Homeಅಂಕಣಗಳುಮ್ಯೂಸಿಯಂನಾಗೆ ಪಕೋಡೇಂದ್ರನ ಫಿಟ್ನೆಸ್ ಪ್ರತಿಮೆ ಮಾಡಿಸಿದ್ರೆ ಹೆಂಗೆ

ಮ್ಯೂಸಿಯಂನಾಗೆ ಪಕೋಡೇಂದ್ರನ ಫಿಟ್ನೆಸ್ ಪ್ರತಿಮೆ ಮಾಡಿಸಿದ್ರೆ ಹೆಂಗೆ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಈ ದೇಶ ಕಂಡ ಅತ್ಯುತ್ತಮ ಕಮಂಗಿ ಆಡಳಿತಗಾರ ಪಕೋಡತಾತನು ದೇಶವನ್ನಾಳಿದ ಪ್ರಧಾನಿಗಳ ಪ್ರತಿಮೆಗಳನ್ನು ಇಡಲು ಮ್ಯೂಸಿಯಂ ಸ್ಥಾಪನೆಗೆ ಮುಂದಾಗಿದ್ದು, ಈ ಮ್ಯೂಸಿಯಂನಲ್ಲಿ ನೆಹರು ಬಿಟ್ಟು ಉಳಿದೆಲ್ಲ ಪ್ರಧಾನಿಗಳ ಪ್ರತಿಕೃತಿಗಳು ಇರಲಿವೆಯಂತೆ. ನೆಹರು ಹೆಸರು ಕೇಳಿದರೆ ಮೂಲವ್ಯಾಧಿ ಪೀಡಿತರಂತೆ ಬುಳುಬುಳು ನರಳುವ ಸನಾತನಿಗಳ ಈ ಹೊಚ್ಚಹೊಸ ನವರಂಗಿ ನಾಟಕ ಕಂಡು ಕೈ ಪಕ್ಷದವರು ರೊಚ್ಚಿಗೆದ್ದಿದ್ದಾರೆ. ಪಾರ್ಲಿಮೆಂಟ್ ಡಿಸ್ಕೊಡ್ಯಾನ್ಸರ್ ಆಗಿರುವ ಪಕೋಡತಾತನ ಪ್ರತಿಮೆಯನ್ನು ಯಾವ ಬಗೆಯಲ್ಲಿ ಕೆತ್ತಬೇಕೆಂದು ಶಿಲ್ಪಿಗಳು ತಲೆಕೆಡಿಸಿಕೊಂಡಿದ್ದು, ಕನ್ಹಯ್ಯ ಕುಮಾರನ ಸಲಹೆಯಂತೆ “ಬಂಡೆ ಮೇಲೆ ಹೊಟ್ ಮಕಾಡೆ ದಬಾಕೊಂಡಿರೋ ಪಕೋಡತಾತನ” ವಿಗ್ರಹ ಕೆತ್ತಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪಟ್ಟುಬಿಡದ ಕನ್ಹಯ್ಯ.. ‘ಬಂಡೆ ಮೇಲ್ ಮಕಾಡೆ’ ವಿಗ್ರಹ ಕೆತ್ತಲಾಗದಿದ್ದರೆ, ಪಕೋಡತಾತ ಪುಕ್ಕಲನಂತೆ ಬುಳುಬುಳನೆ ಅಳುತ್ತಾ ಭಾಷಣ ಬಿಗಿಯುತ್ತಿರುವ ವಿಗ್ರಹ ಕೆತ್ತಿ, ಪ್ರತಿಮೆಯ ಕಣ್ಣಿಂದ ಕಣ್ಣೀರು ಬರಲು ಎರಡೂ ಕಣ್ಣಿಗೆ ಗೋಮೂತ್ರದ ಪೈಪುಗಳನ್ನು ಫಿಕ್ಸು ಮಾಡಿ ಎಂದು ಇನ್ನೂ ಆಗ್ರಹಿಸಿಲ್ಲ ಎಂದು ವರದಿಯಾಗಿದೆ.
