Homeಅಂಕಣಗಳುರಾಜಕೀಯ ರಣಹದ್ದುಗಳಿಗೆ ಆಹಾರವಾಗಬೇಡಿ!

ರಾಜಕೀಯ ರಣಹದ್ದುಗಳಿಗೆ ಆಹಾರವಾಗಬೇಡಿ!

- Advertisement -
- Advertisement -

ಕುಮಾರಸ್ವಾಮಿಯವರ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಸಂಯುಕ್ತ ಸರ್ಕಾರ ದಕ್ಷತೆಯಿಂದ ನಡೆಯಬೇಕೆಂಬುದು ನಮ್ಮೆಲ್ಲರ ಬಯಕೆ. ಎರಡೂ ಪಕ್ಷಗಳು ಕ್ಯಾತೆ ತೆಗೆದು ಬೀದಿ ಹಗರಣ ಮಾಡುವುದನ್ನು ಕೂಡಲೆ ಬಂದ್ ಮಾಡಬೇಕು. ಪ್ರಣಾಳಿಕೆಗಳ ಅನುಷ್ಠಾನ ಸಮಿತಿ ಹಾಗೂ ಸಮನ್ವಯ ಸಮಿತಿಗಳು ಅನುಷ್ಠಾನಕ್ಕೆ ಬಂದಿವೆ. ಈ ಎರಡು ಸಮಿತಿಗಳು ಕಾಲಕಾಲಕ್ಕೆ ಸಭೆ ಸೇರಿ ಮುಖ್ಯಮಂತ್ರಿಯವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಯಾವುದೇ ಕಾರಣಕ್ಕೆ ಶಾಸಕರಾಗಲಿ, ಮಂತ್ರಿಗಳಾಗಲಿ, ಪುಢಾರಿಗಳಾಗಲಿ ಸುದ್ದಿ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಿಗೆ ದೂರುಕೊಡುವ ಹೇಳಿಕೆಗಳನ್ನು ನೀಡಬಾರದು. ಸಂಯುಕ್ತ ಸರ್ಕಾರದಲ್ಲಿ ತಪ್ಪುಗಳಾದಾಗ ಈ ಸಮಿತಿಗಳು ಮುಖ್ಯಮಂತ್ರಿಯವರನ್ನು ಕರೆದು ಕೂರಿಸಿಕೊಂಡು ಸೌಹಾರ್ದದಿಂದ ತಪ್ಪನ್ನು ಸರಿಪಡಿಸುವ ಕೆಲಸ ಆಗಬೇಕು.
ಈ ಸಂಯುಕ್ತ ಸರ್ಕಾರ ಆದರ್ಶ ರೀತಿಯಲ್ಲಿ ನಡೆಯಬೇಕು. ಉಭಯ ಪಕ್ಷಗಳಲ್ಲಿರುವ ಕಳಂಕಿತ ಶಾಸಕರಿಗೆ ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡದಂತೆ ತಾಕೀತು ಮಾಡಬೇಕು. ಕ್ರಿಮಿನಲ್ ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸಚಿವರಿಗೆ ತಪ್ಪುದಾರಿಗೆ ಹೋದರೆ, ಭ್ರಷ್ಟಾಚಾರದಲ್ಲಿ ತೊಡಗಿದರೆ ಅಧಿಕಾರಿಗಳನ್ನು ದಾರಿತಪ್ಪಿಸಿದರೆ, ಅವರಿಗೆ ಮಾಡಬಾರದ್ದನ್ನು ಮಾಡಲು ಯತ್ನಿಸಿದರೆ ಕೂಡಲೇ ಅಂತಹ ಕಳಂಕಿತರನ್ನು ಮಂತ್ರಿಮಂಡಲದಿಂದ ಹೊರದೂಡಲು ಹಿಂದು-ಮುಂದು ನೋಡಬಾರದು. ಆಗ ರಾಜ್ಯಾಡಳಿತಕ್ಕೆ ಒಳ್ಳೆಯ ಹೆಸರು ಬರುತ್ತದೆ ಮತ್ತು ಈ ಎರಡೂ ಸಂಸ್ಥೆಗಳ ಬಗೆಗೆ ಮತದಾರರು ಒಲವು ತೋರಿಸುತ್ತಾರೆ.
