ.

ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ (ಉದಾಹರಣೆಗೆ ಕೆಪಿಎಸ್‌ಸಿ ಮತ್ತು ವಿವಿಧ ಇಲಾಖಾ ಪರೀಕ್ಷೆಗಳು) ವೇಳೆ ಮಹಿಳಾ ಅಭ್ಯರ್ಥಿಗಳ ತಾಳಿ, ಕಾಲುಂಗುರ ಮತ್ತು ಕಿವಿ ಓಲೆಗಳಂತ ಆಭರಣಗಳನ್ನು ತೆಗೆಸಿದ್ದು ದೊಡ್ಡ ಸುದ್ದಿಯಾಗಿತ್ತು.

ಈ ರೀತಿ ಅಭ್ಯರ್ಥಿಗಳು ಧರಿಸುವ ವಸ್ತಗಳನ್ನು ತೆಯಲು ಒಂದು ತಾರ್ಕಿಕ ಹಿನ್ನಲೆ ಇದ್ದು, ಪರೀಕ್ಷೆಗಳಲ್ಲಿ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಬಳಸಿ ನಕಲು ಮಾಡುವುದನ್ನು ತಡೆಯಲು ಲೋಹದ ವಸ್ತುಗಳನ್ನು ನಿಷೇಧಿಸಲಾಗಿತ್ತು. ಆದರೆ, ಇದು ವಿವಾಹಿತ ಮಹಿಳೆಯರ ಸಾಂಪ್ರದಾಯಿಕ ಭಾವನೆಗಳಿಗೆ ದಕ್ಕೆ ತರುತ್ತದೆ ಎಂಬ ಕಾರಣಕ್ಕೆ ನಂತರ ನಿಯಮಗಳಲ್ಲಿ ಸಡಿಲಿಕೆ ನೀಡಲಾಯಿತು.

ಶೈಕ್ಷಣಿಕ ಕೇಂದ್ರಗಳಲ್ಲಿ ‘ಧಾರ್ಮಿಕ ಗುರುತು’ಗಳ ಸಂಘರ್ಷ ಏಕೆ?

ಪರೀಕ್ಷಾ ಅಕ್ರಮಗಳನ್ನು ತಡೆಯುವ ಭರದಲ್ಲಿ ಸಿಬ್ಬಂದಿಗಳು ವಿವೇಚನೆ ಕಳೆದುಕೊಂಡು ಎಲ್ಲಾ ರೀತಿಯ ದಾರ ಅಥವಾ ಆಭರಣಗಳನ್ನು ತೆಗೆಸಲು ಮುಂದಾಗುವುದು. ಸರ್ಕಾರದ ಅಥವಾ ಇಲಾಖೆಯ ಸ್ಪಷ್ಟ ಆದೇಶಗಳಿಲ್ಲದಿದ್ದರೂ, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ತಮ್ಮದೇ ಆದ ನಿಯಮಗಳನ್ನು ಹೇರುವುದು. ಶಿಕ್ಷಣ ಕ್ಷೇತ್ರಕ್ಕೆ ಧಾರ್ಮಿಕ ಮತ್ತು ರಾಜಕೀಯ ಆಯಾಮಗಳು ಸೇರಿಕೊಂಡಿರುವುದು ಇಂತಹ ಸಣ್ಣ ಘಟನೆಗಳೂ ದೊಡ್ಡ ವಿವಾದವಾಗಲು ಕಾರಣವಾಗುತ್ತಿದೆ.

ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳ ಒಳಗೆ ನಡೆಯುತ್ತಿರುವ ವಿದ್ಯಮಾನಗಳು ‘ವಿದ್ಯೆ’ ಮತ್ತು ‘ವಿನಯ’ಕ್ಕಿಂತ ಹೆಚ್ಚಾಗಿ ‘ವಿವಾದ’ಗಳಿಗೆ ಆಹಾರವಾಗುತ್ತಿವೆ. ಹಿಂದೆ ನಡೆದ ಹಿಜಾಬ್ ವಿವಾದವಿರಲಿ ಅಥವಾ ಇಂದು ಚರ್ಚೆಯಲ್ಲಿರುವ ಜನಿವಾರ ಪ್ರಕರಣವಿರಲಿ, ಇವೆಲ್ಲವೂ ನಮ್ಮ ಪರೀಕ್ಷಾ ಮಂಡಳಿಗಳ ಅತಿಸೂಕ್ಷ್ಮತೆಯ ಕೊರತೆ ಮತ್ತು ಅಸ್ಪಷ್ಟ ಮಾರ್ಗಸೂಚಿಗಳ ಫಲಿತಾಂಶದಂತೆ ಕಾಣುತ್ತಿವೆ.

