Homeಕರ್ನಾಟಕಎಸ್‌ಸಿ-ಎಸ್‌ಟಿ ಮತ್ತು ಮುಸ್ಲಿಮರ ಇತಿಹಾಸ, ಸಂಕಟ ಒಂದೇ, ಸಮಸಮಾಜ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಶೋಷಿತ ಸಮುದಾಯಗಳು...

ಎಸ್‌ಸಿ-ಎಸ್‌ಟಿ ಮತ್ತು ಮುಸ್ಲಿಮರ ಇತಿಹಾಸ, ಸಂಕಟ ಒಂದೇ, ಸಮಸಮಾಜ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಶೋಷಿತ ಸಮುದಾಯಗಳು ಒಂದಾಗಬೇಕಿದೆ: ರಿಜ್ವಾನ್ ಅರ್ಷದ್

- Advertisement -
- Advertisement -

ಸಮಾಜದಲ್ಲಿ ತಾರತಮ್ಯ ಮತ್ತು ಶೋಷಣೆಗೆ ಒಳಗಾದ ಸಮುದಾಯಗಳು ಒಗ್ಗಟ್ಟಾಗಿ ನಿಂತಾಗ ಮಾತ್ರ ಸಾಮಾಜಿಕ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಐತಿಹಾಸಿಕ, ಸಾಮಾಜಿಕ ಹಾಗೂ ರಕ್ತಸಂಬಂಧದ ಬಾಂಧವ್ಯವನ್ನು ಉಲ್ಲೇಖಿಸಿ ಮಹತ್ವದ ಮಾತುಗಳನ್ನು ಆಡಿದ್ದಾರೆ.

ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಹೋರಾಟಗಳು ಹಾಗೂ ಕಾರ್ಯಕ್ರಮಗಳಲ್ಲಿ ತಾವು ಸದಾ ಮುಂಚೂಣಿಯಲ್ಲಿ ಭಾಗವಹಿಸುವುದಕ್ಕೆ ಇರುವ ಐತಿಹಾಸಿಕ ಕಾರಣವನ್ನು ಬಿಚ್ಚಿಟ್ಟ ರಿಜ್ವಾನ್ ಅರ್ಷದ್, ಇಂದಿನ ಬಹುತೇಕ ಮುಸ್ಲಿಮರು ಮೂಲತಃ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಹಿನ್ನೆಲೆಯಿಂದ ಬಂದವರಾಗಿದ್ದಾರೆ, “ನಾವು (ಮುಸಲ್ಮಾನರು) ಮೂಲತಃ ಮಾಜಿ ದಲಿತರು ಹಾಗೂ ಮಾಜಿ ಎಸ್‌ಸಿ-ಎಸ್‌ಟಿಗಳು” ಎಂದು ವ್ಯಾಖ್ಯಾನಿಸಿದ ಅವರು, ಈ ಸಮುದಾಯಗಳು ಬೇರೆ ಬೇರೆಯಲ್ಲ; ಬದಲಿಗೆ ಒಂದೇ ಇತಿಹಾಸ, ಒಂದೇ ಸಂಕಟ ಮತ್ತು ಒಂದೇ ಹಿನ್ನೆಲೆಯನ್ನು ಹಂಚಿಕೊಂಡಿರುವ ಸಮುದಾಯಗಳು ಎಂದು ತಿಳಿಸಿದ್ದಾರೆ.

ಚಾರಿತ್ರಿಕವಾಗಿ ಭಾರತೀಯ ಸಮಾಜದಲ್ಲಿದ್ದ ಮನುಷ್ಯವಿರೋಧಿ ವ್ಯವಸ್ಥೆ, ಜಾತಿಯಾಧಾರಿತ ಅನ್ಯಾಯಗಳು ಹಾಗೂ ಅಸಮಾನತೆಯ ಕಡಿವಾಣಗಳಿಂದ ಹೊರಬರಲು ನಮ್ಮ ಪೂರ್ವಜರು ಪರ್ಯಾಯ ವ್ಯವಸ್ಥೆಯನ್ನು ಅರಸಿದರು. ಅಂದು ಅನುಭವಿಸಿದ ತೀವ್ರ ಶೋಷಣೆಯ ಫಲವಾಗಿಯೇ ನಮ್ಮ ಹಿರಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಎಂದು ಸ್ಮರಿಸಿದ ಅವರು, ಧರ್ಮ ಪರಿವರ್ತನೆಯಾದ ತಕ್ಷಣ ರಕ್ತ ಅಥವಾ ಮೂಲ ಸಾಮಾಜಿಕ ಹಿನ್ನೆಲೆ ಬದಲಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಧಾರ್ಮಿಕ ಪರಿವರ್ತನೆಯಾಗಿದ್ದರೂ ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಂ ಸಮುದಾಯಗಳ ರಕ್ತ, ಜೀವಪರ ಕಾಳಜಿ ಮತ್ತು ದೈನಂದಿನ ಬದುಕಿನ ವಾಸ್ತವಗಳು ಇಂದಿಗೂ ಒಂದೇ ಆಗಿವೆ ಎಂದಿದ್ದಾರೆ.

