Homeಮುಖಪುಟಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ: ಪಶ್ಚಿಮ ಬಂಗಾಳ ಸಿಎಂ ಸುವೇಂದು...

ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ

- Advertisement -
- Advertisement -

ಹುಗ್ಲಿ ನದಿಯಲ್ಲಿ ದುರ್ಗಾ ವಿಸರ್ಜನೆಯ ಸಮಯದಲ್ಲಿ ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿಯ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬುಧವಾರ ಹೇಳಿದ್ದಾರೆ.

ಸುರಕ್ಷತಾ ಕಾಳಜಿಗಳು ಮತ್ತು ವಿಸರ್ಜನಾ ಆಚರಣೆಗಳ ಧರ್ಮದ ಮಹತ್ವ ಎರಡನ್ನೂ ಪರಿಗಣಿಸಿ ಈ ವರ್ಷ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಯನ್ನೂ ಸಹ ಈ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಲಾಗಿದೆ.

ಕೋಲ್ಕತ್ತಾ ಪೊಲೀಸ್ ಆಯುಕ್ತ ಅಜಯ್ ಕುಮಾರ್ ನಂದ್ ಮತ್ತು ಕೋಲ್ಕತ್ತಾ ಮಹಾನಗರ ಪಾಲಿಕೆ ಆಯುಕ್ತರಾದ ಸ್ಮಿತಾ ಪಾಂಡೆ ಅವರೊಂದಿಗೆ ಬಾಬುಘಾಟ್‌ನಲ್ಲಿ ವಿಸರ್ಜನಾ ವ್ಯವಸ್ಥೆಗಳನ್ನು ಪರಿಶೀಲಿಸುವ ವೇಳೆ ಮುಖ್ಯಮಂತ್ರಿ ಈ ವಿವಾದಿತ ಹೇಳಿಕೆ ನೀಡಿದ್ದಾರೆ.

“ವಿಗ್ರಹಗಳನ್ನು ಹುಗ್ಲಿ ನದಿಗೆ ಕೊಂಡೊಯ್ಯುವಲ್ಲಿ ಭಾಗವಹಿಸುವವರ ಗುರುತನ್ನು ಖಚಿತಪಡಿಸಿಕೊಳ್ಳುವಂತೆ ನಾನು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಸನಾತನ ಧರ್ಮವನ್ನು ಅನುಸರಿಸುವವರು ಮಾತ್ರ ವಿಗ್ರಹಗಳನ್ನು ಸ್ಪರ್ಶಿಸುತ್ತಾರೆ. ಇದರಲ್ಲಿ ಯಾವುದೇ ಕೋಮುವಾದಿ ವಿಷಯವಿಲ್ಲ” ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

“ದೇವಿಯ ವಿಸರ್ಜನೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು, ನಾವು ಸಂಪ್ರದಾಯಗಳು, ಶಾಸ್ತ್ರಗಳು ಮತ್ತು ಕಳೆದ ಹಲವಾರು ಸಾವಿರ ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ನಿಯಮಗಳನ್ನು ಪಾಲಿಸಬೇಕು. ಇದು ಒಂದು ಉತ್ಸವ, ಆದರೆ ಪ್ರಾಥಮಿಕವಾಗಿ ಇದು ಒಂದು ಧಾರ್ಮಿಕ ಕಾರ್ಯಕ್ರಮವಾಗಿದೆ” ಎಂದು ಅವರು ಹೇಳಿದರು.

ಬಿಎಸ್‌ಎಫ್ ನಮಗೆ ಸಹಾಯ ಮಾಡುತ್ತಿದೆ

ದೂರುಗಳ ಹಿನ್ನೆಲೆಯಲ್ಲಿ ಕ್ರೇನ್‌ಗಳ ಬದಲಿಗೆ ಟ್ರಾಲಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಅಗತ್ಯವಿದ್ದರೆ ಪೊಲೀಸರು, ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಮತ್ತು ಕೋಲ್ಕತ್ತಾ ಮಹಾನಗರ ಪಾಲಿಕೆಯು ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ಸೇರಿದಂತೆ ಇತರ ಏಜೆನ್ಸಿಗಳ ಸಹಾಯವನ್ನು ಪಡೆಯಬಹುದು ಎಂದು ಅವರು ಹೇಳಿದರು.

