Homeನ್ಯಾಯ ಪಥಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

- Advertisement -
- Advertisement -

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ ‘ನಾಯಕನ ಪಾತ್ರದಲ್ಲಿ ಕಣ್ಣಪ್ಪನಾಗಿ…’ ನಟಿಸುತ್ತಿದ್ದಾರೆ ಎಂದು ಇನ್ನೊಂದು ಹೆಸರನ್ನು ಸೂಚಿಸಿದ್ದರು. ಅದನ್ನು ಕಂಡೊಡನೇ ನನಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ‘ಏಕೆ? ನಾನು ಪಾರ್ಟ್ ಮಾಡುತ್ತಿರುವುದು ಸರಿಯಾಗಿಲ್ಲವೆ?! ಅವರಿಗೆ ತೃಪ್ತಿಯಾಗಲಿಲ್ಲವೇ? ಈ ವಿಷಯ ನನಗೆ ಪತ್ರಿಕೆಯ ಮೂಲಕವೇ ತಿಳಿಯಬೇಕೆ? ನನಗೆ ಇದರ ಸುಳಿವೇ ಕೊಡಲಿಲ್ಲವಲ್ಲ…!!!’ ಎಂದು ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟು ದಿನಗಳಿಂದ ಇದ್ದ ’ಉತ್ಸಾಹ-ಹುಮ್ಮಸ್ಸುಗಳೆಲ್ಲಾ ಕುಸಿದುಬಿದ್ದಿತು. ಒಂದುಕ್ಷಣ ಮನಸ್ಸು ಮಂಕಾಯಿತಾದರೂ ಇದಕ್ಕೆ ಕಾರಣವನ್ನು ಕೇಳಿಯೇ ಬಿಡೋಣ ಎಂದು ಆ ದಿನಪತ್ರಿಕೆಯನ್ನು ಕೈಲಿ ಹಿಡಿದು ನೇರ ನಿರ್ದೇಶಕ ಶ್ರೀಯುತ ಸಿಂಹರವರ ಬಳಿ ಬಂದೆ. ನನ್ನ ಆ ಬಿರುಸಿನ ಬರುವಿಕೆಯನ್ನು ಕಂಡು ‘ಏನಪ್ಪ! ಮುತ್ತುರಾಜು?’ ಎಂದರು.

ನಾನು ‘ಏನಿಲ್ಲ ಸ್ವಾಮಿ! ತಮ್ಮನ್ನ ಒಂದ್ವಿಷಯ ಕೇಳ್ಬೇಕೂಂತ ಬಂದೆ… ಯಾಕ್ ಸ್ವಾಮಿ ನಾನು ತಮ್ಮ ಮನಸ್ಸಿಗೆ ತೃಪ್ತಿ ಕೊಡೋಷ್ಟರ ಮಟ್ಟಿಗೆ ಅಭಿನಯಿಸ್ತಿಲ್ವಾ…?” ಎಂದು ಕೇಳಿದೆ.

ಆಗ ಶ್ರೀಯುತ ಸಿಂಹರವರು ‘ಅದ್ಯಾಕಪ್ಪನಿಂಗೀ ಅನುಮಾನ? ಯಾರ್ ಹೇಳದ್ರು ಹಾಗಂತ?’ ಎಂದು ಕೇಳಿದರು. ತಕ್ಷಣ ನಾನು ಪತ್ರಿಕೆಯನ್ನು ಮುಂದೆ ನೀಡಿದೆ. ‘ಏನಿದೆ ಅದ್ರಲ್ಲಿ?’ ಎಂದು ಹುಸಿನಗೆ ನಕ್ಕರು.

ನಾನು ಆ ಸಾಲನ್ನು ಮಾತ್ರ ಓದಿದೆ. ’ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್, ನೀಲಾಳ ಪಾತ್ರದಲ್ಲಿ ಫಂಡರಿಬಾಯಿ… ಹಾಗೂ ಇತರ ತಾರಾಗಣದಲ್ಲಿ… ಸಂಪೂರ್ಣ ಪಟ್ಟಿಯನ್ನು ಓದಿ ’ಯಾರ್ ಸ್ವಾಮಿ ಈ ರಾಜ್‌ಕುಮಾರ್? ಈ ಪಾತ್ರಕ್ಕೆ ಅವರ್‍ನೇ ಹಾಕ್ ಬೇಕೂಂತಿದೀರಾ? ಹಾಗಾದ್ರೆ ನಾನಿಲ್ವಾ?’ ಎಂದೆ.

