Homeಅಂತರಾಷ್ಟ್ರೀಯ‘ಹಸಿವೆಂಬ ವೈರಸ್‌’ಗೆ ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ 11 ಜನರು ಬಲಿ!

‘ಹಸಿವೆಂಬ ವೈರಸ್‌’ಗೆ ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ 11 ಜನರು ಬಲಿ!

- Advertisement -
- Advertisement -

ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ ಕನಿಷ್ಠ 11 ಜನರು ಹಸಿವಿನಿಂದಾಗಿ ಸಾಯುತ್ತಿದ್ದಾರೆ ಎಂದು ಆ‌ಕ್ಸ್‌ಫಾಮ್‌‌‌ನ ಹೊಸ ಅಂಕಿಅಂಶಗಳು ಹೇಳಿದೆ. ಇದಲ್ಲದೆ, ಜಗತ್ತಿನಾದ್ಯಂತ ಬರಗಾಲದ ಪರಿಸ್ಥಿತಿಗಳು ಕಳೆದ ವರ್ಷಕ್ಕಿಂತ 6 ಪಟ್ಟು ಹೆಚ್ಚಾಗಿದೆ ಎಂದು ಅದು ಉಲ್ಲೇಖಿಸಿದೆ. ‘‘ಹಸಿವಿನ ವೈರಸ್‌ ದ್ವಿಗುಣ’’ ಎಂಬ ಶಿರ್ಷಿಕೆ ಇರುವ ವರದಿ ಬಿಡುಗಡೆ ಮಾಡಿರುವ ಆಕ್ಸ್‌ಫಾಮ್‌‌, ನಿಮಿಷವೊಂದಕ್ಕೆ ಕೊರೊನಾ ಸಾಂಕ್ರಮಿಕದಿಂದ ಸಾಯುವವರಿಗಿಂತ, ಹಸಿವಿನಿಂದ ಸಾಯುವವರೆ ಹೆಚ್ಚು ಎಂದು ಹೇಳಿದೆ.

ಆ‌ಕ್ಸ್‌ಫಾಮ್‌‌ 20 ಸ್ವತಂತ್ರ ಚಾರಿಟೇಬಲ್‌‌‌ ಸಂಸ್ಥೆಗಳ ಒಕ್ಕೂಟವಾಗಿದ್ದು, ಜಾಗತಿಕ ಬಡತನವನ್ನು ಹೋಗಲಾಡಿಸಲು ಕೆಲಸ ಮಾಡುತ್ತಿದೆ. ಇದನ್ನು 1942 ರಲ್ಲಿ ಸ್ಥಾಪಿಸಲಾಯಿತು.

ಪ್ರಸ್ತುತ ಪ್ರಪಂಚದಾದ್ಯಂತ 15.5 ಕೋಟಿ ಜನರು ಆಹಾರ ಅಭದ್ರತೆಯ ಬಿಕ್ಕಟ್ಟಿನಲ್ಲಿ ವಾಸಿಸುತ್ತಿದ್ದಾರೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 2 ಕೋಟಿ ಜನರು ಹೆಚ್ಚಾಗಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಕೇಂದ್ರ ಸಂಪುಟ: 78 ಸಚಿವರಲ್ಲಿ 33 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ- ವರದಿ

ವಿಶ್ವದ ಹಸಿವಿಗೆ ಮಿಲಿಟರಿ ಸಂಘರ್ಷವು ಪ್ರಮುಖ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ. ಮಿಲಿಟರಿ ಸಂಘರ್ಷಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ 66% ದಷ್ಟು ದೇಶಗಳು ಹಸಿವಿನ ಬಿಕ್ಕಟ್ಟಿನೊಂದಿಗೆ ಕೂಡಾ ಹೋರಾಡುತ್ತಿವೆ. ಭೀಕರ ಸಾಂಕ್ರಾಮಿಕ ಸಮಯದಲ್ಲೂ ಜಾಗತಿಕವಾಗಿ ಮಿಲಿಟರಿಗೆ ಮಾಡಿರುವ ಖರ್ಚುಗಳು 51 ಬಿಲಿಯನ್ ಡಾಲರ್‌‌‌ ಹೆಚ್ಚಾಗಿದೆ ಎಂದು ಆಕ್ಸ್‌ಫಾಮ್ ಹೇಳಿದೆ.

