Homeಕರ್ನಾಟಕ"ದಲಿತ ಮುಖ್ಯಮಂತ್ರಿ" ಅರ್ಹರು ಯಾರಿಲ್ಲಿ?

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

- Advertisement -
- Advertisement -

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ.

ಮುಖ್ಯಮಂತ್ರಿ ಹುದ್ದೆಯ ಕುರಿತು 2023ರಲ್ಲಿ ಕಾಂಗ್ರೆಸ್‌ 136 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಾಗಲೇ ಗೊಂದಲ ಹಾಗೂ ಪೈಪೋಟಿ ಶುರುವಾಗಿತ್ತು. ಅಂದೇ ಕಾಂಗ್ರೆಸ್‌ ಹೈಕಮಾಂಡ್‌ ಅಂದು ಉದ್ಬವಿಸಿದ್ದ ಗೊಂದಲಕ್ಕೆ ಪರಿಹಾರವೊಂದನ್ನು ಕಂಡುಕೊಂಡಿತ್ತು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ತಮ್ಮ ತಮ್ಮ ಆಪ್ತ ವಲಯದಲ್ಲಿ “ಒಪ್ಪಂದ”ವೆಂದು ಮಾಹಿತಿ ರವಾನಿಸಿದ್ದರು. ಕಳೆದ 3 ವರ್ಷಗಳಲ್ಲಿ ನಿರಂತರವಾಗಿ ಮುಖ್ಯಮಂತ್ರಿ ಬದಲಾವಣೆಯ ಸುತ್ತ ಹಲವು ಪರ-ವಿರೋಧ ಹೇಳಿಕೆಗಳು ಕೇಳಿಬರುತ್ತಿದ್ದವು.

ಈಗ ಎಲ್ಲವೂ ಬಹಿರಂಗಗೊಂಡಿದೆ; ಹಿಂದೆ ಆದ ಒಪ್ಪಂದದಂತೆ ಮುಖ್ಯಮಂತ್ರಿ ಬದಲಾವಣೆಯೂ ನಡೆಯುತ್ತಿದೆ. ಇದೇ ಸಮಯದಲ್ಲಿ ಬಹುಕಾಲದಿಂದ ಕೇಳಿಬರುತ್ತಿದ್ದ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. “ದಲಿತ ಮುಖ್ಯಮಂತ್ರಿ” ಈ ಸಮಯದಲ್ಲಿ ಸಾದ್ಯವಿಲ್ಲ ಎಂದೂ ಆ ರೀತಿಯ ಒತ್ತಾಯ ಮಾಡುತ್ತಿರುವವರಿಗೂ ತಿಳಿದಿದೆ.

ಕಳೆದ ಒಂದು ದಶಕದ ಹಿಂದೆ ಇದ್ದಂತೆ ದಲಿತ ಮುಖ್ಯಮಂತ್ರಿ ಕೂಗಿಗೆ ಅಷ್ಟು ಗಟ್ಟಿತನವಿಲ್ಲ ಎಂದು ಎಲ್ಲರಿಗೂ, ಅಷ್ಟೆ ಏಕೆ ಸ್ವತಃ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿರುವ ಪರಿಶಿಷ್ಟ ಜಾತಿಗಳ ರಾಜಕಾರಣಿಗಳಿಗೂ ತಿಳಿದಿದೆ. ಇದಕ್ಕೆ ಕಾರಣ ‘ದಲಿತ’ ಎಂದು ಹೇಳಿಕೊಳ್ಳುವ ಅದೇ ರಾಜಕಾರಣಗಳೇ ಆಗಿದ್ದಾರೆ.

ದಲಿತ ಎಂಬ ‘ಪ್ಯೂರ್‌’ ಸಮಾನತೆ ಸಾರುವ ಪದವನ್ನು ಇಂದು ಎಷ್ಟೆಲ್ಲಾ ನಗೆಪಾಟಲು ಮಾಡಿದ್ದಾರೆಂದರೆ, ಯಾರೊಬ್ಬರಿಗೂ ದಲಿತ ಮುಖ್ಯಮಂತ್ರಿ ಮಾಡಿ ಎಂದು ಬಹಿರಂಗವಾಗಿ ಹೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂಬುದು ಪ್ರಸ್ತುತ ನಡೆಯುತ್ತಿರುವ ಸನ್ನಿವೇಶವನ್ನು ಗಮನಿಸಿದರೆ ತಿಳಿಯುತ್ತದೆ.

ಬಿಜೆಪಿಯ ಕೋಮು ರಾಜಕಾರಣಕ್ಕೆ, ವೈದಿಕ ಪ್ರತಿಪಾದಿತ ಮನುಶಾಸ್ತ್ರಕ್ಕೆ ಟಕ್ಕರ್‌ ಕೊಟ್ಟಂತ ದಲಿತ ರಾಜಕಾರಣ ಇಂದು ಮುಸುಕಾಗುತ್ತಿದೆ. ಅಷ್ಟೆ ಅಲ್ಲ, ದಲಿತ ಎಂಬ ಪದವನ್ನು ಹೀನಾಮಾನವಾಗಿ ತಮಗೆ ಬೇಕಾದಂತೆ ಬಳಸಿಕೊಳ್ಳುವ ಮೂಲಕ ಅದಕ್ಕೆ ಇದ್ದ ಸಾರ್ವತ್ರಿಕ ಮಾನ್ಯತೆ, ಗೌರವವನ್ನು ಹಾಳುಗೆಡವಿದ್ದಾರೆ.

ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆದ ಪರಿಶಿಷ್ಟರ ಒಳಮೀಸಲಾತಿ ವಿಷಯದಲ್ಲಿ ಹೊಲೆಯ-ಮಾದಿಗ ರಾಜಕಾರಣಿಗಳು ನಡೆದುಕೊಂಡ ರೀತಿ ನಿಜಕ್ಕೂ ಬಾಬಾ ಸಾಹೇಬರ ಆಶಯಗಳಿಗೆ ಕೊಳ್ಳಿ ಇಟ್ಟಂತೆಯೇ ಆಗಿದೆ.

ಒಳಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ಬೆದರಿಕೆಗಳನ್ನು ಹಾಕುವ ಮೂಲಕ ಏನೆಲ್ಲಾ ಪ್ರಯತ್ನ ಮಾಡಲಾಯಿತು ಎಂಬುದು ಗುಪ್ತವಾಗಿಯೇನೂ ಉಳಿದುಕೊಂಡಿಲ್ಲ. ಇದರ ನಡುವೆ ಅಲೆಮಾರಿ ಸಮುದಾಯಗಳ ದನಿ ಮಾತ್ರ ಯಾರಿಗೂ ಕೇಳಿಸಲೇ ಇಲ್ಲ.

ಇನ್ನೊಂದೆಡೆ ಕೋಮು ರಾಜಕಾರಣಕ್ಕೆ, ಭಾರತದ ಜಾತಿಗ್ರಸ್ತ ಸಮಾಜಕ್ಕೆ ಸರಿಯಾದ ಹೊಡೆತ ಕೊಟ್ಟದ್ದು ಮಾತ್ರ ದಲಿತ ಸಮಗ್ರ ರಾಜಕಾರಣ. ಇದನ್ನು ಸಹಿಸದ ಕೋಮುವಾದಿ ಶಕ್ತಿಗಳು ನಿರಂತರವಾಗಿ ಈ “ದಲಿತ” ಎಂಬ ಬಹುದೊಡ್ಡ ಅಸ್ಮಿತೆಯನ್ನೇ ಒಡೆಯಲು ಹಿಂಬಾಗಿಲಿನಿಂದ ಏನೆಲ್ಲಾ ಪ್ರಯತ್ನ ಮಾಡಲು ಸಾಧ್ಯವೋ ಅದನ್ನೆಲ್ಲಾ ಇಂದು ಮಾಡಿಯಾಗಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ದಲಿತ ಎಂಬ ಹೆಸರಿನಲ್ಲಿ ಇಷ್ಟು ದಿನಗಳ ಕಾಲ ಜನರನ್ನು ಸಂಘಟಿಸಿದ್ದ ‘ದೊಡ್ಡ ದೊಡ್ಡ’ ನೇತಾರರು ಒಳಮೀಸಲಾತಿಯಂತಹ ಬಹಳ ಸಂದಿಗ್ದ ಪರಿಸ್ಥಿತಿಯಲ್ಲಿ ಸಾಪೇಕ್ಷ ತಟಸ್ಥರಾಗಿ ಉಳಿದುಕೊಂಡಿದ್ದರಿಂದ ಹಲವು ಪ್ರಶ್ನೆಗಳಿಗೆ ಆಸ್ಪದ ನೀಡಿದರು.

