Homeಅಂತರಾಷ್ಟ್ರೀಯಚೀನಾ ಪ್ರಸ್ತಾಪಿತ ಒಪ್ಪಂದಕ್ಕೆ ಸಹಿ ಹಾಕಿದ 15 ರಾಷ್ಟ್ರಗಳು; ಹೊರಗುಳಿದ ಭಾರತ!

ಚೀನಾ ಪ್ರಸ್ತಾಪಿತ ಒಪ್ಪಂದಕ್ಕೆ ಸಹಿ ಹಾಕಿದ 15 ರಾಷ್ಟ್ರಗಳು; ಹೊರಗುಳಿದ ಭಾರತ!

ಚೀನಾದಿಂದ ಬಹಳ ಅಗ್ಗದ ದರದಲ್ಲಿ ಕಳಪೆ ಉತ್ಪನ್ನಗಳು ರಫ್ತಾಗುವುತ್ತಿವೆ ಎಂದು ಆರೋಪಿಸಿದ್ದ ಭಾರತ ಈ ಒಪ್ಪಂದಕ್ಕೆ ಸಹಿ ಹಾಕದಿರಲು ಕಳೆದ ವರ್ಷ ನಿರ್ಧರಿಸಿತ್ತು

- Advertisement -
- Advertisement -

ಅಮೆರಿಕಾ ವಿರುದ್ಧ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿರುವ ಚೀನಾ, ಏಷ್ಯಾದ ಪ್ರಮುಖ ರಾಷ್ಟ್ರಗಳನ್ನು ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಆರ್​ಸಿಇಪಿ ವ್ಯಾಪಾರ ಒಪ್ಪಂದ ಸಾಕಾರಗೊಂಡಿದೆ. ಏಷ್ಯಾದ 15 ಪ್ರಮುಖ ರಾಷ್ಟ್ರಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರತ್ವ (RCEP) ಒಪ್ಪಂದಕ್ಕೆ ಸಹಿ ಹಾಕಿವೆ.

ಭಾರತ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ, ಚೀನಾದಿಂದ ಬಹಳ ಅಗ್ಗದ ದರದಲ್ಲಿ ಕಳಪೆ ಉತ್ಪನ್ನಗಳು ರಫ್ತಾಗುವುತ್ತಿವೆ ಎಂದು ಆರೋಪಿಸಿದ್ದ ಭಾರತ ಈ ಒಪ್ಪಂದಕ್ಕೆ ಸಹಿ ಹಾಕದಿರಲು ಕಳೆದ ವರ್ಷ ನಿರ್ಧರಿಸಿತ್ತು. ಹಾಗಾಗಿ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಇದನ್ನೂ ಓದಿ: ಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ 15 ರಾಷ್ಟ್ರಗಳು ಚೀನಾ ಪ್ರಸ್ತಾಪಿಸಿದ್ದ RCEP ಒಪ್ಪಂದಕ್ಕೆ ಸಹಿ ಹಾಕಿವೆ.

2012ರಲ್ಲಿ ಮೊದಲ ಬಾರಿಗೆ ಈ ಆರ್​ಸಿಇಪಿ ಒಪ್ಪಂದದ ಪ್ರಸ್ತಾವವಾಗಿದ್ದು. ಎಂಟು ವರ್ಷಗಳ ನಿರಂತರ ಚರ್ಚೆಗಳ ಬಳಿಕ 15 ರಾಷ್ಟ್ರಗಳು ಸಹಿ ಹಾಕಿವೆ. ಈ ವರ್ಷ ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆ ಸಂಕಷ್ಟಕ್ಕೊಳಗಾಗಿದ್ದರಿಂದ ಒಪ್ಪಂದ ಸಾಕಾರಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ.

ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕಿರುವ ದೇಶಗಳು ತಮ್ಮ ಉತ್ಪನ್ನಗಳನ್ನ ಸುಲಭವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸಮಾನ ನಿಯಮಾವಳಿಗಳು ಇರುತ್ತವೆ. ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಪ್ರಬಲವಾಗಿರುವ ಚೀನಾಗೆ ಈ ಒಪ್ಪಂದದಿಂದ ಅತಿಹೆಚ್ಚು ಲಾಭ ಸಿಗುವ ನಿರೀಕ್ಷೆ ಇದೆ. ಆರ್​ಸಿಇಪಿ ಮೂಲಕ ಚೀನಾದ ಪ್ರಭಾವ ಇನ್ನಷ್ಟು ಹೆಚ್ಚಾಗುತ್ತದೆ. ಟ್ರಾನ್ಸ್-ಪೆಸಿಫಿಕ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಏಷ್ಯಾದ ಮೇಲೆ ಚೀನಾದ ಹಿಡಿತ ಇನ್ನಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...