ಸಮಾಜದ ಭೌಗೋಳಿಕ ಮತ್ತು ಸಾಮಾಜಿಕ ರಚನೆಯನ್ನು ಉಲ್ಲೇಖಿಸಿದ ಅವರು, ಇಂದಿಗೂ ದೇಶದ ಯಾವುದೇ ಮೂಲೆಗೆ ಹೋದರೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಪಕ್ಕದಲ್ಲೇ ಮುಸ್ಲಿಂ ಸಮುದಾಯದ ಬಡಾವಣೆಗಳು ಇರುವುದನ್ನು ಕಾಣಬಹುದು. ಇದು ಕೇವಲ ಕಾಕತಾಳೀಯವಲ್ಲ, ಬದಲಿಗೆ ಶತಮಾನಗಳಿಂದ ಬೆಳೆದು ಬಂದಿರುವ ಸಾಮಾಜಿಕ ಹಾಗೂ ಆರ್ಥಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಆದ್ದರಿಂದ, ಮನುಷ್ಯ ಮನುಷ್ಯರನ್ನು ಗೌರವಿಸುವ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡುವ ಪ್ರಗತಿಪರ ಸಮಾಜವನ್ನು ನಿರ್ಮಿಸಲು ಈ ಎಲ್ಲಾ ಶೋಷಿತ ವರ್ಗಗಳು ಒಂದಾಗಿ ಹೋರಾಡುವುದು ಇಂದಿನ ತುರ್ತು ಪರಿಸ್ಥಿತಿಗೆ ಅಗತ್ಯವಾಗಿದೆ ಎಂದು ರಿಜ್ವಾನ್ ಅರ್ಷದ್ ಕರೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಎಸ್‌ಐಆರ್‌ನಲ್ಲಿ ಹೆಸರು ಅಳಿಸಿದ ಬಳಿಕ ಮರು ನೋಂದಣಿ: ಮತದಾರರ ವಿರುದ್ಧ ಕ್ರಮವಿಲ್ಲ ಎಂದ ಸುಪ್ರೀಂ ಕೋರ್ಟ್ 

ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಹೆಸರುಗಳನ್ನು ಅಳಿಸಿರುವ ಪ್ರಕರಣದಲ್ಲಿ, ಮರು ನೋಂದಣಿಗೆ ಅರ್ಜಿ ಸಲ್ಲಿಸುವ ಮತದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಸುಪ್ರೀಂ...

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಹಗರಣ: ತಮಿಳುನಾಡು ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಮೌಲ್ಯದ ಹಗರಣವೊಂದಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಹಾಗೂ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು...

‘ಉತ್ತರ ಪ್ರದೇಶ ಪೊಲೀಸರಿಗೆ ತನಿಖೆಯ ಸೂಕ್ತ ತರಬೇತಿ ಅಗತ್ಯ’: 6 ವರ್ಷ ಅನಗತ್ಯವಾಗಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿ ₹6 ಲಕ್ಷ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ!

ಅಪಹರಣ ಮತ್ತು ಕೊಲೆ ಪ್ರಕರಣವೊಂದರಲ್ಲಿ ಯಾವುದೇ ಆಧಾರವಿಲ್ಲದೆ ಸುದೀರ್ಘ 6 ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಾಲ ಕಳೆದ ಅರುಣ್ ಅಲಿಯಾಸ್ ದೀಪಕ್ ಎಂಬ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ನಿರಪರಾಧಿ...

ನವದೆಹಲಿ| ರಾಷ್ಟ್ರಪತಿ ಭವನ ಸಮೀಪದ ನಾರ್ತ್ ಬ್ಲಾಕ್‌ನಲ್ಲಿ ಬೆಂಕಿ ಅವಘಡ; ದಟ್ಟ ಹೊಗೆ

ನವದೆಹಲಿಯ ರಾಷ್ಟ್ರಪತಿ ಭವನದ ಸಮೀಪವಿರುವ ನಾರ್ತ್ ಬ್ಲಾಕ್ ಪ್ರದೇಶದಲ್ಲಿ ಸೋಮವಾರ ಸಣ್ಣ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ...

