Homeಕರೋನಾ ತಲ್ಲಣಹದಿಹರೆಯದವರು ವಿದ್ಯಾರ್ಥಿ ID ಬಳಸಿಕೊಂಡು ಕೊರೊನಾ ಲಸಿಕೆಗೆ ನೋಂದಾಯಿಸಬಹುದು: ಸರ್ಕಾರ

ಹದಿಹರೆಯದವರು ವಿದ್ಯಾರ್ಥಿ ID ಬಳಸಿಕೊಂಡು ಕೊರೊನಾ ಲಸಿಕೆಗೆ ನೋಂದಾಯಿಸಬಹುದು: ಸರ್ಕಾರ

- Advertisement -
- Advertisement -

ಜನವರಿ 1 ರಿಂದ ಕೊರೊನಾ ಲಸಿಕೆಯ ಮೊದಲ ಡೋಸ್‌‌ಗೆ 15-18 ವರ್ಷ ವಯಸ್ಸಿನ ಮಕ್ಕಳು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಯನ್ನು ಬಳಸಿಕೊಂಡು ಕೋವಿನ್‌‌ ಆಪ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಕೋವಿನ್ ಮುಖ್ಯಸ್ಥ ಡಾ.ಆರ್.ಎಸ್. ಶರ್ಮಾ ಪತ್ರಿಕಾ ಸಂಸ್ಥೆ ANI ಗೆ ಸೋಮವಾರ ತಿಳಿಸಿದ್ದಾರೆ. ಶಾಲೆಗಳು ಸಾಮಾನ್ಯ ಕಾರ್ಯಚಟುವಟಿಕೆಗೆ ಮರಳಲು ಶಾಲಾ ಮಕ್ಕಳಿಗೆ ಲಸಿಕೆಯನ್ನು ನೀಡಲು ಪ್ರಧಾನಿ ನಿರ್ಧಾರದ ತೆಗೆದುಕೊಂಡ ಹಿನ್ನಲೆಯಲ್ಲಿ ಈ ಘೋಷಣೆ ಹೊರ ಬಿದ್ದಿದೆ.

ಎಲ್ಲಾ ವಿದ್ಯಾರ್ಥಿಗಳು ಆಧಾರ್ ಹೊಂದಿರದ ಕಾರಣ ಗುರುತಿನ ಚೀಟಿಗಳು ಆದ್ಯತೆಯ ಆಯ್ಕೆಯಾಗಿದೆ ಎಂದು ಸರ್ಕಾರ ಹೇಳಿದೆ. ಜನವರಿ 3 ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ಮೋದಿ ಶನಿವಾರ ಘೋಷಿಸಿದ್ದರು.

ಇದನ್ನೂ ಓದಿ:ಲಸಿಕೆ ಪಡೆದ ಮೂರು ತಿಂಗಳ ನಂತರ ಕೋವಿಶೀಲ್ಡ್ ರಕ್ಷಣೆ ಕ್ಷೀಣಿಸುತ್ತದೆ- ದಿ ಲ್ಯಾನ್ಸೆಟ್ ಅಧ್ಯಯನದ ವರದಿ

ಭಾರತದಲ್ಲಿನ ಮಕ್ಕಳಿಗೆ ಎರಡು ಕೊರೊನಾ ಲಸಿಕೆಗಳ ಆಯ್ಕೆಯನ್ನು ನೀಡಲಾಗುತ್ತದೆ. ಒಂದು ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ ಆಗಿದ್ದು, ಇದು ಎರಡು ಡೋಸ್‌ಗಳಲ್ಲಿ ಪಡೆಯಬೇಕಾಗುತ್ತದೆ. ಇನ್ನೊಂದು ಝೈಡಸ್ ಕ್ಯಾಡಿಲಾದ ‘ಝಿಕೋವ್‌ ಡಿ’(ZyCoV-D) ಆಗಿದ್ದು ಇದು ಮೂರು ಡೋಸ್‌ಗಳನ್ನು ಒಳಗೊಂಡಿದೆ. ಇವೆರಡನ್ನೂ 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನುಮತಿಸಲಾಗಿದೆ. ZyCov-D ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, DNA ಆಧಾರಿತವಾಗಿ ತಯಾರಿಸಲಾದ ಪ್ರಪಂಚದ ಮೊದಲನೆಯ ಲಸಿಕೆಯಾಗಿದೆ. ಜೊತೆಗೆ ಸೂಜಿ ಇಲ್ಲದ ಕೊರೊನಾ ಲಸಿಕೆಯಾಗಿದ್ದು, ಅದರ ಮೂರು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.

ಸೀರಮ್ ಇನ್ಸ್ಟಿಟ್ಯೂಟ್‌ನ ‘ನೊವೊವಾಕ್ಸ್’ ಮತ್ತು ಬಯೋಲಾಜಿಕಲ್‌‌ಇ ನ ‘ಕಾರ್ಬೆವಾಕ್ಸ್’ ಲಸಿಕೆಗಳು ಕೂಡಾ ಮಕ್ಕಳಿಗಾಗಿ ತಯಾರಿಸಲಾಗಿದ್ದು, ಆದರೂ ಅವುಗಳು ಇನ್ನೂ ಅನುಮೋದನೆಯನ್ನು ಪಡೆದಿಲ್ಲ. ಪ್ರಸ್ತುತ, ನೋವಾವಾಕ್ಸ್‌‌ 11 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಗಳನ್ನು ನಡೆಸುತ್ತಿದೆ ಆದರೆ ಕಾರ್ಬೆವಾಕ್ಸ್‌‌ ಅನ್ನು 5 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳನ್ನು ಒಳಗೊಂಡ ಪ್ರಯೋಗಗಳಿಗೆ ಅನುಮತಿ ನೀಡಲಾಗಿದೆ.

ದೇಶದಲ್ಲಿ 141.7 ಕೋಟಿ ಲಸಿಕೆಗಳನ್ನು ನೀಡಲಾಗಿದ್ದು, ಸರಿಸುಮಾರು 58 ಕೋಟಿ ಜನರು ಮಾತ್ರ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ಪ್ರಶ್ನಿಸಿದ್ದ ಅರ್ಜಿ ವಜಾ; 1 ಲಕ್ಷ ರೂ. ದಂಡ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...