Homeಚಳವಳಿಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

- Advertisement -
- Advertisement -

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು ದೇಶದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಶಾಂತಿಯುತ ಧರಣಿ ನಡೆಸುವಂತೆ ತನ್ನ ಬೆಂಬಲಿಗರು, ನಾಗರಿಕ ಸಮಾಜ ಹಾಗೂ ವಿದ್ಯಾರ್ಥಿ ಸಂಘಟನೆಗಳಿಗೆ ಅದು ಕರೆ ನೀಡಿದೆ.

ಜುಲೈ 20 ರಂದು ‘ಸಂಸದ್ ಚಲೋ’ ಮೆರವಣಿಗೆಯ ಮೇಲೆ ದೆಹಲಿ ಪೋಲೀಸರು ನಡೆಸಿದ ತೀವ್ರ ಬಲಪ್ರಯೋಗದ ನಂತರ, ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಹಾಗೂ ಅವರ ಹೋರಾಟದ ಹಾದಿಯನ್ನು ತಪ್ಪಿಸಲು ಬಲಪಂಥೀಯ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆಗಳು ಅಖಾಡಕ್ಕಿಳಿದಿವೆ.

View this post on Instagram

A post shared by Siddham Jain (@1siddham)

“ಪ್ರತಿಭಟನೆಯಲ್ಲಿ ಸಿವಿಲ್ ಉಡುಪಿನಲ್ಲಿದ್ದವರನ್ನು ಗೂಂಡಾಗಳೆಂದು ಪ್ರತಿಭಟನಾಕಾರರು ದೂರಿದ್ದರು, ಅವರು ವಾಸ್ತವವಾಗಿ ಪೋಲೀಸ್ ಅಧಿಕಾರಿಗಳು. ಆದರೆ ಅಸಲಿ ಗೂಂಡಾಗಳು ಈಗ ಬಂದಿದ್ದಾರೆ, ಇಡೀ ದೆಹಲಿಯಲ್ಲಿ ಸುತ್ತಾಡುತ್ತಿದ್ದೇವೆ, ನಮಗೆ ಒಂದೇ ಒಂದು ಕಾಕ್ರೋಚ್ (ಪ್ರತಿಭಟನಾಕಾರರು) ಕೂಡ ಸಿಗುತ್ತಿಲ್ಲ” ಎಂದು ಲಾಯ್ಡ್‌ ಹರಡುತ್ತಿರುವ ಸ್ವತಂತ್ರ ಭಾರದ್ವಾಜ್ ಎಂಬ ಹಿಂದುತ್ವ ಇನ್ಫ್ಲುಯೆನ್ಸರ್‌ನ ವಿಡಿಯೋ ಲಕ್ಷಾಂತರ ಲೈಕ್ಸ್ ಪಡೆದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

View this post on Instagram

A post shared by Swatantra Bhardwaj (@bhardwaj_swatantra_official)

ಸಾರ್ವಜನಿಕವಾಗಿ ಇಂತಹ ಬೆದರಿಕೆ ಹಾಕುವ ಮೂಲಭೂತವಾದಿ ಪಡೆಯು, ಜಂತರ್ ಮಂತರ್‌ನ ವಿದ್ಯಾರ್ಥಿ ಚಳವಳಿಯನ್ನು ‘ದೇಶದ್ರೋಹಿ’, ‘ವಿದೇಶಿ ನಿಧಿ ಆಧಾರಿತ’ ಹಾಗೂ ‘ಜಿಹಾದಿ ಮನಸ್ಥಿತಿ’ ಎಂದು ಬಿಂಬಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಕೇವಲ ಒಂದು ದಿನ ದೆಹಲಿ ಪೋಲೀಸ್‌ ಪಡೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಿ, ಸಮವಸ್ತ್ರವಿಲ್ಲದೆ ಇಡೀ ಪ್ರತಿಭಟನಾಕಾರರಿಗೆ ಲಾಠಿಯಿಂದ ಬುದ್ಧಿ ಕಲಿಸಿ ಅವರ ಜಾಗವನ್ನು ತೋರಿಸುತ್ತೇವೆ ಎಂದು ಈ ಶಕ್ತಿಗಳು ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡುತ್ತಿವೆ.