ಪರೀಕ್ಷೆಗಳಲ್ಲಿ ನಕಲು ತಡೆಯುವುದು, ತಾಂತ್ರಿಕ ಸಾಧನಗಳ ಬಳಕೆಯನ್ನು ನಿರ್ಬಂಧಿಸುವುದು ಪರೀಕ್ಷಾ ಪ್ರಾಧಿಕಾರಗಳ ಪ್ರಥಮ ಆದ್ಯತೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, KEA ಮಾರ್ಗಸೂಚಿಯಲ್ಲಿ ಇದನ್ನು ತೆಗೆಸುವಂತೆ ಎಲ್ಲಿಯೂ ಹೇಳಿಲ್ಲದಿದ್ದರೂ, ಸಿಬ್ಬಂದಿಗಳ ಅತಿರೇಕದ ವರ್ತನೆ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿಗಳಿಗೆ ‘ಏನು ಮಾಡಬೇಕು’ ಎಂಬುದಕ್ಕಿಂತ ‘ಏನು ಮಾಡಬಾರದು’ ಎಂಬ ಬಗ್ಗೆ ಸ್ಪಷ್ಟ ತರಬೇತಿ ಇಲ್ಲದಿರುವುದು ಇಲ್ಲಿನ ಮುಖ್ಯ ಸಮಸ್ಯೆ. ಒಂದು ಕಡೆ ಆಡಳಿತ ಪಕ್ಷ “ಇದು ಆಕಸ್ಮಿಕ ತಾಂತ್ರಿಕ ಲೋಪ” ಎನ್ನುತ್ತಿದ್ದರೆ, ಇನ್ನೊಂದು ಕಡೆ ವಿರೋಧ ಪಕ್ಷಗಳು ಇದನ್ನೇ “ಧರ್ಮದ ಮೇಲಿನ ದಾಳಿ” ಎಂದು ಬಣ್ಣಿಸುತ್ತಿವೆ.

ಜನಿವಾರ ತೆಗೆಸುವುದನ್ನು ‘ಹಿಂದೂ ವಿರೋಧಿ’ ಎಂದೋ ಅಥವಾ ಹಿಜಾಬ್ ನಿರ್ಬಂಧಿಸುವುದನ್ನು ‘ಒಂದು ಸಮುದಾಯದ ದಮನ’ ಎಂದೋ ಬಿಂಬಿಸುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿವೆಯೇ ಹೊರತು, ವಿದ್ಯಾರ್ಥಿಯ ಮಾನಸಿಕ ಒತ್ತಡವನ್ನು ಯಾರೂ ಗಮನಿಸುತ್ತಿಲ್ಲ.

ಶಿಕ್ಷಣ ಸಂಸ್ಥೆಗಳು ಸಂವಿಧಾನದ ಆರ್ಟಿಕಲ್ 25 (ಧಾರ್ಮಿಕ ಸ್ವಾತಂತ್ರ್ಯ) ಮತ್ತು ಶೈಕ್ಷಣಿಕ ಶಿಸ್ತಿನ ನಡುವೆ ಒಂದು ಸಮತೋಲಿತ ಸೇತುವೆಯನ್ನು ನಿರ್ಮಿಸಬೇಕಿದೆ.

