Homeಮುಖಪುಟಎಸ್‌ಐಆರ್ ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಯಲು ಸರ್ಕಾರ ಮಧ್ಯಪ್ರವೇಶಿಸಬೇಕು; ಮುಖ್ಯಮಂತ್ರಿಗಳಿಗೆ ನಾಗರಿಕ ಸಂಘಟನೆಗಳ ಮನವಿ

ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಯಲು ಸರ್ಕಾರ ಮಧ್ಯಪ್ರವೇಶಿಸಬೇಕು; ಮುಖ್ಯಮಂತ್ರಿಗಳಿಗೆ ನಾಗರಿಕ ಸಂಘಟನೆಗಳ ಮನವಿ

- Advertisement -
- Advertisement -

“ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದ್ದು, ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು” ಎಂದು ನಾಗರಿಕ ಸಂಘಟನೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದವು.

ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಹುಭಾಷ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ‘ಎದ್ದೇಳು ಕರ್ನಾಟಕ’ ಮತ್ತಿತರ ಸಂಘಟನೆಗಳ ಪ್ರತಿನಿಧಿಗಳು ಭೇಟಿ ಮಾಡಿ ಎಸ್‌ಐಆರ್ ಲೋಪದೋಷದ ಬಗ್ಗೆ ಸಮಾಲೋಚನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

“ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತೊಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 1.09 ಕೋಟಿ ಮತದಾರರು ಎಎಸ್‌ಡಿಡಿಓ ಪಟ್ಟಿಯಲ್ಲಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚಿನ ಪ್ರಮಾಣದ ಹೆಸರುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು 3,000 ಬೂತ್‌ಗಳಲ್ಲಿ ಡಿಲೀಷನ್ ಪ್ರಮಾಣ ಶೇ.60ಕ್ಕಿಂತ ಹೆಚ್ಚಾಗಿದೆ” ಎಂದು ವಿವರಿಸಿದರು.

ಎಸ್ ಐಆರ್ ಪ್ರಕ್ರಿಯೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಮುಖ್ಯಮಂತ್ರಿಗಳ ಮುಂದೆ ಹಲವು ಬೇಡಿಕೆಗಳನ್ನು ಇಟ್ಟ ಪ್ರತಿನಿಧಿಗಳು, “ಎಸ್ಐಆರ್ ಪ್ರಕ್ರಿಯೆಯನ್ನು ಕನಿಷ್ಠ 3 ತಿಂಗಳು ವಿಸ್ತರಿಸಿ, ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ವರ್ಷ ಕಾಲವಕಾಶ ನೀಡುವಂತೆ ಚುನಾವಣಾ ಆಯೋಗವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು” ಎಂದರು.

“ಸ್ಥಳಾಂತರ (Shifted), ಗೈರು (Absent) ಮತ್ತು ಇತರರು (Others) ವರ್ಗದಲ್ಲಿರುವವರನ್ನು ತಕ್ಷಣವೇ ಡಿಲೀಟ್ ಮಾಡದೆ, ಬಿಎಲ್‌ಒಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ಸ್ಥಳಾಂತರಗೊಂಡ ಮತದಾರರಿಗೆ ಮತ ವರ್ಗಾವಣೆಗೆ ಅಗತ್ಯವಿರುವ ಫಾರಂ ಹಾಗೂ ಹೊಸ ಮತದಾರರಿಗೆ ನೋಂದಣಿಗೆ ಅವಕಾಶ ಒದಗಿಸಬೇಕು” ಎಂದು ಮನವಿ ಮಾಡಿದರು.

“ಅರ್ಹ ಮತದಾರರನ್ನು ಮತಪಟ್ಟಿಯಲ್ಲಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರವೇ ಮುಂದಾಗಬೇಕು. ಸರ್ಕಾರದ ಸಿಬ್ಬಂದಿ ಮನೆಮನೆಗೆ ತೆರಳಿ ಮಾಹಿತಿ ನೀಡಬೇಕು ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕು” ಎಂದು ಇದೇ ಸಭೆಯಲ್ಲಿ ಸಲಹೆ ನೀಡಿದರು.

ನಿಯೋಗದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯ್ಕ್‌, ಎದ್ದೇಳು ಕರ್ನಾಟಕದ ತಾರಾ ರಾವ್‌, ನೂರ್‌ ಶ್ರೀಧರ್‌, ಮೊಹಮ್ಮದ್‌ ಯೂಸುಫ್‌ ಕನ್ನಿ, ತಫೀಮುಲ್ಲ ಮಾರುಫ್‌, ಫಾ. ಅರುಣ್‌ ಲೂಯಿಸ್‌, ವಿನಯ್‌ ಶ್ರೀನಿವಾಸ್‌, ಐಶ್ವರ್ಯ, ಸೈಯದ್‌ ತೌಸಿಫ್‌ ಮಸೂದ್‌, ಮೊಹಮ್ಮದ್‌
ಇಸ್ಮಾಯಿಲ್‌ ಕೆ.ಎಲ್‌.ಅಶೋಕ್‌, ಸುನಿಲ್‌ ಸಿರಸಂಗಿ ಇದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಕೊಪ್ಪಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ‘ಛತ್ರಪ್ಪ’ ಅವರ ಹೆಸರನ್ನೆ ಕೈಬಿಟ್ಟ ಚುನಾವಣಾ ಆಯೋಗ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳು ದಿಢೀರ್ ನಾಪತ್ತೆಯಾಗುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಗಂಗಾವತಿಯಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಚಿರಪರಿಚಿತರಾಗಿರುವ, ಗಂಗಾವತಿ ಬಸವ ಕೇಂದ್ರದ...

ಮಹಾರಾಷ್ಟ್ರದ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ವಿಚಿತ್ರ ವರ್ತನೆ, ಗೆಜ್ಜೆ ಸದ್ದು: ದೆವ್ವದ ಕಾಟವೆಂದು ಹಾಸ್ಟೆಲ್ ತೊರೆದ 600 ಬುಡಕಟ್ಟು ವಿದ್ಯಾರ್ಥಿಗಳು

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ದೂರದ ಮೆಲ್ಘಾಟ್ ಬುಡಕಟ್ಟು ಪ್ರದೇಶದಲ್ಲಿ ಮೂಢನಂಬಿಕೆ ಮತ್ತು ಮಾನಸಿಕ ಭಯದ ವಾತಾವರಣವು ಗಂಭೀರ ಶೈಕ್ಷಣಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಚಿಕಲ್ದಾರಾ ತಾಲ್ಲೂಕಿನ ಡೋಮಾ ಗ್ರಾಮದಲ್ಲಿರುವ ಸರ್ಕಾರಿ ಬುಡಕಟ್ಟು ವಸತಿ ಶಾಲೆಯ...

ಉತ್ತರ ಪ್ರದೇಶ| ಕನ್ವಾರಿ ಯಾತ್ರಿಕರ ಹಲ್ಲೆಯಿಂದ ಮುಸ್ಲಿಂ ಯುವಕ ಸಾವು; ಐವರ ಬಂಧನ

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಕನ್ವಾರಿ ಯಾತ್ರಿಕರ ಗುಂಪಿನಿಂದ ಹಲ್ಲೆಗೊಳಗಾದ ಮುಸ್ಲಿಂ ಯುವಕ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಕನ್ವಾರಿಗಳನ್ನು ಬಂಧಿಸಲಾಗಿದೆ. ಬ್ರಿಜ್‌ಘಾಟ್ ಟೋಲ್ ಪ್ಲಾಜಾ ಬಳಿ ನಡೆದ ರಸ್ತೆ ಅಪಘಾತದ ನಂತರ ಮೊರಾದಾಬಾದ್...

ಜಾರ್ಖಂಡ್‌ ಸಿಎಂಗೆ ರಾಹುಲ್ ಗಾಂಧಿ ಪತ್ರ, ಉದ್ಯೋಗಾಕಾಂಕ್ಷಿಗಳ ಬೆಂಬಲಕ್ಕೆ ಆಗ್ರಹ

ಜಾರ್ಖಂಡ್‌ನಲ್ಲಿ ರಾಜ್ಯ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ವಿರುದ್ಧ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಹೇಮಂತ್ ಸೋರೆನ್...

