Homeಮುಖಪುಟಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

- Advertisement -
- Advertisement -

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ (ಜೂನ್2) ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ದೆಹಲಿಯಲ್ಲಿ ಭೇಟಿಯಾದ ಅಣ್ಣಾಮಲೈ, ರಾಜೀನಾಮೆ ಪತ್ರ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಈ ಮೂಲಕ ಸುಮಾರು 6 ವರ್ಷಗಳ ಬಿಜೆಪಿ ಜೊತೆಗಿನ ಸಂಬಂಧವನ್ನು ಅಣ್ಣಾಮಲೈ ಕಡಿದು ಕೊಂಡಂತಾಗಿದೆ.

ಐಪಿಎಸ್ ಹುದ್ದೆ ತೊರೆದು ಬಿಜೆಪಿ ಸೇರಿದ್ದ ಅಣ್ಣಾಮಲೈ

ಅಣ್ಣಾಮಲೈ ಐಪಿಎಸ್ ಪಾಸ್ ಮಾಡಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಕಾರ್ಕಳದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಎಸ್ಪಿ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಸೇರಿದಂತೆ ಹಲವು ಹುದ್ದೆಗಳನ್ನು ಅವರು ನಿಭಾಯಿಸಿದ್ದರು. ಕೆಲವೊಂದಿಷ್ಟು ಜನರಿಂದ ‘ಸಿಂಗಂ’ ಎಂದು ಕರೆಸಿಕೊಳ್ಳುತ್ತಿದ್ದರು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈಗೆ ಒಂದು ರೀತಿಯ ಖ್ಯಾತಿ ಇತ್ತು.

ಸುಮಾರು 9 ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ, ಮೇ 2019ರಲ್ಲಿ ತಮ್ಮ ಐಪಿಎಸ್ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿ, ಹೊಸ ಬದಲಾವಣೆ ತರುತ್ತೇನೆ ಎಂದು ರಾಜಕೀಯ ಪ್ರವೇಶ ಮಾಡಿದರು.

ಐಪಿಎಸ್ ತೊರೆದ ಸುಮಾರು ಒಂದು ವರ್ಷದ ನಂತರ, ಆಗಸ್ಟ್ 2020ರಲ್ಲಿ ಅಣ್ಣಾಮಲೈ ನವದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ರಾಷ್ಟ್ರೀಯತಾವಾದಿ (ಹಿಂದುತ್ವವಾದಿ) ಸಿದ್ಧಾಂತದಿಂದ ಪ್ರೇರಿತರಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಆ ಸಂದರ್ಭದಲ್ಲಿ ತಿಳಿಸಿದ್ದರು.

ಪಕ್ಷ ಸೇರಿದ ಕೆಲವೇ ತಿಂಗಳುಗಳಲ್ಲಿ, ಅಂದರೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅವರು ಡಿಎಂಕೆ ಅಭ್ಯರ್ಥಿ ವಿರುದ್ಧ ಪೈಪೋಟಿ ನಡೆಸಿ ಸೋಲನುಭವಿಸಿದರು.

ನಂತರ, ಜುಲೈ 2021ರಲ್ಲಿ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಿಸಿತು. ತಮಿಳುನಾಡು ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ (37 ವರ್ಷ) ಈ ಜವಾಬ್ದಾರಿ ಹೊತ್ತ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಟುಸ್ ಆಯ್ತಾ ಮಾಜಿ ಐಪಿಎಸ್ ಲೆಕ್ಕಾಚಾರಾ?