ಆಗ ಸಿಂಹರವರು ನಕ್ಕು ‘ಆ ರಾಜ್‌ಕುಮಾರ ಯಾರೂ ಅಲ್ಲಪ್ಪ… ನೀನೇ…’ ಎಂದರು.

ನನಗೆ ತಕ್ಷಣ ಗುಂಡಿಗೆ ಧಡಕ್ ಎಂದಿತು.

‘ನೋಡಪ್ಪ! ಮುತ್ತುರಾಜ್ ಅನ್ನೋದನ್ನ ’ರಾಜ್‌ಕುಮಾರ್ ಅಂತ ಬದಲಾಯ್ಸಿದೆ ಅಷ್ಟೆ’ ಎಂದು ಮಾತು ಮುಂದುವರಿಸಿದರು.

ಆಗ ನನಗೊಂದು ರೀತಿ ನಗು ಬಂದು ಜನಜನಿತವಾದ ಒಂದೆರಡು ಉಪಮಾನದ ವಾಕ್ಯಗಳೂ ನೆನಪಿಗೆ ಬಂದವು.

‘ರೆಕ್ಕೆಯಿಲ್ಲ-ಪುಕ್ಕ ಇಲ್ಲ ಗರುಡಯ್ಯಂಗರ್ರು, ವಿದ್ಯೆ ಇಲ್ಲ-ಬುದ್ಧಿ ಇಲ್ಲ ಶಾರದಮ್ಮನ್ನೋರು, ದುಡ್ಡಿಲ್ಲ-ಕಾಸಿಲ್ಲ ಸಂಪ್ಪತ್ತಯ್ಯಂಗರ್ರು, ರಾಜ್ಯ ಇಲ್ಲ-ಪ್ರಜೆ ಇಲ್ಲ ರಾಜಣ್ಣೋರು ಅನ್ನೋಹಾಗೆ ನನಗ್ಯಾಕ್ ಸ್ವಾಮೀ ಈ ಹೆಸರನ್ನಿಟ್ರಿ? ನಮ್ಮ ಅಪ್ಪಾಜಿಯವರು ಪ್ರೀತಿಯಿಂದ ಆ ರಾಮನ ಸೇವಕನ ಮೇಲಿನ ಭಕ್ತಿಯಿಂದ-ಪ್ರೀತಿಯಿಂದ ಅವನ ವರಪ್ರಸಾದವಾಗಿ ಹುಟ್ಟಿದೇಂತನೋ ಏನೋ ಆ ಮುತ್ತೆತ್ತಿರಾಯನ ಹೆಸರಲ್ಲಿ ನನಗೆ ಮುದ್ದಾಗಿ ’ಮುತ್ತುರಾಜು’ ಅಂತ ಹೆಸರಿಟ್ಟಿದ್ದಾರೆ. ದಯವಿಟ್ಟು ಆ ಹೆಸರ್‍ನ ಬದಲಾಯ್ಸೋದು ಬೇಡ ಸ್ವಾಮಿ, ಅದೂ ಅಲ್ದೇ ನಾಳೆ ಚಿತ್ರ ಬಿಡುಗಡೆ ಆಗಿ ನನ್ನ ಪಾತ್ರ ಜನಕ್ಕೆ ಒಪ್ಪಿಗೆ ಆಗ್ದೆ ‘ಈ ಸೌಭಾಗ್ಯಕ್ಕೆ ಇವ್ನು ’ರಾಜಕುಮಾರ’ ಅಂತ ಬೇರೆ ಹೆಸರನ್ನಿಟ್ಕೊಂಡ್ನೋ…? ಅಂತ ಅಂದ್ಕೋಬಹುದು. ದಯವಿಟ್ಟು ಬೇಡ ಸ್ವಾಮಿ’ ಎಂದೆ.