ಪರೀಕ್ಷಾ ಪ್ರಾಧಿಕಾರಗಳು ಕೇವಲ ‘ಡ್ರೆಸ್ ಕೋಡ್’ ನೀಡಿದರೆ ಸಾಲದು; ಧಾರ್ಮಿಕ ಸಂಕೇತಗಳ ಬಗ್ಗೆ ಅತ್ಯಂತ ಸ್ಪಷ್ಟವಾದ (ಗೊಂದಲವಿಲ್ಲದ) ಸೂಚನೆಗಳನ್ನು ಸಿಬ್ಬಂದಿಗಳಿಗೆ ನೀಡಬೇಕು. ತಪಾಸಣೆಯ ಹೆಸರಿನಲ್ಲಿ ಮಂಗಳಸೂತ್ರ, ಜನಿವಾರ ಅಥವಾ ಧಾರ್ಮಿಕ ಉಡುಪುಗಳ ಮೇಲೆ ಪ್ರಹಾರ ಮಾಡುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ.

ಪರೀಕ್ಷೆ ಎನ್ನುವುದು ವಿದ್ಯಾರ್ಥಿಯ ಪಾಲಿಗೆ ಜ್ಞಾನದ ಒರೆಗಲ್ಲು ಮತ್ತು ಭವಿಷ್ಯದ ದಾರಿದೀಪ. ಆದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳು ಜ್ಞಾನಾರ್ಜನೆಯ ಕೇಂದ್ರಗಳಾಗುವ ಬದಲು, ರಾಜಕೀಯ ಪಕ್ಷಗಳ ‘ಕೋಮು ಬಂಡವಾಳ’ ಮತ್ತು ಮಾಧ್ಯಮಗಳ ‘ಟಿಆರ್‌ಪಿ ಸರಕು’ ಆಗಿ ಬದಲಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ.

ವಿದ್ಯಾರ್ಥಿಯ ಸಂಯಮ ಮತ್ತು ನಾಗರಿಕ ಜವಾಬ್ದಾರಿ

ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಅಥವಾ ಹಿಜಾಬ್‌ಗೆ ಸಂಬಂಧಿಸಿದ ಅಹಿತಕರ ಘಟನೆಗಳು ನಡೆದಾಗ, ವಿದ್ಯಾರ್ಥಿಯ ಮಾನಸಿಕ ಸ್ಥೈರ್ಯ ಕುಗ್ಗುವುದು ಸಹಜ. ಆದರೆ, ವಿದ್ಯಾವಂತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಸಂದರ್ಭದಲ್ಲಿ ತೋರಬೇಕಾದ ಅತ್ಯಂತ ಪ್ರಮುಖ ಗುಣ ‘ಸಂಯಮ’. ವ್ಯವಸ್ಥೆಯಲ್ಲಿನ ಲೋಪವನ್ನು ಕಾನೂನಾತ್ಮಕವಾಗಿ ಅಥವಾ ಅಧಿಕೃತವಾಗಿ ಪ್ರಶ್ನಿಸುವುದು ನಾಗರಿಕ ಲಕ್ಷಣ. ಬದಲಿಗೆ, ಆ ಕ್ಷಣದ ಆವೇಶಕ್ಕೆ ಒಳಗಾಗಿ ಅಥವಾ ಯಾರೋ ಪ್ರಚೋದನೆ ನೀಡಿದರು ಎಂದು ಘಟನೆಯನ್ನು ಬೀದಿಗೆ ತಂದು ರಾಜಕೀಯಗೊಳಿಸಲು ಅವಕಾಶ ಮಾಡಿಕೊಟ್ಟರೆ, ಅದರ ನೇರ ಪರಿಣಾಮ ಬೀರುವುದು ಆ ವಿದ್ಯಾರ್ಥಿಯ ಏಕಾಗ್ರತೆ ಮತ್ತು ಭವಿಷ್ಯದ ಮೇಲೆ ಎಂಬ ಕಟು ಸತ್ಯವನ್ನು ನಾವಿಂದು ಅರಿಯಬೇಕಿದೆ.

