ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ ಎಂದು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ಮೂಲವೊಂದು ತಿಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕನ್ನಾಟ್ ಪ್ಲೇಸ್‌ನ ಪಾಲಿಕಾ ಬಜಾರ್ ಬಳಿ ನಿಂದಿದ್ದ ಮನ್ಸೂರಿ ಅವರನ್ನು ಸಮವಸ್ತ್ರದಲ್ಲಿದ್ದ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಜವಾನನೊಬ್ಬ ಹೊಡೆದಿದ್ದಾನೆ ಎಂದು ಮತ್ತೋರ್ವ ಪ್ರತಿಭಟನಾಕಾರ ಶೇಖ್ ಇರ್ಷಾದ್ ಮನ್ಸೂರಿ ತಿಳಿಸಿದ್ದಾರೆ ಎಂದು ದಿ ಹಿಂದೂಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ನಾಗರಿಕರ ಮೇಲೆ ಭದ್ರತಾ ಪಡೆಗಳು ಪೆಲೆಟ್ ಗನ್ ಬಳಸಿದ ಮೊದಲ ಪ್ರಕರಣ ಇದಾಗಿದೆ. ವಿದ್ಯುತ್ ಶಾಕ್ ಲಾಠಿಯಿಂದ ಮಹಿಳೆಯೊಬ್ಬರು ಆಘಾತಗೊಂಡಿರುವ ವೀಡಿಯೊ ಮಂಗಳವಾರ (ಜುಲೈ 21) ಕಂಡುಬಂದಿದೆ. ದೆಹಲಿಯಲ್ಲಿ ಬಳಸಲಾದ ಮೊದಲ ಶಾಕ್ ಲಾಠಿ ಪ್ರಕರಣ ಇದಾಗಿದೆ, ಇದು ಕಡಿಮೆ ವಿದ್ಯುತ್ ಆಘಾತವನ್ನು ಹೊಂದಿರುತ್ತದೆ.
ಪೆಲೆಟ್ ಗನ್‌ಗಳು ಮತ್ತು ವಿದ್ಯುತ್ ಲಾಠಿಗಳು ಆರ್‌ಎಎಫ್‌ನ ಉಪಕರಣಗಳ ಭಾಗವಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಡಿಯಲ್ಲಿ ಗಲಭೆ ನಿಗ್ರಹ ಘಟಕವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಹಫರಾಟದ ಭದ್ರತೆಗೆ ಜಂತರ್ ಮಂತರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೆಹಲಿ ಪೊಲೀಸರೊಂದಿಗೆ ನಿಯೋಜಿಸಲಾಗಿತ್ತು.
ಸಿಜೆಪಿಯ ಸೌರವ್ ದಾಸ್ ಅವರು ಮನ್ಸೂರಿ ಅವರ ಗಾಯದ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸಿಆರ್‌ಪಿಎಫ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ನವದೆಹಲಿಯ ಉಪ ಪೊಲೀಸ್ ಆಯುಕ್ತರು ಮಾತನಾಡಿ, “ಪೊಲೀಸ್ ಪಡೆಗಳು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್‌ಗಳನ್ನು ಬಳಸುತ್ತಿವೆ ಎಂದು ಹೇಳುವ ವರದಿಗಳು ಸಂಪೂರ್ಣವಾಗಿ ಸುಳ್ಳು ಹಾಗೂ ದಾರಿತಪ್ಪಿಸುವವು. ಪರಿಶೀಲಿಸದ ವಿಷಯವನ್ನು ಹಂಚಿಕೊಳ್ಳಬೇಡಿ ಅಥವಾ ಪ್ರಸಾರ ಮಾಡಬೇಡಿ ಎಂದು ಸಾರ್ವಜನಿಕರಿಗೆ ಬಲವಾಗಿ ಸೂಚಿಸಲಾಗಿದೆ. ಯಾವುದೇ ಮಾಹಿತಿಯನ್ನು ಪೋಸ್ಟ್ ಮಾಡುವ ಅಥವಾ ಫಾರ್ವರ್ಡ್ ಮಾಡುವ ಮೊದಲು ದಯವಿಟ್ಟು ಅಧಿಕೃತ ಮೂಲಗಳಿಂದ ಸತ್ಯಗಳನ್ನು ಪರಿಶೀಲಿಸಿ” ಎಂದು ಮನವಿ ಮಾಡಿದ್ದಾರೆ.
ಪೆಲೆಟ್ ಗನ್ ಅನ್ನು ಕೊನೆಯದಾಗಿ ಪಂಜಾಬ್-ಹರಿಯಾಣ ಗಡಿಯ ಖಾನೌರಿ ಮತ್ತು ಶಂಭು ಗಡಿಯಲ್ಲಿ 2024 ರ ರೈತರ ಪ್ರತಿಭಟನೆಯ ಸಮಯದಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿದೆ. ಆಗ ಪೊಲೀಸರು ಪೆಲೆಟ್ ಗನ್ ಬಳಸುವುದನ್ನು ನಿರಾಕರಿಸಿದ್ದರೂ, ಕೃಷಿ ಮುಖಂಡರು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದರು. 2023 ರಲ್ಲಿ, ಜನಾಂಗೀಯ ಸಂಘರ್ಷದಿಂದ ಛಿದ್ರಗೊಂಡ ಮಣಿಪುರದಲ್ಲಿ ಪ್ರತಿಭಟನಾಕಾರರ ವಿರುದ್ಧ ಬಂದೂಕುಗಳನ್ನು ಬಳಸಲಾಗಿದ್ದು, ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಹಿಂದೆ, 2016 ರ ಅಶಾಂತಿಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್‌ಗಳನ್ನು ಬಳಸಲಾಗಿದ್ದು, ಹಲವಾರು ಜನರು ಭಾಗಶಃ ಅಥವಾ ಸಂಪೂರ್ಣವಾಗಿ ಕುರುಡರಾಗಿದ್ದಾರೆ.
ಪೆಲೆಟ್ ಗನ್‌ನಿಂದ ಗಾಯಗೊಂಡಿರುವ ಮನ್ಸೂರಿ ಅವರ ದೇಹದ ಮೇಲ್ಭಾಗದಲ್ಲಿ ಸಿಲುಕಿದ್ದ ಗುಂಡುಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. “ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕಣ್ಣುಗಳ ಕೆಳಗಿನ ಗುಂಡುಗಳನ್ನು ತೆಗೆದುಹಾಕಲಾಯಿತು. ಆದರೆ, ಅವರ ಕುತ್ತಿಗೆಯಲ್ಲಿ ಒಂದನ್ನು ರಕ್ತನಾಳಕ್ಕೆ ಹತ್ತಿರದಲ್ಲಿದ್ದರಿಂದ ಅದನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಅವರಿಗೆ ಅದಕ್ಕಾಗಿ ಮತ್ತೊಂದು ಶಸ್ತ್ರಚಿಕಿತ್ಸೆ ಬೇಕಾಗಬಹುದು” ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಸ್ಪತ್ರೆಯ ಮೂಲವೊಂದರ ಪ್ರಕಾರ, ಸಂಜೆಯ ಹೊತ್ತಿಗೆ ಗಾಯಗೊಂಡವರ ಸಂಖ್ಯೆ 83 ಕ್ಕೆ ಏರಿತು, ಇದರಲ್ಲಿ ನಾಗರಿಕರು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರನನ್ನು ಕಣ್ಣಿಗೆ ಗಾಯವಾಗಿ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ, ಇದು ಪೆಲೆಟ್‌ಗಳ ಕಾರಣದಿಂದಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಇತರ ಗಾಯಗಳಿಂದ ಬಳಲುತ್ತಿದ್ದ 15 ವರ್ಷದ ಪ್ರತಿಭಟನಾಕಾರರನ್ನು ಕಲಾವತಿ ಸರನ್ ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಜಂತರ್ ಮಂತರ್‌ಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕರು
ಮಂಗಳವಾರ (ಜುಲೈ 21) ಮಧ್ಯಾಹ್ನ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಆಸ್ಪತ್ರೆಗೆ ಭೇಟಿ ನೀಡಿ ಮನ್ಸೂರಿ ಅವರನ್ನು ಭೇಟಿಯಾದರು. “ಮುಖ ಮತ್ತು ದೇಹದಾದ್ಯಂತ ಸುಮಾರು 30-40 ಗಾಯಗಳಿವೆ. ವೈದ್ಯರ ಪ್ರಕಾರ, ಅವುಗಳಲ್ಲಿ ಕುತ್ತಿಗೆಯಲ್ಲಿ ಸೇರಿದಂತೆ ನಾಲ್ಕು ಪೆಲೆಟ್‌ಗಳು ಆಳವಾಗಿ ಭೇದಿಸಿವೆ, ಅದಕ್ಕಾಗಿಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ” ಎಂದು ಅವರ ಸ್ನೇಹಿತರೊಬ್ಬರು ಹೇಳಿದರು.
ಮೂಲತಃ ಮಧ್ಯಪ್ರದೇಶದ ಜಬಲ್ಪುರದ ಮನ್ಸೂರಿ ಗುರುಗ್ರಾಮ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳ ಒಗ್ಗಟ್ಟಿನ ಪ್ರತಿಭಟನೆಗಳಲ್ಲಿ ಅವರು ಭಾಗವಹಿಸುತ್ತಿದ್ದರು.
ಆಸ್ಪತ್ರೆಗೆ ಭೇಟಿ ನೀಡಿದ್ದ ನಡ್ಡಾ, “ಪ್ರತಿಭಟನಾ ಸ್ಥಳಕ್ಕೆ ಏಕೆ ಹೋಗಿದ್ರಿ?” ಎಂದು ಕೇಳಿದಾಗ, “ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಕಾರಣಕ್ಕೆ ನಾನು ಅಲ್ಲಿಗೆ ಹೋಗಬೇಕಾಯಿತು” ಎಂದು ಮನ್ಸೂರಿ ಹೇಳಿದರು ಎಂದು ಅವರ ಸ್ನೇಹಿತ ಹೇಳಿದರು.