ಅದಕ್ಕೆ ಸಿಂಹರವರು ‘ನಿಮ್ಮ ಅಪ್ಪನ ಆಶೀರ್ವಾದದಿಂದ್ಲೇ ಈ ಹೆಸರು ಬಂತೂಂದ್ಕೋಪ್ಪ, ನಾನೊಬ್ನೇ ಅಲ್ಲ ಈ ಹೆಸರನ್ನಿಟ್ಟೋನು.. ಈ ಹೆಸರಿನ ಬದಲಾವಣೇಲಿ ವೀರಣ್ಣೋರು ಒಬ್ರು. (ಗುಬ್ಬಿ ವೀರಣ್ಣ) ನಿಮ್ಮಪ್ಪಾಜಿಯವ್ರೇ ಒಂದ್ಸಲ ವೀರಣ್ಣೊರ್‍ನ ಕೇಳಿದ್ರಂತೆ. ‘ನನ್ ಮಗ ನಾಟಕದಲ್ ಪಾರ್ಟ್ ಮಾಡ್ತಿದ್ರೆ ಒಳ್ಳೆ ರಾಜಕುಮಾರನ್ಹಾಗ್ ಕಾಣಸ್ತಾನೆ… ಅವರಿಗೆ ಸಿನಿಮಾದಲ್ ಒಂದ್ ಛಾನ್ಸ್ ಕೊಡಿ ಸ್ವಾಮಿ’ ಅಂತ ಕೇಳಿದ್ರಂತೆ ಅದನ್ನ ವೀರಣ್ಣೋರು ಈ ಸಂದರ್ಭದಲ್ಲಿ ಜ್ಞಾಪಿಸ್ಕೊಂಡು ಅವರ ಅಪ್ಪನ ಆತ್ಮಕ್ಕೆ ಶಾಂತಿ ಸಿಗ್ಲಿ… ಈ ಸಂದರ್ಭದಲ್ಲಿ ಅವರಿಗೆ ’ರಾಜಕುಮಾರ್ ಅಂತನೇ ಹೆಸರಿಟ್ ಬಿಡಿ’ ಅಂದಿದ್ರಂತೆ. ನೋಡಪ್ಪ! ದೊಡ್ಡೋರು ಆಶೀರ್ವಾದ ಮಾಡಿಟ್ಟಿರೋ ಹೆಸರು… ಏನು ಆಗಲ್ಲ… ಹೆದರ್‍ಕೋಬೇಡ ಧೈರ್ಯವಾಗಿರು. ಹಾಗೇನಾದ್ರೂ ಆಗಕ್ ನಾವ್ ಬಿಟ್ ಬಿಡ್ತೀವಾ?’ ಎಂದು ಹೇಳಿದರು ಶ್ರೀಯುತ ಸಿಂಹರವರು.

ಇದರ ಮೇಲೆ ನನಗೆ ಮತ್ತೆ ಮಾತನಾಡಲಾಗಲಿಲ್ಲ. ಅಂತೂ ಆ ಮುತ್ತೆತ್ತಿರಾಯನ ಕೃಪೆಯಿಂದ ಮುಕ್ಕೋಟಿ ಕನ್ನಡ ಕಲಾ ಬಂಧುಗಳ ಹೃದಯದವರ ಮನೆಯಲ್ಲಿ ನಾನು ಉಳಿಯಲು ಸ್ಥಳಾವಕಾಶ ದೊರೆತಿರುವುದು ನನ್ನ ಭಾಗ್ಯವೇ ತಾನೇ?

(ಡಾ. ರಾಜ್ ಕುಮಾರ್ ಆತ್ಮಚರಿತ್ರೆ: ಕಥಾನಾಯಕನ ಕಥೆ ಕೃತಿಯಿಂದ ಆಯ್ದ ಭಾಗ)
ಎ. ಎಸ್. ಪ್ರಭಾಕರ
ಸಂಚಾಲಕರು ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ


ನಿರೂಪಣೆ: ಚಿ. ದತ್ತರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...