ಮತ ರಾಜಕಾರಣ’

ಯಾವುದೇ ಒಂದು ಸಣ್ಣ ಕಿಡಿ ಸಿಕ್ಕರೂ ಸಾಕು, ಅದನ್ನು ಕೋಮು ದ್ವೇಷದ ಕಿಚ್ಚನ್ನಾಗಿ ಪರಿವರ್ತಿಸಲು ರಾಜಕೀಯ ಪಕ್ಷಗಳು ಸದಾ ಸನ್ನದ್ಧವಾಗಿರುತ್ತವೆ. ಜನಿವಾರದ ವಿಷಯ ಬಂದಾಗ ಒಂದು ಪಕ್ಷ, ಹಿಜಾಬ್ ವಿಷಯ ಬಂದಾಗ ಇನ್ನೊಂದು ಪಕ್ಷ ‘ವಿದ್ಯಾರ್ಥಿಗಳ ಹಿತೈಷಿ’ಗಳಂತೆ ನಾಟಕವಾಡುತ್ತವೆ. ಆದರೆ ವಾಸ್ತವದಲ್ಲಿ, ಇವರಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಿಂತ ಅವರು ಪ್ರತಿನಿಧಿಸುವ ಮತಬ್ಯಾಂಕ್ಅನ್ನು ಭದ್ರಪಡಿಸಿಕೊಳ್ಳುವುದೇ ಅವುಗಳ ಏಕೈಕ ಉದ್ದೇಶ. ಶಿಕ್ಷಣ ಕ್ಷೇತ್ರದಲ್ಲಿ ಇರಬೇಕಾದ ಮೌಲ್ಯಗಳನ್ನು ಬಲಿಕೊಟ್ಟು, ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ವಿಷ ಬಿತ್ತುವ ಈ ಕೆಸರೆರಚಾಟವು ನಾಡಿನ ಶೈಕ್ಷಣಿಕ ಘನತೆಯನ್ನು ಹಳ್ಳ ಹಿಡಿಸುವತಿಂದೆ

ಮಾಧ್ಯಮಗಳ ಟಿಆರ್‌ಪಿ ಹಪಾಹಪಿ

ಇನ್ನು ಈ ನಾಟಕದ ಪ್ರಮುಖ ಸೂತ್ರಧಾರಿಗಳು ನಮ್ಮ ಕೆಲವು ಮಾಧ್ಯಮಗಳು. ಘಟನೆಯ ಸತ್ಯಾಸತ್ಯತೆಗಿಂತಲೂ “ಬ್ರೇಕಿಂಗ್ ನ್ಯೂಸ್” ನೀಡುವ ಭರದಲ್ಲಿ ಪರೀಕ್ಷೆ ಮುಗಿಸಿ ಹೊರಬರುವ ವಿದ್ಯಾರ್ಥಿ ಮತ್ತು ಆತಂಕದಲ್ಲಿರುವ ಪೋಷಕರ ಮುಂದೆ ಮೈಕ್ ಹಿಡಿದು ನಿಲ್ಲುವುದು ಎಷ್ಟು ಸರಿ? ತಮಗೆ ಬೇಕಾದ ‘ಉದ್ರೇಕಕಾರಿ’ ಹೇಳಿಕೆಗಳನ್ನು ಪಡೆಯಲು ಪೋಷಕರನ್ನು ಕೆಣಕುವುದು, ಇಡೀ ದಿನ ಅದೇ ದೃಶ್ಯಗಳನ್ನು ಪ್ರಸಾರ ಮಾಡಿ ಸಮಾಜದಲ್ಲಿ ಆತಂಕ ಸೃಷ್ಟಿಸುವುದು ಮಾಧ್ಯಮಗಳ ನೈತಿಕತೆಯ ಅಧಃಪತನವನ್ನು ತೋರಿಸುತ್ತದೆ. ಇದೊಂದು ದೊಡ್ಡ ಸಮಸ್ಯೆಯಂತೆ ಬಿಂಬಿಸುವ ಮಾಧ್ಯಮಗಳು, ಅದೇ ವ್ಯವಸ್ಥೆಯಲ್ಲಿರುವ ಮೂಲಸೌಕರ್ಯ ಕೊರತೆ, ನಿರುದ್ಯೋಗ ಅಥವಾ ಶೈಕ್ಷಣಿಕ ಸುಧಾರಣೆಗಳ ಬಗ್ಗೆ ಅಷ್ಟೇ ತೀವ್ರವಾಗಿ ಚರ್ಚೆ ನಡೆಸದಿರುವುದು ವಿಪರ್ಯಾಸ.

