Homeಪ್ರಪಂಚಸರ್ವಾಧಿಕಾರಿ ಘಟಸರ್ಪಗಳು: ಅಳಿಸಲೂ, ಉಳಿಸಲೂ ನೂರೆಂಟು ನೆಪ

ಸರ್ವಾಧಿಕಾರಿ ಘಟಸರ್ಪಗಳು: ಅಳಿಸಲೂ, ಉಳಿಸಲೂ ನೂರೆಂಟು ನೆಪ

- Advertisement -
- Advertisement -

ನಿಖಿಲ್ ಕೋಲ್ಪೆ |

ಹಲವಾರು ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಬಂಡವಾಳಶಾಹಿ ಸಿರಿವಂತ ರಾಷ್ಟ್ರಗಳು ಕೆಲವು ಕಡೆ ಕುರುಡುಗಣ್ಣು ಬೀರಿದರೆ, ಕೆಲವು ದೇಶಗಳಲ್ಲಿ ಮಿಲಿಟರಿ ಮಧ್ಯ ಪ್ರವೇಶ ಮಾಡಿ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿದೆ ಇಲ್ಲವೇ ಅವುಗಳಲ್ಲಿ ಅರಾಜಕತೆಯನ್ನು ಪೋಷಿಸಿವೆ. ಇದಕ್ಕೆ ಇರುವ ಮಾನದಂಡವೇನು?

ಸೋವಿಯತ್ ಒಕ್ಕೂಟವು ಪ್ರಬಲವಾಗಿದ್ದಾಗ ಇದ್ದ ಮಾನದಂಡ ಒಂದೇ! ಅದೆಂದರೆ, ಕಮ್ಯೂನಿಸ್ಟ್ ಸರಕಾರಗಳು, ಎಡ ಚಿಂತನೆಯ ಸರಕಾರಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು. ಇದ್ದಲ್ಲಿ ಅವುಗಳನ್ನು ಉರುಳಿಸಲು ಪ್ರಚೋದನೆ ಮತ್ತು ಬೆಂಬಲ ನೀಡುವುದು.

ಸಂಪತ್ತಿನ ನಿಯಂತ್ರಣಕ್ಕಾಗಿ ಮತ್ತು ಸ್ವಹಿತಾಸಕ್ತಿಯ ರಕ್ಷಣೆಗಾಗಿ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಂಡವಾಳಶಾಹಿ ತನಗೆ ಲಾಭವಿಲ್ಲದ ಕಡೆಗಳಲ್ಲಿ ಎಂತಹ ದಮನಕಾರಿ ಸರಕಾರಗಳಿದ್ದರೂ ಕಣ್ಣುಮುಚ್ಚಿ ಕುಳಿತಿದೆ. ಯುಎಸ್‌ಎಯಂತಹ ದೇಶ ಮತ್ತು ದೊಡ್ಡಣ್ಣನ ತಮ್ಮಂದಿರಂತೆ ವರ್ತಿಸುವ ನ್ಯಾಟೋ ದೇಶಗಳು ಮಧ್ಯ ಪ್ರವೇಶ ಮಾಡದ ದೇಶಗಳೇ ಬಹುತೇಕ ಇಲ್ಲ ಎನ್ನಬಹುದು.

ಸುಮ್ಮನೇ ಪ್ರಪಂಚದ ಕೆಲವು ದೇಶಗಳನ್ನು ಹೆಸರಿಸಿದರೂ ಸಾಕು ಅಲ್ಲಿ ದೊಡ್ಡಣ್ಣನ ಮಧ್ಯಪ್ರವೇಶ ನಡೆದಿದೆ; ಸರ್ವಾಧಿಕಾರಗಳಿಗೆ ಪ್ರಜಾಪ್ರಭುತ್ವದ ರಕ್ಷಕರೆನ್ನುವ ರಾಷ್ಟ್ರಗಳು ಬೆಂಬಲ ನೀಡಿವೆ. ಉದಾಹರಣೆಗೆ ಮಧ್ಯ ಅಮೇರಿಕಾದ ನಿಕರಾಗುವ, ಹೊಂಡುರಾಸ್, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೋ, ಎಲ್ ಸಾಲ್ವದೋರ್, ಲ್ಯಾಟಿನ್ ಅಮೇರಿಕಾದ ಚಿಲಿ, ಅರ್ಜೆಂಟೀನಾ, ಕ್ಯೂಬಾ, ಗ್ರೆನೆಡಾ, ಪೆರು, ಬೊಲಿವಿಯಾ, ವೆನಿಜ್ಯುವೆಲಾ… ಆಫ್ರಿಕಾ ಅಂಗೋಲ, ಕಾಂಗೋ, ನಮೀಬಿಯಾ, ಮೊಜಾಂಬಿಕ್, ಈಜಿಪ್ಟ್, ಲಿಬಿಯಾ… ಏಷ್ಯಾದ ವಿಯೆಟ್ನಾಂ, ಕಾಂಬೋಡಿಯ, ಫಿಲಿಪೈನ್ಸ್, ಫಿಜಿ, ಸಿರಿಯಾ, ಯೆಮೆನ್, ಇರಾನ್, ಇರಾಕ್, ಅಫ್ಘಾನಿಸ್ತಾನ… ಯುರೋಪಿನ ಯುಗೋಸ್ಲಾವಿಯಾ, ಜೆಕೋಸ್ಲಾವಾಕಿಯಾ…. ಹೀಗೆ ಯಾವುದೇ ದೇಶದ ಮಟ್ಟಿಗೆ ನೋಡಿದರೂ ಈ ಮಾತು ಸತ್ಯ.