ದಲಿತ ಎಂಬ ಪದವನ್ನು ಸಾಮಾಜಿಕ, ಸಾಂಸ್ಕೃತಿಕ ರಾಜಕಾರಣದಲ್ಲಿ ಎಷ್ಟು ಗಟ್ಟಿಗೊಳಿಸುತ್ತೇವೆಯೋ ಅಷ್ಟು ಚುನಾವಣಾ ರಾಜಕಾರಣದಲ್ಲಿ ದಲಿತ ಎಂಬ ಪದಕ್ಕೆ, ಅದರ ಕೂಗಿಗೆ ಗಟ್ಟಿತನ ಬರುತ್ತದೆ. ಆದರೆ ಈಗ ಪ್ರಸ್ತುತ ಸನ್ನಿವೇಶದಲ್ಲಿ ಇರುವ ಪರಿಶಿಷ್ಟ ಜಾತಿಗಳ ರಾಜಕಾರಣಿಗಳು ತಮ್ಮ ಉಪಜಾತಿಗಳ ಹೆಸರಿನಲ್ಲೋ ಅಥವಾ ತಾನೆಷ್ಟು ಕಾಂಗ್ರೆಸ್ಸಿಗ ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನೋ, ಉಪಮುಖ್ಯಮಂತ್ರಿ ಹುದ್ದೆಯನ್ನೋ ಪಡೆಯಬಹುದು. ಈಗ ಪ್ರಸ್ತುತ ಇರುವ ರಾಜಕಾರಣಿಗಳಲ್ಲಿ ದಲಿತ ಎಂದು ಕ್ಲೇಮ್‌ ಮಾಡಿಕೊಳ್ಳುವಷ್ಟು, ದಲಿತ ಎಂಬ ಪದಕ್ಕೆ ನಿಜಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಯಾರೊಬ್ಬರೂ ಇಲ್ಲ. ಮುಂದೊಂದು ದಿನ ದಲಿತತ್ವವನ್ನು ನಿಜಕ್ಕೂ ಮೈಗೂಡಿಸಿಕೊಂಡಿರುವವರು, ನಿಜವಾದ ಸಾಮಾಜಿಕ ನ್ಯಾಯದ ಪ್ರತಿಪಾದಕರು ಬಂದಾಗ ದಲಿತ ಮುಖ್ಯಮಂತ್ರಿ ಮುಂತಾದವು ಸಾಧ್ಯವಾಗಬಹುದೇನೋ…

ಒಟ್ಟಾರೆ ದಲಿತ ಮುಖ್ಯಮಂತ್ರಿ ಎಂಬ ದಶಕಗಳ ಬಹುದೊಡ್ಡ ಕೂಗನ್ನು ದಲಿತ ರಾಜಕಾರಣಿಗಳು, ದಲಿತ ಮುಖಂಡರೇ ಹಾಳುಗೆಡವಿದ್ದಾರೆ ಎಂದರೆ ತಪ್ಪಾಗಲಾರದು.

ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

ಚಂದ್ರು ತರಹುಣಿಸೆ
ಚಂದ್ರು ತರಹುಣಿಸೆhttps://naanugauri.com/
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್
- Advertisment -

‘ಇಸಿಐನೆಟ್’ ಸಾಫ್ಟ್‌ವೇರ್ ಲೋಪ: ಸ್ಥಳೀಯ ಅಧಿಕಾರಿಗಳ ಶಾಸನಬದ್ಧ ಅಧಿಕಾರ ಹರಣ ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಹಾರಾಷ್ಟ್ರ ಸಿಇಒ ಸುದೀರ್ಘ ಪತ್ರ!

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೆ ತಂದಿರುವ 'ಇಸಿಐನೆಟ್' (ECINet) ಕೇಂದ್ರೀಕೃತ ಸಾಫ್ಟ್‌ವೇರ್, ಕಾನೂನುಬದ್ಧವಾಗಿ ಸ್ಥಳೀಯ ಮತದಾರ ನೋಂದಣಿ ಅಧಿಕಾರಿಗಳಿಗೆ (ERO) ನೀಡಲಾಗಿರುವ ಶಾಸನಬದ್ಧ ಅಧಿಕಾರಗಳನ್ನು ಕಸಿಯುತ್ತಿದೆ ಎಂಬ ಗಂಭೀರ ಆರೋಪ ಎದುರಾಗಿದೆ....

ಸಂಭಾಲ್ ಹಿಂಸಾಚಾರ ಪ್ರಕರಣ: ಮುಸ್ಲಿಂ ವ್ಯಕ್ತಿಯ NSA ಬಂಧನ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಯುಪಿ ಸರ್ಕಾರಕ್ಕೆ ₹10 ಲಕ್ಷ ದಂಡ

ನವದೆಹಲಿ: ಸಂಭಾಲ್‌ನಲ್ಲಿ 2024ರ ನವೆಂಬರ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಲಾ ಅಫ್ರೋಜ್ ಎಂಬುವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ತಡೆಗಟ್ಟುವ...

ಸಂಭಾಲ್ ಹಿಂಸಾಚಾರ | ಮುಲ್ಲಾ ಅಫ್ರೋಝ್ ಎನ್‌ಎಸ್‌ಎ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ; ಯುಪಿ ಸರ್ಕಾರಕ್ಕೆ 10 ಲಕ್ಷ ರೂ. ದಂಡ

2024ರ ಸಂಭಾಲ್ ಹಿಂಸಾಚಾರದ ರೂವಾರಿ ಎಂದು ಆರೋಪಿಸಲಾದ ಮುಲ್ಲಾ ಅಫ್ರೋಝ್ ಅವರನ್ನು 'ರಾಷ್ಟ್ರೀಯ ಭದ್ರತಾ ಕಾಯ್ದೆ, 1980'ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 29) ರದ್ದುಗೊಳಿಸಿದೆ....

ಔಷಧ ಬೆಲೆಗಳ ಹೆಸರಲ್ಲಿ ನಡೆಯುತ್ತಿದೆ ಲೂಟಿ: ಆಸ್ಪತ್ರೆ-ಮೆಡಿಕಲ್‌ಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ದೇಶದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (MRP) ಹೆಸರಿನಲ್ಲಿ ಔಷಧಗಳ ಬೆಲೆಯನ್ನು ಮನಬಂದಂತೆ ಹೆಚ್ಚಿಸಿ ಸಾಮಾನ್ಯ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ 'ಅಮಾನವೀಯ ಲೂಟಿ' ಎಂದು ತೀವ್ರವಾಗಿ ಖಂಡಿಸಿದೆ. ಔಷಧಗಳ ನೈಜ ಖರೀದಿ...

ಬಂಗಾಳ ಎಸ್‌ಐಆರ್‌ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ‘ಇವು ಕೇವಲ ಉಪಚುನಾವಣೆಗಳು’ ಎಂದ ಸಿಜೆಐ ಸೂರ್ಯಕಾಂತ್ ವಿರುದ್ಧ ಜನಾಕ್ರೋಶ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೊರಗಿಡಲಾದ ಮತದಾರರಿಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅರ್ಜಿದಾರರು ಅಕ್ಟೋಬರ್...

CWC Meeting : ಮೋದಿ, ಗ್ಯಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 5 ಬೇಡಿಕೆಗಳನ್ನು ಮುಂದಿಟ್ಟ ಕಾಂಗ್ರೆಸ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ನೋಂದಣಿ ನಿಯಮಗಳಿಗೆ ಬದಲಾವಣೆಗಳ ಮೂಲಕ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಸಿಇಸಿ ಗ್ಯಾನೇಶ್ ಕುಮಾರ್ ಅಮಾನತು ಕೋರಿದ ಅರ್ಜಿ: ಶೀಘ್ರ ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್!

ಭಾರತೀಯ ಚುನಾವಣಾ ಆಯೋಗದ ಸಾಂವಿಧಾನಿಕ ಅಧಿಕಾರಗಳನ್ನು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರನ್ನು ಹುದ್ದೆಯಿಂದ ಮಧ್ಯಂತರ ಅಮಾನತುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು...

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ‘SIR ಪರಿಶೋಧನಾ’ ವರದಿ ಬಿಡುಗಡೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣ ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ಸರ್ಕಾರಕ್ಕೆ ‘ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ ವರದಿ ಸಲ್ಲಿಕೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳನ್ನು ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಕರ್ನಾಟಕದಲ್ಲಿ ಇಂದಿನಿಂದ ಎಸ್‌ಐಆರ್ ‘ಕಚೇರಿ ವಿಚಾರಣೆ’ ಸ್ಥಗಿತ: ಚುನಾವಣಾ ಆಯೋಗದಿಂದ ಹೊಸ ಮಾರ್ಗದರ್ಶಿ!

ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಕಚೇರಿಗಳಿಗೆ ನೇರವಾಗಿ ಹಾಜರಾಗುವ 'ಕಚೇರಿ ವಿಚಾರಣೆ' (Physical Hearing) ವ್ಯವಸ್ಥೆಯನ್ನು ಕರ್ನಾಟಕದ...