ಜನಿವಾರ ಅಥವಾ ಮಂಗಳಸೂತ್ರದಂತಹ ವಿವಾದಗಳೇ ಈ ನಾಡಿನ ಏಕೈಕ ಸಮಸ್ಯೆಗಳೇನೋ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ, ಶಿಕ್ಷಕರ ಕೊರತೆ, ಪ್ರಶ್ನೆ ಪತ್ರಿಕೆ ಸೋರಿಕೆ, ನಿರುದ್ಯೋಗದಂತಹ ನೂರಾರು ಜ್ವಲಂತ ಸಮಸ್ಯೆಗಳು ನಮ್ಮ ಕಣ್ಣೆದುರಿವೆ. ಇವುಗಳ ಬಗ್ಗೆ ಮೌನ ವಹಿಸುವ ಮಾಧ್ಯಮಗಳು, ಭಾವನಾತ್ಮಕ ವಿಷಯಗಳನ್ನು ಹಿಡಿದುಕೊಂಡು ಜನರ ದಾರಿತಪ್ಪಿಸುತ್ತಿದೆ.

ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ‘ವಿದ್ಯೆ’ಯನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ, ಇಂತಹ ಸಂಕೀರ್ಣ ಸಂದರ್ಭಗಳನ್ನು ವಿವೇಕದಿಂದ ನಿಭಾಯಿಸಲು ಬಳಸಬೇಕು. ರಾಜಕೀಯ ಪಕ್ಷಗಳ ದಾಳವಾಗುವುದನ್ನು ತಪ್ಪಿಸಬೇಕು. ಮಾಧ್ಯಮಗಳು ಕೂಡ ತಮ್ಮ ಟಿಆರ್‌ಪಿ ದಾಹವನ್ನು ಬಿಟ್ಟು, ಶೈಕ್ಷಣಿಕ ಕ್ಷೇತ್ರದ ನೈಜ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕು. ಶಿಕ್ಷಣವು ಸಮಾಜವನ್ನು ಒಗ್ಗೂಡಿಸಬೇಕೇ ಹೊರತು, ಗುರುತುಗಳ ಹೆಸರಿನಲ್ಲಿ ಒಡೆಯಬಾರದು.

ಪರೀಕ್ಷೆಗಳು ವಿದ್ಯಾರ್ಥಿಯ ಜೀವನದ ಮಹತ್ವದ ಘಟ್ಟಗಳು. ಅಂತಹ ಸಮಯದಲ್ಲಿ ವಿದ್ಯಾರ್ಥಿಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಘಟನೆಗಳು ನಡೆಯಬಾರದು ಎಂಬುದು ಎಷ್ಟು ಸತ್ಯವೋ, ಹಾಗೆಯೇ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃ‍ಷ್ಠಿಯಿಂದ ಜನಿವಾರ ಅಥವಾ ಹಿಜಾಬ್ ನಂತಹ ಪ್ರಕರಣಗಳು ಘಟಿಸಿದಾಗ  ಅತ್ಯಂತ ಸಂಯಮದಿಂದ ವರ್ತಿಸುವುದು, ಅದನ್ನು ರಾಜಕೀಯಗೊಳಿಸದಂತೆ ನೋಡಿಕೊಳ್ಳುವುದು, ರಾಜಕೀಯ ಪಕ್ಷಗಳ ಪ್ರಚೋಧನೆಗೆ ಬಳಗಾಗದಿರುವುದು ವಿದ್ಯಾವಂತರಾದವರ ಜವಬ್ದಾರಿಯೂ ಹೌದು. ಯಾಕೆಂದರೆ ಶಿಕ್ಷಣ ಕಲಿಸಬೇಕಾಗಿದ್ದು ಇದನ್ನೇ ಅಲ್ಲವೇ?

ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

ಚಂದ್ರು ತರಹುಣಿಸೆ
ಚಂದ್ರು ತರಹುಣಿಸೆhttps://naanugauri.com/
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್
- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...