ತನಗೆ ಲಾಭವಿಲ್ಲದ ದೇಶಗಳಲ್ಲಿ ನಡೆದ ರಕ್ತಪಾತಗಳಿಗೆ ಕುರುಡು ಕಿವುಡಾಗಿರುವುದಕ್ಕೆ ಉದಾಹರಣೆಯಾಗಿ ಉಗಾಂಡದ ಇದಿ ಅಮೀನನಂತಹ ನರರಾಕ್ಷಸನನ್ನು ಸಹಿಸಿಕೊಂಡು ಕುಳಿತದ್ದನ್ನು ನೆನಪಿಸಬಹುದು. ನಂತರದ ಉದಾಹರಣೆ ಬೇಕೆಂದರೆ ರುವಾಂಡದ ಹುಟು-ತುತ್ಸಿ ಬುಡಕಟ್ಟುಗಳ ಸಂಘರ್ಷದಲ್ಲಿ ಯುಎಸ್‌ಎ ಮತ್ತು ನ್ಯಾಟೋ ದೇಶಗಳ ಪಾತ್ರವನ್ನು ನೋಡಬಹುದು. ಹಿಂದೆ ಅಲ್ಲಿ ಅಲ್ಪಸಂಖ್ಯಾತ ತುತ್ಸಿಗಳ ಆಡಳಿತವಿತ್ತು. ನಂತರ ಹಲವಾರು ವರ್ಷಗಳ ಸಂಘರ್ಷದ ಬಳಿಕ ಬಹುಸಂಖ್ಯಾತ ಹುಟುಗಳ ಕೈಮೇಲಾಯಿತು. ನೆಪಮಾತ್ರಕ್ಕೆ ನ್ಯಾಟೋ ಒಂದು ಶಾಂತಿಪಾಲನಾ ಪಡೆ ಕಳಿಸಿತು. ಬಡದೇಶವಾದ ರುವಾಂಡದಲ್ಲಿ ಏನೇ ನಡೆದರೂ ಅದಕ್ಕೇನು ದೊಡ್ಡ ಆಸಕ್ತಿ ಇರಲಿಲ್ಲ. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ಹುಟುಗಳು ಯೋಜಿತ ರೀತಿಯಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ತುತ್ಸಿಗಳ ಹತ್ಯಾಕಾಂಡ ನಡೆಸಿದರು. ಒಂದೇ ವಾರದಲ್ಲಿ ಹೆಂಗಸರು ಮಕ್ಕಳೆನ್ನದೆ ಸುಮಾರು ಹತ್ತು ಲಕ್ಷದಷ್ಟು ತುತ್ಸಿಗಳನ್ನು ಹಾದಿಬೀದಿಗಳಲ್ಲಿ ಮಚ್ಚುಗಳಿಂದ ಕೊಚ್ಚಿ ಕೊಲ್ಲಲಾಯಿತು. ಇಂತಹ ಹತ್ಯಾಕಾಂಡದ ಪೂರ್ವಸೂಚನೆ ಇದ್ದರೂ ನ್ಯಾಟೋ ಆಗಲೀ ವಿಶ್ವಸಂಸ್ಥೆಯಾಗಲೀ ಏನೂ ಮಾಡದೆ ಮೂಲ ಪ್ರೇಕ್ಷಕರಂತೆ ಕುಳಿತವು. ಯಾವ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯೂ ಕಲಕಲಿಲ್ಲ! ನಾಝಿಗಳ ಬಳಿಕ ಇಷ್ಟು ದೊಡ್ಡ ಹತ್ಯಾಕಾಂಡ ಬೇರೆ ನಡೆದಿಲ್ಲ! ಈ ಘಟನೆ ಹೆಚ್ಚಿನ ಪ್ರಚಾರಕ್ಕೂ ಬರಲಿಲ್ಲ. ‘ಹೊಟೇಲ್ ರುವಾಂಡ’ ಎಂಬ ಚಿತ್ರದಲ್ಲಿ ಇದರ ಕ್ರೂರ ಚಿತ್ರಣ ಸಿಗುತ್ತದೆ. ಅದರಂತೆ ವಜ್ರಗಳಿಗಾಗಿ ಸಿಯರಾ ಲಿಯೋನ್‌ನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಲಿಯೊನಾರ್ಡೊ ಡಿ ಕ್ಯಾಪ್ರಿಯೋ ನಟಿಸಿರುವ ‘ಬ್ಲಡ್ ಡೈಮಂಡ್’ ಚಿತ್ರದಲ್ಲಿ ನೋಡಬಹುದು.

