Homeಮುಖಪುಟನ್ಯಾಯಾಂಗದ ನೇಮಕಾತಿಯನ್ನು ನೋಡಿ ಅಂಬೇಡ್ಕರ್‌ ಆತ್ಮ ಕೊರಗುತ್ತಿರಬಹುದು: ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್‌

ನ್ಯಾಯಾಂಗದ ನೇಮಕಾತಿಯನ್ನು ನೋಡಿ ಅಂಬೇಡ್ಕರ್‌ ಆತ್ಮ ಕೊರಗುತ್ತಿರಬಹುದು: ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್‌

ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಲ್ಲಿ ಹೆಚ್ಚಿನವರು ಬ್ರಾಹ್ಮಣರು ಎಂದು ಉಲ್ಲೇಖಿಸಿದ್ದ ಭಾಷಣವನ್ನು ಉಪರಾಷ್ಟ್ರಪತಿ ಶ್ಲಾಘಿಸಿದ್ದಾರೆ

- Advertisement -
- Advertisement -

ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್‌ ಬ್ರಿಟ್ಟಾಸ್‌‌ ಅವರು ಇತ್ತೀಚೆಗೆ ರಾಜ್ಯ ಸಭೆಯಲ್ಲಿ ಮಾಡಿದ ಭಾಷಣವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ಲಾಘಿಸಿದ್ದಾರೆ. ಜಾನ್ ಅವರ ಭಾಷಣವು ಅದ್ಭುತವಾಗಿತ್ತು, ಅದನ್ನು ನಾನು ಆನಂಧಿಸಿದೆ ಎಂದಿರುವ ಅವರು, “ಆದರೆ, ರಾಷ್ಟ್ರೀಯ ಮಾಧ್ಯಮಗಳು ಇದರ ಬಗ್ಗೆ ಒಂದು ಸಾಲು ಕೂಡಾ ವರದಿ ಮಾಡದೇ ಇರುವುದು ನನಗೆ ಬೇಸರ ತಂದಿದೆ” ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಜಾನ್ ಬ್ರಿಟ್ಟಾಸ್‌, “ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ ಮಾತು ಅಕ್ಷರಶಃ ಅಚ್ಚರಿ ಮೂಡಿಸಿತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರಂತಹ ಉನ್ನತ ವ್ಯಕ್ತಿತ್ವದವರು ನನ್ನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಏರ್‌ ಇಂಡಿಯಾ ಮಾರಾಟವು ಟಾಟಾ ಕಂಪೆನಿಗೆ ನೀಡುತ್ತಿರುವ ಗಿಫ್ಟ್‌‌: ಸಿಪಿಐ(ಎಂ) ಆಕ್ರೋಶ

ವೆಂಕಯ್ಯ ನಾಯ್ಡು ಅವರು ಸದನದಲ್ಲಿ, “ನ್ಯಾಯಮೂರ್ತಿಗಳ ಪಿಂಚಣಿ ಮಸೂದೆ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೇರಳದ ಸದಸ್ಯ ಜಾನ್ ಬ್ರಿಟಾಸ್ ಖಡಕ್ ಭಾಷಣ ಮಾಡಿದರು. ಅದ್ಭುತವಾಗಿತ್ತು, ನಾನು ಪೂರ್ತಿಯಾಗಿ ಕೇಳಿದೆ. ವಿಮರ್ಶಾತ್ಮಕವಾಗಿತ್ತು ಆದರೆ ಬಹಳ ಇಷ್ಟ ಆಯ್ತು. ಆದರೆ ಮರುದಿನ ನಾನು ನಿರಾಶೆಗೊಂಡೆ. ಯಾಕೆಂದರೆ ಭಾಷಣದ ಒಂದೇ ಒಂದು ಸಾಲು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿಲ್ಲ. ಮಲಯಾಳಂ ಮಾಧ್ಯಮಗಳ ಪರಿಸ್ಥಿತಿ ನನಗೆ ಗೊತ್ತಿಲ್ಲ. ಇದು ಪತ್ರಿಕೋದ್ಯಮ ಅಲ್ಲ. ಮರುದಿನ ಬೆಳಿಗ್ಗೆ ನೇರವಾಗಿ ಕರೆ ಮಾಡಿ ಅಭಿನಂದಿಸಿದ್ದೆ” ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿಯ ಅಭಿಮಾನದ ಮಾತುಗಳಿಗೆ ನಾನು ವಿನಮ್ರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಜಾನ್ ಬ್ರಿಟ್ಟಾಸ್‌ ಹೇಳಿದ್ದಾರೆ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನಗಳು ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ, 2021 ಕುರಿತು ಸದನವನ್ನು ಉದ್ದೇಶಿಸಿ ಮಾತನಾಡಿದ ಜಾನ್‌ ಬ್ರಿಟ್ಟಾಸ್‌, “ಭಾರತೀಯ ನ್ಯಾಯಾಂಗದಲ್ಲಿನ ವೈವಿಧ್ಯತೆಯ ಕೊರತೆ” ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ:ತ್ರಿಪುರ: ಹಲವು ಪತ್ರಿಕಾ ಕಚೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ- ಸಿಪಿಎಂ ಕಚೇರಿಗೆ ಬೆಂಕಿ

ಅವರು ಸದನಸಲ್ಲಿ ಮಾತನಾಡಿದ ಮಾತುಗಳು ಕೆಳಗಿನಂತಿವೆ

“ನ್ಯಾಯಾಧೀಶರ ನೇಮಕಾತಿಗಳನ್ನು ಹೇಗೆ ಮಾಡಲಾಗುತ್ತಿದೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹೇಗೆ ಹಾಳುಮಾಡಲಾಗಿದೆ ಎಂಬುದನ್ನು ನೋಡಿ ಸಂವಿಧಾನದ ಕರ್ತೃ ಮತ್ತು ಮೊದಲ ಕಾನೂನು ಸಚಿವ ಡಾ. ಬಿ.ಆರ್. ಅಂಬೇಡ್ಕರ್ ಅವರ ಆತ್ಮವೂ ಅಸಮಾಧಾನಪಟ್ಟಿರಬಹುದು” ಎಂದು ಅವರು ಉಲ್ಲೇಖಿಸಿದ್ದಾರೆ.

“ಹೆಚ್ಚುವರಿ ಪ್ರಮಾಣದ ಪಿಂಚಣಿ ಬಗ್ಗೆ ಶಾಸಕಾಂಗದ ಉದ್ದೇಶವನ್ನು ಸ್ಪಷ್ಟಪಡಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ. ನಾನು ಅದನ್ನು ಸಂಪೂರ್ಣವಾಗಿ ಪ್ರಶಂಸಿಸುತ್ತೇನೆ. ಆದರೆ ಗಂಭೀರ ಕೊರತೆಯೇನೆಂದರೆ ನಾವು ಅಂತಹ ವಿಷಯಗಳ ಬಗ್ಗೆ ನಿರ್ಧರಿಸಿದ್ದರೂ, ನ್ಯಾಯಾಧೀಶರ ನೇಮಕಾತಿಯಲ್ಲಿ ಜನಪ್ರತಿನಿಧಿಗಳ ಪಾತ್ರವಿಲ್ಲ. ಇದು ಜಗತ್ತಿನಲ್ಲಿ ಎಲ್ಲಿಯಾದರೂ ಇದೆಯೇ? ಸಂಪೂರ್ಣವಾಗಿ ಇಲ್ಲ. ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುವ ಬಗ್ಗೆ ಪ್ರಶ್ನಿಸಲಾಗುತ್ತಿಲ್ಲ!- ವಿಚಿತ್ರವೆಂದರೆ, ಕಾನೂನು ಸಚಿವರಿಗೆ ದೃಢವಾದ ದೃಷ್ಟಿಕೋನವಿಲ್ಲ, ಅವರು ಲೋಕಸಭೆಯಲ್ಲಿ ನೀಡಿದ ಉತ್ತರವನ್ನು ನಾನು ಪರಿಶೀಲಿಸಿದೆ” ಎಂದು ಜಾನ್‌ ಬ್ರಿಟ್ಟಾಸ್‌ ಹೇಳಿದ್ದಾರೆ.

“ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಂಗ, ಕಾರ್ಯಾಂಗ ಶಾಸಕಾಂಗ ಮತ್ತು ಸಾರ್ವಜನಿಕರನ್ನು ಪ್ರತಿನಿಧಿಸುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಬೇಡಿಕೆಯಿದೆ. ನಮ್ಮ ನ್ಯಾಯಾಧೀಶರು ಯಾರು, ಅವರ ಸಾಮರ್ಥ್ಯಗಳನ್ನು ಜನರಿಗೆ ತಿಳಿಸಿ. ಸಮಗ್ರತೆ, ನಿಗೂಢತೆ, ಗೌಪ್ಯತೆ, ಕತ್ತಲೆ ಆವರಿಸಿರುವ ವ್ಯವಸ್ಥೆ ಇರಬೇಕೆ?, ಜಗತ್ತಿನ ಎಲ್ಲಾದರೂ ಸಂಪೂರ್ಣ ಕತ್ತಲೆಯಲ್ಲೇ ನ್ಯಾಯಾಧೀಶರ ನೇಮಕಾತಿ ನಡೆಯುತ್ತದೆಯೆ? ಭಾರತದಲ್ಲಿ ಮಾತ್ರ, ಕಾನೂನು ಸಚಿವರು ವ್ಯವಸ್ಥೆಯ ಮೂಕಪ್ರೇಕ್ಷಕರಾಗಿದ್ದಾರೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ವಿರೂಪಗೊಳಿಸುತ್ತಿರುವ ವ್ಯವಸ್ಥೆಯ ಬಗ್ಗೆ ದೃಢವಾದ ಪ್ರತ್ಯುತ್ತರವನ್ನು ಹೊಂದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಜಮ್ಮುಕಾಶ್ಮೀರ – ನೌಕರರ ಮೇಲ್ವಿಚಾರಣೆಗೆ ಟಾಸ್ಕ್‌ಫೋರ್ಸ್; ಸಿಪಿಎಂ ನಾಯಕ‌ ತರಿಗಾಮಿ ವಿರೋಧ

“ನಾವು ಕೆಲವೇ ಕೆಲವು ಜನರ ಆಡಳಿತವನ್ನು ನಿರ್ಮಿಸುತ್ತಿದ್ದೇವೆಯೆ? ಈ ಆತಂಕ ನನ್ನಲ್ಲಿ ಇದೆ. ನಮ್ಮಲ್ಲಿ ನ್ಯಾಯಾಧೀಶರ ಕುಟುಂಬಗಳಿವೆ! ಉನ್ನತ ಮಟ್ಟದ ಸಮಗ್ರತೆಯನ್ನು ಹೊಂದಿರುವ ಅದ್ಭುತ ನ್ಯಾಯಾಧೀಶರು ಇದ್ದಾರೆ ಎಂಬುವುದು ನಿಜವೇ” ಎಂದು ಹೇಳಿರುವ ಅವರು, ಹೈಕೋರ್ಟ್‌ನಲ್ಲಿರುವ ವೆಬ್‌ಸೈಟ್‌ನಲ್ಲಿ ನ್ಯಾಯಾಧೀಶರೊಬ್ಬರ ಪ್ರೋಫೈಲ್‌ ಅನ್ನು ಅವರು ಓದಿದ್ದಾರೆ.

ಈ ನ್ಯಾಯಾಧಿಶರು ನ್ಯಾಯಾಧೀಶರ ಕುಟುಂಬಕ್ಕೆ ಸೇರಿದವರು, ಅವರ ತಾಯಿಯ ಮುತ್ತಜ್ಜ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದರು, ತಾಯಿಯ ಅಜ್ಜ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು, ಚಿಕ್ಕಪ್ಪರಲ್ಲಿ ಒಬ್ಬರು ಮಾಜಿ ನ್ಯಾಯಾಧೀಶರು ಸುಪ್ರಿಂ ಕೋರ್ಟ್‌ನಲ್ಲಿ- ಇದು ನಡೆಯುತ್ತಲೇ ಇರುತ್ತದೆ. ಇದೊಂದು ದೊಡ್ಡ ಪಟ್ಟಿ. ನಾವು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತೇವೆ, ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವಾಗ ತುಂಬಾ ಕಟುವಾಗಿ ವರ್ತಿಸುತ್ತಾರೆ. ಅವರು ಕನಿಷ್ಠ ಜನರಿಂದ ಆರಿಸಿ ಬರುವವರು, ನ್ಯಾಯಾಲಯದ ವಿಷಯದಲ್ಲಿ ಇದು ಅದರ ವಿರುದ್ದವಾಗಿದೆ” ಎಂದು ಅವರು ಉಲ್ಲೇಖಿಸಿದ್ದಾರೆ.

“ಕೆಲವು ಮುಖ್ಯ ನ್ಯಾಯಮೂರ್ತಿಗಳು ಸಂವಿಧಾನಕ್ಕೆ ವಿರುದ್ಧವಾದ ಜಾತ್ಯತೀತತೆಯ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಾರೆ. ನ್ಯಾಯಾಧೀಶರಾಗಲು ಯಾವುದೇ ವಯಸ್ಸಿನ ಮಾನದಂಡಗಳಿಲ್ಲ, ಆದರೆ ಕೆಲವರು ವಯಸ್ಸಿನ ಕೊರತೆಯಿಂದ ತಿರಸ್ಕರಿಸಲ್ಪಟ್ಟಿದ್ದಾರೆ ಮತ್ತು ಕೆಲವರನ್ನು ರಾತ್ರೋರಾತ್ರಿ ನೇಮಕ ಮಾಡುತ್ತಾರೆ. ಉದ್ದೇಶಪೂರ್ವಕವಾಗಿ ಸುಪ್ರೀಂ ಕೋರ್ಟ್‌ಗೆ ಏರಿಸದ ನ್ಯಾಯಮೂರ್ತಿ ಅಕಿಲ್ ಖುರೇಷಿ ಬಗ್ಗೆ ನಮಗೆ ನಿರ್ಲಕ್ಷ್ಯವಿದೆಯೇ? ಅವರ ಹೆಸರನ್ನು ಪ್ರಸ್ತಾಪಿಸಲಾಗಿಲ್ಲ, ಸರ್ಕಾರ ಫೈಲ್ ಮೇಲೆ ಕುಳಿತಿದೆ, ಅವರು ಮಾಡಿರುವ ಅಪರಾಧ ಏನು? ಅವರ ಅವಧಿಯಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರನ್ನು ಜೈಲಿಗೆ ಕಳುಹಿಸಿದ್ದಕ್ಕೆ ಅವರು ಹೊಣೆಯೆ? ಅದಲ್ಲದೆ ಇನ್ನೇನು?” ಎಂದು ಜಾನ್ ಬ್ರಿಟ್ಟಾಸ್‌ ಒತ್ತಿ ಹೇಳಿದ್ದಾರೆ. ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಜಸ್ಟಿಸ್ ಖುರೇಶಿ ಅವರು 2010 ರಲ್ಲಿ ಪ್ರಸ್ತುತ ಒಕ್ಕೂಟ ಸರ್ಕಾರದ ಗೃಹಸಚಿವ ಅಮಿತ್ ಶಾ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದರು.

ಇದನ್ನೂ ಓದಿ:ಕೊರೊನಾದಿಂದ ಸಿಪಿಎಂ ನಾಯಕನ ಪುತ್ರ ನಿಧನ; ವಿಕೃತಿ ಮೆರೆದ ಬಿಜೆಪಿ ಉಪಾಧ್ಯಕ್ಷ

“ಸಂವಿಧಾನದ ಪ್ರಕಾರ, ಹೈಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಅಧೀನರಲ್ಲ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ ಎರಡೂ ಸಾಂವಿಧಾನಿಕ ನ್ಯಾಯಾಲಯಗಳು. ಆದರೆ ಸುಪ್ರೀಂ ಕೋರ್ಟ್ ಕೊಲಿಜಿಯಂನ ಅಧಿಕಾರವು ಹೈಕೋರ್ಟ್‌ಗಳನ್ನು ಅಧೀನ ಸಂಸ್ಥೆಗಳನ್ನಾಗಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

“ಭಾರತವು ವೈವಿಧ್ಯಮಯ ದೇಶವಾಗಿದೆ, ಆದರೆ ಪ್ರಸ್ತುತ ವ್ಯವಸ್ಥೆಯಿಂದ, ನಿರ್ದಿಷ್ಟ ವರ್ಗವನ್ನು ಮಾತ್ರ ಸರ್ಕಾರವು ಪುರಸ್ಕರಿಸುತ್ತದೆ. ನ್ಯಾಯಾಂಗದ ವಿಷಯಕ್ಕೆ ಬಂದಾಗ ನಮಗೆ ಅಂತಹ ವೈವಿಧ್ಯಮಯ ಪ್ರಾತಿನಿಧ್ಯ ಬೇಡವೇ? ಅದರ ಬಗ್ಗೆ ನಾವು ನಿರ್ಲಕ್ಷ್ಯ ವಹಿಸಬೇಕೇ? ನಿಮಗೆ ಕ್ಯಾಬಿನೆಟ್‌ನಲ್ಲಿ ಮಾತ್ರ ಪ್ರಾತಿನಿಧ್ಯ ಸಾಕೆ? ಭಾರತದ 47 ಮುಖ್ಯ ನ್ಯಾಯಮೂರ್ತಿಗಳಲ್ಲಿ, ಕನಿಷ್ಠ 14 ಮಂದಿ ಬ್ರಾಹ್ಮಣರಾಗಿದ್ದಾರೆ. 1950 ರಿಂದ 1970 ರವರೆಗಿನ ಸುಪ್ರೀಂ ಕೋರ್ಟ್‌ನ 14 ನ್ಯಾಯಾಧೀಶರಲ್ಲಿ 11 ಜನರು ಬ್ರಾಹ್ಮಣರು. ನಾನು ಯಾವುದೇ ಜಾತಿಯ ವಿರೋಧಿಯಲ್ಲ. 1980ರವರೆಗೂ ಈ ದೇಶದ ಸುಪ್ರೀಂಕೋರ್ಟ್‌ನಲ್ಲಿ ಒಬಿಸಿ ಅಥವಾ ಎಸ್‌ಸಿ-ಎಸ್‌ಟಿಯ ನ್ಯಾಯಾಧೀಶರು ಇರಲಿಲ್ಲ. ನ್ಯಾಯಾಂಗವು ಪ್ರಜಾಪ್ರಭುತ್ವ ಪರಿಸರ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವದಲ್ಲಿ, ನ್ಯಾಯಾಂಗದ ಸ್ವಾತಂತ್ರ್ಯ ಎಂಬುದು ಬಹಳ ಮುಖ್ಯ” ಎಂದು ಅವರು ಹೇಳಿದ್ದಾರೆ.

ಸಂಸದ ಜಾನ್‌ ಬ್ರಿಟ್ಟಾಸ್‌ ಮಾಡಿದ ಭಾಷಣದ ಸಂಪೂರ್ಣ ವಿಡಿಯೊ ನೋಡಿ

ಇದನ್ನೂ ಓದಿ: ದೇಶದ ಅತಿ ಕಿರಿಯ ಮೇಯರ್ ಆಗಿ ಕೇರಳ ಸಿಪಿಎಂನ ಆರ್ಯ ರಾಜೇಂದ್ರನ್ ಪ್ರಮಾಣ ವಚನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...