ಗುಜರಾತಿನಿಂದ 148 ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಬಲವಂತವಾಗಿ ಹೊರದಬ್ಬಿರುವುದನ್ನು ರಾಜಸ್ಥಾನದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಗುರುವಾರದಂದು ಖಂಡಿಸಿದೆ. ಈ ಕಾರ್ಯಾಚರಣೆಯನ್ನು ಸಾಂವಿಧಾನಿಕ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಿದೆ.
ಈ ಗಡಿಪಾರು ಮಾಡಿದ ವ್ಯಕ್ತಿಗಳನ್ನು “ಬಾಂಗ್ಲಾದೇಶಿ ನಾಗರಿಕರು” ಎಂದು ತಪ್ಪಾಗಿ ಬ್ರಾಂಡ್ ಮಾಡಲಾಗಿದೆ ಮತ್ತು ಸರಿಯಾದ ಕಾನೂನು ಪ್ರಕ್ರಿಯೆಯಿಲ್ಲದೆ ಗಡಿಪಾರು ಮಾಡಲು ಭಾರತ-ಬಾಂಗ್ಲಾದೇಶ ಗಡಿಗೆ ಬಲವಂತವಾಗಿ ನೂಕಲಾಗಿದೆ ಎಂದು ಗುಂಪು ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ನಂತರ ಈ ಸಾಮೂಹಿಕ ಸ್ಥಳಾಂತರವನ್ನು ನಡೆಸಲಾಯಿತು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಅಧಿಕಾರಿಗಳು ದುರ್ಬಲ ಸಮುದಾಯವನ್ನು ಬಲಿಪಶುವನ್ನಾಗಿ ಮಾಡುತ್ತಿದ್ದಾರೆ ಎಂದು ಪಿಯುಸಿಎಲ್ ಆರೋಪಿಸಿದೆ.
ಸಿಕಾರ್ ಮತ್ತು ಕೋಟ್‌ಪುಟ್ಲಿ ಜಿಲ್ಲೆಗಳಿಂದ ಇವರನ್ನು ರಾಜಸ್ಥಾನ ಪೊಲೀಸರು ಬಂಧಿಸಿ, ಜೋಧ್‌ಪುರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೆ ಹಸ್ತಾಂತರಿಸಿದರು ಮತ್ತು ನಂತರ ಅವರನ್ನು ಪಶ್ಚಿಮ ಬಂಗಾಳದ ಅಂತರರಾಷ್ಟ್ರೀಯ ಗಡಿಗೆ ವಾಯುಮಾರ್ಗದ ಮೂಲಕ ಸಾಗಿಸಲಾಯಿತು, ಇದನ್ನು “ಕಾನೂನುಬಾಹಿರ ಗಡಿಪಾರು” ಎಂದು ಪಿಯುಸಿಎಲ್ ವಿವರಿಸಿದೆ.
ಮೇ 10ರಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 30ರಿಂದ 40 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಇದೇ ರೀತಿ ಹೊರಹಾಕಿದ್ದನ್ನು ಪಿಯುಸಿಎಲ್ ಉಲ್ಲೇಖಿಸಿದೆ. ಗಡೀಪಾರು ಪ್ರಕರಣಗಳಲ್ಲಿ ಸಾಂಪ್ರದಾಯಿಕವಾಗಿ ಅನುಸರಿಸಲಾಗುವ ನ್ಯಾಯಾಂಗ ಕಾರ್ಯವಿಧಾನಗಳನ್ನು ಉಲ್ಲಂಘಿಸುವ ಈ ಕ್ರಮವು “ಅಸಂವಿಧಾನಿಕ ಮತ್ತು ಕಾನೂನುಬಾಹಿರ” ಎಂದು ಪಿಯುಸಿಎಲ್ ಟೀಕಿಸಿತು.
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರಿಗೆ ಪಿಯುಸಿಎಲ್ ನೇರ ಸವಾಲನ್ನು ಒಡ್ಡಿದೆ. ಮುಖ್ಯಮಂತ್ರಿಗಳು ಇಂತಹ ಕಾನೂನುಬಾಹಿರ ಕ್ರಮಗಳನ್ನು ಅನುಮೋದಿಸುತ್ತಾರೆಯೇ ಎಂದು ಪ್ರಶ್ನಿಸಿತು. ಅಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ರಾಜ್ಯಸ ಅಧಿಕಾರಿಗಳು ಭಾರತೀಯ ಸಂವಿಧಾನ ಮತ್ತು ನಾಗರಿಕರಲ್ಲದವರ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲಂಘಿಸಬಹುದು ಎಂದು ಪಿಯುಸಿಎಲ್ ಎಚ್ಚರಿಸಿದೆ.
ಅರುಣಾಚಲ ಪ್ರದೇಶ ರಾಜ್ಯvs ಭಾರತ ಒಕ್ಕೂಟ ಪ್ರಕರಣದಲ್ಲಿ 1996ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಭಾರತದಲ್ಲಿನ ಎಲ್ಲಾ ವ್ಯಕ್ತಿಗಳು ಪೌರತ್ವವನ್ನು ಲೆಕ್ಕಿಸದೆ, ಕಾನೂನಿನ ಮುಂದೆ ಬದುಕುವ ಹಕ್ಕು ಮತ್ತು ಸಮಾನತೆಯನ್ನು ಖಾತರಿಪಡಿಸಲಾಗಿದೆ ಎಂದು ಪಿಯುಸಿಎಲ್ ಒತ್ತಿ ಹೇಳಿದೆ. ಕಾನೂನು ಸಹಾಯವಿಲ್ಲದೆ ಸಾಮೂಹಿಕ ಹೊರಹಾಕುವಿಕೆಯನ್ನು ನಿಷೇಧಿಸುವ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಭಾರತದ ಬಾಧ್ಯತೆಗಳನ್ನು ಸಹ ಗುಂಪು ಉಲ್ಲೇಖಿಸಿದೆ.
“ಪಹಲ್ಗಾಮ್ ದಾಳಿಯ ನಂತರ ಭದ್ರತಾ ಲೋಪಗಳನ್ನು ತನಿಖೆ ಮಾಡುವ ಬದಲು ಅಲ್ಪಸಂಖ್ಯಾತ ಸಮುದಾಯಗಳನ್ನು ಕಾನೂನುಬಾಹಿರವಾಗಿ ಗುರಿಯಾಗಿಸಿಕೊಂಡು ದೇಶದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಏಕೆ ಆಯ್ಕೆ ಮಾಡಿಕೊಂಡಿದೆ ಎಂದು ಉತ್ತರಿಸಬೇಕು” ಎಂದು ಪಿಯುಸಿಎಲ್ ಪ್ರಶ್ನಿಸಿದೆ. ರಾಜಸ್ಥಾನದ ಆರು ಬಂಧನ ಕೇಂದ್ರಗಳಲ್ಲಿ ಕಾರ್ಯವಿಧಾನದ ಉಲ್ಲಂಘನೆಗಳನ್ನು ದಾಖಲಿಸಿದೆ ಮತ್ತು ತಪ್ಪಾಗಿ ಬಂಧಿಸಲ್ಪಟ್ಟ ಹಲವಾರು ವ್ಯಕ್ತಿಗಳ ಬಿಡುಗಡೆಗೆ ಸಹಾಯ ಮಾಡಿದೆ ಎಂದು ಪಿಯುಸಿಎಲ್ ಹೇಳಿದೆ.
ಜನವರಿಯಲ್ಲಿ ಪಿಯುಸಿಎಲ್ ಅಮೆರಿಕದಿಂದ 385 ಭಾರತೀಯ ನಾಗರಿಕರನ್ನು ಸಂಕೋಲೆಯಲ್ಲಿ ಗಡೀಪಾರು ಮಾಡಿರುವುದನ್ನು ಖಂಡಿಸಿತ್ತು, ಇದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದಿತ್ತು. ವಿದೇಶಿ ಪ್ರಜೆಗಳು ಮತ್ತು ವಲಸೆ ಕಾರ್ಮಿಕರನ್ನು ಭಾರತ ನಡೆಸಿಕೊಳ್ಳುವ ರೀತಿಗೆ ಅದೇ ಮಾನದಂಡವನ್ನು ಕಾಯ್ದುಕೊಳ್ಳುತ್ತದೆ ಎಂದು ಪಿಯುಸಿಎಲ್ ತಿಳಿಸಿದೆ.
ಪಿಯುಸಿಎಲ್ ಗಡೀಪಾರು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿತು ಮತ್ತು ಕಾನೂನು ನೆರವು ಮತ್ತು ನ್ಯಾಯಯುತ ವಿಚಾರಣೆಗಳನ್ನು ಒಳಗೊಂಡಂತೆ ಪ್ರತಿಯೊಬ್ಬ ಬಂಧಿತನ ಕಾನೂನು ಹಕ್ಕುಗಳನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿತು. “ರಾಜ್ಯದ ಎಲ್ಲಾ ಕ್ರಮಗಳು ಸಾಂವಿಧಾನಿಕ ಮಾನದಂಡಗಳು ಮತ್ತು ಅಂತರರಾಷ್ಟ್ರೀಯ ಕಾನೂನು ಬಾಧ್ಯತೆಗಳಿಗೆ ಅನುಗುಣವಾಗಿರಬೇಕು” ಎಂದು ಪಿಯುಸಿಎಲ್ ಅಭಿಪ್ರಾಯಿಸಿದೆ.
ಬಿಹಾರ: ತಳ ಸಮುದಾಯಗಳ ‘ಭಯದಿಂದ’ ಮೋದಿ ಜಾತಿ ಜನಗಣತಿ ಘೋಷಣೆ; ರಾಹುಲ್ ಗಾಂಧಿ