ಮಂತ್ರಿಗಳ, ಶಾಸಕರ ತಪ್ಪುಗಳನ್ನು ಮುಚ್ಚಿ ಹಾಕಲು ಸರ್ಕಾರ ತೊಡಗಿದರೆ ಈ ಸರ್ಕಾರದ ಬಗೆಗೆ ಜನ ತಿರಸ್ಕಾರ ಸೂಚಿಸುತ್ತಾರೆ ಮತ್ತು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ಇದು ಜ್ಞಾಪಕವಿರರಲಿ.
ಭಾರತೀಯ ಜನತಾ ಪಕ್ಷ ರಣಹದ್ದಿನಂತೆ ಕಾಯುತ್ತಿದೆ. ಸರ್ಕಾರದಲ್ಲಿ ಒಡಕು ಬಂದು ಛಿದ್ರವಾಗಿ ಬಿಡಲಿ ಎಂದು ಭಜನೆ ಮಾಡುತ್ತಿದ್ದಾರೆ. ಆ ರಣಹದ್ದುಗಳಿಗೆ ಆಹಾರವಾಗದಂತೆ ನಡೆÀದುಕೊಳ್ಳಿ. ನೀವು ಅಧಿಕಾರ ಕಳೆದುಕೊಳ್ಳುವುದಷ್ಟೇ ಆದರೆ ಪ್ರಜೆಗಳಿಗೆ ಅಷ್ಟೇನೂ ನಷ್ಟವಿಲ್ಲ. ಆದರೆ ನಿಮ್ಮ ಕಾರ್ಯವಿಧಾನದಿಂದ ಸಾರ್ವಜನಿಕರು ತಲೆತಗ್ಗಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬೇಡಿ.
ಮುಖ್ಯಮಂತ್ರಿಗಳಿಗೊಂದು ವಿನಂತಿ. ನೀವು ಯಾವುದೇ ಕಾರಣಕ್ಕೂ ನಿಮ್ಮ ಆಡಳಿತ ಕಳಂಕಿತವಾಗುವುದಕ್ಕೆ ಎಡೆ ಮಾಡಿಕೊಡಬೇಡಿ. ದುಷ್ಟ, ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಬೇಡಿ. ಲೋಕಾಯುಕ್ತರು, ಎಸಿಬಿ ಹಲವಾರು ಭ್ರಷ್ಟ ಅಧಿಕಾರಿಗಳು ನ್ಯಾಯಯುತರಾದವರಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವವರ ಮನೆಗಳ ಮೇಲೆ ದಾಳಿ ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಅಧಿಕಾರಿಗಳ ಮೇಲೆ ಅಪರಾಧದ ಪಟ್ಟಿ ಸಿದ್ಧಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲು ಸರ್ಕಾರದ ಅನುಮತಿ ಕೇಳಿದ್ದಾರೆ. ಲೋಕಾಯುಕ್ತರ ಈ ಪಟ್ಟಿ ಸರ್ಕಾರಕ್ಕೆ ತಲುಪಿ ನಾಲ್ಕು ವರ್ಷಗಳೇ ಆಗಿದ್ದರೂ ಅವುಗಳನ್ನು ತಮ್ಮಲ್ಲೇ ಇಟ್ಟುಕೊಂಡು ಆ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಆ ಫೈಲುಗಳನ್ನು ತರಿಸಿ ಪರಾಂಬರಿಸಿ ಶೀಘ್ರದಲ್ಲೇ ಲೋಕಾಯುಕ್ತರಿಗೆ ಅವರ ಮೇಲೆ ಖಟ್ಲೆ ಹೂಡಬಹುದೆಂದು ಪತ್ರ ಬರೆಯಿರಿ. ಈ ಕೆಲಸ ಕೂಡಲೇ ನೀವು ಮಾಡಲಿಲ್ಲವಾದರೆ…? ನೀವೂ ಕೂಡ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದೀರಿ ಎಂಬ ಕಳಂಕ ಹೊರಬೇಕಾದೀತು.
