Homeರಾಜಕೀಯವಿಷಪೂರಿತ ತೀರ್ಪು

ವಿಷಪೂರಿತ ತೀರ್ಪು

- Advertisement -
- Advertisement -

1984 ರಲ್ಲಿ ಡಿಸೆಂಬರ್ 2-3  ರ ರಾತ್ರಿ ಯೂನಿಯನ್ ಕಾರ್ಬೈಡ್ ಎಂಬ ಕಂಪನಿ ಭೋಪಾಲಿನ 3000 ಕ್ಕೂ ಹೆಚ್ಚು ಮಂದಿಗೆ ಮಿಥೈಲ್ ಐಸೋಸಯನೇಟ್ ಎಂಬ ವಿಷ ಅನಿಲವನ್ನು ಕುಡಿಸಿ ಕೊಂದು ಹಾಕಿತ್ತು. ಅದಾಗಿ 26 ವರ್ಷಗಳ ನಂತರ ನಮ್ಮ ಸರ್ಕಾರಗಳ ಇಬ್ಬಂದಿತನ, ರಾಜಕೀಯ ಪಕ್ಷಗಳ ಬೇಜವಾಬ್ದಾರಿತನ ಮತ್ತು ಸುಪ್ರೀಂಕೋರ್ಟಿನ ಅಸೂಕ್ಷ್ಮತೆಯಿಂದಾಗಿ ಮೊನ್ನೆ ಭೋಪಾಲಿನ ನ್ಯಾಯಾಲಯವೊಂದು ಅದೇ ಮಾರಣಹೋಮದಲ್ಲಿ ಬದುಕುಳಿದರೂ ನರಕ ಸದೃಶ ಜೀವನವನ್ನು ಸಾಗಿಸುತ್ತಿರುವವರಿಗೆ ನ್ಯಾಯ ನೀಡಿ, ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುವ ಬದಲಾಗಿ ಕೊಲೆಗಡುಕರಿಗೆ ಎರಡು ವರ್ಷಗಳ ಸಜೆಯನ್ನು ಮಾತ್ರ ಘೋಷಿಸುವ ಮೂಲಕ ಸಂತ್ರಸ್ತರು ನ್ಯಾಯ ವ್ಯವಸ್ಥೆಯಲ್ಲಿ ಇಟ್ಟಿದ್ದ ಭರವಸೆಯನ್ನು ಮತ್ತೊಮ್ಮೆ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದೆ.

ನಮ್ಮ ದೇಶದಲ್ಲಿ ಸಾವಿನಲ್ಲೂ ಹೇಗೆ ವರ್ಗಭೇದ ಮಾಡಲಾಗುತ್ತದೆಂಬುದಕ್ಕೆ ಒಂದು ಉದಾಹರಣೆ ನೋಡಿ. ಇತ್ತೀಚೆಗೆ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 156 ಜನ ಸಾವಿಗೀಡಾದರು. ಅವರೆಲ್ಲರೂ ಮಧ್ಯಮ ವರ್ಗ ಅಥವಾ ಮೇಲುವರ್ಗದವರಾಗಿದ್ದರು. ಆ ದುರಂತದಲ್ಲಿ ಮಡಿದ 150 ಹತಭಾಗ್ಯರಿಗೆ ಸರ್ಕಾರ ಕೇವಲ ಇಪ್ಪತ್ತೇ ದಿನಗಳಲ್ಲಿ ಸುಮಾರು ಒಂಭತ್ತು ಕೋಟಿ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡಿತು.
ಮಂಗಳೂರಿನ ವಿಮಾನ ದುರಂತದಲ್ಲಿ ಮಡಿದವರಷ್ಟೇ ಹತಭಾಗ್ಯರು ಭೋಪಾಲ್ ಅನಿಲ ದುರಂತದಲ್ಲಿ ಮಡಿದ ಸಾವಿರಾರು ಜನ. ಆದರೆ ಆ ದುರಂತದಲ್ಲಿ ಸತ್ತವರಲ್ಲಿ ಬಹಳಷ್ಟು ಜನ ಬಡವರು, ಕೂಲಿ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕೆಲ ವರ್ಗದವರು. ಹಾಗೆಯೇ ಆ ದುರಂತದಲ್ಲಿ ಸಂತ್ರಸ್ತರಾದ ಐದೂವರೆ ಲಕ್ಷ ಜನರೂ ಕಡುಬಡವರು. ಈ ಜನ ಮಾತ್ರ ಪರಿಹಾರಕ್ಕಾಗಿ 26 ವರ್ಷಗಳ ಕಾಲ ಕಾಯಬೇಕಾಯಿತು. ಆಗಲೂ ಅವರಿಗೆ ದೊರಕಿದ ಹಣವೆಷ್ಟು? ತಲಾ 15,000 ರೂಪಾಯಿಗಳು ಮಾತ್ರ. ಅಂದರೆ ಆ ದುರಂತ ಸಂಭವಿಸಿ ಅವರ ಬದುಕೇ ನುಚ್ಚುನೂರಾಗಿದ್ದರೂ ಅಂದಿನಿಂದ ಇಂದಿನತನಕ ಅವರು ಅನುಭವಿಸಿದ ಯಾತನೆಗೆ ನೀಡಿದ ಪರಿಹಾರ: ಪ್ರತಿದಿನಕ್ಕೆ ಕೇವಲ ಒಂದೂವರೆ ರೂಪಾಯಿಗಳು!