ಅದರೆ, ತನಗೆ ಲಾಭ ಇರುವ ಕಡೆ ಬಂಡವಾಳಶಾಹಿಗಳು ಹೇಗೆ ಮಧ್ಯಪ್ರವೇಶ ಮಾಡುತ್ತಾರೆ ಎಂಬುದನ್ನು ತೈಲಸಂಪನ್ನ ರಾಷ್ಟ್ರಗಳಲ್ಲಿ ನೋಡಬಹುದು. ದಶಕಗಳ ಹಿಂದೆ ಇರಾನಿನ ಲೋಲುಪ ಸರ್ವಾಧಿಕಾರಿ ಶಾನನ್ನು ಪಾಶ್ಚಾತ್ಯರು ತೈಲಕ್ಕಾಗಿ ಬೆಂಬಲಿಸಿದ್ದರು. ಆಗ ಪ್ರಜಾಪ್ರಭುತ್ವ ಅವರಿಗೆ ಮುಖ್ಯವೆನಿಸಲಿಲ್ಲ. ನಂತರ ಅಯಾತೊಲ್ಲಾ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದಾಗ ಮಾತ್ರ ಅದು ನೆನಪಿಗೆ ಬಂತು. ಇದು ಮುಂದೆ ಇರಾಕ್, ಲಿಬಿಯಾ, ಈಜಿಪ್ಟ್, ಯೆಮೆನ್, ಆಫಘಾನಿಸ್ತಾನ ಮುಂತಾದ ದೇಶಗಳಲ್ಲಿ ಮರುಕಳಿಸಿತು. ಇರಾನ್- ಇರಾಕ್ ಯುದ್ಧದಲ್ಲಿ ಯುಎಸ್‌ಎಯ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತು. ಕಾರಣ ಅಥವಾ ನೆಪ ಪ್ರಜಾಪ್ರಭುತ್ವವೂ ಅಲ್ಲ ಸರ್ವಾಧಿಕಾರವೂ ಅಲ್ಲ. ಬದಲಾಗಿ ತೈಲ ಸಂಪತ್ತು.

ಈ ರೀತಿಯಾಗಿ ದೊಡ್ಡಣ್ಣನ ಮೂಗು ತೂರಿಸುವ ಕೆಲಸವೇ ಜಾಗತಿಕ ಭಯೋತ್ಪಾದನೆಗೆ ಮೂಲಕಾರಣ ಎಂದು ಎಲ್ಲರಿಗೂ ಗೊತ್ತು. ಈಗ ಶ್ರೀಮಂತ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ತೈಲ ಪತ್ತೆಯಾಗುವ ತನಕ ಅದು ಬಡ ರಾಷ್ಟ್ರವೇ ಆಗಿತ್ತು. ಯುಎಇ ಕತೆಯೂ ಅಷ್ಟೇ. ಆಗ ಲಾಭಕ್ಕಾಗಿ ತನ್ನ ತಂvಜ್ಞಾನದ ಬಲ ಉಪಯೋಗಿಸಿದ ಯುಎಸ್‌ಎ ಅಲ್ಲಿ ಬಹುರಾಷ್ಟ್ರೀಯ ಕಂಪೆನಿ ‘ಅರ್ಮಾಕೋ’ವನ್ನು ಸ್ಥಾಪಿಸಿತು. ಇಂತಹ ವ್ಯಾಪಾರಿ ಹಿತಾಸಕ್ತಿಗಳೇ ಪ್ರಜಾಪ್ರಭುತ್ವ ಇರಲಿ, ಸರ್ವಾಧಿಕಾರ ಇರಲಿ, ರಾಜಸತ್ತೆಯೇ ಇರಲಿ ಎಲ್ಲಾ ಪ್ರಭುತ್ವಗಳನ್ನು ಬಂಡವಾಳಶಾಹಿಯೇ ನಿಯಂತ್ರಿಸುತ್ತಾ ಬಂದಿದೆ. ಇದೇ ಸ್ವಯಂಘೋಷಿತ ಪ್ರಜಾಪ್ರಭುತ್ವದ ಕಾವಲುನಾಯಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ರಾಜಸತ್ತೆಗಳನ್ನು ಬೆಂಬಲಿಸುತ್ತಾ ಬಂದಿಲ್ಲವೇ. ಇಂತಹ ಸಂಘರ್ಷಗಳ ಕಾರಣದಿಂದಲೇ ಸೌದಿ ಸಂಜಾತ ಒಸಾಮಾ ಬಿನ್ ಲಾದೆನ್‌ನಂತಹ ಸರ್ವಾಧಿಕಾರಿ ಭಯೋತ್ಪಾದಕನ ಹುಟ್ಟಿಗೆ ಕಾರಣವಾಯಿತು ಎಂಬುದು ಸತ್ಯವಲ್ಲವೇ?

ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗದ್ದಾಫಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಇವರನ್ನು ಅಷ್ಟೇ ಏಕೆ, ವೆನೆಜುವೆಲಾದಂತಹ ತೈಲ ಸಂಪನ್ನ ರಾಷ್ಟ್ರವನ್ನೇ ಕೊಂದವರು ಯಾರು? ಪ್ತಾಲೆಸ್ತೀನ್ ಸಮಸ್ಯೆಗಳಿಗೆ ಕಾರಣರು ಯಾರು? ಇಸ್ರೇಲಿನಂತಹ ದೇಶಗಳನ್ನು ಬೆಂಬಲಿಸುತ್ತಾ ಬಂದಿರುವವರು ಯಾರು? ಇಸ್ರೇಲಿನಂತೆಯೇ ಕಾಶ್ಮೀರದ ಸಮಸ್ಯೆಯನ್ನು ಸೃಷ್ಟಿಸಿದವರು ಯಾರು? ತಾವೇ ಭಯೋತ್ಪಾದಕ ಎಂದು ಕರೆದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್ ನಾಯಕ ಯಾಸರ್ ಅರಾಫತ್ ಅವರಿಗೆ ಮತ್ತು ಇಸ್ರೇಲ್ ವಿದೇಶ ಮಂತ್ರಿಯಾಗಿದ್ದ ಇಸಾಕ್ ರಬಿನ್ ಅವರಿಗೆ ನೋಬೆಲ್ ಪ್ರಶಸ್ತಿ ಕೊಟ್ಟವರು ಯಾರು?

ಕರಿಯರ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಅಧಿಕಾರ ಸ್ಥಾಪಿಸಿದ ಬಿಳಿಯ ಡಚ್ಚರ ವಿರುದ್ದ ಬಿಳಿಯ ಬ್ರಿಟಿಷರೇ ಯುದ್ಧ ನಡೆಸಿದ್ದೇಕೆ? ಆಂಗ್ಲೋ- ಬೋಯೆರ್ ವಾರ್ ಎಂದು ಕುಖ್ಯಾತವಾದ ಯುದ್ಧ ಏಕೆ ನಡೆಯಿತು? ಅಲ್ಲಿಯ ಮೂಲ ನಿವಾಸಿಗಳನ್ನೇ ಏಕೆ ಗುಲಾಮರನ್ನಾಗಿ, ಎರಡನೇ ದರ್ಜೆ ಪ್ರಜೆಗಳಾಗಿ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದವರನ್ನು ಬೆಂಬಲಿಸುತ್ತಾ, ಸಹಿಸುತ್ತಾ ಪೋಷಿಸುತ್ತಾ ಬಂದವರ‍್ಯಾರು? ನೆಲ್ಸನ್ ಮಂಡೇಲಾರನ್ನು ಅಷ್ಟು ವರ್ಷ ಜೈಲಿಗೆ ತಳ್ಳಿದವರ‍್ಯಾರು? ನಂತರ ವರ್ಣಭೇದ ನೀತಿ ತೊಲಗಿದ ಬಳಿಕ ಮಂಡೇಲಾರ ಜೊತೆಗೇ ಪಿಕ್ ಬೋಥಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದವರು ಯಾರು?

ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಮತ್ತೆ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಪ್ರತಿಯೊಬ್ಬ ಸರ್ವಾಧಿಕಾರಿ ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು. ನಮ್ಮಲ್ಲಿ, ನಮ್ಮ ಭಾರತದಲ್ಲಿ ನಡೆಯುತ್ತಿದೆಯೇ? ಏನಾದರೂ ಸಾಮ್ಯವಿದೆಯೇ? ನಾವೇನಾದರೂ ಎಚ್ಚರಿಕೆ ವಹಿಸಬೇಕೆ? ವ್ಯವಸ್ಥಿತ ಸಂಚಿಗೆ ವ್ಯವಸ್ಥಿತ ಪ್ರತಿಹೋರಾಟ ಅಗತ್ಯವಿದೆಯೇ, ಇದನ್ನು ಮುಂದಿನ ಸಂಚಿಕೆಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...