ಎ.ಟಿ ರಾಮಸ್ವಾಮಿ ವರದಿಯನ್ನು ಸರ್ಕಾರ ಅಂಗೀಕರಿಸಿದ್ದರೂ ವರದಿಯಲ್ಲಿ ಉಲ್ಲೇಖಿತವಾಗಿರುವ ಯಾವ ಭೂಗಳ್ಳರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಈ ಭೂಗಳ್ಳರಲ್ಲಿ ಶಾಸಕರಿದ್ದಾರೆ. ಸರ್ಕಾರದ ಉನ್ನತಾಧಿಕಾರಿಗಳಿದ್ದಾರೆ, ಬಿಲ್ಡರ್‍ಗಳಿದ್ದಾರೆ, ರಿಯಲ್‍ಎಸ್ಟೇಟ್ ಮಾಫಿಯಾದವರಿದ್ದಾರೆ. ಈ ಹತ್ತು ವರ್ಷಗಳ ಕಾಲದಿಂದ ಅಧಿಕಾರದಲ್ಲಿದ್ದ ಯಾವ ಮಂತ್ರಿಯಾಗಲಿ, ಮುಖ್ಯಮಂತ್ರಿಯಾಗÀಲಿ ಈ ಹಗರಣಗಳನ್ನು ತೀವ್ರವಾಗಿ ಗಮನಿಸಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಎ.ಟಿ ರಾಮಸ್ವಾಮಿಯವರ ನೇತೃತ್ವದಲ್ಲಿ ನಾವು 39 ದಿನ ಸತತ ಧರಣಿ ನಡೆಸಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಸಿದ್ದರಾಮಯ್ಯರನ್ನು ಒಪ್ಪಿಸಿದೆವು. ಅವರು ಅರೆಮನಸ್ಸಿನಿಂದ ನ್ಯಾಯಾಲಯ ಸ್ಥಾಪನೆ ಮಾಡಿಸಿ, ತಾವೇ ಅದರ ಉದ್ಘಾಟನೆಯನ್ನು ನೆರವೇರಿಸಿದರು. ಆದರೆ ಒಂದು ವರ್ಷಗಳ ಕಾಲ ನ್ಯಾಯಾಧೀಶರಿಗೆ ನೌಕರರಿಗೆ ಸಂಬಳವನ್ನೇ ನೀಡಲಿಲ್ಲ. ನ್ಯಾಯಾಲಯದ ಖರ್ಚಿಗೆ ಹಣ ಬಿಡುಗಡೆ ಮಾಡಲಿಲ್ಲ. ಅಷ್ಟೇ ಅಲ್ಲ, ಜಿಲ್ಲಾಧಿಕಾರಿಗಳು ಯಾವುದೇ ಕೇಸನ್ನು ಅವರ ಮುಂದೆ ಮಂಡಿಸಲಿಲ್ಲ. ಮೂರು ವರ್ಷದ ಅವಧಿಗೆ ನೇಮಕರಾದ ನ್ಯಾಯಾಧೀಶರು ಎರಡು ವರ್ಷಕಾಲ ನ್ಯಾಯಾಲಯವನ್ನು ನಡೆಸಲು ಸಾಧ್ಯವಾಯಿತು. ಈಗ ಈ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಅವಧಿ ಮುಗಿಯುತ್ತಾ ಬಂದಿದೆ. ಕುಮಾರಸ್ವಾಮಿಯವರು ಈ ಖಾಲಿಯಾಗುವ ಸ್ಥಾನಗಳಿಗೆ ದಕ್ಷರನ್ನು ಭರ್ತಿಮಾಡಿ ಎ.ಟಿ ರಾಮಸ್ವಾಮಿಯವರ ವರದಿಯಲ್ಲಿ ನಮೂದಾಗಿರುವ ಭೂಗಳ್ಳರ ವಿಚಾರಣೆಯನ್ನು ನಿಮ್ಮ ಅಧಿಕಾರದ ಅವಧಿಯಲ್ಲಿ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಪ್ರಾರ್ಥನೆ.
ಭಾಜಪ ಸರ್ಕಾರ ನಡೆದಾಗ ವಿಶೇಷ ಜಿಲ್ಲಾಧಿಕಾರಿಗಳನ್ನು ಸರ್ಕಾರ ನೇಮಿಸಿತು. ಅವರೆಲ್ಲ ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಕ್ಕೆ ಸೇರಿದ ಸುಮಾರು 40 ಸಾವಿರ ಎಕರೆ ಹುಲ್ಲುಗಾವಲು, ಕೆರೆ ಅಂಗಳ, ಗುಂಡುತೋಪು, ಖರಾಬ್ ಜಮೀನು ಕೊನೆಗೆ ಸ್ಮಶಾನಗಳನ್ನೂ ಹಂಚಿಬಿಟ್ಟರು. ಉಚ್ಛನ್ಯಾಯಾಲಯಕ್ಕೆ ವಿಶೇಷ ಜಿಲ್ಲಾಧಿಕಾರಿಗಳನ್ನು ಸೃಷ್ಟಿಸಿ ಅವರಿಗೆ ಜಿಲ್ಲಾಧಿಕಾರಿಗಳ ಅಧಿಕಾರ ನೀಡುವ ಅಧಿಕಾರವೇ ಇಲ್ಲ. ಅಲ್ಲದೆ ಕಾನೂನು ಮೀರಿ ನಡೆಯುವ ಈ ವಿಶೇಷ ಜಿಲ್ಲಾಧಿಕಾರಿಗಳು, cordoned the limelight in a prominent way. The frequency of their indulgence in passing arbitrary, whimsical and utracious orders have been passed ಎಂದು ಕರ್ನಾಟಕ ಉಚ್ಛನ್ಯಾಯಾಲಯ ತಿಳಿಸಿದೆ.
ಈಗ ಈ ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗಳು ರದ್ದಾಗಿವೆ, ಅವರ ಸ್ಥಾನದಲ್ಲಿ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅವರು ಮಂದಗತಿಯಲ್ಲಿ ತೆರವು ಕಾರ್ಯ ನಡೆಸುತ್ತಿದ್ದಾರೆ. ಅವರಿಗೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಈ ಕೆಲಸ ಮುಗಿಸಬೇಕೆಂದು ಕುಮಾರಸ್ವಾಮಿಯವರು ಅವರಿಗೆ ಆಜ್ಞೆ ಮಾಡಬೇಕು. ಈ ವಿಶೇಷ ಜಿಲ್ಲಾಧಿಕಾರಿಗಳನ್ನು ಪದೇಪದೇ ವರ್ಗಾವಣೆ ಮಾಡುತ್ತಿರುವುದೂ, ಶನಿವಾರ ದಿನ ಮಾತ್ರ ತೆರವುಗೊಳಿಸುವ ಕೆಲಸ ನಡೆಯುತ್ತಿರುವುದೂ ಈ ಕೆಲಸ ಸುಸೂತ್ರವಾಗಿ ನಡೆಯದಿರಲು ಕಾರಣವಾಗಿದೆ. ಈ ವಿಶೇಷ ಜಿಲ್ಲಾಧಿಕಾರಿಗಳನ್ನು ಈ ಕೆಲಸ ಮುಗಿಸುವವರೆಗೂ ವರ್ಗ ಮಾಡದೆ ಬಿಟ್ಟರೆ ಕ್ಷಿಪ್ರವಾಗಿ ಗುರಿಮುಟ್ಟಬಹುದು ಎಂಬುದು ನನ್ನ ಅನಿಸಿಕೆ.

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...