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ಡಿಕ್ಕಿ; ಎಸ್‌ಐಟಿ ತನಿಖೆಗೆ ಆದೇಶ

ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ಸುಲ್ತಾನ್‌ಪುರ ನ್ಯಾಯಾಲಯಕ್ಕೆ ತೆರಳುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯಲ್ಲಿದ್ದ ಹಲವು ವಾಹನಗಳು 'ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ'ನಲ್ಲಿ ಪರಸ್ಪರ ಡಿಕ್ಕಿ...

ಮಹಾರಾಷ್ಟ್ರ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್, ತಡೆ ನೀಡಲು ನಿರಾಕರಣೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ...

ಕರ್ನಾಟಕ SIR : ಚುನಾವಣಾ ಅಧಿಕಾರಿಗಳಿಂದಲೇ 61,000ಕ್ಕೂ ಹೆಚ್ಚು ಫಾರಂ-7 ಅರ್ಜಿ ಸಲ್ಲಿಕೆ; ಒಂದರಲ್ಲೂ ಕಾರಣ ಉಲ್ಲೇಖಿಸಿಲ್ಲ-ವರದಿ

ಕರ್ನಾಟಕದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿ ಕನಿಷ್ಠ 61,059 ಫಾರಂ-7 ಅರ್ಜಿಗಳನ್ನು ಸ್ವತಃ ಚುನಾವಣಾ ಅಧಿಕಾರಿಗಳೇ ಸಲ್ಲಿಸಿದ್ದು, ಅವುಗಳಲ್ಲಿ ಒಂದೇ ಒಂದು ಅರ್ಜಿಯಲ್ಲೂ ಹೆಸರು ಕೈಬಿಡಲು ಕಾರಣವನ್ನು ನಮೂದಿಸಿಲ್ಲ. ಮತದಾರರ ನೋಂದಣಿ...

ಮತದಾರರನ್ನು ಪ್ರಭಾವಿಸಲು ಬಿಜೆಪಿ ಹಣ – ಬೆದರಿಕೆ ಬಳಸುತ್ತಿದೆ: ಮಮತಾ ಆರೋಪ

ಬಿಜೆಪಿ ಹಣ ಮತ್ತು ಬೆದರಿಕೆಯನ್ನು ಬಳಸಿ ಜನರನ್ನು ಪ್ರಭಾವಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. "ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರ ದೌರ್ಜನ್ಯಗಳು ಹೆಚ್ಚಾಗಿವೆ, ಸರ್ಕಾರಿ ಅಧಿಕಾರಿಗಳು...

ಬ್ರೆಜಿಲ್ ಚುನಾವಣೆ: ಟ್ರಂಪ್ ಬೆಂಬಲಿತ ಬಲಪಂಥೀಯ ಬೋಲ್ಸೊನಾರೊಗೆ ಸೋಲು; ನಾಲ್ಕನೇ ಬಾರಿಗೆ ಎಡಪಂಥೀಯ ಲುಲಾಗೆ ಗೆಲುವು 

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ತೀವ್ರ ಬಲಪಂಥೀಯ ಎದುರಾಳಿ ಫ್ಲಾವಿಯೊ ಬೋಲ್ಸೊನಾರೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಬ್ರೆಜಿಲ್‌ನ...

ಭಾರತ-ಚೀನಾ ಗಡಿ ಸಮಸ್ಯೆಗಳ ಕುರಿತ 26 ರೆಡ್ಡಿಟ್ ಪೋಸ್ಟ್‌ಗಳಿಗೆ ನಿರ್ಬಂಧ: ಕೇಂದ್ರದ ರಹಸ್ಯ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಐಎಫ್‌ಎಫ್

ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದ ಚರ್ಚೆಗಳು, ಸೇನಾ ದೃಶ್ಯಗಳ ಪರಿಶೀಲನೆ, ಉಪಗ್ರಹ ಚಿತ್ರಗಳ ವರದಿ ಮತ್ತು ಅರುಣಾಚಲ ಪ್ರದೇಶದ ಮೇಲಿನ ಚೀನಾದ ಹಕ್ಕುಗಳ ಕುರಿತು ಪ್ರಕಟವಾಗಿದ್ದ 26 ರೆಡ್ಡಿಟ್ ಪೋಸ್ಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ....