ನಿನ್ನೇ ತಾನೇ ಸುಪ್ರೀಂ ತೀರ್ಪಿನಿಂದ ಅನರ್ಹ ಶಾಸಕರೆನಿಸಿಕೊಂಡ 17 ಜನರು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಪ್ರತಿಯೊಬ್ಬರಿಗೂ ಬಿಜೆಪಿ ಬಾವುಟಗಳನ್ನು ನೀಡುವ ಮೂಲಕ ಯಡಿಯೂರಪ್ಪನವರು ಅವರನ್ನು ಬಿಜೆಪಿಗೆ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು ನಮಗಾಗಿ ಇವರು ಎಷ್ಟೆಲ್ಲಾ ತ್ಯಾಗ ಮಾಡಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಸಹ ಅರ್ಥಮಾಡಿಕೊಳ್ಳಬೇಕು ಎಲ್ಲರನ್ನು ಮುಂಬರುವ ಉಪಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.
ಇಲ್ಲಿ ನಾನು ಹಲವಾರು ಜನರ ಹೆಸರನ್ನು ಉಲ್ಲೇಖಿಸಿದ್ದೇನೆ, ಅದರಲ್ಲಿ ಕೆಲವರ ಹೆಸರು ಬಿಟ್ಟು ಹೋದರೆ ತಪ್ಪು ತಿಳಿದುಕೊಳ್ಳಬೇಡಿ. ಎಲ್ಲರೂ ನಮಗೆ ಸಮಾನರು. ಈ ವೇದಿಕೆಯ ಮೇಲಿರುವ ಮಾಜಿ ಶಾಸಕರು ಭಾವೀ ಶಾಸಕರಾಗಲಿದ್ದಾರೆ ಮತ್ತು ಭಾವೀ ಮಂತ್ರಿಗಳಾಗಲಿದ್ದಾರೆ ಎಂದು ಹೇಳುವ ಮೂಲಕ ಅನರ್ಹರಿಗೆ ಭರವಸೆ ನೀಡಿದರು.
ತುಮಕೂರಿನಲ್ಲಿ ಬೃಹತ್ ಸಹಕಾರಿ ಕಾರ್ಯಕ್ರಮವಿದೆ ನಾನು ಅಲ್ಲಿಗೆ ಹೋಗಬೇಕಿತ್ತು. ಆದರೆ ಇಲ್ಲಿ ಬರದಿದ್ದರೆ ತಪ್ಪು ಅರ್ಥ ಬರುತ್ತದೆ ಎಂದು ಬಂದಿದ್ದೇನೆ. ನಾನೀಗ ಅಲ್ಲಿಗೆ ತೆರಳುತ್ತೇನೆ. ನಮ್ಮ ಅಧ್ಯಕ್ಷರು ಉಳಿದದ್ದನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿ ಹೊರಟರು.