ಪೊಲೀಸ್ ಇಲಾಖೆಯಲ್ಲಿ ಇರುವಾಗ ಕೆಲವರಿಂದ ‘ಸಿಂಗಂ’ ಎಂದು ಕರೆಸಿಕೊಳ್ಳುತ್ತಿದ್ದ ಅಣ್ಣಾಮಲೈ, ಬಿಜೆಪಿ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣುವಲ್ಲಿ ಸೋತರು. ಅವರು ಕೈ ಹಾಕಿದ ಯಾವುದೇ ಕಾರ್ಯಗಳು ಸಂಪೂರ್ಣ ಯಶ ಕಾಣಲಿಲ್ಲ. ಆದ್ದರಿಂದ ಮಾಜಿ ಐಪಿಎಸ್‌ ಅಧಿಕಾರಿಯ ರಾಜಕೀಯ ಲೆಕ್ಕಾಚಾರಗಳು ಟುಸ್ ಆಯ್ತಾ ಎಂಬ ಪ್ರಶ್ನೆ ಮೂಡುತ್ತದೆ.

ಅಣ್ಣಾಮಲೈ ಅವರು ವೈಯಕ್ತಿಕವಾಗಿ ಭಾರಿ ಜನಪ್ರಿಯತೆ ಗಳಿಸಿದರಾದರೂ, ಅದನ್ನು ಚುನಾವಣಾ ಗೆಲುವಾಗಿ ಪರಿವರ್ತಿಸಲು ವಿಫಲರಾದರು. ಅವರು ಸ್ವತಃ ಸ್ಪರ್ಧಿಸಿದ 2021ರ ವಿಧಾನಸಭಾ ಚುನಾವಣೆ (ಅರವಕುರಿಚಿ) ಮತ್ತು 2024ರ ಲೋಕಸಭಾ ಚುನಾವಣೆ (ಕೊಯಮತ್ತೂರು) ಎರಡರಲ್ಲೂ ಸೋಲನುಭವಿಸಿದರು.

ಅವರ ನೇತೃತ್ವದಲ್ಲಿ ಬಿಜೆಪಿ ಶೇಕಡ 11ರಷ್ಟು ಮತ ಗಳಿಸಿತೇ ವಿನಃ, ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಸೀಟುಗಳನ್ನು ಗೆದ್ದು ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ.

ತಮಿಳುನಾಡಿನ ಪ್ರಮುಖ ದ್ರಾವಿಡ ಪಕ್ಷವಾದ ಎಐಎಡಿಎಂಕೆ ನಾಯಕರ ವಿರುದ್ಧ ಅಣ್ಣಾಮಲೈ ನಿರಂತರವಾಗಿ ಆಕ್ರಮಣಕಾರಿ ವಾಗ್ದಾಳಿ ನಡೆಸಿದರು. ಇದರಿಂದ ಬೇಸತ್ತ ಎಐಎಡಿಎಂಕೆ ಬಿಜೆಪಿಯೊಂದಿಗಿನ ತನ್ನ ಮೈತ್ರಿಯನ್ನು ಸಂಪೂರ್ಣವಾಗಿ ಕಡಿದುಕೊಂಡಿತು.

ತಮಿಳುನಾಡಿನಂತಹ ದ್ರಾವಿಡ ಕೋಟೆಯಲ್ಲಿ ಪ್ರಾದೇಶಿಕ ಪಕ್ಷದ ಬೆಂಬಲವಿಲ್ಲದೆ ಒಂಟಿಯಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬ ಹೈಕಮಾಂಡ್ ಲೆಕ್ಕಾಚಾರ ನಿಜವಾಯಿತು. ಮೈತ್ರಿ ಮುರಿದುಕೊಂಡ ಅಣ್ಣಾಮಲೈ ಅವರ ಈ ಹಠದ ನಿರ್ಧಾರ ಅಂತಿಮವಾಗಿ ಪಕ್ಷಕ್ಕೆ ಚುನಾವಣಾ ಹಿನ್ನಡೆ ತಂದಿಟ್ಟಿತು.

ಪೊಲೀಸ್ ಅಧಿಕಾರಿಯ ಶೈಲಿಯಲ್ಲೇ ಪಕ್ಷ ಮುನ್ನಡೆಸಲು ಹೋದ ಅಣ್ಣಾಮಲೈ, ತಮಿಳುನಾಡು ಬಿಜೆಪಿಯಲ್ಲಿದ್ದ ಹಳೆಯ ಮತ್ತು ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. 

ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಬೀದಿಗೆ ಬಂದವು ಮತ್ತು ಹಲವು ಹಿರಿಯ ನಾಯಕರು ಇವರ ಏಕಪಕ್ಷೀಯ ನಿರ್ಧಾರಗಳಿಂದ ಬೇಸತ್ತು ಪಕ್ಷ ತೊರೆದರು ಅಥವಾ ಸೈಲೆಂಟ್ ಆದರು.

ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯ ಸಿದ್ಧಾಂತಕ್ಕೆ ಪರ್ಯಾಯವಾಗಿ ಹಿಂದುತ್ವವನ್ನು ಮುನ್ನೆಲೆಗೆ ತರಲು ಅಣ್ಣಾಮಲೈ ಪ್ರಯತ್ನಿಸಿದರು. ಆದರೆ, ದಶಕಗಳಿಂದ ತಮಿಳು ಜನರ ರಕ್ತದಲ್ಲಿರುವ ದ್ರಾವಿಡ ಅಸ್ಮಿತೆಯನ್ನು ದಾಟಿ ತಮಿಳುನಾಡಿನಲ್ಲಿ ಹಿಂದುತ್ವ ರಾಜಕಾರಣವನ್ನು ಗೆಲ್ಲಿಸಲು ಅವರ ತಂತ್ರಗಳು ವಿಫಲವಾದವು.

ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಕೂಡ ದ್ರಾವಿಡ ಸಂಪ್ರದಾಯಕ್ಕೆ ನಾವು ವಿರೋಧಿಯಲ್ಲ ಎಂದು ಬಿಂಬಿಸಿಕೊಳ್ಳಲು ಮುಂದಾದದ್ದು ಅಣ್ಣಾಮಲೈ ಅವರ ಸಿದ್ಧಾಂತದ ಸೋಲಿಗೆ ಸಾಕ್ಷಿಯಾಯಿತು.

ಪತ್ರಿಕಾಗೋಷ್ಠಿಗಳಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ವಿರುದ್ಧ ಅಣ್ಣಾಮಲೈ ಅವರು ಹಲವು ಬಾರಿ ಉದ್ವೇಗಕ್ಕೊಳಗಾಗಿ, ಏಕವಚನ ಬಳಸಿ ಅಥವಾ ವಾಗ್ದಾಳಿ ನಡೆಸಿ ವಿವಾದ ಮೈಮೇಲೆ ಎಳೆದುಕೊಂಡರು. ಇದು ಅವರ “ದಕ್ಷ ಅಧಿಕಾರಿ” ಎಂಬ ಇಮೇಜ್‌ಗೆ ರಾಜಕೀಯವಾಗಿ ಹಾನಿ ಉಂಟುಮಾಡಿತು. 

ಪಕ್ಷ ಸಂಘಟನೆಗೆ ಹೊಸ ಪ್ಲ್ಯಾನ್ ಮಾಡಿದ್ದ ಅಣ್ಣಾಮಲೈ, ರಾಜ್ಯದಾದ್ಯಂತ ‘ಎಣ್ ಮಣ್ಣ್ ಎಣ್ ಮಕ್ಕಳು’ (ನನ್ನ ಮಣ್ಣು, ನನ್ನ ಜನ) ಎಂಬ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡರು. ಆದರೆ, ಅದು ಫಲ ಕೊಡಲಿಲ್ಲ.

ಈ ಯಾತ್ರೆಯುದ್ದಕ್ಕೂ ಭಾರಿ ಜನಬೆಂಬಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದ್ದರೂ, ಅದು ನೇರವಾಗಿ ಚುನಾವಣಾ ಸೀಟುಗಳಾಗಿ ಪರಿವರ್ತನೆಯಾಗಲಿಲ್ಲ. ಯಾತ್ರೆಯ ಬಳಿಕ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ವತಃ ಸ್ಪರ್ಧಿಸಿದ್ದ ಅಣ್ಣಾಮಲೈ ಸೋತರು.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಎದುರಿಸಲು ಪ್ರಬಲ ಪ್ರಾದೇಶಿಕ ಪಕ್ಷವಾದ ಎಐಎಡಿಎಂಕೆ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿತ್ತು.

