Homeಮುಖಪುಟಅತಿ ಹೆಚ್ಚು ಪ್ರವಾಹ-ಬರಗಾಲದ ಅಪಾಯದಲ್ಲಿ ಭಾರತದ 11 ಜಿಲ್ಲೆಗಳು: ಐಐಟಿ ಹವಾಮಾನ ವರದಿ

ಅತಿ ಹೆಚ್ಚು ಪ್ರವಾಹ-ಬರಗಾಲದ ಅಪಾಯದಲ್ಲಿ ಭಾರತದ 11 ಜಿಲ್ಲೆಗಳು: ಐಐಟಿ ಹವಾಮಾನ ವರದಿ

- Advertisement -
- Advertisement -

ಹವಾಮಾನ ಬದಲಾವಣೆಯ ಉಲ್ಬಣಗೊಳ್ಳುತ್ತಿರುವ ಸವಾಲುಗಳಿಗೆ ಎಚ್ಚರಿಕೆಯ ಕರೆಯಾಗಿ, ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಗುವಾಹಟಿ ಮತ್ತು ಮಂಡಿಯ ಸಂಶೋಧಕರ ಹೊಸ ವರದಿಯು, ‘ಪಾಟ್ನಾ (ಬಿಹಾರ), ಆಲಪ್ಪುಳ (ಕೇರಳ), ಕೇಂದ್ರಪಾರಾ (ಒಡಿಶಾ) ಸೇರಿದಂತೆ ಭಾರತದಲ್ಲಿ ಕನಿಷ್ಠ 11 ಜಿಲ್ಲೆಗಳು ಪ್ರವಾಹಗಳು ಮತ್ತು ಅನಾವೃಷ್ಟಿ ಎರಡನ್ನೂ ಅನುಭವಿಸುವ ‘ಅತಿ ಹೆಚ್ಚು’ ಅಪಾಯದಲ್ಲಿವೆ ಎಂದು ಗುರುತಿಸಿದೆ. ತಕ್ಷಣದ ಹಸ್ತಕ್ಷೇಪದ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಿದೆ.

ಬೆಂಗಳೂರಿನ ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರ (ಸಿಎಸ್‌ಟಿಇಪಿ) ಸಹಯೋಗದೊಂದಿಗೆ ಎರಡು ಐಐಟಿಗಳು ಜಂಟಿಯಾಗಿ ಸಂಗ್ರಹಿಸಿದ ಹವಾಮಾನ ಅಪಾಯದ ಮೌಲ್ಯಮಾಪನ ವರದಿಯು, ಭಾರತದ 51 ಜಿಲ್ಲೆಗಳನ್ನು ‘ಅತಿ ಹೆಚ್ಚು’ ಪ್ರವಾಹ ಅಪಾಯದ ವರ್ಗದ ಅಡಿಯಲ್ಲಿ ವರ್ಗೀಕರಿಸಿದೆ. ಜೊತೆಗೆ 118 ಹೆಚ್ಚು ಜಿಲ್ಲೆಗಳು ಹೆಚ್ಚಿನ ಅಪಾಯವೆಂದು ಗುರುತಿಸಲಾಗಿದೆ.

ಬಿಹಾರ, ಅಸ್ಸಾಂ, ಜಾರ್ಖಂಡ್, ಒಡಿಶಾ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಹೆಚ್ಚು ಪರಿಣಾಮ ಬೀರುತ್ತವೆ ಎಂದು 600 ಪ್ಲಸ್ ಜಿಲ್ಲೆಗಳಲ್ಲಿ ಅಪಾಯಗಳನ್ನು ನಿರ್ಣಯಿಸಿದ ಅಧ್ಯಯನ ವರದಿ ಹೇಳಿದೆ.

ಮುಂದಾರಿನ ಮೇಲೆ ಭಾರತದ ಭಾರೀ ಅವಲಂಬನೆಯು ಈ ಅಪಾಯಗಳ ನಿರ್ಣಾಯಕ ಸ್ವರೂಪವನ್ನು ಒತ್ತಿಹೇಳುತ್ತದೆ. ಮಳೆಯಲ್ಲಿನ ವ್ಯತ್ಯಯ-ಅನಾವೃಷ್ಟಿ ಅಥವಾ ಅತಿಯಾದ ಪ್ರವಾಹಕ್ಕೆ ಕಾರಣವಾಗುತ್ತದೆ. ಇದು ನೇರವಾಗಿ ಕೃಷಿ, ಜೀವನೋಪಾಯ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.

ಭಾರತದ ಕೃಷಿ ಸಮಾಜವು ಮಾನ್ಸೂನ್ ಮೇಲೆ ಆಳವಾಗಿ ಅವಲಂಬಿತವಾಗಿದೆ, ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲುಗಳಾದ ಬರ ಮತ್ತು ಅತಿಯಾದ ಮಳೆಯು ಹೆಚ್ಚು ನಿರ್ಣಾಯಕವಾಗಿದೆ.

ಈ ವರದಿ, ಡಿಎಸ್‌ಟಿ, ಎಸ್‌ಡಿಸಿ ನಡುವಿನ ಸಹಯೋಗದೊಂದಿಗೆ, 600 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಮಗ್ರ ಅಪಾಯದ ಮೌಲ್ಯಮಾಪನವನ್ನು ಒದಗಿಸುತ್ತದೆ. ಪರಿಣಾಮಕಾರಿ ತಗ್ಗಿಸುವಿಕೆಯ ತಂತ್ರಗಳಿಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ ಎಮದು ಐಐಟಿ-ಗುವಾಹಟಿ ನಿರ್ದೇಶಕರಾದ ದೇವೇಂದ್ರ ಜಾಲಿಹಾಲ್ ತಿಳಿಸಿದ್ದಾರೆ.

ಅಧ್ಯಯನವು ಹವಾಮಾನ ಅಪಾಯಗಳು, ಮಾನ್ಯತೆ ಮತ್ತು ದುರ್ಬಲತೆಯನ್ನು ಸಮಗ್ರವಾಗಿ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಲು ಜಿಲ್ಲಾ ಮಟ್ಟದ ಅಪಾಯಗಳ ಸಮಗ್ರ ನೋಟವನ್ನು ನೀಡುತ್ತದೆ. ಜನರು ಮತ್ತು ಜೀವನೋಪಾಯಗಳ ಮೇಲೆ ನೇರ ಪರಿಣಾಮವನ್ನು ರದಿಯು ಎತ್ತಿ ತೋರಿಸುತ್ತದೆ.

“ಹವಾಮಾನ ಬದಲಾವಣೆಯು ನಮ್ಮ ಕಾಲದ ಅತ್ಯಂತ ಅಸಾಧಾರಣ ಸವಾಲುಗಳಲ್ಲಿ ಒಂದಾಗಿದೆ, ಇದು ಕೃಷಿ, ಜೀವನೋಪಾಯಗಳು ಮತ್ತು ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಒಂದು ಘಟಕವು ಇದನ್ನು ಮಾತ್ರ ಪರಿಹರಿಸಲು ಸಾಧ್ಯವಿಲ್ಲ; ಇದಕ್ಕೆ ಸಾಮೂಹಿಕ ಪ್ರಯತ್ನಗಳು ಮತ್ತು ನೂತನ ಚೌಕಟ್ಟುಗಳು ಬೇಕಾಗುತ್ತವೆ” ಎಂದು ವರದಿ ಹೇಳಿದೆ.

“ಈ ವರದಿಯ ಮೂಲಕ, ದುರ್ಬಲತೆಗಳನ್ನು ಗುರುತಿಸುವುದು, ಸೂಕ್ಷ್ಮತೆಯನ್ನು ನಿರ್ಣಯಿಸುವುದು ಮತ್ತು ಅಪಾಯದಲ್ಲಿರುವ ಸ್ಥಳೀಯ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಾವು ಮಹತ್ವದ ಹೆಜ್ಜೆ ಇಡುತ್ತೇವೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವೈಜ್ಞಾನಿಕ ವಿಭಾಗದ ಮುಖ್ಯಸ್ಥೆ ಅನಿತಾ ಗುಪ್ತಾ ಹೇಳಿದ್ದಾರೆ.

“ಈ ಸಂಶೋಧನೆಗಳನ್ನು ಆನ್-ಗ್ರೌಂಡ್ ಕ್ರಿಯೆಗಳಾಗಿ ಭಾಷಾಂತರಿಸುವುದು ಅತ್ಯಗತ್ಯ, ಈ ಕುರಿತ ಒಳನೋಟಗಳು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಯೊಬ್ಬ ಪಾಲುದಾರರನ್ನು ತಲುಪಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ; ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು; ಕೋಲ್ಕತ್ತಾದಲ್ಲಿ ಭುಗಿಲೆದ್ದ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...