Homeಕೊರೊನಾಲಸಿಕೆ ಪಡೆದ ಮೂರು ತಿಂಗಳ ನಂತರ ಕೋವಿಶೀಲ್ಡ್ ರಕ್ಷಣೆ ಕ್ಷೀಣಿಸುತ್ತದೆ- ದಿ ಲ್ಯಾನ್ಸೆಟ್ ಅಧ್ಯಯನದ ವರದಿ

ಲಸಿಕೆ ಪಡೆದ ಮೂರು ತಿಂಗಳ ನಂತರ ಕೋವಿಶೀಲ್ಡ್ ರಕ್ಷಣೆ ಕ್ಷೀಣಿಸುತ್ತದೆ- ದಿ ಲ್ಯಾನ್ಸೆಟ್ ಅಧ್ಯಯನದ ವರದಿ

- Advertisement -
- Advertisement -

ಆಕ್ಸ್‌ಫರ್ಡ್-ಅಸ್ಟ್ರಾ ಜೆನೆಕಾ ಕಂಪನಿ ತಯಾರಿಸಿರುವ ಕೊರೊನಾದ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದ ಮೂರು ತಿಂಗಳ ನಂತರ ಅದರ ರಕ್ಷಣೆ ಕ್ಷೀಣಿಸುತ್ತಾ ಹೋಗುತ್ತದೆ ಎಂಬ ಅಂಶವನ್ನು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಹೊರ ಹಾಕಿದೆ.

ಬ್ರೆಜಿಲ್ ಮತ್ತು ಸ್ಕಾಟ್ಲೆಂಡ್‌ನಲ್ಲಿನ ಸಂಶೋಧನೆಗಳು ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುವ ಅಸ್ಟ್ರಾಜೆನೆಕದ ಲಸಿಕೆ ಪಡೆದವರು ತೀವ್ರವಾದ ಕಾಯಿಲೆಯಿಂದ ರಕ್ಷಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಬೂಸ್ಟರ್ ಡೋ‌ಸ್‌ಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸೂಚಿಸಿವೆ.

ಅಧ್ಯಯನ ನಡೆಸಿರುವ ಸಂಶೋಧಕರು ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಪಡೆದಿರುವ ಸ್ಕಾಟ್ಲೆಂಡ್‌ನಲ್ಲಿ 20 ಲಕ್ಷ ಜನರು ಮತ್ತು ಬ್ರೆಜಿಲ್‌ನಲ್ಲಿ 4 ಕೋಟಿ 20 ಲಕ್ಷ ಜನರ ಅಂಕಿ ಅಂಶಗಳನ್ನು ವಿಶ್ಲೇಷಿಸಿದ್ದಾರೆ.

ಸ್ಕಾಟ್ಲೆಂಡ್‌ನಲ್ಲಿ, ಕೋವಿಶೀಲ್ಡ್ ಎರಡು ಡೋಸ್ ಲಸಿಕೆ ಪಡೆದ ಸುಮಾರು ಐದು ತಿಂಗಳ ನಂತರ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವ /ಕೊರೊನಾದಿಂದ ಸಾಯುವವರರು ಸುಮಾರು ಐದು ಪಟ್ಟು ಹೆಚ್ಚಾಗಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ಪ್ರಶ್ನಿಸಿದ್ದ ಅರ್ಜಿ ವಜಾ; 1 ಲಕ್ಷ ರೂ. ದಂಡ!

ಲಸಿಕೆಯ ಪರಿಣಾಮಕಾರಿತ್ವದ ಕುಸಿತವು ಸುಮಾರು ಮೂರು ತಿಂಗಳುಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವು ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ದ್ವಿಗುಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

“ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಲಸಿಕೆಗಳು ಪ್ರಮುಖ ಸಾಧನವಾಗಿವೆ. ಆದರೆ ಅವುಗಳ ಪರಿಣಾಮಕಾರಿತ್ವದಲ್ಲಿ ಕ್ಷೀಣಿಸುತ್ತಿರುವುದು ಕಳವಳಕಾರಿಯಾಗಿದೆ” ಎಂದು ಯುಕೆ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಶೇಖ್ ಹೇಳಿದ್ದಾರೆ.

“ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಲಸಿಕೆ ರಕ್ಷಣೆ ಕ್ಷೀಣಿಸುವಿಕೆಯು ಯಾವಾಗ ಆರಂಭವಾಗುತ್ತೆ ಎಂಬುದನ್ನು ಗುರುತಿಸುವ ಮೂಲಕ, ಗರಿಷ್ಠ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಗಳನ್ನು ನಡೆಸಬೇಕು” ಎಂದು ಅಜೀಜ್ ಶೇಖ್ ಹೇಳಿದ್ದಾರೆ.

“ನಮ್ಮ ಕೆಲಸವು ಬೂಸ್ಟರ್‌ಗಳನ್ನು ಪಡೆಯುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ನೀವು ಎರಡು ಡೋಸ್ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆಯನ್ನು ಹೊಂದಿದ್ದರೂ ಸಹ, ನಿಮಗೆ ಸಾಧ್ಯವಾದ ತಕ್ಷಣ ಬೂಸ್ಟರ್‌ ಡೋಸ್ ಪಡೆಯಿರಿ” ಎಂದು ಯುಕೆ ಗ್ಲಾಸ್ಗೋ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀನಿವಾಸ ವಿಟ್ಟಲ್ ಕಾಟಿಕಿರೆಡ್ಡ್ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಓಮಿಕ್ರಾನ್ ಆತಂಕ: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರದಿಂದ ನಿರ್ಬಂಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈಗಾಗ‌ಲೇ ಎರ‌ಡು ಡೋಜ್ ಆಗಿದೆ ಈಗ‌ ಮೂರ‌ನೇ ಬೂಸ್ಟ‌ರ್ ಡೋಜ್ ಬೇರೆ… ಅದಾದ‌ನ‌0ತ‌ರ್ 4 ನೇ, 5 ನೇ 6 ನೇ… ಭೂಸ್ಟ‌ರ್ ಡೋಜ್…. ಹೀಗೆ ತ‌ಗೊಳ್ತಾ ಹೋಗೋದು. ಇವೆಲ್ಲಾ ಆದ್ರೂ ಡಿಷ್ಟ‌ನ್ಸಿ0ಗ್ ಮಾಸ್ಕ್, ಲಾಕ್ ಡೌನ್ ತ‌ಪ್ಪಿದ್ದ‌ಲ್ಲ‌.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...