ಭಾರತದಲ್ಲೇ ಬಡ ಭಾರತೀಯರ ಜೀವಕ್ಕೆ ಬೆಲೆ ಇಲ್ಲದಿದ್ದರೆ, ಇನ್ನು ಅಮೆರಿಕಾದಂತಹ ದೇಶಗಳಿಗೆ ಎಲ್ಲಾ ಭಾರತೀಯರ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲ. 1984 ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಿಂದಾಗಿ 8000 ಜನ ಸತ್ತು, 5,25,000 ಜನ ಬಾಧಿತರಾಗಿದ್ದಕ್ಕೆ ಕೊನೆಗೂ ಯೂನಿಯನ್ ಕಾರ್ಬೈಡ್ ಕಂಪನಿ ಪರಿಹಾರವಾಗಿ ಕೊಟ್ಟಿದ್ದು 450 ಮಿಲಿಯನ್ ಡಾಲರ್- ಅಂದರೆ 1,500 ಕೋಟಿ ರೂಪಾಯಿಗಳನ್ನು ಮಾತ್ರ (ಇದೇ ದಿನವೊಂದಕ್ಕೆ 1.50 ರೂಪಾಯಿ ಲೆಕ್ಕವಾಗಿದ್ದು). ಈ ಪರಿಹಾರ ಹಣವನ್ನು 1989 ರಲ್ಲಿ ಸಮುದ್ರದಲ್ಲಿ ಸಂಭವಿಸಿದ ಎಕ್ಸಾನ್ ಮೊಬಿಲ್ ತೈಲ ಸೋರಿಕೆ ಪ್ರಕರಣದೊಂದಿಗೆ ಹೋಲಿಸಿ ನೋಡಿ. ಭೋಪಾಲ್ ಅನಿಲ ದುರಂತವು ಪ್ರಪಂಚದಲ್ಲೇ ಅತಿದೊಡ್ಡ ಔದ್ಯಮಿಕ ದುರಂತವಾಗಿದ್ದರೆ, ಎಕ್ಸಾನ್ ಮೊಬಿಲ್ ದುರಂತವನ್ನು ಪರಿಸರದ ಮೇಲೆ ಆದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಆಗ ಅಮೆರಿಕದ ನ್ಯಾಯಾಲಯವು ಎಕ್ಸಾನ್ ಕಂಪನಿ ವಿರುದ್ಧ ಒಟ್ಟು 795 ಬಿಲಿಯನ್ ಡಾಲರ್‍ಗಳಷ್ಟು ದಂಡವನ್ನು ವಿಧಿಸಿತ್ತು! ಅಂದರೆ ಭಾರತದ ಸಂತ್ರಸ್ತರಿಗೆ ಯೂನಿಯನ್ ಕಾರ್ಬೈಡ್ ನೀಡಿದ್ದಕ್ಕಿಂತ 345 ಮಿಲಿಯನ್ ಡಾಲರ್‍ಗಳಷ್ಟು ಹೆಚ್ಚಿಗೆ!!
ಭೋಪಾಲ್‍ನಲ್ಲಿ ಮಡಿದ ಭಾರತೀಯರಿಗೂ ಅಮೆರಿಕದ ಮಾಲೀಕತ್ವದ ಯೂನಿಯನ್  ಕಾರ್ಬೈಡ್ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂಬಂತಲೇ ವರ್ತಿಸಿಕೊಂಡು ಬಂದಿರುವ ಈ ಕಂಪನಿಯು ತಾನು ಎಸಗಿದ ಕೊಲೆಗಳಿಂದ ಬಚಾವಾಗಲೂ ಮಾಡಿದ ಷಡ್ಯಂತ್ರಗಳು ಒಂದೆರಡಲ್ಲ. ಅವುಗಳಲ್ಲಿ ಪ್ರಮುಖವಾದದ್ದು 2000 ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯನ್ನೇ ಡೌ ಎಂಬ ಮತ್ತೊಂದು ಕಂಪನಿಗೆ ಮಾರಿದ್ದು. ಇದನ್ನು ಡೌ ಕಂಪನಿಯು ಕೊಂಡಿದ್ದೇ ಯೂನಿಯನ್ ಕಾರ್ಬೈಡ್‍ನ ಯಾವ ಹೊಣೆಗಾರಿಕೆಗೂ ತಾನು ಜವಾಬ್ದಾರನಲ್ಲ ಎಂಬ ಷರತ್ತಿನ ಮೇಲೆ.