******
ಕಳ್ಳಕಾಕರು, ಮನೆಹಾಳ ರಾಜಕಾರಣಿಗಳನ್ನು ಕಂಡರೆ ಛಂಗನೆ ಎಗರಿ ಪಾದಕ್ಕೆ ಬೀಳುವ ಪೊಲೀಸರು ಜನಸಾಮಾನ್ಯರು, ಹೋರಾಟಗಾರರನ್ನು ಕಂಡರೆ ಮೂಗಿನೊಳಗೆ ಎರೆಹುಳ ಹೊಕ್ಕಂತಾಡುವುದು ಗೊತ್ತೇ ಇದೆ. ಇದಕ್ಕೆ ಹೊಸ ಉದಾಹರಣೆ ರಾಯಚೂರಿನಿಂದ ಬಂದಿದೆ. ಕಾರ್ಮಿಕರ ಪೀಡಕರ ವಿರುದ್ಧ ಮತ್ತು ವಿದ್ಯಾರ್ಥಿಗಳ ಪರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದ ರಾಯಚೂರಿನ ಮಾನ್ವಿ ನಗರದ ಎಸ್.ಎಫ್.ಐ ಸಂಘಟನೆಯ ಹೋರಾಟಗಾರರನ್ನು ಅಲ್ಲಿನ ಹೇತ್ಲಾಂಡಿ ಪೊಲೀಸರು ಯಾವ ವಿಚಾರಣೆಯಿಲ್ಲದೆ ರೌಡಿಪಟ್ಟಿಗೆ ಸೇರಿಸಿದ್ದಾರೆ. ಇನ್ನೊಂದು ಕಡೆ ಹುಬ್ಬಳ್ಳಿಯ ಗುತ್ತಿಗೆ ಪೌರಕಾರ್ಮಿಕರ ಸಂಘಟನೆಯ ಅಧ್ಯಕ್ಷನನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಅಲ್ಲಿನ ಮೇಯರ್ ಮತ್ತು ಪೊಲೀಸರು ಹುನ್ನಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಮ್ಮ ಅಸಲಿ ಸಾಹುಕಾರರು ನಡೆಸೋ ಗಂಡಾಗುಂಡಿ ಯವಾರಗಳ ತಂಟೆಗೆ ಯಾರೇ ಬಂದರೂ ಪ್ಯಾಂಟೇರಿಸಿಕೊಂಡು ಹೊರಡುವ ಈ ಟೋಪಿಧಾರಿ ಸರ್ಕಾರಿ ಗೂಂಡಾಗಳು, ಅಪ್ಲೈ ಆಗದ ಕಾನೂನುಗಳನ್ನು ಹೋರಾಟಗಾರರ ಮೇಲೆ ಸುರಿದು ಮೀಸೆಗಳನ್ನು ತಿರುವಿಕೊಳ್ಳುತ್ತಿದ್ದಾರೆ. ಪೊಲೀಸರು ತಮ್ಮ ಆಳುವ ಯಜಮಾನರುಗಳು ಕಾಲಲ್ಲಿ ತಳ್ಳುವ ಡಾಗ್ ಬಿಸ್ಕತ್ತುಗಳನ್ನು ನಾಲಿಗೆಯಲ್ಲಿ ಎತ್ತಿಕೊಂಡು ಸಂಭ್ರಮಿಸುತ್ತಿರುವುದರಲ್ಲಿ ಆಶ್ಚರ್ಯ ಪಡುವಂಥದ್ದೇನಿಲ್ಲ ಎಂದು ಮಾಜಿ ಹಾಸ್ಯನಟ ಶಾಂಗ್ಲಿಯಾನ ಒಂದೇ ಉಸಿರಿನಲ್ಲಿ ಒದರಿದ್ದಾರೆಂದು ತಿಳಿದು ಬಂದಿದೆ.
