Homeಮುಖಪುಟ7 ಸೀಟುಗಳಲ್ಲಿ ಮಾತ್ರ ಬಿಜೆಪಿ ಗ್ಯಾರಂಟಿ: ಬಿಜೆಪಿ ಕೋರ್ ಕಮಿಟಿ ಅಂದಾಜು

7 ಸೀಟುಗಳಲ್ಲಿ ಮಾತ್ರ ಬಿಜೆಪಿ ಗ್ಯಾರಂಟಿ: ಬಿಜೆಪಿ ಕೋರ್ ಕಮಿಟಿ ಅಂದಾಜು

- Advertisement -
- Advertisement -

ಅನರ್ಹತೆ ಎತ್ತಿ ಹಿಡಿದು, ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿಲು ಅವಕಾಶ ನೀಡಿದ ಸುಪ್ರೀಂಕೋರ್ಟಿನ ತೀರ್ಪಿನ ನಂತರ ಅನರ್ಹ ಶಾಸಕರು ದೆಹಲಿಯಲ್ಲೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ರನ್ನು ಭೇಟಿ ಮಾಡಿದ್ದಾರೆ. ನಂತರ ಬೆಂಗಳೂರಿಗೆ ಬಂದವರು ಸೀದಾ ಯಡಿಯೂರಪ್ಪನವರ ಜೊತೆ ಸಭೆ ನಡೆಸಿದ್ದಾರೆ. ಅಲ್ಲಿಂದ ಯಡಿಯೂರಪ್ಪನವರು ಹೋಗಿದ್ದು ಬಿಜೆಪಿ ಕೋರ್ ಕಮಿಟಿ ಸಭೆಗೆ. ಅಲ್ಲಿ ನಡೆದ ಚರ್ಚೆಯಲ್ಲಿ ಕಮಿಟಿ ಯಾವ ಅಭಿಪ್ರಾಯಕ್ಕೆ ಬಂದಿತು ಎಂಬುದು ನಾನುಗೌರಿ.ಕಾಂಗೆ ಬಿಜೆಪಿ ಮೂಲಗಳು ತಿಳಿಸಿವೆ.

ಚುನಾವಣೆಗೆ ಹೋಗುತ್ತಿರುವ ಒಟ್ಟು 15 ಕ್ಷೇತ್ರಗಳಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ವಿಜಯ ಸಾಧಿಸಬಹುದು ಎಂಬುದು ಕೋರ್ ಕಮಿಟಿಯ ಚರ್ಚೆಗಳಲ್ಲಿ ಒಂದು ಮುಖ್ಯ ಅಜೆಂಡಾ ಆಗಿತ್ತು. ಅನರ್ಹರು ಸ್ಪರ್ಧೆ ಮಾಡಬಹುದು ಎಂದು ಹೇಳಿರುವುದರಿಂದ, ಯಾವ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಬೇಕು ಎಂಬುದು ಚರ್ಚೆಯ ಮತ್ತೊಂದು ಅಂಶವಾಗಿತ್ತು. ರೋಷನ್ ಬೇಗ್ ಹೊರತುಪಡಿಸಿದರೆ ಮಿಕ್ಕೆಲ್ಲರನ್ನೂ ಬಿಜೆಪಿ ಪುರಸ್ಕರಿಸಬೇಕು ಎಂಬುದರ ಬಗ್ಗೆ ಯಾರಿಗೂ ಭಿನ್ನ ಅಭಿಪ್ರಾಯ ಇರಲಿಲ್ಲ.

ರೋಷನ್ ಬೇಗ್ ಐಎಂಎ ಕೇಸಿನಲ್ಲಿ ಭಾಗಿಯಾಗಿರುವುದು, ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುವುದು ಮಾತ್ರವಲ್ಲದೇ, ಆರೆಸ್ಸೆಸ್ ಮೂಲದವರಿಗೆ (ಮುಖ್ಯವಾಗಿ ಬಿ.ಎಲ್.ಸಂತೋಷ್‌ಗೆ) ಅವರ ಮೇಲೆ ನಿರ್ದಿಷ್ಟವಾದ ಬೇರೆ ಸಿಟ್ಟೂ ಇದೆಯೆಂದು ಹೇಳಲಾಗುತ್ತಿದೆ.

ಉಳಿದಂತೆ ಇನ್ನೂ ಮೂರು ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೇ ಟಿಕೆಟ್ ನೀಡಲು ಇನ್ನೂ ಸಹಮತ ಏರ್ಪಟ್ಟಿಲ್ಲ. ಅವುಗಳೆಂದರೆ ಹುಣಸೂರು, ಅಥಣಿ ಮತ್ತು ರಾಣಿಬೆನ್ನೂರು.

ಇನ್ನೆಲ್ಲಾ ಕ್ಷೇತ್ರಗಳಲ್ಲೂ ಅನರ್ಹರಿಗೇ ಟಿಕೆಟ್ ನೀಡಲಾಗುತ್ತದೆ. ಆದರೆ, ಗೆಲುವಿನ ಗ್ಯಾರಂಟಿ ಇರುವುದು 10 ಕ್ಷೇತ್ರಗಳಲ್ಲಿ ಎಂದು ಬಿಜೆಪಿಯ ವತಿಯಿಂದ ಬಹಿರಂಗವಾಗಿ ಹೇಳಲಾಗುತ್ತಿದೆಯಾದರೂ, ಒಳಗೆ ಚರ್ಚೆ ನಡೆದಿರುವುದು 7 ಕ್ಷೇತ್ರಗಳಲ್ಲಿ ಮಾತ್ರ ಆ ಸಾಧ್ಯತೆ ಇದೆ ಎಂದು.

ಇದನ್ನೂ ಓದಿ: ಅಥಣಿಯಲ್ಲಿ ಲಕ್ಷ್ಮಣ್ ಸವದಿ ಅಥವಾ ಮಹೇಶ್ ಕುಮಟಳ್ಳಿ? ರಾಣಿಬೆನ್ನೂರಿನಲ್ಲಿ ಈಶ್ವರಪ್ಪನ ಪುತ್ರನೋ ಅಥವಾ ಆರ್ ಶಂಕರ್‌?

ಸರ್ಕಾರ ಸ್ವಂತಬಲದ ಮೇಲೆ ಉಳಿದುಕೊಳ್ಳಬೇಕೆಂದರೆ, 8ರಲ್ಲಿ ಗೆಲ್ಲಬೇಕು. ಆ ಖಾತ್ರಿ ಇಲ್ಲವಾದುದರಿಂದಲೇ ಜೆಡಿಎಸ್ ಬೆಂಬಲ ಪಡೆಯುವ ವಿಷಯಕ್ಕೆ ಬಿಜೆಪಿಯು ‘ಬೇಡವೇ ಬೇಡ’ ಎಂಬ ಧೋರಣೆ ತೋರುತ್ತಿಲ್ಲ. ದೇವೇಗೌಡರ ನಿನ್ನೆಯ ಮಾತುಗಳೂ ಅದಕ್ಕೆ ಪುಷ್ಟಿ ಕೊಡುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...