ಇಂತಹ  ಡೌ ಕಂಪನಿಯು ಇವತ್ತು-ಅಂದರೆ ಭೋಪಾಲ್ ದುರಂತ ಸಂಭವಿಸಿದ 26 ವರ್ಷಗಳ ನಂತರ- ಭೋಪಾಲ್ ಕಾರ್ಖಾನೆಯ ಆವರಣದಲ್ಲಿ ಇನ್ನೂ ಉಳಿದಿರುವ ವಿಷಕಾರಕ ವಸ್ತುಗಳನ್ನು ತೆಗೆಯಬೇಕೆಂದೂ, ಆ ಮೂಲಕ ಇವತ್ತಿಗೂ ಆ ಕಾರ್ಖಾನೆಯ ಸುತ್ತಲಿನ ಗಾಳಿ ಮತ್ತು ನೀರು ಕಲುಷಿತವಾಗುತ್ತಿರುವುದನ್ನು ತಡೆಯಬೇಕೆಂದೂ ಭೋಪಾಲ್ ಜನ ಒತ್ತಾಯಿಸುತ್ತಿದ್ದಾರೆ. ಆದರೆ ಆ ಕಾರ್ಖಾನೆಯ ಆವರಣವನ್ನು ಸ್ವಚ್ಛಗೊಳಿಸಲು ಕನಿಷ್ಠ 50 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಡೌನಂತಹ ಬಹುರಾಷ್ಟ್ರೀಯ ಕಂಪನಿಗೆ 50 ಕೋಟಿ ರೂಪಾಯಿಗಳು ಜುಜುಬಿ ಮೊತ್ತ. ಆದರೆ ಅಷ್ಟನ್ನೂ ವೆಚ್ಚ ಮಾಡಿ, ಅಲ್ಲಿನ ಜನರ ಬದುಕನ್ನು ಒಂದಿಷ್ಟು ಸುಧಾರಿಸಲೂ ಡೌ ಸಿದ್ಧವಿಲ್ಲ.
ಡೌ ಕಂಪನಿಗೆ ಭಾರತೀಯರಾಗಲಿ, ಭೋಪಾಲಿಗರಾಗಲೀ ಮುಖ್ಯವಲ್ಲವಾದ್ದರಿಂದ ಅದು ಈ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದೆ. ಡೌ ಕಂಪನಿಯ ಈ ಹಠಮಾರಿ ಧೋರಣೆಗೆ ಕುಮ್ಮಕ್ಕು ನೀಡುತ್ತಿರುವುದು ಭಾರತೀಯ ಉದ್ಯಮಿಗಳು. ಅದರಲ್ಲೂ ಪ್ರಮುಖವಾಗಿ ತಾನು ಅಪ್ಪಟ ಭಾರತೀಯ, ಭಾರತದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕಂಪನಿ ಎಂದೇ ಬಿಂಬಿಸಿಕೊಳ್ಳುವ ಟಾಟಾ ಕಂಪನಿ ಡೌ ಕಂಪನಿಯ ಪರವಾಗಿ ವಾದಿಸುತ್ತಿದೆ.  ವಿದೇಶಿ ಕಂಪನಿಗಳ ಮೇಲೆ ಇಂತಹ `ದುಂದು’ ವೆಚ್ಚಗಳನ್ನು ಹೇರಿದರೆ ಭಾರತಕ್ಕೆ ವಿದೇಶಿ ಬಂಡವಾಳ ಬರುವುದು ಕಷ್ಟ ಎಂದು ಟಾಟಾ ಕಂಪನಿ ಭಾರತ ಸರ್ಕಾರದ ಮೇಲೆ ಒತ್ತಡ ತಂದಿದೆ. ಹೇಗೂ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಮಂತ್ರಿ ಪಿ. ಚಿದಂಬರಂ ಅವರಿಗೂ ಭಾರತೀಯರ ಸುರಕ್ಷತೆಗಿಂತ ವಿದೇಶಿ ಬಂಡವಾಳವೇ ಮುಖ್ಯವಾಗಿರುವುದರಿಂದ ಅವರೂ ಟಾಟಾ-ಡೌ ಕಂಪನಿಗಳ ಒತ್ತಡಕ್ಕೆ ಮನಸೋತಿದ್ದಾರೆ!