******
ರಾಜ್ಯವನ್ನು ಹರಿದು ಎರಡು ಭಾಗ ಮಾಡ್ತೀವಿ ಅಂತ ಹೊರಟಿದ್ದ ಛೀರಾಮುಲು & ಬ್ಲೂಜೆಪಿಯ ಸಿಳ್ಳೇಕ್ಯಾತಗಳು, ಜನರು ಕಾಲಲ್ಲಿದ್ದನ್ನು ಕಳಚಿ ಮೂತಿಗೆ ಪಟಪಟನೆ ಎಸೆಯಲು ಶುರು ಮಾಡುತ್ತಿದ್ದಂತೆ ಸುಯ್ ಟಪಕ್ ಅಂತ ಯೂ ಟರ್ನ್ ತೆಗೆದುಕೊಂಡಿರೋ ವರ್ತಮಾನ ಇದೀಗ ವರದಿಯಾಗಿದೆ. ರಾಜ್ಯಸಭಾ ಸದಸ್ಯತ್ವದ ಟಿಕೆಟುಗಳಲ್ಲಿ ಒಂದನ್ನೂ ಉತ್ತರ ಕರ್ನಾಟಕ ಭಾಗದವರಿಗೆ ಕೊಡದೆ ಆಂಧ್ರ, ಕೇರಳ, ತಮಿಳುನಾಡಿನ ಮುಷಂಡಿಗಳಿಗೆ ಹಾಫ್‍ರೇಟ್, ಚೀಪ್ ರೇಟಿನಲ್ಲಿ ಮಾರಿಕೊಂಡು ಯಂಜಾಯ್ ಮಾಡುತ್ತಿದ್ದ ಈ ಬ್ಲೂಜೆಪಿ ಭಡವ ರಾಸ್ಕಲ್‍ಗಳಿಗೆ ಇದೀಗ ಉತ್ತರ ಕರ್ನಾಟಕದ ಮೇಲೆ ಲವ್ವು ಕಿತ್ಕೊಂಡಿರುವುದು ನಾನಾ ಗುಮಾನಿಗೆ ಕಾರಣವಾಗಿದೆ. ಪಕ್ಷದಲ್ಲಿ ಇರುವ 17 ಸಂಸದರಲ್ಲಿ ಅರ್ಧಕ್ಕರ್ಧ ಮಂದಿ ಉತ್ತರ ಕರ್ನಾಟಕದವರೇ ಇದ್ದರೂ ತಮ್ಮ ಅಧಿಕಾರಾವಧಿಯಲ್ಲಿ ಆ ಭಾಗದ ಅಭಿವೃದ್ಧಿಗೆ ಮೂರುಕಾಸಿನ ಕೆಲಸ ಮಾಡದೆ, ಓತ್ಲಾ ಹೊಡೆದುಕೊಂಡು ತಿರುಗುತ್ತಿದ್ದ ಈ ಬ್ಲೂಜೆಪಿ ದಂಢಪಿಂಡಗಳು ಇದೀಗ ತಾವೇ ಹಾರಿಸಿದ ಪ್ರತ್ಯೇಕ ರಾಜ್ಯದ ಗೂಬೆಯನ್ನು ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್ ಕುಮಾರಣ್ಣನ ತಲೆಗೆ ಕಟ್ಟಲು ಹುನ್ನಾರ ನಡೆಸಿರುವುದು ಬಹಿರಂಗವಾಗಿದೆ. ಗಡ್ಡದೊಳಗೇ ಮುಖ ಬಚ್ಚಿಟ್ಟುಕೊಂಡು ತಿರುಗುವ ಛೀರಾಮುಲು, ಇದೀಗ ಪ್ರತ್ಯೇಕ ರಾಜ್ಯದ ಬಗ್ಗೆ ಯಾರಾದ್ರು ಮಾತಾಡಿದ್ರೆ ಅವರ ಎರಡೂ ಕೆನ್ನೆ ಕಚ್ಚುತ್ತೇನೆಂದು ಧಮಕಿ ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಒಟ್ಟಿನಲ್ಲಿ ರಾಜ್ಯದ ಜನರು ಇವರ ಸೆಗಣಿ ಬುರುಡೆಗಳತ್ತ ಗುರಿಯಿಟ್ಟು ಬೀಸಿದ ಹಳೇಕೆರಗಳು ಯಶಸ್ವಿಯಾಗಿ ಗುರಿ ತಲುಪಿವೆಯೆಂದು ತಲೆಗೆ ಬ್ಯಾಂಡೇಜು ಹಾಕಿಸಿಕೊಂಡ ಬ್ಲೂಜೆಪಿ ಮುಠ್ಠಾಳರು ಇನ್ನೂ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿಲ್ಲವೆಂದು ವರದಿಯಾಗಿದೆ.