ಅಣ್ಣಾಮಲೈ ಅವರು ದ್ರಾವಿಡ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರಿಂದ ಎಐಎಡಿಎಂಕೆ ನಾಯಕರು ಅಸಮಾಧಾನಗೊಂಡಿದ್ದರು. ತಾವೂ ಮೈತ್ರಿಕೂಟಕ್ಕೆ ಮರಳಿ ಬರಬೇಕಾದರೆ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕಠಿಣ ಷರತ್ತನ್ನು ಎಐಎಡಿಎಂಕೆ ಹೈಕಮಾಂಡ್ ಮುಂದೆ ಇಟ್ಟಿತ್ತು. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಅಣ್ಣಾಮಲೈ ತಾವಾಗಿಯೇ ಆ ರೇಸ್‌ನಿಂದ ಹಿಂದೆ ಸರಿದು ರಾಜೀನಾಮೆ ನೀಡಿದ್ದರು. ಅವರ ನಂತರ ನಯಿನಾರ್ ನಾಗೇಂದ್ರನ್ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.

ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರಿಗೆ 6 ಪ್ರಮುಖ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ನೀಡಲಾಗಿತ್ತು. ಆದರೆ, ಪಕ್ಷವು ಎಐಎಡಿಎಂಕೆ ಜೊತೆ ತೋರುತ್ತಿರುವ ಮೃದು ಧೋರಣೆಯಿಂದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಪ್ರಮುಖವಾಗಿ ತಮ್ಮ ತಂದೆಯ ಅನಾರೋಗ್ಯದ ಕಾರಣವನ್ನು ನೀಡಿ ಅವರು ಈ ಚುನಾವಣಾ ಜವಾಬ್ದಾರಿಯಿಂದಲೂ ಅಧಿಕೃತವಾಗಿ ಮುಕ್ತಿ ಪಡೆದರು. 

ದ್ರಾವಿಡ ನಾಡಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ತಮಿಳುನಾಡಿನ ದ್ರಾವಿಡ ರಾಜಕಾರಣದ ಹಿನ್ನೆಲೆಯಲ್ಲಿ ಕೆ. ಅಣ್ಣಾಮಲೈ ಅವರ ಹಿಂದುತ್ವ ಮತ್ತು ಆಕ್ರಮಣಕಾರಿ ರಾಜಕೀಯ ಶೈಲಿಯು ವಿಫಲವಾಯಿತು ಎಂದೇ ಹೇಳಬಹುದು.

ಪೆರಿಯಾರ್, ಅಣ್ಣಾದೊರೈ ಹಾಗೂ ಕರುಣಾನಿಧಿ ಅವರಂತಹ ನಾಯಕರು ಬಿತ್ತಿದ ದ್ರಾವಿಡ ಸಿದ್ಧಾಂತ (ಪ್ರಾದೇಶಿಕ ಅಸ್ಮಿತೆ, ಸಾಮಾಜಿಕ ನ್ಯಾಯ ಮತ್ತು ತಮಿಳು ಭಾಷಾಭಿಮಾನ) ಆಳವಾಗಿ ಬೇರೂರಿರುವ ಮಣ್ಣಿನಲ್ಲಿ ಬಿಜೆಪಿಯ ಸಾಂಪ್ರದಾಯಿಕ ‘ಹಿಂದುತ್ವ’ ರಾಜಕಾರಣವನ್ನು ತರಲು ಅಣ್ಣಾಮಲೈ ಪ್ರಯತ್ನಿಸಿದರು. ಆದರೆ, ಇದು ವಿಫಲವಾಯಿತು.