These Hindutva miscreants aim to "deal with the cockroaches" and seem to be infiltrating the Jantar Mantar protest.

ಈ ಬಲಪಂಥೀಯ ಇಕೋ-ಸಿಸ್ಟಮ್‌ನ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳದಲ್ಲಿ ನೇರವಾಗಿ ಹಿಂಸೆಯಲ್ಲಿ ಪಾಲ್ಗೊಂಡಿದ್ದಾರೆ. ಲಕ್ಷಾಂತರ ಫಾಲೋವರ್ಸ್‌ ಹೊಂದಿರುವ ಸ್ವತಂತ್ರ ಭಾರದ್ವಾಜ್, ಸಚಿವ ಚಿರಾಗ್ ಪಾಸ್ವಾನ್ ಅವರೊಂದಿಗೆ ಫೋಟೋ ಹಂಚಿಕೊಂಡಿರುವ ವಿಡಿಯೋಗಳ ಜೊತೆಗೆ, ಪ್ರತಿಭಟನಾ ಸ್ಥಳದಲ್ಲಿದ್ದ ಪುಟ್ಟ ಹೆಣ್ಣುಮಗುವಿನ ತಂದೆ ಸಂಜಯ್ ಎಂಬುವವರ ಮೇಲೆ ಹಲ್ಲೆ ಮಾರಣಾಂತಿಕ ನಡೆಸಿ ದೌರ್ಜನ್ಯ ಎಸಗಿದ್ದಾನೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಸ್ಪಷ್ಟಪಡಿಸಿದ್ದಾರೆ.

#Imp: This goon also attacked minor Nishu’s father, Sanjay ji, inside Jantar Mantar and broke his skull. We kept demanding that the Police invoke SC/ST Act, and stricter IPC provisions. Our fear was that he’ll be emboldened to repeat this.@DCPNewDelhi why are you protecting…

— Saurav Das (@SauravDassss) July 23, 2026

ಇನ್ನು 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಅಭಿಷೇಕ್ ಠಾಕೂರ್ ಸನಾತನಿ ಎಂಬ ಮತ್ತೊಬ್ಬ ಇನ್ಫ್ಲುಯೆನ್ಸರ್, ತನ್ನ ಕೈಯಲ್ಲಿ ಲಾಠಿ ಹಿಡಿದುಕೊಂಡು “ನಮಗೆ ಕೇವಲ 6 ಗಂಟೆ ಸಮಯ ಕೊಡಿ, ದೇಶವನ್ನು ಬಾಂಗ್ಲಾದೇಶ ಅಥವಾ ನೇಪಾಳ ಮಾಡಲು ಹೊರಟಿರುವ ಈ ಉಗ್ರರನ್ನು ಭೂಮಿಯ ಮೇಲೆಯೇ ಜಾಗವಿಲ್ಲದಂತೆ ಓಡಿಸುತ್ತೇವೆ” ಎಂದು ಬಹಿರಂಗ ಸವಾಲು ಹಾಕಿದ್ದಾನೆ. ಈತನೂ ಸಹ ಕಪಿಲ್ ಮಿಶ್ರಾ ಮತ್ತು ಡಾ. ಸುಧಾಂಶು ತ್ರಿವೇದಿ ಅವರಂತಹ ಬಿಜೆಪಿ ಅಗ್ರ ನಾಯಕರೊಂದಿಗೆ ಸಿಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ.