******
ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳೋರನ್ನು ನೀವು ನೋಡಿರ್ತೀರಿ, ಆದ್ರೆ ಇರಲಾರದೆ ಚೆಡ್ಡಿಯೊಳಗೆ ಹೆಬ್ಬಾವು ಬಿಟ್ಕೊಳೋರನ್ನ ನೀವು ನೋಡಿರಲಿಕ್ಕಿಲ್ಲ. ಮೀಟ್ ಮಿಸ್ಟರ್ ರಾಮ್ಸೇವಕ್ ಶರ್ಮ, ದೂರಸಂಪರ್ಕ ಇಲಾಖೆ ಟ್ರಾಯ್ ನ ಮುಖ್ಯಸ್ಥ. ಈ ಅರುಳುಮರುಳು ಮುದುಕಪ್ಪ ತನ್ನ ಟ್ವಿಟರಿನಲ್ಲಿ ತನ್ನ ಆಧಾರ್ ಕಾರ್ಡ್ ನಂಬರ್ ಹಾಕಿ, ತಾಕತ್ತಿದ್ರೆ ಹ್ಯಾಕ್ ಮಾಡಿ ಅಂತ ಚಾಲೆಂಜು ಹಾಕಿತ್ತು. ತಮ್ ಪಾಡಿಗೆ ತಾವಿದ್ದ ಕಂಪ್ಯೂಟರ್ ಹ್ಯಾಕರ್ ಗಳು ಮುದುಕಪ್ಪನ ಚಾಲೆಂಜಿಗೆ ರೊಚ್ಚಿಗೆದ್ದು ಆತನ ಸರ್ವ ಜಾತಕವನ್ನೆಲ್ಲ ಹ್ಯಾಕ್ ಮಾಡಿ ಅದಕ್ಕೆ ಉಪ್ಪು ಹುಣಸೆಹಣ್ಣು ಸವರಿ ತಗೋ ನೆಕ್ಕೊ ಅಂತ ವಾಪಸ್ ಬಿಸಾಕಿದ್ದಾರೆ. ಆಧಾರ್ ಕಾರ್ಡ್ ನಂಬರ್ ಮೂಲಕ ಮುದುಕಪ್ಪನ ಪರ್ಸನಲ್ ಫೋನಿಗೇ ಕನ್ನ ಕೊರೆದು ವಾಟ್ಸಾಪ್ ಡೀಟೈಲ್ ಎತ್ತಾಕಿ, ಆತನ ಬ್ಯಾಂಕ್ ಅಕೌಂಟಿಗೂ ತೂತ ಕೊರೆದು ಒಂದು ರುಪಾಯಿ ಡೆಪಾಸಿಟ್ ಮಾಡಿ, ಆತನ ಕ್ರೆಡಿಟ್ ಕಾರ್ಡಿಂದಲೇ ಒಂದು ಫೋನು ಬುಕ್ ಮಾಡಿ, ಅವನ ಮಬೆ ಅಡ್ರೆಸ್ಸಿಗೇ ಕಳಿಸಿ, ಹ್ಯಾಕು ಸಾಕಾ, ಇಲ್ಲಾ ಇನ್ನೂ ಬೇಕಾ ಎಂದು ಮುದುಕಪ್ಪನ ಪಂಚೆಯೆಳೆದುಬಿಟ್ಟಿದ್ದಾರೆ. ಇಷ್ಟು ಸಾಲದೆಂದು ಹ್ಯಾಕರ್ ಗಳು ಪಿ.ಎಮ್ ಪಕೋಡಪ್ಪನಿಗೆ ನಿಂದೂ ಆಧಾರ್ ಕಾರ್ಡ್ ನಂಬರ್ ಇದ್ರೆ ಕೊಡು ಒಂದು ಕಡೆಯಿಂದ ಕೆತ್ತಿ ಬಿಸಾಕುತ್ತೇವೆಂದು ಹೊಸ ಚಾಲೆಂಜನ್ನು ಎಸೆದಿದ್ದಾರೆ. ಈ ಮೂಲಕ ಆಧಾರ್ ಕಾರ್ಡ್ ಮಾಹಿತಿಯನ್ನು ಯಾರೂ ಕದಿಯಲಾಗದು, ಅವನ್ನು ಏಳು ಸಮುದ್ರದಾಚೆ ಇರೋ ದ್ವೀಪದಲ್ಲಿರೋ ರಾಕ್ಷಸನ ಅಂಡಿನೊಳಗೆ ಭದ್ರವಾಗಿಟ್ಟಿದ್ದೇವೆಂದು ಕೊಚ್ಚಿಕೊಳ್ಳುತ್ತಿದ್ದ ದ್ವೇಷಭಕ್ತ ಪಕೋಡಪ್ಪನ ಪಂಚೆಯು ಸಂತೆಯಲ್ಲಿ ಉದುರಿಹೋಗಿದೆ. ಯಾವುದೇ ಕಾರಣಕ್ಕು ತನ್ನ ಆಧಾರ್ ನಂಬರ್ ಹ್ಯಾಕರ್‍ಗಳ ಕೈಗೆ ಸಿಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿರೋ ಪಕೋಡಪ್ಪ ಅದೇನಾದರೂ ಲೀಕಾದರೆ ತಾನು ಕದ್ದುಮುಚ್ಚಿ ನೋಡೋ ಪಾರ್ನ್ ಸೈಟ್ ಡೀಟೈಲೆಲ್ಲ ಹೊರಬಿದ್ದು ಮಾನ ಹರಾಜಾಗುವ ಭಯದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