ಅಂದಹಾಗೆ ಇದೇ ಡೌ ಕಂಪನಿಯ ಜೊತೆಗೆ ಟಾಟಾ ಕಂಪನಿಯು ಪಶ್ಚಿಮ ಬಂಗಾಳದಲ್ಲಿ ಒಂದು ರಸಾಯನಿಕ ಘಟಕವನ್ನು ಸ್ಥಾಪಿಸುತ್ತಿದೆ!! ಭಾರತೀಯರಿಗೆ ಎಷ್ಟು ನಷ್ಟವಾದರೇನು? ತಮಗೆ ಹೆಚ್ಚು ಲಾಭ ಬಂದರೆ ಸಾಕು ಎಂಬ ಧೋರಣೆ ಟಾಟಾ ಮತ್ತು ಡೌ ಎಂಬ ರಣಹದ್ದು ಕಂಪನಿಗಳದ್ದು.

ಮೊನ್ನಿನ ತೀರ್ಪು ಹೊರಬಿದ್ದ ನಂತರ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಆದರೆ ಇದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಭೋಪಾಲ್ ಸಂತ್ರಸ್ತರಿಗೆ ಯಾವ ಸಹಾಯವನ್ನೂ ಮಾಡಲಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ  ಪರಮ ಚೆಡ್ಡಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಡೌ ಕಂಪನಿಯ ಮುಖ್ಯಸ್ಥನನ್ನು ಗಣರಾಜ್ಯೋತ್ಸವದ ಸಮಾರಂಭಕ್ಕೆ ಆಹ್ವಾನಿಸಿತ್ತು! ಮಾತ್ರವಲ್ಲ, ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದೂ ಅಮೆರಿಕಕ್ಕೆ ಓಡಿಹೋಗಿದ್ದ ಯೂನಿಯನ್ ಕಾರ್ಬೈಡ್‍ನ ಮುಖ್ಯಸ್ಥ ವಾರೆನ್ ಆಂಡರ್ಸನ್ ಅನ್ನು ಭಾರತಕ್ಕೆ ಒಪ್ಪಿಸಬೇಕೆಂದು ಒಮ್ಮೆಯೂ ಬಿಜೆಪಿ ಸರ್ಕಾರ ಅಮೆರಿಕವನ್ನು ಕೇಳಿಕೊಂಡಿರಲಿಲ್ಲ!