“ಇಂದು, ಕೊರೊನಾದಿಂದಾದ ಆರ್ಥಿಕ ಕುಸಿತ ಮತ್ತು ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟು 5,20,000 ಕ್ಕೂ ಹೆಚ್ಚು ಜನರನ್ನು ಹಸಿವಿನ ಅಂಚಿಗೆ ತಳ್ಳಿದೆ. ಸಾಂಕ್ರಾಮಿಕದ ವಿರುದ್ದ ಹೋರಾಡುವ ಬದಲು, ಪಕ್ಷಗಳು ಪರಸ್ಪರ ಹೋರಾಡುತ್ತಿದ್ದವು. ಇದು ಹವಾಮಾನ ವಿಪತ್ತುಗಳು ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ಜರ್ಜರಿಗೊಂಡ ಲಕ್ಷಾಂತರ ಜನರಿಗೆ ಭಾರಿ ಹೊಡೆತವನ್ನು ನೀಡಿದೆ” ಎಂದು ಆಕ್ಸ್‌ಫಾಮ್‌ನ ಅಮೆರಿಕದ ಅಧ್ಯಕ್ಷ ಮತ್ತು ಸಿಇಒ ಅಬ್ಬಿ ಮ್ಯಾಕ್ಸ್‌ಮನ್ ಹೇಳಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಆರ್ಥಿಕ ಪರಿಣಾಮಗಳು ಕೂಡಾ ಹಸಿವಿನ ಬಿಕ್ಕಟ್ಟಿನ ಉಲ್ಬಣಕ್ಕೆ ಪ್ರಮುಖ ಅಂಶಗಳಾಗಿವೆ ಎಂದು ವರದಿಯು ಗುರುತಿಸಿದೆ. ಈ ಎರಡೂ ಕಾರಣಗಳಿಂದಾಗಿ ಜಾಗತಿಕವಾಗಿ ಆಹಾರದ ಬೆಲೆ 40% ಹೆಚ್ಚಳವಾಗಿದ್ದು, ಇದು ಒಂದು ದಶಕದಲ್ಲೆ ಅತಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಇಂತಹ ಉಲ್ಬಣವು ಲಕ್ಷಾಂತರ ಜನರನ್ನು ಹಸಿವೆಗೆ ತಳ್ಳುವಲ್ಲಿ ಗಮನಾರ್ಹ ಕೊಡುಗೆ ನೀಡಿದೆ. ರಾಜ್ಯ ಪೋಷಿತ ಮಿಲಿಟರಿ ಸಂಘರ್ಷಗಳಿಗೆ ಅಂತ್ಯ ಹಾಡುವ ಮೂಲಕ “ಹಸಿವಿನ ದುರಂತವನ್ನು” ಅಂಗೀಕರಿಸಲು ಮತ್ತು ನಿಲ್ಲಿಸುವಂತೆ ಸರ್ಕಾರಗಳನ್ನು ಆಕ್ಸ್‌ಫಾಮ್‌‌ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ.

ಇದನ್ನೂ ಓದಿ: ಸಿನಿಮಾ ರಂಗಕ್ಕೂ ಕಾಲಿಟ್ಟ ಸುಮಲತಾ, ಹೆಚ್‌ಡಿಕೆ ವಾಗ್ವಾದ; ಅಣೆಕಟ್ಟೆಯಲ್ಲಿ ಬಿರುಕಿಲ್ಲ ಎಂದ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...