******
ಬುದ್ದಿಜೀವಿಗಳಿಗೆ ಗುಂಡಿಟ್ಟು ಕೊಲ್ಲಿಸುತ್ತಿದ್ದೆ ಎಂದು ಕಯ್ಯಯ್ಯೋ ಅಂದ ಬಸನಘೋಡ ಪಾಟಿಲ್ ಮೇಲೆ ಕಾನೂನುಕ್ರಮ ಕೈಗೊಳ್ಳಲು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರೋ ಬೆರಕೆ ಸರ್ಕಾರ ಕಡೆಗೂ ಬಸನಘೋಡನನ್ನು ಕೊಚ್ಚೆ ಚರಂಡಿಯಲ್ಲಿ ಹೊರಳಾಡಲು ಬಿಟ್ಟು ತಾನೂ ಅವನೊಡನೆ ಉರುಳಾಡಲು ಯಾವ ಸಮಸ್ಯೆಯೂ ಇಲ್ಲವೆಂದು ಸ್ಪಷ್ಟಪಡಿಸಿದೆ. ಇನ್ನೊಂದು ಕಡೆಯಲ್ಲಿ ಹೈದರಾಬಾದಿನ ಬ್ಲೂಜೆಪಿ ಜನಪ್ರತಿನಿಧಿಯೊಬ್ಬ ಅಸ್ಸಾಂನಲ್ಲಿರೋ ವಲಸಿಗರ ಮೇಲೆ ಗುಂಡು ಹೊಡೆದು ಕೊಲ್ಲಲು ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದ್ದಾನೆ. ಮುಳ್ಳಂದಿಯ ಮುಖಕ್ಕೆ ಮೀಸೆ ಅಂಟಿಸಿದಂತಿರೋ ಈ ಗುಡಾಣಗಢವನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹೈದರಾಬಾದಿನ ಸರ್ಕಾರಕ್ಕೂ ನರದೌರ್ಬಲ್ಯದ ಕೊರತೆ ಕಾಡುತ್ತಿದೆಯಂತೆ. ಮಗದೊಂದು ಕಡೆ ಮೇಕೆ ದೇವರ ಪ್ರತಿರೂಪ, ಆದ್ದರಿಂದ ಯಾರೂ ಮಟನ್ ತಿನ್ನಬಾರದೆಂದು ದ್ವೇಷಭಕ್ತರ ಪಕ್ಷದ ರಾಜ್ಯಾಧ್ಯಕ್ಷನೊಬ್ಬ ಜನರ ಮೇಲೆ ಬೆದರಿಕೆ ಹಾಕಿದ್ದಾನೆ. ಇವರನ್ನೆಲ್ಲ ನೋಡುತ್ತಿದ್ದರೆ ಈ ದ್ವೇಷಭಕ್ತ ಕುನ್ನಿಗಳನ್ನೆಲ್ಲ ಬ್ಲೂಜೆಪಿ ಪಕ್ಷವು “ ಆಲ್ ಇಂಡಿಯ ಬೆಸ್ಟ್ ಮುಠ್ಠಾಳ್ಸ್ ಎಕ್ಸಾಂ” ನಡೆಸಿ ಅದರಲ್ಲಿ ಪಾಸಾದ ಅತ್ತುತ್ತಮ ಮೆಂಟ್ಲುಗಳಿಗೆ ಟಿಕೆಟು ಕೊಟ್ಟು ಎಲೆಕ್ಷನ್‍ಗೆ ಕಳಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ತಲೆಯಲ್ಲಿ ಮಿದುಳಿರುವ ಜನರನ್ನು ಕಂಡರೆ ಉರಿದುಬೀಳುವ ಈ ಸನಾತನ ಪೀಡೆಗಳು ಸೆಗಣಿ ತಿನ್ನೋ ಜ್ಞಾನದಲ್ಲಿ ಪಿಎಚ್.ಡಿ ಲೆವೆಲ್ಲಿಗೆ ಪಳಗಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...