View this post on Instagram

A post shared by Abhishek Singh (@abhishekthakursanatani)

ಅಷ್ಟೇ ಅಲ್ಲದೆ, ‘ಹಿಂದು ರಕ್ಷಾ ದಳ’ದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದ್ರ ತೋಮರ್ ಉರುಫ್ ‘ಪಿಂಕಿ ಭಯ್ಯಾ’ ಹಾಗೂ ಹರ್ಷ ಚೌಧರಿ ನೇತೃತ್ವದ ಪಡೆಗಳು ಕತ್ತಿಗಳನ್ನು ಪ್ರದರ್ಶಿಸುತ್ತಾ, “ಪ್ರತಿಭಟನಾಕಾರರಿಗೆ ಪಾಠ ಕಲಿಸಲು ಪ್ರತಿ ಹಿಂದುತ್ವ ಯೋಧನೂ ಸಿದ್ಧರಾಗಬೇಕು” ಎಂದು ಪ್ರಚೋದನಾಕಾರಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇವರಲ್ಲಿ ಕೆಲವರು ತಾವೇ ಪೋಲೀಸರಂತೆ ವೇಷ ಧರಿಸಿ ಪ್ರತಿಭಟನಾಕಾರರ ಗುಂಪಿನೊಳಗೆ ನುಸುಳಿ, ಮಾಧ್ಯಮ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಉದ್ರೇಕಿಸುತ್ತಿರುವುದು ಹಾಗೂ ‘ಹೊಡೆಯಿರಿ ಹೊಡೆಯಿರಿ’ ಎಂದು ಕೂಗುತ್ತಿರುವುದು ರೆಕಾರ್ಡ್ ಆಗಿದೆ.

View this post on Instagram

A post shared by Abhishek Singh (@abhishekthakursanatani)

ಈ ವೈರಲ್ ವಿಡಿಯೋಗಳಲ್ಲಿ ಗೂಂಡಾಗಿರಿ ಜೊತೆಗೆ, ಅಖಿಲ ಭಾರತ ಹಿಂದೂ ಮಹಾಸಭಾದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಅಗರ್ವಾಲ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿ, ಇಡೀ ವಿದ್ಯಾರ್ಥಿ ಹೋರಾಟದ ವಿರುದ್ಧ ಎನ್‌ಐಎ (NIA) ತನಿಖೆಗೆ ಆಗ್ರಹಿಸುವ ಮೂಲಕ ನ್ಯಾಯಾಲಯವನ್ನೂ ಹೋರಾಟಗಾರರ ವಿರುದ್ಧ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.

View this post on Instagram

A post shared by Abhishek Singh (@abhishekthakursanatani)

ಒಟ್ಟಾರೆಯಾಗಿ, ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ತಮ್ಮ ಭವಿಷ್ಯಕ್ಕಾಗಿ ಪ್ರತಿಭಟಿಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು, ಯುವತಿಯರು ಮತ್ತು ಮಕ್ಕಳ ಮೇಲೆ ದೆಹಲಿ ಪೋಲೀಸರ ಲಾಠಿಚಾರ್ಜ್‌ ಒಂದೆಡೆಯಾದರೆ, ಇನ್ನೊಂದೆಡೆ ರಾಜಕೀಯ ಬೆಂಬಲದೊಂದಿಗೆ ‘ಒಂದು ದಿನದ ಮಟ್ಟಿಗೆ ನಮ್ಮನ್ನು ಪೋಲೀಸ್‌ ಮಾಡಿ’ ಎಂದು ಅರಚುತ್ತಿರುವ ಉಗ್ರ ಮೂಲಭೂತವಾದಿಗಳ ಸೃಷ್ಟಿತ ಗೂಂಡಾಗಿರಿಯ ಭೀತಿ ಎದುರಾಗಿದೆ. ನ್ಯಾಯಯುತ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲು ಸರ್ಕಾರಿ ಶಕ್ತಿ ಮತ್ತು ಬಲಪಂಥೀಯ ಗೂಂಡಾಗಳು ಕೈಜೋಡಿಸಿರುವುದು ನಮ್ಮ ಪ್ರಜಾಪ್ರಭುತ್ವದ ಅಸ್ಮಿತೆಗೆ ಎದುರಾಗಿರುವ ಅತಿದೊಡ್ಡ ಅಪಾಯವಾಗಿದೆ.

Source: The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...