“NTA ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ”: UGC-NET ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಪತ್ರಿಕೆಗಳ ಮರುಪರೀಕ್ಷೆ ನಿರ್ಧಾರಕ್ಕೆ ದೇಶಾದ್ಯಂತ ಆಕ್ರೋಶ

ನವದೆಹಲಿ: ಕಳೆದ ಜೂನ್ ತಿಂಗಳಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ್ದ ಯುಜಿಸಿ-ನೆಟ್ (UGC-NET) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಸಾಲು ಸಾಲು ಗಂಭೀರ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ...

ಬಿಹಾರದ ಅಶೋಕಧಾಮ ದೇಗುಲದಲ್ಲಿ ಕಾಲ್ತುಳಿತ: ಶ್ರಾವಣ ಸೋಮವಾರದ ಪೂಜೆ ವೇಳೆ 7 ಮಹಿಳೆಯರು ಸಾವು, 12 ಕ್ಕೂ ಹೆಚ್ಚು ಜನರಿಗೆ ಗಾಯ

ಪಾಟ್ನಾ/ಲಖಿಸರಾಯ್: ಶ್ರಾವಣ ಮಾಸದ ಪವಿತ್ರ ಸೋಮವಾರದಂದು ಧಾರ್ಮಿಕ ಕೇಂದ್ರವೊಂದರಲ್ಲಿ ಸಂಭವಿಸಿದ ಭೀಕರ ಅಪಘಾತ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿರುವ ಐತಿಹಾಸಿಕ ಅಶೋಕಧಾಮ ದೇವಾಲಯದ ಆವರಣದ ಬಳಿ ಮುಂಜಾನೆ ನಡೆದ ಭೀಕರ...

ಎಲ್ಲಾ ಯೋಜನೆಗಳೂ ಗುಜರಾತ್‌ಗೇ ಏಕೆ?: ಬಿಜೆಪಿ ಕೇಂದ್ರ ನಾಯಕತ್ವ ವಿರುದ್ಧವೇ ಬಹಿರಂಗವಾಗಿ ತಿರುಗಿಬಿದ್ದ ಅಣ್ಣಾಮಲೈ!

BJP ನಾಯಕತ್ವದ ನಿರ್ಧಾರಗಳು ‘ದೆಹಲಿ ಕೇಂದ್ರಿತ’ ಹಾಗೂ ದೇಶದ ಅಭಿವೃದ್ಧಿ ಮಾದರಿಯು ‘ಗುಜರಾತ್‌ ಕೇಂದ್ರಿತ’ವಾಗುತ್ತಿದೆ ಎಂದು ತಮಿಳುನಾಡು ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ‘ವಿ ದಿ ಲೀಡರ್ಸ್’ ಸಂಘಟನೆಯ ಸಂಸ್ಥಾಪಕ ಕೆ. ಅಣ್ಣಾಮಲೈ...

ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟ; ಹೇಮಂತ್ ಸೊರೇನ್ – ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು

ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 16 ರಂದು (ಭಾನುವಾರ) ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ...

BJP ರಾಷ್ಟ್ರೀಯ ವಕ್ತಾರ ಹುದ್ದೆಗೆ ಮತ್ತೆ ರಾಜೀನಾಮೆ! ಕಾರಣ ಬಿಚ್ಚಿಟ್ಟ ಶೆಹಝಾದ್ ಪೂನಾವಾಲಾ

BJP ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಹುದ್ದೆಗೆ ಮತ್ತೊಮ್ಮೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ತಕ್ಷಣವೇ ಅಂಗೀಕರಿಸುವಂತೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

NALSAR ಘಟಿಕೋತ್ಸವ ವಿವಾದ: ಆಹ್ವಾನ ತಿರಸ್ಕರಿಸಿದ ಸಿಜೆಐ ಸೂರ್ಯಕಾಂತ್!

ಹೈದರಾಬಾದ್‌ನ ಪ್ರತಿಷ್ಠಿತ NALSAR ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತು ಎದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ತಾವು ಈ ಆಹ್ವಾನವನ್ನು ಸ್ವೀಕರಿಸಿಲ್ಲ, ಹೀಗಾಗಿ ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ...