ಉಕ್ರೇನ್-ರಷ್ಯಾ ಸಂಘರ್ಷ ಮತ್ತು ದೆಹಲಿ ಗಲಭೆಗಳ ಬಗ್ಗೆ ದೂರದರ್ಶನದ ಪ್ರಸಾರವನ್ನು ಉಲ್ಲೇಖಿಸಿರುವ ಒಕ್ಕೂಟ ಸರ್ಕಾರವು, ಸುದ್ದಿ ವಾಹಿನಿಗಳಲ್ಲಿ ನಿಗದಿಪಡಿಸಿದ ಕಾರ್ಯಕ್ರಮಗಳು ಸಂಬಂಧಿತ ಕಾನೂನು ಸಂಹಿತೆಗೆ ಬದ್ಧವಾಗಿರಬೇಕು ಎಂದು ‘ಬಲವಾದ ಸಲಹೆ’ಯನ್ನು ಶನಿವಾರದಂದು ನೀಡಿದೆ.
ಸಲಹೆಯಲ್ಲಿ, ಉಕ್ರೇನ್-ರಷ್ಯಾ ಸಂಘರ್ಷದ ಕುರಿತು ವರದಿ ಮಾಡುವಾಗ ಸುದ್ದಿ ನಿರೂಪಕರ ‘ಉತ್ಪ್ರೇಕ್ಷೆ’ಯ ಹೇಳಿಕೆಗಳು ಮತ್ತು ‘ಹತ್ಯಾಕಾಂಡದ ಮುಖ್ಯಾಂಶಗಳು/ಟ್ಯಾಗ್‌ಲೈನ್‌ಗಳು’, ‘ಪರಿಶೀಲಿಸದ ಸಿಸಿಟಿವಿ ದೃಶ್ಯಗಳನ್ನು’ ಪ್ರಸಾರ ಮಾಡುವ ಮೂಲಕ ವಾಯುವ್ಯ ದೆಹಲಿಯಲ್ಲಿನ ‘ಘಟನೆಗಳ’ ತನಿಖೆಯ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ನಿರ್ದಿಷ್ಟ ನಿದರ್ಶನಗಳನ್ನು ಸರ್ಕಾರ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಾಯವ್ಯ ದೆಹಲಿಯಲ್ಲಿನ ಘಟನೆಗಳ ಕುರಿತು ದೂರದರ್ಶನ ಚಾನೆಲ್‌ಗಳಲ್ಲಿ ಕೆಲವು ಚರ್ಚೆಗಳು ‘ಅಸಂಸದೀಯ, ಪ್ರಚೋದನಕಾರಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಭಾಷೆಯನ್ನು’ ಹೊಂದಿದ್ದವು ಎಂದು ಒಕ್ಕೂಟ ಸರ್ಕಾರವು ಹೇಳಿದೆ.
Govt asks TV channels to immediately refrain from publishing, transmitting content violative of Cable TV Networks (Regulation) Act: Advisory
— Press Trust of India (@PTI_News) April 23, 2022
ಕಳೆದ ವಾರ, ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದವು.
ಇದನ್ನೂ ಓದಿ: ರೈಲಿನಲ್ಲಿ ದ್ವೇಷ ಹರಡುವ ಪತ್ರಿಕೆ ವಿತರಣೆ: ತನಿಖೆ ಪ್ರಾರಂಭಿಸಿದ ರೈಲ್ವೇ ಇಲಾಖೆ
“ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ, ಟೆಲಿವಿಷನ್ ಚಾನೆಲ್‌ಗಳು ವಿಷಯವನ್ನು ರವಾನಿಸುವ ರೀತಿಯಲ್ಲಿ ತಮ್ಮ ಕಾರ್ಯಾಚರಣೆಗಳ ಬಗ್ಗೆ ಸರ್ಕಾರವು ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತದೆ…” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಸಲಹೆಯು ಹೇಳಿದೆ.
ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ 1995 ರ ಮೇಲೆ ತಿಳಿಸಲಾದ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿನ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವಿಷಯವನ್ನು ಪ್ರಕಟಿಸುವುದನ್ನು ಮತ್ತು ಪ್ರಸಾರ ಮಾಡುವುದನ್ನು ತಕ್ಷಣವೇ ತಡೆ ಹಿಡಿಯಲು ದೂರದರ್ಶನ ಚಾನೆಲ್‌ಗಳಿಗೆ ಅದು ‘ಬಲವಾಗಿ ಸಲಹೆ’ಯನ್ನು ನೀಡಿದೆ.