ಅಣ್ಣಾಮಲೈ ಅವರು ‘ಎಣ್ ಮಣ್ಣ್ ಎಣ್ ಮಕ್ಕಳು’ ಯಾತ್ರೆಯ ಮೂಲಕ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದರೂ, ಲೋಕಸಭೆ ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ನಿರೀಕ್ಷಿತ ಸೀಟುಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ತಮಿಳು ಮತದಾರರು ವೈಯಕ್ತಿಕ ದೈವಭಕ್ತಿಯನ್ನು ಹೊಂದಿದ್ದರೂ, ಅದನ್ನು ರಾಜಕೀಯ ಹಿಂದುತ್ವದೊಂದಿಗೆ ಜೋಡಿಸಲು ಒಪ್ಪಲಿಲ್ಲ.

ಪೆರಿಯಾರ್ ಮತ್ತು ಅಣ್ಣಾದೊರೈ ಅವರಂತಹ ದ್ರಾವಿಡ ಸಿದ್ಧಾಂತದ ಧ್ರುವತಾರೆಗಳನ್ನು ಅಣ್ಣಾಮಲೈ ನೇರವಾಗಿ ಟೀಕಿಸಿದ್ದು ತಮಿಳು ಜನರ ಪ್ರಾದೇಶಿಕ ಹಿತಾಸಕ್ತಿಗೆ ಧಕ್ಕೆ ತಂದಂತೆ ಭಾಸವಾಯಿತು. ಇದು ಬಿಜೆಪಿಯ ಹಳೆಯ ಮಿತ್ರಪಕ್ಷವಾದ ಎಐಎಡಿಎಂಕೆ ಮೈತ್ರಿಕೂಟದಿಂದ ಹೊರನಡೆಯಲು ಕಾರಣವಾಯಿತು. 

ದೆಹಲಿ ನಾಯಕತ್ವದ ಹಿಂದಿ ಮತ್ತು ಹಿಂದುತ್ವಾದಿ ನೀತಿಗಳನ್ನು ತಮಿಳುನಾಡಿನ ಜನ ‘ಸಾಂಸ್ಕೃತಿಕ ಹೇರಿಕೆ’ ಎಂದು ಪರಿಗಣಿಸಿದರು. ಇತ್ತೀಚೆಗೆ ಸಿಬಿಎಸ್‌ಇಯ ತ್ರಿಭಾಷಾ ಸೂತ್ರವನ್ನು ಅಣ್ಣಾಮಲೈ ಅವರೇ ಸಾರ್ವಜನಿಕವಾಗಿ ವಿರೋಧಿಸಬೇಕಾಗಿ ಬಂದಿದ್ದು, ಈ ಹಿಂದುತ್ವದ ಚೌಕಟ್ಟು ದ್ರಾವಿಡ ಮಣ್ಣಿನಲ್ಲಿ ಕಾರ್ಯ ಸಾಧುವಾಗುದಿಲ್ಲ ಸಾಕ್ಷಿಯಾಗಿದೆ. 

ರಾಜಕೀಯ ವಿಶ್ಲೇಷಕರ ಪ್ರಕಾರ, ದ್ರಾವಿಡ ನಾಡಿನಲ್ಲಿ ಕೇವಲ ‘ಹಿಂದುತ್ವ’ದ ಕಾರ್ಡ್‌ ವರ್ಕೌಟ್‌ ಆಗುವುದಿಲ್ಲ ಎಂಬುದು ಮನವರಿಕೆಯಾಗಿರುವುದರಿಂದ ಅಣ್ಣಾಮಲೈ ಬಿಜೆಪಿಯಿಂದ ಹೊರಬಂದು ತಮಿಳುನಾಡಿನ ಮಣ್ಣಿಗೆ ಸರಿಹೊಂದುವ ಹೊಸದೊಂದು ಹಿಂದುತ್ವವಾದಿ ಚಳವಳಿ ಅಥವಾ ಪ್ರಾದೇಶಿಕ ರಾಜಕೀಯ ಪಕ್ಷ ಕಟ್ಟಲು ಸಜ್ಜಾಗುತ್ತಿದ್ದಾರೆ. 

 

 








ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...