ಇದೆಲ್ಲದರಿಂದ ಹಲವು ವಿಚಾರಗಳು ಸ್ಪಷ್ಟವಾಗುತ್ತವೆ. ಅವುಗಳೇನೆಂದರೆ ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅವುಗಳಿಗೆ ಅಮೆರಿಕದೊಂದಿಗೆ ಗಳಸ್ಯ-ಕಂಠಸ್ಯ ಸಂಬಂಧ ಮತ್ತು ವಿದೇಶಿ ಬಂಡವಾಳ ಹರಿದುಬರುವುದು ಮುಖ್ಯವೇ ಹೊರತು ಇಲ್ಲಿನ ಜನರ ಬದುಕಾಗಲಿ, ಅವರಿಗೆ ರಕ್ಷಣೆ ನೀಡಬೇಕೆಂಬುದಾಗಲಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂಬುದಾಗಲಿ ಮುಖ್ಯವೇ ಇಲ್ಲ.

 

ಚೆರ್ನೊಬಲ್ ಅಣುಸ್ಥಾವರ ಸೋರಿಕೆಗಿಂತಲೂ, ಅಮೆರಿಕದ ಥ್ರೀ ಮೈಲ್ಸ್ ಐಲೆಂಡಿನಲ್ಲಿ ಸಂಭವಿಸಿದ ಅಣು ದುರಂತಕ್ಕಿಂತಲೂ ಭೀಕರ ಮತ್ತು ಬರ್ಬರವಾಗಿದ್ದ ಭೋಪಾಲ್ ಅನಿಲ ದುರಂತ ಮತ್ತೆ ಎಂದೂ ಸಂಭವಿಸದಿರಲಿ ಎಂಬುದು ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಆದರೆ ಪ್ರಜ್ಞೆ ಎಂಬುದು ನಮ್ಮ ಸರ್ಕಾರಕ್ಕಾಗಲಿ, ರಾಜಕೀಯ ಪಕ್ಷಗಳ ನಾಯಕರಿಗಾಗಲಿ ಇಲ್ಲ. ಆದ್ದರಿಂದಲೇ ಬರುವ ದಿನಗಳಲ್ಲಿ ಭೋಪಾಲ್ ದುರಂತಕ್ಕಿಂತಲೂ ದೊಡ್ಡ ಪ್ರಮಾಣದ ದುರಂತಗಳಿಗೆ ದಾರಿ ಮಾಡಿಕೊಡುವಂತಹ; ಭೋಪಾಲ್‍ಗೆ ಸಂಬಂಧಿಸಿದಂತೆ ಆದ `ಅನ್ಯಾಯ’ದ ತೀರ್ಪುಗಳೂ ಮತ್ತೆ ಪುನರಾವರ್ತನೆ ಆಗುವಂತಹ ಪರಿಸ್ಥಿತಿಯನ್ನು ನಿರ್ಮಿಸಲು ಸರ್ಕಾರ ಹೊರಟಿದೆ. ಅದಕ್ಕೆ ಎಡಪಕ್ಷಗಳ ಹೊರತಾಗಿ ಇತರೆ ಪಕ್ಷಗಳೂ ಬೆಂಬಲ ನೀಡುತ್ತಿವೆ. ಅದೇ `ಅiviಟ ಐiಚಿbiಟiಣಥಿ oಜಿ ಓuಛಿಟeಚಿಡಿ ಆಚಿmಚಿges ಃiಟಟ’ ಎಂಬ ಮಸೂದೆ.

ಈ ಮಸೂದೆ ಜಾರಿಗೆ ಬಂದರೆ ಭಾರತದ ವಿದ್ಯುತ್ ಕೊರತೆಯನ್ನು ನೀಗಿಸುವ ನೆಪದಲ್ಲಿ ದೇಶದ ವಿವಿಧ ಕಡೆ ಅಮೆರಿಕದ ಕಂಪನಿಗಳು ಸ್ಥಾಪಿಸಲಿರುವ ಅಣುಸ್ಥಾವರಗಳಲ್ಲಿ ಅವಘಢ ಸಂಭವಿಸಿದರೆ ಆ ಸ್ಥಾವರವನ್ನು ನಿರ್ಮಿಸಿದ ಅಥವಾ ಅವುಗಳಿಗೆ ಯುರೇನಿಯಂ ಅನ್ನು ಸರಬರಾಜು ಮಾಡಿದ ಕಂಪನಿಗಳು ಜವಾಬ್ದಾರಿಯಾಗುವುದಿಲ್ಲ. ಮಾತ್ರವಲ್ಲ, ಆ ಕಂಪನಿಗಳ ವಿರುದ್ಧ ಯಾವ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡುವಂತಿಲ್ಲ! ಅವಘಡದಲ್ಲಿ ಅದೆಷ್ಟೇ ಜನ ಸತ್ತರೂ, ಅದೆಷ್ಟೇ ಪರಿಸರ ಹಾನಿಯಾದರೂ, ಹೆಚ್ಚೆಂದರೆ ಆ ಕಂಪನಿಗಳ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡಿ ಅವರಿಗೆ ಶಿಕ್ಷೆಯಾಗುವಂತೆ ಕೇಳುವ ಬದಲಾಗಿ ಒಂದಿಷ್ಟು ಪರಿಹಾರ ಕೊಡಿ ಎಂದಷ್ಟೇ ಕೇಳಬಹುದು.

 

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದೆಂದರೆ ಅಣಸ್ಥಾವರ ಉತ್ಪಾದಿಸುವ ವಿದ್ಯುತ್ ಅನ್ನು ಭಾರತ ಸರ್ಕಾರದ `ಅಣು ವಿದ್ಯುತ್ ನಿಗಮ’ ಕೊಂಡುಕೊಳ್ಳುವುದರಿಂದ ಅಂತಹ ಪರಿಹಾರವನ್ನು ನೀಡುವ ಜವಾಬ್ದಾರಿ ಕೂಡ ಈ ನಿಗಮದ್ದೇ ಆಗಿರುತ್ತದೆಯೇ ಹೊರತು ಆ ಸ್ಥಾವರವನ್ನು ಸ್ಥಾಪಿಸಿದ ಅಮೆರಿಕದ ಕಂಪನಿಯ ಜವಾಬ್ದಾರಿ ಆಗಿರುವುದಿಲ್ಲ.

ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕೊನೆಗೂ ಕೊಟ್ಟಿದ್ದು 1500 ಕೋಟಿ ರೂಪಾಯಿಗಳು ಎಂಬುದನ್ನು ಮತ್ತೊಮ್ಮೆ ನೆನಪಿಸಿ ಈ ಹೊಸ ಮಸೂದೆಯಲ್ಲಿನ ಇನ್ನೊಂದು ಪ್ರಮುಖ ಅಂಶದತ್ತ ಗಮನ ಹರಿಸಬಹುದು. ಈ ಮಸೂದೆಯ ಪ್ರಕಾರ ಯಾವುದೇ ಅಣುಸ್ಥಾವರದಲ್ಲಿ ಅವಘಡ ಸಂಭವಿಸಿದರೆ ಅದರ ಅಮೆರಿಕ ಕಂಪನಿಯು ಹೆಚ್ಚೆಂದರೆ ಜುಜುಬಿ 300 ಕೋಟಿ ರೂಪಾಯಿಗಳನ್ನು ಕೊಟ್ಟರೆ ಸಾಕು. ಇನ್ನುಳಿದ 2300 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರವೇ ಭರಿಸುತ್ತದೆ. ಇದರರ್ಥ: ಜನರ ಮಾರಣಹೋಮಕ್ಕೆ ಕಾರಣ ಅಮೆರಿಕದ ಕಂಪನಿಯಾದರೂ ಶಿಕ್ಷೆಗೆ ಗುರಿಯಾಗುವುದು ತೆರಿಗೆ ಕಟ್ಟುವ ಭಾರತದ ಬಡ ಪ್ರಜೆಗಳು!

 

ಅಮೆರಿಕದ ಬಂಡವಾಳಶಾಹಿಗಳ ಫುಟ್‍ರಗ್ ಆಗಿರುವ ಭಾರತದಲ್ಲಿ ಭೋಪಾಲ್ ಅನಿಲ ದುರಂತ ಸಂಭವಿಸಿ ಸಾವಿರಾರು ಜನ ಸಾಯುತ್ತಾರೆ. ಆದರೂ ವಾರೆನ್ ಆಂಡರ್ಸನ್ ತರಹದ ಕೊಲೆಗಡುಕರು ಆರಾಮಾಗಿರುತ್ತಾರೆ;  ಇತರೆ ಸಿಬ್ಬಂದಿಗಳಿಗೆ ಎರಡು ವರ್ಷ ಸಜೆ ಮಾತ್ರ ಸಿಕ್ಕು ಅವರೂ ಜಾಮೀನಿನ ಮೇಲೆ ಬಿಡುಗಡೆಗೊಳ್ಳುತ್ತಾರೆ. ಏಕೆಂದರೆ ಅಭಿವೃದ್ಧಿಯ ಹೆಸರಲ್ಲಿ ಭಾರತ ಸರ್ಕಾರಕ್ಕೆ ಇವರ ಬಂಡವಾಳ ಬೇಕಾಗಿದೆ.

ಹಾಗೆಯೇ,  ಸುಪ್ರೀಂ ಕೋರ್ಟ್ ಕೂಡ ನಮ್ಮ ದೇಶಕ್ಕೆ ವಿದೇಶಿ ಬಂಡವಾಳ ಹರಿದು ಬರಬೇಕೆಂದರೆ, ನರ್ಮದಾ ಡ್ಯಾಮಿನ ಎತ್ತರವನ್ನು ಹೆಚ್ಚಿಸಬೇಕೆಂದೂ, ಆ ಡ್ಯಾಮ್ ಯೋಜನೆಯಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾದರೂ ಅವರಿಗೆ ಪುನರ್ ವಸತಿ ಕಲ್ಪಿಸಿದರೆ ಸಾಕೆಂದೂ ಹೇಳುತ್ತದೆ.

ಅದೇ ನೀತಿ ಈಗಲೂ ಮುಂದುವರೆದಿದೆ. ಭಾರತ ಅಭಿವೃದ್ಧಿ ಹೊಂದಬೇಕೆಂದರೆ ದಂಡಕಾರಣ್ಯದ ಕಾಡುಗಳಲ್ಲಿ, ಗುಡ್ಡಗಳಲ್ಲಿ ಇರುವ ಅಮೂಲ್ಯ ಅದಿರನ್ನು ಹೊರತೆಗೆದು ವೇದಾಂತ, ಎಸ್ಸಾರ್, ಟಾಟಾದಂತಹ ಕಂಪನಿಗಳಿಗೆ ನೀಡಬೇಕಿದೆ. ಆ ಕಾರ್ಯಾಚರಣೆಗೆ ಅಡ್ಡಿ ಬರುವ ಆದಿವಾಸಿಗಳನ್ನು ಕಾಡುಗಳಿಂದ ಒದ್ದೋಡಿಸಬೇಕಿದೆ, ಇಲ್ಲವೆಂದರೆ ನಾವೇ ನಮ್ಮವರನ್ನು ಕೊಂದು ಹಾಕಬೇಕಿದೆ….

 

ಭಾರತ ಸರ್ಕಾರಕ್ಕೆ, ಇಲ್ಲಿನ ರಾಜಕೀಯ  ಪಕ್ಷಗಳಿಗೆ ಎಲ್ಲಿಯತನಕ ಭಾರತದ ಪ್ರಜೆಗಳು ಮುಖ್ಯವಾಗುವುದಿಲ್ಲವೋ ಅಲ್ಲಿಯತನಕ ಭೋಪಾಲ್ ಅನಿಲ ದುರಂತಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇರುತ್ತವೆ…..

ಇದೆಲ್ಲದಕ್ಕೆ ಪರಿಹಾರವೆಂದರೆ ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ  ಮೂಲಭೂತವಾದ ಬದಲಾವಣೆಗಳನ್ನು ತರುವುದು.

ಆದರೆ ಒಂದು ದೊಡ್ಡ ಕ್ರಾಂತಿ ಇಲ್ಲದೆ ಆ ಮೂಲಭೂತ ಬದಲಾವಣೆಗಳು ಸಾಧ್ಯವಿಲ್ಲ, ಅಲ್ಲವೇ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...