ಅಕ್ಟೋಬರ್ 24 ರಂದು ವಿಸರ್ಜನಾ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ನೀರನ್ನು ಸ್ವಚ್ಛಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಉತ್ತರ 24 ಪರಗಣ ಜಿಲ್ಲೆಯ ತಕಿಯಲ್ಲಿರುವ ಇಚ್ಛಾಮತಿ ನದಿಯಲ್ಲಿ ವಿಗ್ರಹ ವಿಸರ್ಜನೆಯನ್ನು ವೀಕ್ಷಿಸಲು ಮರಕಾಟದ ದೋಣಿಗಳಲ್ಲಿ (ದೇಶಿ ದೋಣಿಗಳು) ಪ್ರಯಾಣಿಸುವ ಜನರ ಸುರಕ್ಷತೆಯ ಬಗ್ಗೆಯೂ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು.

“ವಿಸರ್ಜನಾ ಪ್ರಕ್ರಿಯೆಯ ಸಮಯದಲ್ಲಿ ಸುಮಾರು 200 ಮರಕಾಟದ ದೋಣಿಗಳು ಪ್ರೇಕ್ಷಕರನ್ನು ಕರೆದೊಯ್ಯುವ ನಿರೀಕ್ಷೆಯಿದೆ. ಆ ಪದ್ಧತಿಯನ್ನು ನಿರುತ್ಸಾಹಗೊಳಿಸಲು ಆಡಳಿತವು ಪ್ರಯತ್ನಿಸಿತ್ತು. ಆದರೆ ಸ್ಥಳೀಯ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಯಿತು” ಎಂದು ಅವರು ಹೇಳಿದರು.

“ಜೀವ ರಕ್ಷಕ ಜಾಕೆಟ್‌ಗಳನ್ನು (ಲೈಫ್ ಜಾಕೆಟ್‌) ಒದಗಿಸುವುದು ಮತ್ತು ತೂಕವನ್ನು ಸಮತೋಲನಗೊಳಿಸುವ ಕ್ರಮಗಳಂತಹ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಂಡಿದ್ದೇವೆ, ಆದರೆ ಅವುಗಳಲ್ಲಿ ಹೆಚ್ಚಿನವು ಮರಕಾಟದ ದೋಣಿಗಳು ಅಥವಾ ಡಿಂಗಿಗಳಾಗಿರುವುದರಿಂದ ನಾವು ಇನ್ನೂ ಆಲೋಚಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಸಿಇಒ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ: ‘ಇಸಿಐನೆಟ್’ ಸಾಫ್ಟ್‌ವೇರ್‌ನಲ್ಲಾಯಿತು 4 ಪ್ರಮುಖ ಬದಲಾವಣೆ!

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಾಫ್ಟ್‌ವೇರ್‌ನ ಅತಿಯಾದ ನಿಯಂತ್ರಣವು ಸ್ಥಳೀಯ ನೋಂದಣಿ ಅಧಿಕಾರಿಗಳ ಶಾಸನಬದ್ಧ ಅಧಿಕಾರವನ್ನೇ ಕಸಿದುಕೊಳ್ಳುತ್ತಿದೆ ಎಂಬ ತೀವ್ರ ಕಳವಳದ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗವು ತನ್ನ 'ಇಸಿಐನೆಟ್' (ECINet)...

ಮಸೀದಿಯಲ್ಲಿ ಚುಂಬಿಸಿದ್ದಕ್ಕೆ ಮರಣದಂಡನೆ? ಸೌದಿ ಅಮಾನವೀಯ ತೀರ್ಪಿಗೆ ತೀವ್ರ ಆಕ್ರೋಶ

ಮುಸ್ಲಿಂ ಸಮುದಾಯದ ಪವಿತ್ರ ನಗರವಾದ ಮೆಕ್ಕಾದ ಮಸೀದಿಯೊಂದರಲ್ಲಿ ಅನೈತಿಕ ಕೃತ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಸೌದಿ ಅರೇಬಿಯಾ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮರಣದಂಡನೆಗಳು...

ಯೂಸುಫ್ ಪಠಾಣ್‌ಗೆ ವಡೋದರಾದ ವಿವಾದಿತ ನಿವೇಶನ ಹಂಚಿಕೆ ಮಾಡಿದ ಗುಜರಾತ್ ಬಿಜೆಪಿ ಸರ್ಕಾರ : ಟಿಎಂಸಿ ತೊರೆದು ಎನ್‌ಡಿಎ ಬೆಂಬಲಿಸಿದ್ದಕ್ಕೆ ಗಿಫ್ಟ್?

ಲೋಕಸಭಾ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ವಡೋದರಾದಲ್ಲಿರುವ 978 ಚದರ ಮೀಟರ್ ವಿಸ್ತೀರ್ಣದ ವಿವಾದಿತ ನಿವೇಶನವನ್ನು ಹಂಚಿಕೆ ಮಾಡಲು ಗುಜರಾತ್‌ನ ಬಿಜೆಪಿ ಸರ್ಕಾರವು ಅನುಮೋದನೆ ನೀಡಿದೆ. ಈ ಸಂಬಂಧ...

‘ಒಬ್ಬರೇ ಭೇಟಿಯಾಗಿದ್ದು ಯಾಕೆ?’ : ಎಪ್‌ಸ್ಟೀನ್ ಜೊತೆಗಿನ ಸಚಿವ ಹರ್ದೀಪ್ ಸಿಂಗ್ ಪುರಿ ಪೋಟೋ ಹಂಚಿಕೊಂಡು ಪ್ರತಿಪಕ್ಷ ನಾಯಕರ ಪ್ರಶ್ನೆ, ಉತ್ತರ ನೀಡಲು ಆಗ್ರಹ

ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ವಿರೋಧ ಪಕ್ಷದ ನಾಯಕರು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅನ್ನು ಭೇಟಿಯಾಗಿರುವ ಫೋಟೋ...

ಸಿಎಂಆರ್‌ಎಲ್-ಎಕ್ಸಾಲಾಜಿಕ್ ಪ್ರಕರಣ: ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ 7 ದಿನಗಳ ತಡೆ ನೀಡಿದ ಸುಪ್ರೀಂ ಕೋರ್ಟ್: ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ

ಖಾಸಗಿ ಕಂಪನಿಯಿಂದ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 'ಸಿಎಂಆರ್‌ಎಲ್-ಎಕ್ಸಾಲಾಜಿಕ್' ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅಳಿಯ, ಮಾಜಿ ಸಚಿವ...

ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ – ಅಶುತೋಷ್

ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿರುವ ಜಂತರ್ ಮಂತರ್‌ನಲ್ಲಿ ರಾಷ್ಟ್ರಧವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ)...

ಆಂಧ್ರ ಪ್ರದೇಶ ಮುನ್ಸಿಪಲ್ ಚುನಾವಣೆ: ವೈಎಸ್‌ಆರ್‌ಸಿಪಿ ಅರ್ಜಿ ಪರಿಶೀಲಿಸಿ ನಾಳೆಯೊಳಗೆ ತೀರ್ಮಾನಿಸಿ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ!

ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವ್ಯಾಪಕ ಹಿಂಸಾಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪ್ರಮುಖ...

ಸಿಜೆಪಿ ನಾಯಕರು – ನೇಹಾ ಬೋರಾ ಅರ್ಜಿಗಳ ತುರ್ತು ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ...

ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ...

‘ಪ್ರಜಾಪ್ರಭುತ್ವದಲ್ಲಿ ಇದು ಕಳವಳಕಾರಿ, ಸಿಜೆಪಿ ಪ್ರಶ್ನೆಗಳಿಗೆ ನನ್ನ ಬೆಂಬಲವಿದೆ’: CJP ನಾಯಕರ ಬೆನ್ನಿಗೆ ನಿಂತ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ!

ಕಾಕ್‌ರೋಚ್ ಜನತಾ ಪಾರ್ಟಿಯ ಯುವ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸುತ್ತಿರುವ ಕಸ್ಟಡಿ ಮತ್ತು ಕಾನೂನು ಪ್ರಕ್ರಿಯೆಗಳ ಕುರಿತು ಪ್ರಜಾಪ್ರಭುತ್ವವಾದಿ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ...