Homeಮುಖಪುಟ"ಸೈಂಟಿಫಿಕ್ ಪೆಪ್ಪರಮಿಂಟ್" ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

“ಸೈಂಟಿಫಿಕ್ ಪೆಪ್ಪರಮಿಂಟ್” ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

- Advertisement -
- Advertisement -

ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕೇಂದ್ರದ ಸಾಂಸ್ಕೃತಿಕ ವಕ್ತಾರರನ್ನು ಸಂದರ್ಶಿಸಲಾಯಿತು. ಈ ದೇಶದ ಮುಂದಿನ ಐವತ್ತು ವರ್ಷಗಳ ಶಿಕ್ಷಣ, ಸಾಂಸ್ಕೃತಿಕ ನಡೆ ಕುರಿತ ಕಾಣ್ಕೆಯನ್ನು ವಕ್ತಾರರು ಹಂಚಿಕೊಂಡರು.

ಅದರ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು: ಹೊಸ ಶಿಕ್ಷಣ ನೀತಿಯ ಒತ್ತು ಏನು?

ಸಾಂಸ್ಕೃತಿಕ ವಕ್ತಾರ: ನೋಡಿ ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ನೆಹರೂ ಮತ್ತು ಎಡಚರು ಮಾಡಿದ್ದಾರೆ . ನಾವು ಅದನ್ನು ತಿದ್ದಿ ಭಾರತದ ಭವ್ಯ ಸಂಸ್ಕೃತಿಯನ್ನು ಸ್ಥಾಪಿಸಬೇಕಾಗಿದೆ. ಭಾರತ ವಿಶ್ವಗುರುವಾಗಲು ಇದು ಬುನಾದಿ.

ನಾನು: ಇದನ್ನು ಹೇಗೆ ಸಾಧಿಸಲಾಗುತ್ತದೆ?

ಸಾಂವ: ಈಗ ನೋಡಿ ಮೊನ್ನೆ ಗ್ರಹಣ ಆಯಿತು. ಎಡಚರು ಇದನ್ನು ಖಗೋಳ ಶಾಸ್ತ್ರೀಯ ಘಟನೆ ಅನ್ನುತ್ತಾರೆ. ಆದರೆ ನಮ್ಮ ಹಳ್ಳಿಹಳ್ಳಿಗಳಲ್ಲೂ ಇದನ್ನು ಸಾವಿರಾರು ವರ್ಷಗಳಿಂದ ಗಮನಿಸಿದ್ದಾರೆ. ಇದರ ಪರಿಣಾಮಗಳನ್ನು ನಿವಾರಿಸಲು ಪರಿಹಾರ ಕ್ರಮ ಮಾಡುತ್ತಾರೆ. ಹಾಗಿದ್ದರೆ ಅವರು ಅಜ್ಞಾನಿಗಳೇ? ಉದಾ: ಗ್ರಹಣ ಕಾಲದಲ್ಲಿ ವಿಕಿರಣ ಪರಿಣಾಮ ಆಗುತ್ತೆ. ಅದಕ್ಕೇ ಮಕ್ಕಳನ್ನು ತಿಪ್ಪೆಯಲ್ಲಿ ಹುಗಿದಿಡುವ ಸಂಪ್ರದಾಯ ಇದೆ. ಯಾಕೆ ಹೇಳಿ? ಗೋವಿನ ಸೆಗಣಿಗೆ ವಿಕಿರಣವನ್ನು ತಡೆಯುವ ಶಕ್ತಿ ಇದೆ.

ನಾನು: ಅಂದರೆ?

ಸಾಂ ವ: ಅಂದರೆ ನಾವು ಈ ಬಗ್ಗೆ ವಿಶೇಷ ಸಂಶೋಧನೆಗೆ ಅನುದಾನ ನೀಡುತ್ತೇವೆ. ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಗ್ರಹಣ ಕಾಲದಲ್ಲಿ ಅಂಗನವಾಡಿ ಮತ್ತು ಶಾಲಾಮಕ್ಕಳನ್ನು ಶಾಲಾ ಆವರಣದಲ್ಲೇ ತಿಪ್ಪೆಯಲ್ಲಿ ಹೂತಿಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಚಾಲೂ ಮಾಡಲಾಗುವುದು. ವಿದೇಶಗಳಲ್ಲೂ ಇದರ ವೈಜ್ಞಾನಿಕ ಮಹತ್ವವನ್ನು ಸಾರಲೂ ವಿದೇಶದಲ್ಲಿರುವ ಭಾರತೀಯ ಮಕ್ಕಳನ್ನು ಬಳಸಿ ಅಲ್ಲಿ ಪ್ರಾತ್ಯಕ್ಷಿಕೆ ಮಾಡಿ ವಿದೇಶಗಳಲ್ಲೂ ನಮ್ಮ ಆಚರಣೆಯ ಮಹತ್ವವನ್ನು ಪ್ರಚುರಪಡಿಸಲಾಗುವುದು.

ನಾನು : ಮತ್ತೆ ಈ ದರ್ಭೆಗೆ ವಿಶೇಷ ಮಹತ್ವ ಇದೆ ಎಂದು ಹೇಳ್ತಿದ್ರು..

ಸಾಂವ: ದರ್ಭೆ? ಅದು ಜಗತ್ತಿನಲ್ಲೇ ವಿಶೇಷ. ಅದರ ಒಂದು ತುಂಡು ಹಾಕಿದರೂ ವಿಕಿರಣ ತಾಗೋದಿಲ್ಲ. ಅಷ್ಟೇಕೆ, ನಾವೀಗ ದರ್ಭೇಯನ್ನೇ ಉಪಯೋಗಿಸಿ ಬೆನ್ನಟ್ಟುವ ಕ್ಷಿಪಣಿ ತಯಾರು ಮಾಡುವ ತಂತ್ರಜ್ಞಾನದ ಸಂಶೋಧನೆ ಆರಂಭಿಸಿದ್ದೇವೆ

ನಾನು: ಅದು ಹೇಗೆ?

ಸಾಂವ: ಅಯ್ಯೋ, ರಾಮಾಯಣದಲ್ಲಿ ಶ್ರೀರಾಮ ದೇವರು ದರ್ಭೆಗೆ ಮಂತ್ರ ಆವಾಹನೆ ಮಾಡಿ ಕಾಕಾಸುರನನ್ನು ಬೆನ್ನಟ್ಟಲಿಲ್ಲವೇ? ಹಾಗೇ ಶತ್ರು ಕ್ಷಿಪಣಿ/ ವಿಮಾನದ ಶಾಖವನ್ನೇ ಬೆನ್ನು ಹತ್ತಿ ಅದನ್ನು ನಾಶ ಮಾಡೋದು. ದರ್ಭೆ ಸಣ್ಣಕ್ಕೆ ಇರುವ ಕಾರಣ ಅದು ರಾಡಾರಿನಲ್ಲೂ ಕಾಣಿಸೋದಿಲ್ಲ. ಅದಕ್ಕೆ ಆಗ್ನೇಯಾಸ್ತ, ಬ್ರಹ್ಮಾಸ್ತ್ರದಂಥಾ ಮಂತ್ರವನ್ನು ಆವಾಹಿಸಲು ವಿಶೇಷ ವಿಪ್ರ ಪುರೋಹಿತರನ್ನು ಸೈನ್ಯ ನಿಯೋಜಿಸಲಿದೆ.

ನಾನು: ಅದ್ಭುತ. ಇದನ್ನು ಜಗತ್ತಿಗೆ ಹೇಳಬೇಕು!!

ಸಾಂವ: ( ನಕ್ಕು) ನೋಡಿ.. ಇದು ಡಿಫೆನ್ಸ್ ಸೀಕ್ರೆಟ್. ಇದನ್ನು ನಾವು ಯಾರಿಗೂ ಹೇಳೋದಿಲ್ಲ ಹ್ಹ.. ಹ್ಹಾ..

ನಾನು: ಅದ್ಭುತ.. ಇನ್ನು ಇಂಥಾ ಎಷ್ಟು ಯೋಜನೆಗಳಿದಾವೆ?

ಸಾಂವ: ತುಂಬಾ ಇದೆ. ಆದರೆ ಕೆಲವನ್ನು ನಾವು ಗುಪ್ತವಾಗಿ ಮಾಡಬೇಕಿದೆ. ಉದಾ: ನಾವು ಈಗಾಗಲೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೆದುಳು ಮತ್ತು ಹೃದಯವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಗುಂಪು ಗುಂಪಿಗೆ ಮಾಡಿದ್ದೇವೆ. ಇದರಲ್ಲಿ ಮೆದುಳನ್ನು ಮೆತ್ತಗೆ ಮಾಡಿ ವಿಧೇಯತೆಯನ್ನು ಮುದ್ರಿಸುವುದನ್ನು ಮಾಡಲಾಗುತ್ತದೆ. ಇನ್ನು ಹೃದಯದ್ದು ಸ್ವಲ್ಪ ಬೇರೆ. ಅದು ಮೃದು ಇದ್ದರೆ ಕಷ್ಟ. ಅದಕ್ಕೇ ಕೆಲವು ಮೂಲಿಕೆ ಬಳಸಿ ಅದು ಕಲ್ಲಾಗುವ ತರ ಮಾಡುವುದು. ರಕ್ತಪರಿಚಲನೆ ಬಿಟ್ಟು ಬೇರೆ ಭಾವನೆಗಳ ಕೆಲಸ ಹೃದಯಕ್ಕೆ ಇರೋದು ವೇಸ್ಟ್ .

ನಾನು: ಅದ್ಭುತ.. ಇದು ಯಾವಾಗ ಚಾಲೂ ಆಗುತ್ತೆ?

ಸಾಂವ: ಚಾಲೂ? ಎಲ್ಲಿದ್ದೀರಿ ನೀವು..? ಈಗ ನಮ್ಮ ಪರವಾಗಿ ಮಾತಾಡಿ, ಬೀದಿಗಿಳಿದು ಗಲಾಟೆ ಮಾಡೋರು ಯಾರು ಅಂದ್ಕೊಂಡ್ರಿ? ಅದು ಈಗಾಗಲೇ ಲಕ್ಷಾಂತರ ಮಂದಿಗೆ ಮಾಡಿಯಾಗಿದೆ..

ನಾನು: ಅದ್ಭುತ: ಈ ಒಟ್ಟಾರೆ ನೀತಿಗೆ ಏನೆಂದು ಕರೆಯಲಾಗುತ್ತೆ?

ಸಾಂವ: ನೋಡಿ ನೆಹರೂ ಇದನ್ನು ಸೈಂಟಿಫಿಕ್ ಟೆಂಪರಮೆಂಟ್ ಅಂತ ಕರಿತಿದ್ರು. ಎಂಥಾ ಟೆಂಪರ್? ಅದಕ್ಕೇ ನಾವಿದನ್ನು ಪೆಪ್ಪರಮಿಂಟ್.. ಸೈಂಟಿಫಿಕ್ ಪೆಪ್ಪರಮಿಂಟ್ ಎಂದು ಕರೆಯುತ್ತೇವೆ. ಪೆಪ್ಪರಮಿಂಟ್ ಅಂದ್ರೇನು? ಗೊತ್ತಲ್ಲ. ಮಕ್ಕಳಿಗೆ ಇಷ್ಟ. ಅದಕ್ಕೇ ಈ ಯೋಜನೆಗೆ ಆ ಹೆಸರು

ನಾನು: ಸೂಪರ್ ಸಾರ್… ಅಭಿನಂದನೆಗಳು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...