Homeಅಂಕಣಗಳುಸಹಭಾಗಿ ಪತ್ರಿಕೋದ್ಯಮ-ಚಿಂತನೆ-ಚಳುವಳಿ

ಸಹಭಾಗಿ ಪತ್ರಿಕೋದ್ಯಮ-ಚಿಂತನೆ-ಚಳುವಳಿ

- Advertisement -
- Advertisement -

ಇತ್ತೀಚೆಗೆ ‘ದಿ ಸ್ಟೇಟ್’ ವೆಬ್ ಪತ್ರಿಕೆಯು ‘ಸಹಭಾಗಿ ಪತ್ರಿಕೋದ್ಯಮ’ ಎಂಬ ವಿಭಾಗದಲ್ಲಿ ಒಂದು ವಿಶಿಷ್ಟ ಸಂಗತಿಯನ್ನು ಪ್ರಕಟಿಸುತ್ತದೆ. ತಾನು ಮುಂಚೆ ಪ್ರಕಟಿಸಿದ್ದ ಯಾವುದಾದರೂ ವರದಿಯಲ್ಲಿದ್ದ ಸಂಗತಿಯನ್ನೇ ಇನ್ನಾರಾದರೂ (ಪ್ರಧಾನವಾಗಿ ಮುದ್ರಿತ ಪತ್ರಿಕೆಗಳು) ನಂತರ ಪ್ರಕಟಿಸಿದರೆ ಅಥವಾ ಅದರ ಫಾಲೋಅಪ್ ವರದಿಯನ್ನು ಪ್ರಕಟಿಸಿದರೆ ಅದನ್ನು ಗುರುತಿಸುತ್ತದೆ ಮತ್ತು ‘ಸಹಭಾಗಿ ಪತ್ರಿಕೋದ್ಯಮ’ ವಿಭಾಗದಲ್ಲಿ ತನ್ನ ಆ ವರದಿಯನ್ನು ಇಂತಹ ಪತ್ರಿಕೆಯೂ ಮಾಡಿದೆಯೆಂದು ಹೇಳಿ ಶ್ಲಾಘಿಸುತ್ತದೆ. ಯಾವುದೇ ಜನಪರವಾದ ಸುದ್ದಿಯು ಒಂದು ಪತ್ರಿಕೆಯಿಂದ ಇನ್ನೊಂದಕ್ಕೆ, ಒಂದು ಮಾಧ್ಯಮದ ರೂಪದಿಂದ ಇನ್ನೊಂದಕ್ಕೆ ಹರಿಯುವ ಅಗತ್ಯವಿದೆ. ಇನ್ನೊಂದು ಪತ್ರಿಕೆಯು ಮೊದಲು ಗುರುತಿಸಿದ ಸುದ್ದಿಯು ಅಂತಹ ದೊಡ್ಡ ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ ಎನಿಸಿದರೆ ಅದನ್ನು ಮಿಕ್ಕವರು ಮೂಸಿ ನೋಡುವುದಿಲ್ಲ. ಅದರಲ್ಲೂ ಮೊದಲು ಬರೆದ ಪತ್ರಿಕೆ ಅಥವಾ ಚಾನೆಲ್ ಇದು ತನ್ನದೇ ಹೆಗ್ಗಳಿಕೆಯೆಂಬಂತೆ ಬಿಂಬಿಸಿದ್ದರಂತೂ ಆ ಕಡೆಗೆ ತಲೆ ಹಾಕುವುದಿಲ್ಲ. ಆ ಮೂಲಕ ತಾನು ಆ ಇನ್ನೊಂದು ಪತ್ರಿಕೆ ಅಥವಾ ಚಾನೆಲ್‍ಗೆ ಪ್ರಚಾರ ಕೊಡುವಂತಾಗುತ್ತದೆ ಎಂಬ ಸಂಕುಚಿತ ಮನೋಭಾವನೆ ಅದು. ಅದನ್ನು ದಾಟಿ ತನ್ನ ಸುದ್ದಿಯನ್ನು ಬೇರೆಯವರು ಪ್ರಕಟಿಸಿದ್ದಾರೆ ಎಂಬುದನ್ನು ಸಕಾರಾತ್ಮಕವಾಗಿ ಗುರುತಿಸುವ ಈ ಪರಿಪಾಠವು ಸಕಾರಾತ್ಮಕವಾದುದು.
‘ವೆಬ್ ಪತ್ರಿಕೆಗಳಿಗೆ ಅಂತಹ ಮಹತ್ವವಿಲ್ಲವೆಂದು ಭಾವಿಸಬೇಡಿ, ನಮ್ಮ ಸುದ್ದಿಯನ್ನು ಇತರರೂ ಕಾಪಿ ಮಾಡಿ ಪ್ರಕಟಿಸುತ್ತಿದ್ದಾರೆ’ ಎಂಬ ಸಂದೇಶ ಕೊಡುವ ಅಗತ್ಯವೂ ಇದರ ಹಿಂದೆ ಇದ್ದಿರಬಹುದು. ಅದೇನೂ ಅಂತಹ ಸಮಸ್ಯೆಯಲ್ಲ. ಇಂತಹ ಅಗತ್ಯಗಳು ಹೊಸ ರೀತಿಯ ಮಾಧ್ಯಮಕ್ಕೆ ಇರುತ್ತವೆ. ಕನ್ನಡದ ಬಹಳ ವಿಶಿಷ್ಟ ಪ್ರಯತ್ನವಾದ ದಿ ಸ್ಟೇಟ್ ಪತ್ರಿಕೆಯನ್ನು ಅವರ ಪ್ರಯೋಗಕ್ಕಾಗಿ ನಾವು ಅಭಿನಂದಿಸಬೇಕು.
ಈ ವಿದ್ಯಮಾನವನ್ನು ಈ ಸಂಚಿಕೆಯಲ್ಲಿ ಬರೆಯುತ್ತಿರುವುದಕ್ಕೆ ಕಾರಣವಿದೆ. ಸಿಪಿಎಂ ಪಕ್ಷದ ಮುಖವಾಣಿಯಾದ ಜನಶಕ್ತಿ ವಾರಪತ್ರಿಕೆಯು ‘ನ್ಯಾಯಪಥ’ ಪತ್ರಿಕೆಯ ಬಿಡುಗಡೆಯೂ ಇದ್ದ, ಗೌರಿದಿನ ಕಾರ್ಯಕ್ರಮದ ಕುರಿತು ಸಂಪಾದಕೀಯ ಹಾಗೂ ವರದಿಯನ್ನು ವಿಶೇಷವಾದ ರೀತಿಯಲ್ಲಿ ಪ್ರಕಟಿಸಿದೆ. ತನ್ನ ಮೆಚ್ಚುಗೆಯನ್ನೂ, ಕೆಲವು ವಿಮರ್ಶೆಗಳನ್ನು ಅದರಲ್ಲಿ ದಾಖಲಿಸಿದೆ. ನ್ಯಾಯಪಥ ಮುಖಪುಟವನ್ನೂ ತನ್ನ ಕಡೆಯ ಪುಟದಲ್ಲಿ ಅಚ್ಚಿಸಿದೆ. ಇಂತಹ ‘ಸಹಭಾಗಿತ್ವ’ವೂ ಸಕಾರಾತ್ಮಕವಾದುದು.
ಒಂದು ಮಹತ್ವದ ಅಂಶವನ್ನು ‘ಜನಶಕ್ತಿ’ಯ ಸಂಪಾದಕೀಯದಲ್ಲಿ ಬರೆಯಲಾಗಿದೆ. ಸೆಪ್ಟೆಂಬರ್ 5ರ ಆ ದಿನದಂದೇ ದೆಹಲಿಯಲ್ಲಿ ನಡೆದ ರೈತ-ಕಾರ್ಮಿಕರ ಐಕ್ಯ ರ್ಯಾಲಿ, ಗೌರಿ ದಿನ ಮತ್ತು ದಕ್ಷಿಣಾಯನ ಹಾಗೂ ಗ್ರಾಮಸೇವಾ ಸಂಘದ ವತಿಯಿಂದ ನಡೆದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ – ಆ ವಾರದ ಮೂರು ಪ್ರಮುಖ ಕಾರ್ಯಕ್ರಮಗಳೆಂದು ಹೇಳಿ, ಮೂರರ ಕುರಿತಾಗಿ ವಿಶ್ಲೇಷಣೆಯನ್ನು ಮುಂದಿಡಲಾಗಿದೆ. ಸಾಹಿತ್ಯಿಕ-ಸಾಂಸ್ಕøತಿಕ ಎಂದು ತೋರುವ ಬೆಂಗಳೂರಿನ ಎರಡು ಕಾರ್ಯಕ್ರಮಗಳ ಸಕಾರಾತ್ಮಕ ಅಂಶಗಳನ್ನು ಶ್ಲಾಘಿಸುತ್ತಲೇ, ರೈತ ಕಾರ್ಮಿಕರ ಆಂದೋಲನ ಫ್ಯಾಸಿಸಂನ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಬಲ್ಲುದು ಎಂಬುದನ್ನು ಅದು ಹೇಳುತ್ತದೆ. ಹಾಗಾಗಿ ಅಂತಹ ಸಮುದಾಯಗಳನ್ನು ಪ್ರತಿನಿಧಿಸುವ ದೊಡ್ಡ ಸಂಘಟನೆಗಳನ್ನು ಒಳಗೊಳ್ಳದ ಯಾವುದೇ ಪ್ರತಿರೋಧ ಅದ್ಹೇಗೆ ಯಶಸ್ವಿಯಾಗಬಲ್ಲುದು ಎಂಬ ಪ್ರಶ್ನೆಯನ್ನು ‘ಜನಶಕ್ತಿ’ ಪತ್ರಿಕೆಯು ಮುಂದಿಟ್ಟಿದೆ.
ಇಂದು ಇಡೀ ದೇಶದ ಎಲ್ಲಾ ಎಡ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಎದುರಿಸುತ್ತಿರುವ ಮಹತ್ವದ ಸವಾಲೆಂದರೆ ಇದೇ. ಫ್ಯಾಸಿಸಂ ಎಂಬುದು ಕೇವಲ ಸರ್ವಾಧಿಕಾರವಲ್ಲ. ಜನರ ಸಮ್ಮತಿಯೊಂದಿಗೆ ಮತ್ತು ಅವರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸರ್ವಾಧಿಕಾರವದು. ಅಂದರೆ ಜನಸಾಮಾನ್ಯರ ಗಣನೀಯ ವಿಭಾಗವು, ರೈತ-ಕಾರ್ಮಿಕ-ಆದಿವಾಸಿಗಳನ್ನೊಳಗೊಂಡಂತೆ, ಒಂದು ರೀತಿಯ ಸಮ್ಮತಿಯೊಂದಿಗೆ ಜಾರಿಯಲ್ಲಿರುವ ಯಾಜಮಾನ್ಯ ಅದು. ಆರ್ಥಿಕವಾಗಿ ಕೆಲವು ಕಷ್ಟ ನಷ್ಟಗಳನ್ನೆದುರಿಸಿದಾಗ ಫ್ಯಾಸಿಸ್ಟ್ ಪ್ರಭುತ್ವದ ಮುಂದೆಯೂ ಕೆಲವು ‘ಬೇಡಿಕೆ’ಗಳನ್ನಿಟ್ಟು ಹೋರಾಡಲು ಈ ಸಮುದಾಯಗಳು ಮುಂದೆ ಬರುತ್ತವೆ. ಆದರೆ, ಈ ಸರ್ಕಾರದ ನೇತೃತ್ವ ವಹಿಸುವ ಕೋಮುವಾದಿ ಪಕ್ಷಕ್ಕೇ ಓಟು ಹಾಕುತ್ತವೆ. ದೇಶದ ಎಲ್ಲಾ ಭಾಗಗಳಲ್ಲೂ ಬಿಜೆಪಿಯ ಮತ ಪ್ರಮಾಣ ಹೆಚ್ಚಾಗುತ್ತಿರುವುದನ್ನು ನಾವು ನೋಡಬಹುದು. ಇದರಲ್ಲಿ ಮುಂಚೂಣಿಯಲ್ಲಿರುವುದು ಮಧ್ಯಮವರ್ಗ ಮತ್ತು ಮೇಲ್ಜಾತಿಗಳೇ ಆಗಿವೆ ಎಂಬುದರಲ್ಲಿ ಸಂಶಯವಿಲ್ಲ.
ಜನಸಾಮಾನ್ಯರನ್ನು ಒಳಗೊಳ್ಳದ ‘ಪ್ರಜ್ಞಾವಂತರ’ ಸೆಕ್ಯುಲರಿಸಂ, ಲಭ್ಯವಿದ್ದ ಮತ್ತು ಇಂದೂ ಸ್ವಲ್ಪಮಟ್ಟಿಗೆ ಉಳಿದುಕೊಂಡಿರುವ ಲಿಬರಲ್ ಅವಕಾಶಗಳನ್ನು ಬಳಸಿಕೊಂಡು ಪ್ರಜಾತಾಂತ್ರಿಕ ಆಶಯಗಳನ್ನು ಮಂಡಿಸಬಯಸುತ್ತಿದೆ. ಆದರೆ, ಒಂದು ಸಮಗ್ರ ಕಾರ್ಯಸೂಚಿಯ ಕೊರತೆ ಈ ಸಮೂಹವನ್ನು ‘ತನ್ನಂತೆಯೇ ಯೋಚಿಸುವ ನಿರ್ದಿಷ್ಟ ಸಮೂಹದೊಳಗೇ ಆಡಿದ್ದೇ ಆಡುವ’ ವರ್ತುಲದಲ್ಲಿ ಕಟ್ಟಿ ಹಾಕಿದೆ. ಸ್ವಲ್ಪ ಆಚೀಚೆ ಹೋಗಬಯಸುವ ಪ್ರಯತ್ನಗಳನ್ನು ಗುಮಾನಿಯಿಂದಲೂ ನೋಡುವ ವಾತಾವರಣವಿದೆ. ಗ್ರಾಮಸೇವಾ ಸಂಘದ ಪ್ರಯತ್ನಗಳ ಕುರಿತು ಇನ್ನೂ ಸ್ವಲ್ಪಕಾಲ ತಾಳ್ಮೆಯಿಂದ ಪರಿಶೀಲಿಸುವ ಅಗತ್ಯವಿದೆ. ಜನಶಕ್ತಿಯ ಸಂಪಾದಕೀಯದಲ್ಲೂ, ಅದೇ ಪತ್ರಿಕೆಯಲ್ಲಿ ಪುನರ್‍ಮುದ್ರಿತವಾದ ಅರುಣ್ ಜೋಳದಕೂಡ್ಲಿಗಿಯವರ ದಿ ಸ್ಟೇಟ್‍ನ ಬರಹದಲ್ಲೂ ಇದೇ ಗುಮಾನಿಯ ಧ್ವನಿಯಿದೆ. ಒಂದು ಕಡೆ ಸಾಪ್ತಾಹಿಕ ಪುರವಣಿಯ ಬರಹಗಾರರು ಕೋಮುವಾದದ ವಿರುದ್ಧದ ಆಂದೋಲನಕ್ಕೆ ಬರುವುದಿಲ್ಲವೆಂದು ಟೀಕಿಸುವುದು, ಇನ್ನೊಂದು ಕಡೆ ಅವರು ಬಂದರೆ ಅದನ್ನೂ ಟೀಕಿಸುವುದು ನಡೆದರೆ, ಅದು ಫ್ಯಾಸಿಸಂ ವಿರುದ್ಧದ ವಿಶಾಲ ತಳಹದಿಯ ಆಂದೋಲನಕ್ಕೆ ತೊಡಕುಂಟು ಮಾಡುವುದಿಲ್ಲವೇ? ಕಾಂಗ್ರೆಸ್ಸನ್ನು ಮೃದು ಹಿಂದುತ್ವವಾದಿ ಎಂದು ಕರೆದು ದೂರವಿಡುವ ಪರಿಸ್ಥಿತಿಯಲ್ಲಿ ಇಂದು ದೇಶದ ಫ್ಯಾಸಿಸ್ಟ್ ವಿರೋಧಿ ಶಕ್ತಿಗಳು ಇರುವವೇ? ಹೀಗಿರುವಾಗ ನಮ್ಮ ಜೊತೆ ಬರುವ ಅಲ್ಪಸ್ವಲ್ಪ ಸಾಧ್ಯತೆಯಿರುವವರನ್ನೂ ದೂರ ತಳ್ಳುವ ಕೆಲಸ ಆಗಬಾರದು.
ಎರಡನೆಯದಾಗಿ ಸ್ಪಷ್ಟ ಕಾರ್ಯಸೂಚಿಯ ಪ್ರಶ್ನೆ. ಸ್ಪಷ್ಟ ಕಾರ್ಯಸೂಚಿಯನ್ನು ಸೀಮಿತವಾದ ಉದ್ದೇಶ ಹೊಂದಿರುವ ಕಾರ್ಯಕ್ರಮಗಳು ಮುಂದಿಡಲು ಸಾಧ್ಯವೇ? ದೇಶದ ಬಹುತೇಕ ಜನರ ಹಿತಾಸಕ್ತಿಯನ್ನು ಒಳಗೊಳ್ಳುವ, ದೊಡ್ಡ ಜನಸಮುದಾಯಗಳನ್ನು ಸಂಘಟಿಸಲು ಸಾಧ್ಯವಿರುವ, ರಾಜಕೀಯ ಸಂಘಟನೆಗಳು ಮಾಡಬಹುದಾದ್ದನ್ನು ಮಿಕ್ಕವರು ಮಾಡಲಿಲ್ಲ ಎಂದು ಆರೋಪಿಸಲಾಗದು. ಆದರೆ, ಸಾಂಸ್ಕøತಿಕ ಮತ್ತು ಮಾಧ್ಯಮ ಪ್ರಯತ್ನಗಳೂ ಸಹಾ ತಮ್ಮ ಮಿತಿಯೊಳಗೆ ಮಾಡಬಹುದಾದ್ದನ್ನು ಸ್ಪಷ್ಟಗೊಳಿಸಿಕೊಳ್ಳದೇ ಸಂಘಟಿಸಲಾಗುತ್ತಿರುವ ವಾರ್ಷಿಕ ಕಾರ್ಯಕ್ರಮಗಳಲ್ಲೂ ಸಹಾ ‘ಬಿಡಿ ಬಿಡಿ ಆತಂಕಗಳೇ’ ಪದೇ ಪದೇ ಪುನರಾವರ್ತನೆಯಾಗುತ್ತಿವೆ. ಇದನ್ನು ದಕ್ಷಿಣಾಯನಕ್ಕೆ ಮಾತ್ರ ಅನ್ವಯಿಸಲಾಗದು. ಎಡ ಸಂಘಟನೆಗಳು ಸೇರಿದಂತೆ ಹಲವರು ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಆರಂಭಿಸಿ ಬಹಳ ವರ್ಷಗಳೇ ಕಳೆದವು. ಇನ್ನಾದರೂ ಕಾರ್ಯಸೂಚಿಯನ್ನು ಚರ್ಚಿಸುವುದಕ್ಕೇ ಎಲ್ಲರೂ ಫೋಕಸ್ ಮಾಡಿಕೊಳ್ಳಬೇಕಿದೆ.
ಬಹಳ ಮುಖ್ಯವಾಗಿ ದುಡಿಯುವ ವರ್ಗಗಳ ಅತ್ಯುತ್ತಮ ಹೋರಾಟಗಳೂ ತಕ್ಷಣದ ಆರ್ಥಿಕ ಬೇಡಿಕೆಗಳಾಚೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಅರಿವು ಪಡೆದುಕೊಳ್ಳದೇ ಹೋದ ದುರಂತವನ್ನೂ ದೇಶ ನೋಡಿದೆ. ಹಾಗಾಗಿಯೇ ‘ಎಡಪರ್ಯಾಯ’ವು ಪರ್ಯಾಯವಲ್ಲ ಎಂಬ ಭಾವನೆ ಬಲಗೊಂಡಿದೆ. ಮಧ್ಯಮವರ್ಗವನ್ನೂ ಒಳಗೊಳ್ಳಬಲ್ಲ, ವಿಶಾಲ ಜನಸಮುದಾಯವನ್ನು ಆರ್ಥಿಕ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ಒಂದಾಗಿಸಬಲ್ಲ ಪರ್ಯಾಯವನ್ನು ಮುಂದಿಡಲಾಗದೇ ಹೋದದ್ದಕ್ಕೆ ಒಬ್ಬರು ಇನ್ನೊಬ್ಬರನ್ನು ದೂರಿಕೊಂಡು ಕುಳಿತರೆ ಸಾಕಾಗದು.
ಸಹಭಾಗಿ ಪತ್ರಿಕೋದ್ಯಮದಂತೆಯೇ ಸಹಭಾಗಿ ಚಿಂತನೆ, ಸಹಭಾಗಿ ಚಳವಳಿ ಸಾಧ್ಯವಾಗಬೇಕು. ಈ ಸದಾಶಯದೊಂದಿಗೆ ಎಲ್ಲರೂ ಅವರವರ ಪಾತ್ರವನ್ನು ನಿಭಾಯಿಸೋಣ. ನ್ಯಾಯಪಥ ಎಂಬ ಈ ಗೌರಿ ಪತ್ರಿಕೆಯು ತನ್ನ ಪಾತ್ರ ನಿಭಾಯಿಸಲು ಸಜ್ಜಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....