ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ಘೋಷಿಸಿದ್ದಾರೆ. ಇತ್ತೀಚೆಗಷ್ಟೆ ನೇಮಕಗೊಂಡಿದ್ದ ಸಚಿವರು ಸೇರಿದಂತೆ 50ಕ್ಕೂ ಹೆಚ್ಚು ಸದಸ್ಯರು ಹಗರಣ ಪೀಡಿತ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿ ಹೊಸ ಪ್ರಧಾನಿಯ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಅಂತಿಮವಾಗಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವದಿಂದ ಕೆಳಗಿಳಿಯಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಂದಿನ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಮಾವೇಶದ ವೇಳೆಗೆ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಜಾನ್ಸನ್ ಬ್ರಿಟನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಧಾನಿ ಹುದ್ದೆಗೆ ಹಲವರು ಪೈಪೋಟಿ ನಡೆಸುತ್ತಿದ್ದು, ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಅವರು ಕೂಡ ರೇಸ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.
“ವಿಶ್ವದ ಅತ್ಯುತ್ತಮ ಉದ್ಯೋಗವನ್ನು ತ್ಯಜಿಸುತ್ತಿರುವುದಕ್ಕೆ ದುಃಖವಾಗುತ್ತಿದೆ” ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಜಾನ್ಸನ್ ಅವರ ಘೋಷಣೆಗೂ ಮುನ್ನ ವಿರೋಧ ಪಕ್ಷದ ಲೇಬರ್ ನಾಯಕ ಕೀರ್ ಸ್ಟಾರ್ಮರ್ ಪ್ರಧಾನಿಯ ಸನ್ನಿಹಿತ ನಿರ್ಗಮನವನ್ನು ಸ್ವಾಗತಿಸಿದ್ದಾರೆ. ಆದರೆ, ಸರ್ಕಾರಕ್ಕೆ ಸರಿಯಾದ ಬದಲಾವಣೆಯ ಅಗತ್ಯವಿದೆ ಎಂದು ಸ್ಟಾರ್ಮರ್ ಹೇಳಿದ್ದು, ವಿಶ್ವಾಸ ಮತ ಯಾಚನೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯ ಕೆರೂರಿನಲ್ಲಿ ಕೋಮು ಸಂಘರ್ಷ: ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಭಾಗಿ
ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಗಳಿದ್ದರೂ, ಗುರವಾರದಂದು ಅವರು ರಾಜೀನಾಮೆ ನೀಡಿದ ಸಚಿವರನ್ನು ಬದಲಿಸಿ ಹೊಸ ಸಚಿವರನ್ನು ನೇಮಿಸಲು ಪ್ರಯತ್ನಿಸಿದ್ದರು.
ಗುರುವಾರದಂದು ಶಿಕ್ಷಣ ಸಚಿವ ಮಿಚೆಲ್ ಡೊನೆಲನ್ ಮತ್ತು ವಿತ್ತ ಸಚಿವ ನಾಧಿಮ್ ಜಹಾವಿ ಅವರು ಸರ್ಕಾರದಿಂದ ನಿರ್ಗಮಿಸಿದ್ದರು.


